ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ

ಪುತ್ತೂರು: ಕುಂಬ್ರ ಸ್ಪಂದನಾ ಸೇವಾ ಬಳಗದ ವತಿಯಿಂದ ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ ಧ್ಯೇಯ ವಾಕ್ಯದಲ್ಲಿ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ ಜ.26 ಭಾನುವಾರ ಕುಂಬ್ರ ಆಲಂಗಾರು ಗದ್ದೆಯಲ್ಲಿ ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಪಂದನಾ ಸೇವಾ ಬಳಗ ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ, ಕಷ್ಟದಲ್ಲಿರುವ ಬಡವರಿಗೆ ಧನ ಸಹಾಯ […]

ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ Read More »

ಕೊನೆಗೂ ಭಾರತಕ್ಕೆ ಗಡಿಪಾರಾಗಲಿದ್ದಾನೆ ಮುಂಬಯಿ ಭಯೋತ್ಪಾದಕ ದಾಳಿಯ ಸೂತ್ರಧಾರ

ತಹಾವುರ್‌ ರಾಣಾನನ್ನು ಭಾರತಕ್ಕೊಪ್ಪಿಸಲು ಆದೇಶಿಸಿದ ಅಮೆರಿಕದ ಸುಪ್ರೀಂ ಕೋರ್ಟ್‌ ಹೊಸದಿಲ್ಲಿ: ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಸೂತ್ರಧಾರ ತಹಾವುರ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಿಕೊಳ್ಳಲು ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಅಮೆರಿಕದ ಸುಪ್ರೀಂ ಕೋರ್ಟ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅನುಮತಿ ನೀಡಿದೆ. ಪಾಕಿಸ್ಥಾನ ಮೂಲದ ಕೆನಡ ಪ್ರಜೆ 2008ರಲ್ಲಿ ಮುಂಬಯಿ ಮೇಲಾದ ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರ ಎನ್ನಲಾಗಿದೆ. ತನ್ನ ಗಡಿಪಾರು ಆದೇಶ ಪ್ರಶ್ನಿಸಿ ರಾಣಾ ಅಮೆರಿಕದ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯನ್ನು

ಕೊನೆಗೂ ಭಾರತಕ್ಕೆ ಗಡಿಪಾರಾಗಲಿದ್ದಾನೆ ಮುಂಬಯಿ ಭಯೋತ್ಪಾದಕ ದಾಳಿಯ ಸೂತ್ರಧಾರ Read More »

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ

ಪ್ರಯಾಗ್‌ರಾಜ್‌ : ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳು ಇದ್ದಕ್ಕಿದ್ದಂತೆ ಬೆಂಕಿಹತ್ತಿಕೊಡು ಉರಿದು ಕರಕಲಾಗಿವೆ. ಕಳೆದ ಭಾನುವಾರಷ್ಟೇ ಸಿಲಿಂಡರ್‌ ಸ್ಫೋಟಿಸಿದ ಪರಿಣಾಮ ಬೆಂಕಿಹತ್ತಿಕೊಂಡು ಸುಮಾರು 20 ಟೆಂಟ್‌ಗಳು ಸುಟ್ಟುಹೋಗಿದ್ದವು. ಮಹಾಕುಂಭಮೇಳದ ಸೆಕ್ಟರ್‌ 2ರ ಬಳಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿಹತ್ತಿಕೊಡಿದ್ದು, ಕೂಡಲೇ ಅಗ್ನಿಶಾಮಕ ಪಡೆ ಉಳಿದ ಕಾರುಗಳು ಮತ್ತಿತರ ವಾಹನಗಳನ್ನು ದೂರ ಸಾಗಿಸಿದ ಪರಿಣಾಮ ಹೆಚ್ಚಿನ ಅನಾಹುತವಾಗಿಲ್ಲ. ಆದರೆ ಬೆಂಕಿಹತ್ತಿಕೊಂಡ ಎರಡು ಕಾರುಗಳು ಪೂರ್ತಿಯಾಗಿ ಸುಟ್ಟುಹೋಗಿವೆ. ಘಟನೆಯಲ್ಲಿ

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ Read More »

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ

ಗ್ರಾಮಸ್ಥರಿಂದ ಲೋಕಾಯುಕ್ತಕ್ಕೆ ದೂರು ರಾಮನಗರ: ವಕ್ಫ್ ಮಂಡಳಿ ರೈತರ ಜಮೀನು ಕಬಳಿಸುತ್ತಿರುವ ವಿವಾದ ಇನ್ನೂ ಜೀವಂತವಾಗಿರುವಾಗಲೇ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್‌ ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ Read More »

