ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಾಸಿಕ ಸಭೆ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮಾಸಿಕ ಸಭೆ ಮತ್ತು ನಿಧನರಾದ ಸಲಹಾ ಸಮಿತಿ ಸದಸ್ಯರಾದ ನಾಟಿವೈದ್ಯ ಜಿನ್ನಪ್ಪ ಗೌಡ ಕಳುವಾಜೆ ಆವರಿಗೆ ಶ್ರದ್ಧಾಂಜಲಿ ಸಭೆ ಒಕ್ಕಲಿಗ ಸಂಘದ ಸಭಾಭವನದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಬ್ರೈನ್ ಹಾಮರಾಜಿಗೆ ಚಿಕಿತ್ಸೆ ಪಡೆಯುತ್ತಿರುವ ಕೊಡಿಪ್ಪಾಡಿ ಲಕ್ಷ್ಮಣ ಗೌಡರಿಗೆ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಕಬಕ ಸಂಜೀವ ಗೌಡ ರಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವಹಿಸಿದ್ದರು ಸಭೆಯಲ್ಲಿ ಪೂರ್ವಾಧ್ಯಕ್ಷರಾದ ಕೆ ವಿಶ್ವನಾಥ […]

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಾಸಿಕ ಸಭೆ Read More »

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಅಪಾರ ಹಾನಿ

ಮೈತೆಯಿ ಸಂಘಟನೆಯ ನಾಯಕನ ಬಂಧನ ವಿರೋಧಿಸಿ ಪ್ರತಿಭಟನೆ ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾತ್ರೋರಾತ್ರಿ ಎಲ್ಲ ಜಿಲ್ಲೆಗಳಲ್ಲಿ ಇಂಟರ್ನೆಟ್​​ ಸ್ಥಗಿತಗೊಳಿಲಾಗಿದ್ದು, ಹಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಭದ್ರತಾ ಪಡೆಗಳು ಮಣಿಪುರದ ಇಂಫಾಲ್ ಪಶ್ಚಿಮದ ಕ್ವಾಕೆಟಾಲ್ ಪ್ರದೇಶದಲ್ಲಿ ಮೈತೆಯಿ ಸಂಘಟನೆಯ ನಾಯಕ ಅರಾಂಬೈ ಟೆಂಗೋಲ್ ಅವರನ್ನು ಬಂಧಿಸಿದ್ದು, ಇದು ಅವರ ಬೆಂಬಲಿಗರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರ ಹಿನ್ನೆಲೆಯಲ್ಲಿ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಇಂಫಾಲ್

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಅಪಾರ ಹಾನಿ Read More »

ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

ಬೆಳ್ತಂಗಡಿ: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67 ) ಜೂ.7ರಂದು ಮಂಗಳೂರಿನ ಕಾವೂರು ಸಮೀಪದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗ ಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ನಿರ್ವಹಿಸಿದ್ದರು. ಪುಂಡು ವೇಷ, ರಾಜ ವೇಷ, ನಾಟಕೀಯ ಪಾತ್ರಗಳ ನುರಿತ ಕಲಾವಿದರಾಗಿದ್ದರು. ಮೃತರು ಪತ್ನಿ ,ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು

ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ Read More »

ಜನಸಾಮಾನ್ಯರ ಮನೆ ಮಕ್ಕಳ ಕೊಂದ ಕೊಲೆಗಡುಕ ಕಾಂಗ್ರೆಸ್‌ ಸರಕಾರ : ಆರ್. ಅಶೋಕ್ | ಹಾದಿ ಬೀದಿಯಲ್ಲಿ ನಿಮ್ಮ ಸರಕಾರಕ್ಕೆ ಜನರಿಂದ ಶಾಪ: ವಿಪಕ್ಷ ನಾಯಕ ಆರೋಪ

ಬೆಂಗಳೂರು: IPL ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ ಕೊಲೆಗಡುಕ ಕಾಂಗ್ರೆಸ್ ಸರಕಾರ 11 ಅಮಾಯಕ ಜನರ ಸಾವಿನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಸರಕಾರದ ವಿರುದ್ಧ ಆರ್. ಅಶೋಕ್ ಕಿಡಿಕಾರಿದ್ದಾರೆ. ತಮ್ಮ “ಎಕ್ಸ್” ಖಾತೆಯಲ್ಲಿ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಮೊಮ್ಮಗನಿಗೆ ಕ್ರಿಕೆಟ್ ಆಟಗಾರರ ಜತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಿಕೊಡುವ ಭರದಲ್ಲಿ

