ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ

ಪುತ್ತೂರು : ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ಚಲನಚಿತ್ರ ನಟ ಆರ್ಯನ್ ಇವರ ಸಹಕಾರದಲ್ಲಿ ಅಶ್ವಥ್ ಎನ್ ಪುತ್ತೂರು  ಇವರ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮೋಡಿಬಂದ ವಿಭಿನ್ನ ಕಥಾಧಾರಿತವಾದ  “ಅಸ್ಮಿತ” ಕಿರುಚಿತ್ರದ ಪೋಸ್ಟರನ್ನು ಅಭಿನಯ ಆರ್ಟ್ಸ್ ತಂಡದ  ನಿರ್ದೇಶಕರಾದ  ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾಚತುರ   ಕೇಶವ ಮಚ್ಚಿಮಲೆ ಬಿಡುಗಡೆ ಮಾಡಿದ್ದು, ಇದೀಗ ಕನ್ನಡ, ತುಳು ತೆನ್ಕಾಯಿ ಮಲೆ ಸಿನಿಮಾದ ಖ್ಯಾತ ನಿರ್ದೇಶಕರಾದ ರವೀಚಂದ್ರ ಮುಂಡೂರು  ಟ್ರೈಲರನ್ನು  ಬಿಡುಗಡೆ ಮಾಡಿದ್ದಾರೆ. “ಅಸ್ಮಿತ” ಕಿರುಚಿತ್ರ ಟ್ರೈಲರ್‌ ಮೂಲಕ […]

ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ Read More »

ಅಬ್ದುಲ್‌ ರಹಿಮಾನ್‌ ಶವಯಾತ್ರೆ ವೇಳೆ ಫರಂಗಿಪೇಟೆಯಲ್ಲಿ ಉದ್ವಿಗ್ನ ಸ್ಥಿತಿ

ರಸ್ತೆತಡೆ ಮಾಡಿ ಸರಕಾರದ ವಿರುದ್ಧ ಘೋಷಣೆ ಕೂಗಿದ ಉದ್ರಿಕ್ತ ಗುಂಪು ಮಂಗಳೂರು: ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹಿಮಾನ್(34) ಮೃತದೇಹ ಸಾಗಾಟದ ವೇಳೆ ಫರಂಗಿಪೇಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಜನರ ಗುಂಪು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಮಯ್ಯತ್ ಸ್ನಾನ ನಿರ್ವಹಿಸಿ ಅಲ್ಲಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು.

ಅಬ್ದುಲ್‌ ರಹಿಮಾನ್‌ ಶವಯಾತ್ರೆ ವೇಳೆ ಫರಂಗಿಪೇಟೆಯಲ್ಲಿ ಉದ್ವಿಗ್ನ ಸ್ಥಿತಿ Read More »

ಕಾರಿನ ಸನ್‌ರೂಫ್‌ ತೆರೆದು ನಡುರಸ್ತೆಯಲ್ಲೇ ದಂಪತಿ ರೊಮಾನ್ಸ್‌

ದಂಡ ವಿಧಿಸಿ ಎಚ್ಚರಿಕೆ ನೀಡಿದ ಪೊಲೀಸರು ಬೆಂಗಳೂರು: ಕಾರಿನಲ್ಲಿ ಹೋಗುತ್ತಿರುವಾಗ ಸನ್‌ರೂಫ್ ತೆಗೆದು ನಡುರಸ್ತೆಯಲ್ಲೇ ದಂಪತಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಗರದ ಕೋರಮಂಗಲದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ ದಂಪತಿ ಊಟ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ ಸನ್‌ರೂಪ್ ತೆಗೆದು ರೊಮ್ಯಾನ್ಸ್ ಮಾಡಿದ್ದು, ದಂಪತಿಯ ವರ್ತನೆಯನ್ನು ವಾಹನ ಸವಾರರು ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನು ಕಂಡ ಹಲಸೂರು ಪೊಲೀಸರು ಕಾರಿನ ನಂಬರ್ ಆಧಾರಿಸಿ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಅಪಾಯಕಾರಿಯಾಗಿ

ಕಾರಿನ ಸನ್‌ರೂಫ್‌ ತೆರೆದು ನಡುರಸ್ತೆಯಲ್ಲೇ ದಂಪತಿ ರೊಮಾನ್ಸ್‌ Read More »

