ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಕಡಬ : ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದು  ಬೈಕ್‌ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ವಿಶ್ವಜಿತ್ (23) ಮೃತಪಟ್ಟವರು. ವಿಶ್ವಜಿತ್ ಮರ್ಧಾಳದ ಪಾಲಡ್ಕದಲ್ಲಿ ಫ್ಯಾಬ್ರಿಕೇಷನ್ ವ್ಯತ್ತಿ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆ ಸ್ಟೇಷನ್ ಬಳಿ […]

ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ಸಾಲದ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ

ಕಾರಿನೊಳಗೆ ಕುಳಿತು ವಿಷ ಸೇವಿಸಿದ ಇಡೀ ಕುಟುಂಬ ಹರ್ಯಾಣ: ಸಾಲ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ. ಡೆಹ್ರಾಡೂನ್​ನ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ. ಸೆಕ್ಟರ್ 27ರಲ್ಲಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಶವಗಳು ಇರುವುದು ಪತ್ತೆಯಾಗಿದೆ. ಕುಟುಂಬವು ಭಾರಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ. ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್ ಪಂಚಕುಲದ ಬಾಗೇಶ್ವರ

ಸಾಲದ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ Read More »

ಕಾರು-ಖಾಸಗಿ ಬಸ್‍ ಡಿಕ್ಕಿ : ಮೂವರಿಗೆ ಗಂಭೀರ ಗಾಯ

ಪುತ್ತೂರು : ಕಾರು ಹಾಗೂ ಖಾಸಗಿ ಬಸ್‍ ಡಿಕ್ಕಿ ಹೊಡೆದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಮುರ ಸಮೀಪ ಇಂದು ಮುಂಜಾನೆ ನಡೆದಿದೆ. ಅಪಘಾತದಿಂದ ಅಂಡೆಪುಣಿ ನಿವಾಸಿ ಈಶ್ವರ ಭಟ್‍, ಪುತ್ರಿ ಅಪೂರ್ವ ಹಾಗೂ ಅಪೂರ್ವ ಅವರ ಪುಟಾಣಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ನಡೆಯುವ ಶ್ರಾದ್ಧ ಕಾರ್ಯಕ್ರಮಕ್ಕೆ ಮಗಳು ಮತ್ತು ಮೊಮ್ಮಗಳನ್ನು ಕರೆದುಕೊಂಡು ಬರುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಪುತ್ತೂರಿನಿಂದ ಕೆದಿಲ ಕಡೆಗೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ

ಕಾರು-ಖಾಸಗಿ ಬಸ್‍ ಡಿಕ್ಕಿ : ಮೂವರಿಗೆ ಗಂಭೀರ ಗಾಯ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಪ್ರತಿಭಟಿಸಿದವರ ಮೇಲೆ ಕೇಸ್‌

ಬಜ್ಪೆ ಚಲೋ ಆಯೋಜಕರು, ಭಾಷಣಕಾರರ ವಿರುದ್ಧ ಎಫ್‌ಐಆರ್‌ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಸದಸ್ಯರು ನಡೆಸಿದ ಬಜ್ಪೆ ಚಲೋ ಪ್ರತಿಭಟನೆಯ ಆಯೋಜಕರು ಮತ್ತು ಭಾಷಣಕಾರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ಭಾನುವಾರ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಬಜ್ಪೆಯ ಶಾರದಾ ಮಂಟಪದ ಬಳಿ ಪ್ರತಿಭಟನೆಯನ್ನು ಪೊಲೀಸರ ಅನುಮತಿಯಿಲ್ಲದೆ ನಡೆಸಲಾಗಿತ್ತು.

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಪ್ರತಿಭಟಿಸಿದವರ ಮೇಲೆ ಕೇಸ್‌ Read More »

ಜೂ.1 : ಯಕ್ಷಧ್ರುವ ಪಟ್ಲ ದಶಮ ಸಂಭ್ರಮ-ರಾಷ್ಟ್ರೀಯ ಕಲಾ ಸಮ್ಮೇಳನ

ಎಂಟು ತಂಡಗಳಿಂದ ಯಕ್ಷಗಾನ ಸ್ಪರ್ಧೆ; ಕ್ರಿಕೆಟಿಗ ರೋಹಿತ್‌ ಶರ್ಮ ತಾರಾ ಮೆರುಗು ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಜೂನ್ 1ರಂದು ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಕಳೆದ ವರ್ಷ ಯಕ್ಷ ಸಂಭ್ರಮಕ್ಕೆ ಜನಪ್ರಿಯ ನಟ ಸುದೀಪ್‌ ತಾರಾ ಮೆರುಗು ನೀಡಿದ್ದರೆ ಈ ವರ್ಷ ಖ್ಯಾತ