ಜನಸಾಮಾನ್ಯರ ಮನೆ ಮಕ್ಕಳ ಕೊಂದ ಕೊಲೆಗಡುಕ ಕಾಂಗ್ರೆಸ್‌ ಸರಕಾರ : ಆರ್. ಅಶೋಕ್ | ಹಾದಿ ಬೀದಿಯಲ್ಲಿ ನಿಮ್ಮ ಸರಕಾರಕ್ಕೆ ಜನರಿಂದ ಶಾಪ: ವಿಪಕ್ಷ ನಾಯಕ ಆರೋಪ Read More »

34.4 ಕೋಟಿಯಿಂದ 7.25 ಕೋಟಿಗಿಳಿದ ಕಡುಬಡವರ ಸಂಖ್ಯೆ

ದೇಶದಲ್ಲಿ ಕಡುಬಡವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖ ಎಂದು ವಿಶ್ವಬ್ಯಾಂಕ್‌ ವರದಿ ನವದೆಹಲಿ: ದೇಶದಲ್ಲಿ ಕಡಡುಬಡವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಕಳೆದೊಂದು ದಶಕದಲ್ಲಿ ಕಡುಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. 2011-12ರಲ್ಲಿ ಶೇ. 27.1 ಇದ್ದ ಕಡುಬಡತನ ಪ್ರಮಾಣ 2022-23ರಲ್ಲಿ ಶೇ.5.3ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ಅಂಕಿಅಂಶಗಳು ಬಹಿರಂಗಪಡಿಸಿವೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿದ್ದರು. ಇದು

34.4 ಕೋಟಿಯಿಂದ 7.25 ಕೋಟಿಗಿಳಿದ ಕಡುಬಡವರ ಸಂಖ್ಯೆ Read More »

ಸಿದ್ದರಾಮಯ್ಯ, ಖಾದರ್‌ ವಿರುದ್ಧ ಅವಹೇಳನಕಾರಿ ಸಂದೇಶ : ಕೇಸ್‌ ದಾಖಲು

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸಂದೇಶ ಹಂಚಿಕೆ ಮಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್‌ ಯು.ಟಿ. ಖಾದರ್‌ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್‌ ಮಾಡಿದ ಕುರಿತು ಮಂಗಳೂರು ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. ‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಪೊಲೀಸರ ವಿರುದ್ಧ ಅವಹೇಳನಕಾರಿಯಾಗಿ ಸಂದೇಶಗಳನ್ನು ಹರಿಯಬಿಡಲಾಗಿತ್ತು. ಈ ಗ್ರೂಪ್‌ನಲ್ಲಿ ಅಶ್ರಫ್ ಕಿನಾರ ಕುದ್ರೋಳಿ ಎಂಬ ಹೆಸರಿನ ವ್ಯಕ್ತಿ

ಸಿದ್ದರಾಮಯ್ಯ, ಖಾದರ್‌ ವಿರುದ್ಧ ಅವಹೇಳನಕಾರಿ ಸಂದೇಶ : ಕೇಸ್‌ ದಾಖಲು Read More »

ಜೂ.9 ರಿಂದ : ಪ್ರತಿಷ್ಠಿತ ಜಿ.ಎಲ್‍. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ‘ಜಿ.ಎಲ್‍. ಕರಿಮಣಿ ಮೇಳ’

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂ.9 ರಿಂದ ಆರಂಭಗೊಳ್ಳಲಿದೆ. ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದ್ದು, ಜಿಎಲ್ ಕರಿಮಣಿ ಮೇಳದಲ್ಲಿ ಗ್ರಾಹಕರು ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿದರೆ, ಪ್ರತೀ ಗ್ರಾಂಗೆ 150 ರೂ.ಗೂ ಅಧಿಕ ದರ ಪಡೆಯಬಹುದು. ಜಿ.ಎಲ್.‌ ಕರಿಮಣಿ ಮೇಳವು ಪುತ್ತೂರು ಮಾತ್ರವಲ್ಲದೇ ಜಿಎಲ್ ಮಳಿಗಗಳಾದ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿಯೂ ಲಭ್ಯವಿದೆ.