ಐಪಿಎಲ್‌ : ಮುಗಿದ ಲೀಗ್‌ ಹಂತ; ಮೇ 29ರಿಂದ ಪ್ಲೇ ಆಫ್‌ ಪಂದ್ಯಗಳು

ಆರ್‌ಸಿಬಿ, ಪಂಜಾಬ್‌, ಗುಜರಾತ್‌, ಮುಂಬೈ ತಂಡಗಳ ನಡುವೆ ಹಣಾಹಣಿ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ ಲೀಗ್ ಹಂತದ ಪಂದ್ಯಗಳು ನಿನ್ನೆಗೆ ಮುಗಿದಿದ್ದು, ಪ್ಲೇಆಫ್ ಪಂದ್ಯಗಳು ಮೇ 29ರಿಂದ ಶುರುವಾಗಲಿವೆ. ಈ ಸುತ್ತಿನಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಅಂದರೆ ಮೊದಲ ಮೂರು ಮ್ಯಾಚ್​ಗಳು ಫೈನಲ್​ಗಾಗಿ ನಡೆಯಲಿರುವ ಅರ್ಹತಾ ಪಂದ್ಯಗಳು. ಇದಾದ ಬಳಿಕ ಜೂನ್ 3 ರಂದು ಫೈನಲ್ ಮ್ಯಾಚ್ ನಡೆಯಲಿದೆ. 10 ತಂಡಗಳಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ನಾಲ್ಕು ತಂಡಗಳು ಮುಂದಿನ ಹಂತಕ್ಕೇರಿವೆ. ಅದರಂತೆ ದ್ವಿತೀಯ ಸುತ್ತಿನಲ್ಲಿ

ಐಪಿಎಲ್‌ : ಮುಗಿದ ಲೀಗ್‌ ಹಂತ; ಮೇ 29ರಿಂದ ಪ್ಲೇ ಆಫ್‌ ಪಂದ್ಯಗಳು Read More »

ಅಬ್ದುಲ್‌ ರಹಿಮಾನ್‌ ಹತ್ಯೆ : 15 ಮಂದಿಯ ವಿರುದ್ಧ ಪ್ರಕರಣ ದಾಖಲು

ಕೊಲೆ ಮಾಡಿದವರಲ್ಲಿ ಸ್ಥಳೀಯ ಇಬ್ಬರು ಪರಿಚಯಸ್ಥರು ಎಂದು ಮಾಹಿತಿ ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ (32) ಹತ್ಯೆ ಮತ್ತು ಕಲಂದರ್ ಶಾಫಿ ಎಂಬವರ ಮೇಲಿನ ಕೊಲೆಯತ್ನ ಪ್ರಕರಣ‌ ಸಂಬಂಧ ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರಹಿಮಾನ್ ಅವರ‌ ಕೊಲೆ ಮತ್ತು ಕಲಂದರ್ ಶಾಫಿ ಕೊಲೆಯತ್ನ ಪ್ರಕರಣದಲ್ಲಿ ದೀಪಕ್ ಮತ್ತು

ಅಬ್ದುಲ್‌ ರಹಿಮಾನ್‌ ಹತ್ಯೆ : 15 ಮಂದಿಯ ವಿರುದ್ಧ ಪ್ರಕರಣ ದಾಖಲು Read More »

ಮಂಗಳೂರು : ಹುಟ್ಟೂರು ಕೊಳತ್ತಮಜಲ್‌ಗೆ ಅಬ್ದುಲ್‌ ರಹಿಮಾನ್‌ ಮೃತದೇಹ ರವಾನೆ

ಸರಣಿ ಹತ್ಯೆಗಳಿಂದ ಕರಾವಳಿಯಲ್ಲಿ ಆತಂಕದ ವಾತಾವರಣ- ಮೇ 30ರವರೆಗೆ ನಿಷೇಧಾಜ್ಞೆ ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳ ಸಮೀಪ ಮುಸ್ಲಿಂ ಯುವಕನನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕರಾವಳಿಯಲ್ಲಿ ಮತ್ತೆ ಆತಂಕದ ವಾತಾವರಣ ಉಂಟು ಮಾಡಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮುಸ್ಲಿಮರು ಒತ್ತಾಯಿಸಿ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಮೇ 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗೂ ಮಂಗಳೂರು ಪೊಲೀಸ್‌ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು

ಮಂಗಳೂರು : ಹುಟ್ಟೂರು ಕೊಳತ್ತಮಜಲ್‌ಗೆ ಅಬ್ದುಲ್‌ ರಹಿಮಾನ್‌ ಮೃತದೇಹ ರವಾನೆ Read More »

ಕಮಲಹಾಸನ್‌ರ ಥಗ್‌ಲೈಫ್‌ ಸಿನಿಮಾಕ್ಕೆ ಕನ್ನಡಿಗರ ಪ್ರತಿಭಟನೆಯ ಬಿಸಿ

ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವ ನಟ ಬೆಂಗಳೂರು: ಕಮಲಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ. ನಿನ್ನೆಯಿಂದೀಚೆಗೆ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಕಮಲ ಹಾಸನ್‌ ಹೇಳಿಕೆ ವಿರುದ್ಧ ಭಾರಿ ಚರ್ಚೆ ನಡೆಯುತ್ತಿದೆ. ನಟನ ಮುಂಬರುವ ಥಗ್‌ಲೈಫ್‌ ಚಿತ್ರದ ಬಿಡುಗಡೆಯನ್ನು ತಡೆಯಬೇಕೆಂದು ಅನೇಕ ಕನ್ನಡ ಪರ ಹೋರಾಟಗಾರರು ಕರೆ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದರು.

