ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ- ಅರುಣ್ ಕುಮಾರ್ ಪುತ್ತಿಲ | ಸಮಿತಿಯಿಂದ ಕೃತಜ್ಞತಾ ಸಭೆ

ಪುತ್ತೂರು : ಉಡುಪಿಯ ಪೇಜಾವರ ಶ್ರೀಗಳು ಉಲ್ಲೇಖಿಸಿದಂತೆ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಗೋ ಶಾಲೆ ನಿರ್ಮಾಣ ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗುವುದು. ಜಾಗ ಕೊಟ್ಟರೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಗೋ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಮುಕ್ರಂಪಾಡಿಯ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ […]

ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ- ಅರುಣ್ ಕುಮಾರ್ ಪುತ್ತಿಲ | ಸಮಿತಿಯಿಂದ ಕೃತಜ್ಞತಾ ಸಭೆ Read More »

ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು

ಜನವರಿ 18, ಫೆಬ್ರವರಿ 15ರಂದು ವಿಶೇಷ ರೈಲು ಮಂಗಳೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ.14ರಿಂದ ಪ್ರಾರಂಭವಾಗಲಿರುವ ಮಹಾಕುಂಭಮೇಳಕ್ಕೆ ಮಂಗಳೂರಿನಿಂದಲೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.ಮಹಾಕುಂಭಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ದೇಶದ ಮೂಲೆ ಮೂಲೆಯಿಂದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರಯಾಗ್‌ರಾಜ್, ವಾರಣಾಸಿಗೆ ವಿಶೇಷ ರೈಲುಗಳು ಸಂಪರ್ಕ ಕಲ್ಪಿಸಲಿವೆ. ಮಂಗಳೂರಿನಿಂದ ಕೂಡ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ಸೆಂಟ್ರಲ್‌ನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ. ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು ಜನವರಿ 18 ಮತ್ತು ಫೆಬ್ರವರಿ 15ರಂದು

ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ

ಹೊಸದಿಲ್ಲಿ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಸು ಇಳಿಸುವ ಮೂಲಕ ತೈಲ ಕಂಪನಿಗಳು ಜನತೆಗೆ ಹೊಸ ವರ್ಷದ ಗಿಫ್ಟ್‌ ನೀಡಿವೆ. ಕಳೆದ ವರ್ಷವಿಡೀ ನಿರಂತರ ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲಿಂಡರ್‌ ದರ ಹೊಸ ವರ್ಷದ ಮೊದಲ ದಿನವೇ ತುಸು ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಬೆಲೆ 14.50 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆ ಮಾಡುತ್ತವೆ.

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ Read More »

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.ಟ್ವಿಟರ್‌ನಲ್ಲಿ ಶೂಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ ಭಾರತ ಮತ್ತು ವಿಶ್ವಕ್ಕೆ ಉಜ್ವಲ, ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಎಲ್ಲರಿಗೂ

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ Read More »

ಜ.4 : ಮನಜನ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಗನ್ ಹಾಗೂ ಸುಫಿ ಹಾಡುಗಳ ಮನಜನ ಸಂಗೀತ ಹಬ್ಬ ‘ಅಸೀಮ’

ಪುತ್ತೂರು : ಮನಜನ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಗನ್ ಹಾಗೂ ಸುಫಿ ಹಾಡುಗಳ ಮನಜನ ಸಂಗೀತ ಹಬ್ಬ ‘ಅಸೀಮ’ ಜ.4 ರಂದು ಮಂಜಲ್ಪಡ್ಪು ಸುದಾನ ಶಾಲಾ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಮನಜನ ಟ್ರಸ್ಟ್ ನ ಮೆನೆಜಿಂಗ್ ಟ್ರಸ್ಟಿ ಸೌಮ್ಯ ಭಟ್‍ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮನಸ್ಸಿನ ಆರೋಗ್ಯ, ನಾವು ಎದುರಿಸುವ ಮಾನಸಿಕ ಖಾಯಿಲೆ, ತೊಂದರೆ, ಸವಾಲುಗಳನ್ನು ಪರಿಹರಿಸುವ ಹಾಗೂ ನಿಭಾಯಿಸುವ ರೀತಿಗಳು ಮುಂತಾದ ವಿಚಾರಗಳ ಕುರಿತು ಅರಿವು ಮೂಡಿಸುವುದು ನಮ್ಮ ಆಶಯವಾಗಿದ್ದು, ಈಗಾಗಲೇ ಟ್ರಸ್ಟ್

ಜ.4 : ಮನಜನ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಗನ್ ಹಾಗೂ ಸುಫಿ ಹಾಡುಗಳ ಮನಜನ ಸಂಗೀತ ಹಬ್ಬ ‘ಅಸೀಮ’ Read More »