ಜೂ.9 ರಿಂದ : ಪ್ರತಿಷ್ಠಿತ ಜಿ.ಎಲ್‍. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ‘ಜಿ.ಎಲ್‍. ಕರಿಮಣಿ ಮೇಳ’ Read More »

ಅಮರನಾಥ ಯಾತ್ರೆಗೆ ಆಪರೇಷನ್‌ ಶಿವ ಭದ್ರತೆ

50,000 ಅರೆಸೇನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರಿಂದ ಸರ್ಪಗಾವಲು ಶ್ರೀನಗರ: ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಪಾಕಿಸ್ಥಾನದ ಉಗ್ರರು ಧರ್ಮ ಕೇಳಿ ಹತ್ಯೆಗೈದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಅಮರನಾಥ ಯಾತ್ರೆಗೆ ಗರಿಷ್ಠ ಭದ್ರತೆ ಒದಗಿಸಲು ಏರ್ಪಾಡು ಮಾಡಿದೆ. ಯಾತ್ರಿಕರಿಗೆ ಬಹುಪದರದ ಗರಿಷ್ಠ ಭದ್ರತೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ `ಆಪರೇಷನ್ ಶಿವ’ ಯೋಜನೆಯನ್ನು ಜಾರಿಗೆ ತಂದಿದೆ. ‘ಆಪರೇಷನ್ ಶಿವ’ ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ

ಅಮರನಾಥ ಯಾತ್ರೆಗೆ ಆಪರೇಷನ್‌ ಶಿವ ಭದ್ರತೆ Read More »

ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಹಾಯಕ ಆಯುಕ್ತೆ ಭೇಟಿ | ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ಪುತ್ತೂರು: ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಳೆಯಿಂದ ಹಾನಿಗೀಡಾದ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಹೋಬಳಿಯ ಬೆಳ್ಳಿಪ್ಪಾಡಿ, ಹಿರೆಬಂಡಾಡಿ,ಕೋಡಿಂಬಾಡಿ ಗ್ರಾಮಗಳಿಗೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ನಷ್ಟ ಉಂಟಾದವರಿಗೆ ಪರಿಹಾರದ ಕುರಿತು ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು, ಈ ಸಂಧರ್ಭದಲ್ಲಿ NDRF ತಂಡ , ಉಪ್ಪಿನಂಗಡಿಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಬೆಳ್ಳಿಪಾಡಿ ಗ್ರಾಮ, ಕೊಡಿಂಬಾಡಿ ಗ್ರಾಮ, ಗ್ರಾಮ ಆಡಳಿತಾಧಿಕಾರಿಗಳು ಹಿರೇಬಂಡಾಡಿ ಗ್ರಾಮ , ಪಂಚಾಯತ್‌ ಅಭಿವೃದ್ದೀ ಅಧಿಕಾರಿಗಳು ಬೆಳ್ಳಿಪ್ಪಾಡಿ ಗ್ರಾಮ ಪಂಚಾಯತ್‌ ,

ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಹಾಯಕ ಆಯುಕ್ತೆ ಭೇಟಿ | ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ Read More »

ಕಾಲ್ತುಳಿದಲ್ಲಿ ಮಡಿದವರ ಕುಟುಂಬಗಳ ಪರಿಹಾರ ಮೊತ್ತ 25 ಲಕ್ಷಕ್ಕೇರಿಕೆ

ಅಲ್ಪ ಪರಿಹಾರ ನೀಡಿದ್ದಕ್ಕೆ ಟೀಕೆ ವ್ಯಕ್ತವಾದ ಬಳಿಕ ಹೆಚ್ಚಳ ಮಾಡಿದ ಸರ್ಕಾರ ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಗಳಿಗೆ ಬರೀ 10 ಲ.ರೂ. ಪರಿಹಾರ ಘೋಷಿಸಿದ್ದಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದ ಸರ್ಕಾರ ಇದೀಗ ಪರಿಹಾರ ಮೊತ್ತವನ್ನು 25 ಲ.ರೂ.ಗೆ ಏರಿಕೆ ಮಾಡಿದೆ. ಕಾಲ್ತುಳಿತದಿಂದ ಸಾವನ್ನಪ್ಪಿದ 11 ಮಂದಿಯ ಕುಟುಂಬಗಳ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರೂ.ಗೆ ಹೆಚ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಈ ಮೊದಲು ಮೃತರ ಕುಟುಂಬಗಳಿಗೆ

ಕಾಲ್ತುಳಿದಲ್ಲಿ ಮಡಿದವರ ಕುಟುಂಬಗಳ ಪರಿಹಾರ ಮೊತ್ತ 25 ಲಕ್ಷಕ್ಕೇರಿಕೆ Read More »

error: Content is protected !!
Scroll to Top