ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ | ಮರಳು ಅನ್‍ ಲೋಡ್ ಮಾಡುತ್ತಿದ್ದ ವೇಳೆ ಘಟನೆ

ಬಂಟ್ವಾಳ: ಪಿಕಪ್ ಚಾಲಕರೊಬ್ಬರನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಇಂದು ನಡೆದಿದೆ. ಕೊಳತ್ತಮಜಲು ನಿವಾಸಿ ರಹೀಮ್ ಎಂಬಾತ ಹತ್ಯೆಗೀಡಾದವರು. ರಹೀಮ್‍ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಹೀಮ್ ಜೊತೆ ಇನ್ನೊರ್ವ ಸ್ಥಳದಲ್ಲಿದ್ದು,  ಆತನಿಗೂ ಕಡಿಯಲಾಗಿದೆ. ಆತನಿಗೆ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು […]

ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ | ಮರಳು ಅನ್‍ ಲೋಡ್ ಮಾಡುತ್ತಿದ್ದ ವೇಳೆ ಘಟನೆ Read More »

ಹಾಲಿ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆ

ಬಿಜೆಪಿ ಹೈಕಮಾಂಡ್ ಹಾಲಿ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಈ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ ಇಬ್ಬರು ಶಾಸಕರಿಗೆ ನೋಟಿಸ್ ನೀಡಿತ್ತು. ಆ ನೋಟಿಸ್‌ಗೆ ಮೇ

ಹಾಲಿ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆ Read More »

ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಚಾಲಕ ಮೃತ್ಯು

ಬಂಟ್ವಾಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಭಂಡಾರಕೊಟ್ಟಿಗೆ ನಿವಾಸಿ ಜಯಂತ್ ಗೌಡ ಮೃತಪಟ್ಟ ಚಾಲಕ. ತುಂಬೆಯ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್‌ ಸಿಬ್ಬಂದಿಯಾಗಿದ್ದ ಜಯಂತ್ ಗೌಡ  ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್‍ ಕಂಬಕ್ಕೆ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರು  ಸಂಪೂರ್ಣ ನುಜ್ಜು ಗುಜ್ಜಾಗಿದ್ದು ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಚಾಲಕ ಮೃತ್ಯು Read More »

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು

ಕಡಬ: ಕೊಯಿಲ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬೃಹತ್ ಗಾತ್ರದ ಮಾವಿನ ಮರವೊಂದು ಕಾರಿನ ಮೇಲೆ ಬಿದ್ದ ಘಟನೆ ಇಂದು ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಮೂರು ಮಂದಿ ಇದ್ದು, ಅಪಾಯದ ಅರಿವು ಆಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು Read More »

ಪ್ರಜ್ವಲ್‌ ರೇವಣ್ಣ ಮೊಬೈಲ್‌ನಲ್ಲಿತ್ತಂತೆ 2 ಸಾವಿರ ಅಶ್ಲೀಲ ಫೋಟೊ, 50 ವಿಡಿಯೋ

ನ್ಯಾಯಾಲಯಕ್ಕೆ ಮಾಹಿತಿ ನೀಡಿದ ರೇವಣ್ಣ ಕುಟುಂಬದ ಮಾಜಿ ಚಾಲಕ ಬೆಂಗಳೂರು: ಸರಣಿ ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಚಾರಣೆ ವೇಳೆ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್‌ ಮೊಬೈಲ್‌ನಲ್ಲಿ ಸುಮಾರು 2 ಸಾವಿರ ಅಶ್ಲೀಲ ಫೋಟೋಗಳು ಹಾಗೂ 40ರಿಂದ 50 ವಿಡಿಯೋಗಳಿದ್ದವು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ಸೋಮವಾರ ಪ್ರಕರಣದ ವಿಚಾರಣೆಗೆ ಹಾಜರಾದ ಕಾರ್ತಿಕ್‌, ಪ್ರಜ್ವಲ್‌ ಮೊಬೈಲ್‌ನಲ್ಲಿದ್ದ

ಪ್ರಜ್ವಲ್‌ ರೇವಣ್ಣ ಮೊಬೈಲ್‌ನಲ್ಲಿತ್ತಂತೆ 2 ಸಾವಿರ ಅಶ್ಲೀಲ ಫೋಟೊ, 50 ವಿಡಿಯೋ Read More »

ನಕಲ್‌ ಕರ್ನೆ ಲಿಯೆ ಅಕಲ್‌ ಚಾಹಿಯೆ : ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಿದ ಓವೈಸಿ