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ

ಮಠದ ಸಿಬ್ಬಂದಿ, ದಿವಾನ, ಕಾನ್‌ಸ್ಟೆಬಲ್‌ ಮೇಲೆ ಹಲ್ಲೆಗೆ ಯತ್ನ ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಂಟು ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಬಂಧಿಸಲಾಗಿದೆ. ಡಿ.29ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತರು. ಶ್ರೀಕೃಷ್ಣ ಮಠದ ಒಳಗೆ ಹಾಗೂ ಹೊರಗೆ

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ Read More »

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

2024ರ ಟಾಪ್ 26 ಸುದ್ದಿಗಳು (ಮುಂದುವರಿದ ಭಾಗ)14) ದಿಲ್ಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ಭ್ರಷ್ಟಾಚಾರದ ಆರೋಪದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ಮತ್ತು ಸಿಬಿಐ ಬಂಧಿಸಿ ವಿಚಾರಣೆ ಮಾಡಿ ಸೆರೆಮನೆಗೆ ಕಳುಹಿಸಿದ್ದು ಬಹು ದೊಡ್ಡ ಸುದ್ದಿ (ಮಾರ್ಚ್ 21). ಅವರು ಜೈಲಿನ ಒಳಗೆ ಕೂತು ಅಧಿಕಾರವನ್ನು ಚಲಾಯಿಸಿದ್ದು ಇನ್ನೂ ದೊಡ್ಡ ಸುದ್ದಿ. 15) ಇಸ್ರೇಲ್ ಕದನ ಕುತೂಹಲ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇನ್ನೂ ಮುಂದುವರಿಯುತ್ತಿದ್ದು ಮೂರನೇ ಮಹಾಯುದ್ಧದ

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ Read More »

ಬೈಕ್‍ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು

ಮಂಗಳೂರು: ಬೈಕ್‍ ಅಪಘಾತದಲ್ಲಿ ವಿಟ್ಲದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅರ್ಕುಳ ಬಳಿ ನಡೆದಿದೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್ (22) ಮೃತಪಟ್ಟ ವಿದ್ಯಾರ್ಥಿ. ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ ಯಕ್ಷಗಾನ ಕಲಾವಿದನಾಗಿದ್ದ ಪ್ರವಿತ್ ಕುಮಾರ್ ಅರ್ಕುಳ ಸಮೀಪ ಬೈಕ್ ರಸ್ತೆಗೆ ಬಿದ್ದಿದ್ದು ಈ ವೇಳೆ ಐಸ ಕ್ರೀಮ್ ಸಾಗಿಸುತ್ತಿದ್ದ ವಾಹನ ಯುವಕನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬೈಕ್‍ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು Read More »

ಕಾರ್ಯಕರ್ತನಿಗೆ ಜೀವ ಬೆದರಿಕೆ | ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ

ಪುತ್ತೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬವರಿಗೆ ವಾಯ್ಸ್ ಮೆಸೇಜ್ ಮೂಲಕ ಜೀವ ಬೆದರಿಕೆ ಒಡ್ಡಿದ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಲು ಪುತ್ತೂರು ನ್ಯಾಯಾಲಯ ಅನುಮತಿ ನೀಡಿದೆ. ಇತ್ತೀಚೆಗೆ ಹಕೀಂ ಕೂರ್ನಡ್ಕ ಅವರು ಶಾಸಕ ಅಶೋಕ್ ರೈ ಅವರ ಕಾರ್ಯ ವೈಖರಿ ಖಂಡಿಸಿ ಮಾಧ್ಯಮ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಮೂಲಕ ವ್ಯಕ್ತಿಗಳಿಬ್ಬರು ಹಕೀಂ ಅವರಿಗೆ ಜೀವ ಬೆದರಿಕೆ ಒಡ್ಡಿದ್ದರು. ಇದರ ವಿರುದ್ಧ ಹಕೀಂ ಅವರು ಪುತ್ತೂರು ಪೊಲೀಸ್

ಕಾರ್ಯಕರ್ತನಿಗೆ ಜೀವ ಬೆದರಿಕೆ | ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ Read More »

ಕಡಬ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್

ಕಡಬ : ನೂತನ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ, ಕಡಬ ತಾಲೂಕು  ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ  ಆಯ್ಕೆ ಕಡಬ ರೈತರ ಸಂಪರ್ಕ ಕೇಂದ್ರದಲ್ಲಿ ಇಂದು ಡಾ. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಕೃಷಿ ಅಧಿಕಾರಿ  ಭರಮಣ್ಣ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್

ಕಡಬ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್ Read More »

error: Content is protected !!
Scroll to Top