ಜೂ.1 : ಯಕ್ಷಧ್ರುವ ಪಟ್ಲ ದಶಮ ಸಂಭ್ರಮ-ರಾಷ್ಟ್ರೀಯ ಕಲಾ ಸಮ್ಮೇಳನ Read More »

ಹಿರಿಯರಿಗೆ ತೃಪ್ತಿ ನೀಡುವ ರೀತಿಯಲ್ಲಿ ಎಳೆಯರು ಕಾರ್ಯನಿರ್ವಹಿಸಬೇಕು. : ಡಾ. ಗಿರೀಶ್ ಅಜಕ್ಕಳ | ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

ಪುತ್ತೂರು: ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಸೋಮವಾರ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜಕ್ಕಳ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿದ್ದ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗಾದಾಗ ಅದು ಜೀವನ ಪರ್ಯಂತ ಫಲವನ್ನು ನೀಡುತ್ತದೆ. ಹಿರಿಯರಿಗೆ ತೃಪ್ತಿ ನೀಡುವ ರೀತಿಯಲ್ಲಿ ಎಳೆಯರು ಕಾರ್ಯನಿರ್ವಹಿಸಬೇಕು. ಬುದ್ಧಿವಂತಿಕೆಯಿಂದ ಕಾರ್ಯೋನ್ಮುಖರಾಗುವ ಮೂಲಕ ಯಶಸ್ಸನ್ನು ಪಡೆಯಬೇಕು. ಇದು ವಿದ್ಯಾರ್ಥಿ ಜೀವನಕ್ಕೆ ಮುಕುಟಪ್ರಾಯವಾದ ಸಂಗತಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಹಿರಿಯರಿಗೆ ತೃಪ್ತಿ ನೀಡುವ ರೀತಿಯಲ್ಲಿ ಎಳೆಯರು ಕಾರ್ಯನಿರ್ವಹಿಸಬೇಕು. : ಡಾ. ಗಿರೀಶ್ ಅಜಕ್ಕಳ | ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ Read More »

ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ : ದ.ಕ. ಜಿಲ್ಲಾದ್ಯಂತ ಎಲ್ಲಾ ಶಾಲೆ, ಪದವಿಪೂರ್ವ  ಕಾಲೇಜುಗಳಿಗೆ ಎರಡು ದಿನ ರಜೆ ಘೊಷಣೆ

ಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ ಮೇ 27 ಮತ್ತು 28 ರಂದು ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ನದಿ, ಸಮುದ್ರ ತೀರಗಳಿಗೆ ತೆರಳದಂತೆ

ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ : ದ.ಕ. ಜಿಲ್ಲಾದ್ಯಂತ ಎಲ್ಲಾ ಶಾಲೆ, ಪದವಿಪೂರ್ವ  ಕಾಲೇಜುಗಳಿಗೆ ಎರಡು ದಿನ ರಜೆ ಘೊಷಣೆ Read More »

ವಾಡಿಕೆಗಿಂತ ಭಿನ್ನವಾಗಿ ಅವಧಿಪೂರ್ವ ಪ್ರವೇಶಗೈದ ನೈರುತ್ಯ ಮುಂಗಾರು

ಪುತ್ತೂರು: ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರ್ನಾಟಕ ಪ್ರವೇಶಿಸುತ್ತಿದ್ದ ನೈರುತ್ಯ ಮುಂಗಾರು ಈ ಬಾರಿ ಸುಮಾರು 10 ದಿನಗಳ ಮುಂಚಿತವಾಗಿಯೇ ಆಗಮಿಸಿದೆ. ಇದು ಕಳೆದ 16 ವರ್ಷಗಳ ಬಳಿಕ ಸಂಭವಿಸಿದ ವಿದ್ಯಮಾನವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD-India Meteorological Department) ಇದರ ನಿರ್ದೇಶಕರಾದ ಸಿ. ಎಸ್. ಪಾಟೀಲ್ ಅವರು ಹೇಳುವಂತೆ ಈ ಬಾರಿ ಕೇರಳ ಮತ್ತು ಕರ್ನಾಟಕಕ್ಕೆ ಒಂದೇ ಬಾರಿ ಮುಂಗಾರು ಪ್ರವೇಶಿಸಿದೆ. ಮುಂಗಾರು ಮಾರುತದ ಹಾದಿ ಈ ಮುಂಗಾರು ಮಳೆ ಮಾರುತವು ಕರ್ನಾಟಕದ ಕಾರವಾರ ಮತ್ತು

