ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿ ಬಂಧನ

ಧರ್ಮಸ್ಥಳ: ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಕಲ್ಮಂಜ ನೀರಚಿಲುಮೆ ರಸ್ತೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಹುಕ್ಕೋಟ್ಟು ರಸ್ತೆಯಲ್ಲಿ ಮಹಿಳೆಯೊಬ್ಬರು ಜೂ.6ರಂದು ಸಂಜೆ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಈ ಬಗ್ಗೆ ನೊಂದ ಮಹಿಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಧರ್ಮಸ್ಥಳ ಪೊಲೀಸರು BNS74,78(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಇಂದು ಬೆಳ್ತಂಗಡಿ […]

ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿ ಬಂಧನ Read More »

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ

ಪುತ್ತೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದೇಶದ್ಯಾಂತ ನಡೆಯುತ್ತಿರುವ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮ ನಡೆಯಿತು. ಪ್ರತಿಯೊಬ್ಬ ಮಗುವು ಒಂದೊಂದು ಗಿಡವನ್ನು ನೆಟ್ಟು ಏಕ್ ಫೇಡ್ ಮಾ ಕೆ ನಾಮ್ ಎಂಬ ಅಭಿಯಾನದಲ್ಲಿ ಪಾಲ್ಗೊಂಡರು. ಇಕೋ ಕ್ಲಬ್ ವೆಬ್ ಸೈಟ್ ನಲ್ಲಿ ಗಿಡ ನೆಡುವ ಪೋಟೋ ಅಪ್ಲೋಡ್ ಮಾಡಿ ಪ್ರಮಾಣಪತ್ರ ಪಡೆದುಕೊಂಡರು. ಭಾರತದ  ಗೌರವಾನ್ವಿತ ಪ್ರಧಾನಮಂತ್ರಿಗಳು ತಾಯಿಯ ಹೆಸರಿನಲ್ಲಿ ಸಿಂದೂರ ಗಿಡ ನೆಟ್ಟು ಪ್ರತಿ ಶಾಲೆಗಳಲ್ಲೂ ಮಕ್ಕಳು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಲು

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ Read More »

ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್‍ ಕರೆ | ಆರೋಪಿ ವಿದ್ಯಾರ್ಥಿನಿ ಬಂಧನ

ಮಂಗಳೂರು: ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ದೇರಳಕಟ್ಟೆ ನಾಟೆಕಲ್ ರೋಡ್‌ ಕಣಚೂರು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿಯು ಕರೆ ಮಾಡಿ, ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, 11-00 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೆದರಿಕೆಯ ಕರೆ ಬಂದ ಹಿನ್ನಲೆಯಲ್ಲಿ ಪೊಲೀಸರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ, ಬಾಂಬ್ ನಿಷ್ಕ್ರಿಯ ತಂಡ ಹಾಗೂ

ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್‍ ಕರೆ | ಆರೋಪಿ ವಿದ್ಯಾರ್ಥಿನಿ ಬಂಧನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು  ಮಹತ್ವಪೂರ್ಣವಾಗಿ ಆಚರಿಸಲಾಯಿತು. ಸಸ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ವಿಭಾಗ ಹಾಗೂ ಇಕೋಕ್ಲಬ್‍ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು ಪಂಚಾಯಿತಿ ಉಪನಿರ್ದೇಶಕ ವಿಲ್ಫ್ರೆಡ್,  ರೋಡ್ರಿಗಸ್‍ ಮಾತನಾಡಿ,  ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್‍ ತ್ಯಾಜ್ಯ ಹಾಗೂ ಇತರೆ ಅವ್ಯಯ ಉತ್ಪನ್ನಗಳ ಅಕ್ರಮ ನಾಶದ ಪರಿಣಾಮದ ಬಗ್ಗೆ ಮಾಹಿತಿನೀಡಿದರು. ಕಾಲೇಜಿನ ಪ್ರಾಚಾರ್ಯ ವಂ.ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯತೆಯನ್ನು ತಿಳಿಸಿ, ಸಮೃದ್ಧ ಪರಿಸರದತ್ತ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ Read More »

ಕೆಎಸ್‍ ಆರ್ ಟಿಸಿ ಬಸ್‍ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು

ಫರಂಗಿಪೇಟೆ: ಬಸ್ ಡಿಕ್ಕಿಯಾಗಿ ಆಟೋ ಚಾಲಕನೊರ್ವ ಸಾವನ್ನಪ್ಪಿರುವ ಘಟನೆ ಹತ್ತನೇ ಮೈಲ್ ಕಲ್ಲು ಎಂಬಲ್ಲಿ ನಡೆದಿದೆ. ಅಮೆಮ್ಮಾರ್ ನಿವಾಸಿ ಝಾಹಿದ್ (28) ಮೃತಪಟ್ಟವರು. ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವಾಗ ಮಂಗಳೂರಿನಿಂದ ಬರುತ್ತಿದ್ದ ಕೆಎಸ್  ಆರ್ ಟಿಸಿ ಬಸ್ ಡಿಕ್ಕಿಯಾಗಿ ಝಾಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಎಸ್‍ ಆರ್ ಟಿಸಿ ಬಸ್‍ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು Read More »