ಕಮಲಹಾಸನ್‌ರ ಥಗ್‌ಲೈಫ್‌ ಸಿನಿಮಾಕ್ಕೆ ಕನ್ನಡಿಗರ ಪ್ರತಿಭಟನೆಯ ಬಿಸಿ Read More »

ಹಿಂದೂ ಮುಖಂಡ ಶರಣ್‍ ಪಂಪ್‍ ವೆಲ್‍ ಪೊಲೀಸರ ವಶಕ್ಕೆ | ರಾತ್ರಿಯೇ ಜಾಮೀನು ಮಂಜೂರು

ಮಂಗಳೂರು: ಸುಹಾನ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ಬಂದ್ ಗೆ ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷದ್‍ ಮುಖಂಡ ಶರಣ್ ಪಂಪ್‌ ವೆಲ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಶರಣ್ ಪಂಪ್‌ ವೆಲ್ ಅವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ರಾತ್ರಿಯೇ ಶರಣ್‍ ಪಂಪ್‍ವೆಲ್‍ ಗೆ ಜಾಮೀನು ನೀಡಲಾಗಿದೆ ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದಾರೆ. ಠಾಣೆಗೆ ಡಿಸಿಪಿ ರವಿಶಂಕರ್ ಭೇಟಿ ನೀಡಿದರು. ನಿಷೇಧಾಜ್ಞೆ

ಹಿಂದೂ ಮುಖಂಡ ಶರಣ್‍ ಪಂಪ್‍ ವೆಲ್‍ ಪೊಲೀಸರ ವಶಕ್ಕೆ | ರಾತ್ರಿಯೇ ಜಾಮೀನು ಮಂಜೂರು Read More »

ಹೊಸ ಅಡಿಕೆ ದರ ಏರಿಕೆಯಿಂದ ರೈತರಲ್ಲಿ ಹರ್ಷ |ಮಾರುಕಟ್ಟೆಯಲ್ಲಿ ಸಂಚಲನ

ಪುತ್ತೂರು: ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆ, ಅದರಲ್ಲೂ ವಿಶೇಷವಾಗಿ ಹೊಸ ಅಡಿಕೆಯ ದರವು ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 500 ರೂಪಾಯಿಗಳ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಬೆಳೆಗಾರರಲ್ಲಿ ಹೊಸ ಭರವಸೆ ಮತ್ತು ಸಂಭ್ರಮವನ್ನು ಸೃಷ್ಟಿಸಿದೆ. ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸುವ ಸುದ್ದಿ ಹೊರಬಿದ್ದಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆ, ಅದರಲ್ಲೂ ವಿಶೇಷವಾಗಿ ಹೊಸ ಅಡಿಕೆಯ ದರವು ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 500 ರೂಪಾಯಿಗಳ ಗಡಿಯನ್ನು ದಾಟಿ ಐತಿಹಾಸಿಕ

ಹೊಸ ಅಡಿಕೆ ದರ ಏರಿಕೆಯಿಂದ ರೈತರಲ್ಲಿ ಹರ್ಷ |ಮಾರುಕಟ್ಟೆಯಲ್ಲಿ ಸಂಚಲನ Read More »

ಇಷ್ಟಾರ್ಥ ಸಿದ್ಧಿಯ  ತಾಳಮದ್ದಳೆ ಸತ್ವ ಪರೀಕ್ಷೆ

ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ  ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಸತ್ವ ಪರೀಕ್ಷೆ  ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಿತು  ಭಾಗವತರಾಗಿ ಪದ್ಮನಾಭ ಕುಲಾಲ್,  ನಿತೀಶ್ ಮನೊಳಿತ್ತಾಯ,ಚೆಂಡೆ ಮತ್ತು ಮದ್ದಳೆಯಲ್ಲಿ  ಕೇಶವ ಬೈಪಡಿತ್ತಾಯ,ಚಂದ್ರ ದೇವಾಡಿಗ ನಗ್ರಿ,   ಶ್ರೀಹರಿ ನಗ್ರಿ,ಚಕ್ರತಾಳದಲ್ಲಿ ಸಂಜಯ ಕಡಬ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ) ಅಂಬಾ ಪ್ರಸಾದ್ ಪಾತಾಳ (ಸುಭದ್ರೆ)ನಾರಾಯಣ ಭಟ್ ಆಲಂಕಾರು(ರುಕ್ಮಿಣಿ) ರಾಮ್ ಪ್ರಕಾಶ್ ಕೊಡಂಗೆ

ಇಷ್ಟಾರ್ಥ ಸಿದ್ಧಿಯ  ತಾಳಮದ್ದಳೆ ಸತ್ವ ಪರೀಕ್ಷೆ Read More »

error: Content is protected !!
Scroll to Top