ವಾಡಿಕೆಗಿಂತ ಭಿನ್ನವಾಗಿ ಅವಧಿಪೂರ್ವ ಪ್ರವೇಶಗೈದ ನೈರುತ್ಯ ಮುಂಗಾರು Read More »

ಭಾರೀ ಮಳೆ ಹಿನ್ನಲೆ | ಪುತ್ತೂರಿಗೆ ಆಗಮಿಸಿದ ಎನ್‍ ಡಿಆರ್ ಎಫ್‍ ತಂಡ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪುತ್ತೂರಿಗೆ 25 ಸದಸ್ಯರನ್ನೊಳಗೊಂಡ ಎನ್‍ ಡಿಆರ್‍ ಎಫ್ ತಂಡ ಆಗಮಿಸಿದೆ. ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ಎನ್‍ ಡಿಆರ್ ಎಫ್  ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಕೇಂದ್ರವಾಗಿರಿಸಿ‌ ಕಾರ್ಯಾಚರಣೆ ನಡೆಸಲಿರುವ ತಂಡ, ಮಳೆಯಿಂದ‌ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಪರಿಸ್ಥಿತಿ ಅವಲೋಕಿಸಲಿದೆ. ಕಾರ್ಯಾಚರಣೆಯ ವೇಳೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚಲು ಬಳಸುವ ಶ್ವಾನ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ

ಭಾರೀ ಮಳೆ ಹಿನ್ನಲೆ | ಪುತ್ತೂರಿಗೆ ಆಗಮಿಸಿದ ಎನ್‍ ಡಿಆರ್ ಎಫ್‍ ತಂಡ Read More »

ಆಪರೇಷನ್ ಸಿಂದೂರ’ದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪುತ್ತೂರಿನ ಮಳುವೇಲಿನ ಸುಬೇದಾರ್ ಪದ್ಮನಾಭ ಗೌಡರಿಗೆ ಅಭಿನಂದನೆ

ಪುತ್ತೂರು: ಪುತ್ತೂರಿನ ಮಳುವೇಲು ಮನೆಯ ಬಿಎಸ್ಫ್ 148 ಕಂಪೆನಿ ಕಮಾಂಡೆಂಟ್ ಆಗಿದ್ದು 150 ಯೋಧರು ಮತ್ತು ಅಧಿಕಾರಿಗಳನ್ನು ಒಳಗೊಂಡ ಪಡೆಯನ್ನು ಮುನ್ನಡೆಸಿ ಸಮಗ್ರ ಭಾರತವೇ ಹೆಮ್ಮೆ ಪಡುವಂತಹ ಇತ್ತೀಚೆಗೆ ನಡೆದ ‘ಆಪರಷನ್ ಸಿಂಧೂರ’ದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸುಬೇದಾರ್ ಪದ್ಮನಾಭ ಗೌಡರನ್ನು ಮಳುವೇಲು ಕುಟುಂಬ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿತು. ಮಳುವೇಲು ಚೆನ್ನಪ್ಪ ಮತ್ತು ಉಮ್ಮಕ್ಕ ದಂಪತಿಗಳ ಸುಪುತ್ರನಾಗಿರುವ ಗೌಡರು ಪಾಕಿಸ್ತಾನದ ವಿರುದ್ಧ ಬಾರತ ಹೂಡಿದ್ದ ರಕ್ಷಣಾತ್ಮಕ ಯುದ್ಧ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಪುತ್ತೂರು ಹೆಮ್ಮೆ ಪಡುವಂತಹ ವಿಚಾರವಾಗಿದೆ. ವಾಘಾ

ಆಪರೇಷನ್ ಸಿಂದೂರ’ದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪುತ್ತೂರಿನ ಮಳುವೇಲಿನ ಸುಬೇದಾರ್ ಪದ್ಮನಾಭ ಗೌಡರಿಗೆ ಅಭಿನಂದನೆ Read More »

error: Content is protected !!
Scroll to Top