ಲಾಡ್ಜ್ ನಲ್ಲಿ ವೈಶ್ಯಾವಾಟಿಕೆ : ಆರೋಪಿ ಬಂಧನ

ಉಡುಪಿ: ಲಾಡ್ಜ್ ಒಂದರಲ್ಲಿ  ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದಾಳಿಯ ವೇಳೆ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಬಡಗಬೆಟ್ಟುವಿನ ದಶರಥನಗರದ ಲಾಡ್ಜ್ ವೊಂದರಲ್ಲಿ ಮಹಿಳೆಯನ್ನು ಬಲವಂತವಾಗಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಿದ್ದು, ಕೂಡಲೇ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಮಹಿಳೆಯನ್ನು ರಕ್ಷಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಡ್ಜ್ ನಲ್ಲಿ ವೈಶ್ಯಾವಾಟಿಕೆ : ಆರೋಪಿ ಬಂಧನ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಎಪಿಎಂಸಿ ಶಾಖೆ 6ನೇ ವರ್ಷಕ್ಕೆ ಪಾದಾರ್ಪಣೆ | ದಾಖಲೆ ವ್ಯವಹಾರ, ಗುರಿ ಮೀರಿದ ಸಾಧನೆ : ಚಿದಾನಂದ ಬೈಲಾಡಿ

ಪುತ್ತೂರು: ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆ ಆಗುತ್ತಿದೆ. 2023-24 ರಲ್ಲಿ ಸಂಘದ ಒಟ್ಟು ಈ ವರ್ಷ 724 ಕೋಟಿಯಷ್ಟು ದಾಖಲೆಯ ವ್ಯವಹಾರ ಆಗಿದೆ. ಒಟ್ಟು ವ್ಯವಹಾರದಲ್ಲಿ 202 ಕೋಟಿ ರೂಪಾಯಿ ಹೆಚ್ಚು ವ್ಯವಹಾರ ನಡೆಸುವ ಮೂಲಕ ಖಾಸಗಿ ಸಹಕಾರ ಸಂಘದಲ್ಲೂ ಸ್ಪರ್ಧಾತ್ಮಕ ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಸಿಬ್ಬಂದಿಗಳ ಕಾರ್ಯಕ್ಷಮತೆ ಇದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ. ಪುತ್ತೂರು ಎಪಿಎಂಸಿ ಸಹಿತ ಪುತ್ತೂರು, ಕಾಣಿಯೂರು, ಬೆಳ್ಳಾರೆ, ಮಾಣಯಿ ಆರ್ಚ್‍

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಎಪಿಎಂಸಿ ಶಾಖೆ 6ನೇ ವರ್ಷಕ್ಕೆ ಪಾದಾರ್ಪಣೆ | ದಾಖಲೆ ವ್ಯವಹಾರ, ಗುರಿ ಮೀರಿದ ಸಾಧನೆ : ಚಿದಾನಂದ ಬೈಲಾಡಿ Read More »

ಕಾಲ್ತುಳಿತ ಘಟನೆ : ಕೆಎಸ್‌ಸಿಎ ಇಬ್ಬರು ಪದಾಧಿಕಾರಿಗಳು ರಾಜೀನಾಮೆ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಇಬ್ಬರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೆಎಸ್‌ಸಿಎ ಕಾರ್ಯದರ್ಶಿ ಎ. ಶಂಕರ್‌, ಖಜಾಂಚಿ ಜೈರಾಮ್‌ ಶುಕ್ರವಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಎ. ಶಂಕರ್‌ ಅವರೇ ಪ್ರಕಟಣೆ ಹೊರಡಿಸಿದ್ದಾರೆ. ಕಾಲ್ತುಳಿತ ಪ್ರಕರಣ ಸಂಬಂಧ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ತನಿಖೆಯನ್ನು ಸಿಐಡಿಗೆ ವಹಿಸಿ ಕಾಲ್ತುಳಿತಕ್ಕೆ ಕಾರಣರಾದ ಆರ್‌ಸಿಬಿ ಆಡಳಿತ ಮಂಡಳಿ, ಡಿಎನ್‌ಎ

ಕಾಲ್ತುಳಿತ ಘಟನೆ : ಕೆಎಸ್‌ಸಿಎ ಇಬ್ಬರು ಪದಾಧಿಕಾರಿಗಳು ರಾಜೀನಾಮೆ Read More »

ಕಾಲ್ತುಳಿತ ಘಟನೆ : ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿಯಿಂದ ಪೊಲೀಸರಿಗೆ ದೂರು

ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್‌ಗೆ ಹೋಗುವ ಎಚ್ಚರಿಕೆ ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತರಾದ ಘಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ನಿಜವಾದ ಸಂಕಷ್ಟ ಈಗ ಶುರುವಾಗಿದೆ. ದುರಂತದಲ್ಲಿ 11 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ವಿರುದ್ಧವೂ ಪೊಲೀಸ್‌ ದೂರು ನೀಡಲಾಗಿದೆ. ಬಿಜೆಪಿ ನಾಯಕರು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್‌ ವಿರುದ್ಧ ಕಬ್ಬನ್​ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯ ಸರ್ಕಾರ

ಕಾಲ್ತುಳಿತ ಘಟನೆ : ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿಯಿಂದ ಪೊಲೀಸರಿಗೆ ದೂರು Read More »

ಕೆರೆಯಲ್ಲಿ  ಮುಳುಗಿ ವಿದ್ಯಾರ್ಥಿ  ಮೃತ್ಯು

ಬಂಟ್ವಾಳ: ಸ್ನಾನಕ್ಕೆಂದು ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ. ಕಾರಿಂಜ ಕಂಗಿಹಿತ್ಲು ಗೂಡಿನ ಬಳಿಯ ನಿವಾಸಿ ಪಿಯುಸಿ ವಿದ್ಯಾರ್ಥಿ ಚೇತನ್ (17) ಎಂದು ಗುರುತಿಸಲಾಗಿದೆ. ಮೃತರು ತಂದೆ ತಾಯಿ ಸಹೋದರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆರೆಯಲ್ಲಿ  ಮುಳುಗಿ ವಿದ್ಯಾರ್ಥಿ  ಮೃತ್ಯು Read More »

error: Content is protected !!
Scroll to Top