ನಕಲಿ ಫೋಟೊ ಉಡುಗೊರೆ ಕೊಟ್ಟು ಜಗತ್ತಿನೆದುರು ಅಪಹಾಸ್ಯಕ್ಕೀಡಾದ ಪಾಕ್‌ ನವದೆಹಲಿ : ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್‌ ಷರೀಫ್‌ಗೆ ಅಲ್ಲಿನ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ನೀಡಿದ ಫೋಟೊ ಇಡೀ ಜಗತ್ತಿನಲ್ಲಿ ನಗೆಪಾಟಲಾಗಿದೆ. ಚೀನದ 2019ರ ಮಿಲಿಟರಿ ಡ್ರಿಲ್‌ನ ಫೋಟೊವನ್ನು ಆಪರೇಷನ್‌ ಸಿಂಧೂರ ಸಂದರ್ಭದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕಿದ ಗೆಲುವು ಎಂದು ಹೇಳಿಕೊಂಡು ಸನ್ಮಾನ ಸಮಾರಂಭದಲ್ಲಿ ಮುನೀರ್‌ ಈ ಫೋಟೊವನ್ನು ಪ್ರಧಾನಿಗೆ ಉಡುಗೊರೆ ನೀಡಿದ್ದರು. ಕ್ಷಣಾರ್ಧದಲ್ಲಿ ಈ ಫೋಟೊದ ಅಸಲಿ ಮೂಲ ಪತ್ತೆಯಾಗಿದ್ದು, ಪಾಕಿಸ್ತಾನದ ಸೇನೆ ಇನ್ನಿಲ್ಲದಂತೆ

ನಕಲ್‌ ಕರ್ನೆ ಲಿಯೆ ಅಕಲ್‌ ಚಾಹಿಯೆ : ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಿದ ಓವೈಸಿ Read More »

ಶಾಲೆಗಳಿಗೆ ಕೊರೊನ ಮಾರ್ಗಸೂಚಿ ಸದ್ಯಕ್ಕಿಲ್ಲ : ಮಧು ಬಂಗಾರಪ್ಪ

ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ಸಲಹೆ ಬೆಂಗಳೂರು: ರಾಜ್ಯದಲ್ಲಿ ಕೊರೊನ ಪ್ರಕರಣಗೂ ವರದಿಯಾಗುತ್ತಿದ್ದರೂ ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಹೊರಡಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮೇ 29ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮಾರ್ಗಸೂಚಿ ಶಾಲೆಗಳಿಗೆ ಕೊಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ, ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಕೊಟ್ಟರೆ ಅವುಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ

ಶಾಲೆಗಳಿಗೆ ಕೊರೊನ ಮಾರ್ಗಸೂಚಿ ಸದ್ಯಕ್ಕಿಲ್ಲ : ಮಧು ಬಂಗಾರಪ್ಪ Read More »

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

ವೀರಮಂಗಲ  : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು. ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು.ರಚನಾ ಚಿದ್ಗಲ್ ಇವರಿಗೆ  ಶ್ರವಣಸ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆ ಬಳಿಕ ನಡೆದ  ಜಾಂಬವತಿ‌ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದ ಭಾಗವತರಾಗಿ ಆನಂದ ಸವಣೂರು,  ಕು.ರಚನಾ ಹಾಗೂ

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ Read More »

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ | ತೋಟಗಾರಿಕೆ ಇಲಾಖೆ ಮಾಹಿತಿ

ಪುತ್ತೂರು: ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ವೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ 1) ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು.

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ | ತೋಟಗಾರಿಕೆ ಇಲಾಖೆ ಮಾಹಿತಿ Read More »

ಕಿರುತೆರೆ ನಟ ಶ್ರೀಧರ ನಾಯಕ್‌ ನಿಧನ

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟ ಶ್ರೀಧರ್ ನಾಯಕ್ (47) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಲ್ಬಣಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತದೇಹ ಇಡಲಾಗಿದೆ. ಗುರುತೇ ಸಿಗದಷ್ಟು ಬದಲಾಗಿ ಶ್ರೀಧರ್ ನಾಯಕ್ ಬೆಡ್ ಮೇಲೆ ಮಲಗಿದ್ದು ನೋಡಿ ಹಲವರಿಗೆ ಶಾಕ್ ಆಗಿತ್ತು. ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು. ಶ್ರೀಧರ್ ಅವರಿಗೆ ಅನಾರೋಗ್ಯ ಉಂಟಾದ ವಿಚಾರದ ಬಗ್ಗೆ ಏಪ್ರಿಲ್​ನಲ್ಲಿ

ಕಿರುತೆರೆ ನಟ ಶ್ರೀಧರ ನಾಯಕ್‌ ನಿಧನ Read More »

error: Content is protected !!
Scroll to Top