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ

ಒಂದು ಕಾಲದ ಮಾದಕ ನಟಿ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪ್ರಯಾಗ್‌ರಾಜ್‌ : ಬಾಲಿವುಡ್‌ನ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತದ್ದಾರೆ. ಶುಕ್ರವಾರ ಕುಂಭಮೇಳದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರು ನೀಡಲಾಗಿದೆ. ಇದರೊಂದಿಗೆ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷೇಕವನ್ನೂ ಮಾಡಲಾಗಿದೆ. 25 ವರ್ಷಗಳಿಂದ ವಿದೇಶದಲ್ಲಿ ಇದ್ದ ಮಮತಾ ಕುಲಕರ್ಣಿ ಶುಕ್ರವಾರ

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ Read More »

ಕಬಕ ಮಸೀದಿ ಬಳಿ ಗುಡ್ಡಕ್ಕೆ ತಗುಲಿದ ಬೆಂಕಿ

ಪುತ್ತೂರು: ಪುತ್ತೂರಿನ ಹೊರವಲಯದ ಕಬಕ ಮಸೀದಿ ಎದುರಿನ ಗುಡ್ಡಕ್ಕೆ ಶುಕ್ರವಾರ ಸಂಜೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ರೈಲ್ವೆ ಹಳಿಯ ಆಸುಪಾಸು ನಿರ್ಜನ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದ್ದಾರೆ.

ಕಬಕ ಮಸೀದಿ ಬಳಿ ಗುಡ್ಡಕ್ಕೆ ತಗುಲಿದ ಬೆಂಕಿ Read More »

ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ದಿಢೀರ್ ವರ್ಗಾವಣೆ

ಪುತ್ತೂರು: ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ರಾಯಚೂರು ಸಿಟಿ ಕಮೀಷನರ್ ಆಗಿ ವರ್ಗಾವಣೆಗೊಂಡಿದ್ದಾರೆ. ಭಾರತ ಸರಕಾರದ ಕಾರ್ಯದರ್ಶಿ ಟಿ.ಮಹಂತೇಶ್‍ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವರು ಪುತ್ತೂರು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಉತ್ತಮ ಸೇವೆ ಸಲ್ಲಿಸುವ ಮೂಲಕ  ಪುತ್ತೂರಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ದಿಢೀರ್ ವರ್ಗಾವಣೆ Read More »

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಮಂಗಳೂರು : ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ Read More »

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ  

ಪುತ್ತೂರು : ಕೃಷ್ಣಪ್ಪ  ಗೌಡ  ಮಾಲಿಕತ್ವದ  ಪುತ್ತೂರಿನ  ನೆಹರು  ನಗರದಲ್ಲಿರುವ  ಹೋಟೆಲ್  ಶ್ರೀಕೃಷ್ಣ ಭವನವು  ಸುಮಾರು  20   ವರುಷಗಳಿಂದಲೂ   ಅಧಿಕ   ಸಮಯದಿಂದ   ನೆಹರು   ನಗರದಲ್ಲಿನ   ಪುತ್ತೂರು- ಮಂಗಳೂರು   ಹೆದ್ದಾರಿ   ರಸ್ತೆ   ಬದಿಯ   ಅಶ್ವಿನಿ   ಕಾಂಪ್ಲೆಕ್ಸ್’ನಲ್ಲಿ   ಕಾರ್ಯಾಚರಿಸುತ್ತಿದ್ದು,   ಇದೀಗ  ಹೋಟೆಲ್   ಶ್ರೀಕೃಷ್ಣ  ಭವನ   ಪಟ್ಲ  ಕಾಂಪ್ಲೆಕ್ಸ್’ಗೆ  ಜ. 24ರಂದು  ಸ್ಥಳಾoತರಗೊಂಡಿದೆ. ಈ  ಸಂದರ್ಭದಲ್ಲಿ  ಲಕ್ಷ್ಮೀ   ಪೂಜೆಯೊಂದಿಗೆ   ಹೋಟೆಲ್   ಶ್ರೀ  ಕೃಷ್ಣ ಭವನ  ಪಟ್ಲ  ಕಾಂಪ್ಲೆಕ್ಸ್’ ನ ನೂತನ   ಕಟ್ಟಡ   ಶುಭಾರಂಭಗೊಂಡಿದೆ.   ನೂತನ   ಹೋಟೆಲನ್ನು   ಪುತ್ತೂರು   ಮಾಜಿ   ಶಾಸಕ  ಸಂಜೀವ

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ   Read More »

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು

ಮುಂಬಯಿ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಆರ್ಡಿನೆನ್ಸ್ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸುವ ವೇಳೆ ಕಾರ್ಖಾಣೆಯಲ್ಲಿ ಸುಮಾರು 20 ಕಾರ್ಮಿಕರು ಇದ್ದರು. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು Read More »

error: Content is protected !!
Scroll to Top