ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೂತನ ಕಚೇರಿ ಹಿಂದವೀ ಗೆ ಎಡನೀರು ಶ್ರೀಗಳು ಭೇಟಿ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ನೂತನ ಕಚೇರಿ ಹಿಂದವೀ ಕಾರ್ಯಾಲಯಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಗಮಿಸಿ ಆಶೀರ್ವದಿಸಿದರು. ಟ್ರಸ್ಟ್‍ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸ್ವಾಮೀಜಿಯವರಿಗೆ ಗುರುದಕ್ಷಿಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಸ್ವಾಮೀಜಿಯವರ ಪಾದಸ್ಪರ್ಶದಿಂದ ಹಿಂದವೀ ಕಾರ್ಯಾಲಯವು ಪಾವನವಾಯಿತು. ಸ್ವಾಮೀಜಿಯವರ ಆಶೀರ್ವಾದವೇ ಹಿಂದೂ ಸಮಾಜಕ್ಕೆ ಶ್ರೀರಕ್ಷೆ ಎಂದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್‍ ನ ಅಧ್ಯಕ್ಷ ಮಹೇಂದ್ರ ವರ್ಮ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೂತನ ಕಚೇರಿ ಹಿಂದವೀ ಗೆ ಎಡನೀರು ಶ್ರೀಗಳು ಭೇಟಿ Read More »

ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಕೋಟ್ಯಾಂತರ ವಂಚಿಸಿದ ಕುರಿತು ಮಂಗಳೂರು ಪೂರ್ವ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರಿನ ಬೆಂದೂರ್ ವೆಲ್ ಎಂಬಲ್ಲಿ Hiruglim Elegant Overseas International (Opc) Private Limited ಹೆಸರಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನಂಬಿಕೆ ಬರುವ ಹಾಗೇ ನಂಬಿಸಿ ಅವರಿಂದ ಲಕ್ಷಾಂತರ ಹಣವನ್ನು ಪಡೆದುಕೊಂಡು ವೀಸಾ ನೀಡದೇ ಸುಮಾರು 259 ಜನರಿಗೆ ಸುಮಾರು 4 ಕೋಟಿ 50 ಲಕ್ಷ ರೂಪಾಯಿ ವಂಚನೆ ಮಾಡಿದ ಬಗ್ಗೆ ಮಂಗಳೂರು

ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ವಂಚನೆ : ಇಬ್ಬರು ಆರೋಪಿಗಳ ಬಂಧನ Read More »

ಸಿದ್ದರಾಮಯ್ಯನವರಿಗೆ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಹುದ್ದೆ

ಮುಖ್ಯಮಂತ್ರಿ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ಧುಮುಕುವ ಊಹಾಪೋಹ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೇಳಿಕೆ–ಪ್ರತಿ ಹೇಳಿಕೆಗಳ ಜಟಾಪಟಿ ಜೋರಾಗಿ ನಡೆಯುತ್ತಿರುವ ಹೊತ್ತಿಗೆ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ

ಸಿದ್ದರಾಮಯ್ಯನವರಿಗೆ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಹುದ್ದೆ Read More »

ಪೊಲೀಸ್‌ ಇನ್‌ಸ್ಪೆಕ್ಟರ್‌ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ : ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ

ಕೌಟುಂಬಿಕ ಕಲಹದಿಂದ ಬೇಸತ್ತು ಡೆತ್‌ನೋಟ್‌ ಬರೆದು ಸಾವಿಗೆ ಶರಣಾದ ಪಿಎಸ್‌ಐ ಬೆಂಗಳೂರು: ನಿವೃತ್ತಿಯ ಅಂಚಿನಲ್ಲಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರ ಮೃತದೇಹ ತುಮಕೂರಿನ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಂಡುಬಂದಿದೆ. ದಾವಣಗೆರೆ ಪೊಲೀಸ್ ಠಾಣೆಯ ಸಬ್‌ಇನ್ಸ್​ ಪೆಕ್ಟರ್ ನಾಗರಾಜಪ್ಪ (58) ಮೃತಪಟ್ಟವರು. ತುಮಕೂರಿನ ದ್ವಾರಕಾ ಹೋಟೆಲ್ ಲಾಡ್ಜ್‌ನಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. 4 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಮೃತದೇಹ ಕೊಳೆತು ಹುಳಗಳಾಗಿದ್ದವು ಎಂದು ತಿಳಿದು ಬಂದಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ

ಪೊಲೀಸ್‌ ಇನ್‌ಸ್ಪೆಕ್ಟರ್‌ ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆ : ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ Read More »

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 15ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಆಯ್ಕೆ

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 15ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾಗಿ ವೇದ ಲಕ್ಷ್ಮೀಕಾಂತ್, ಸಂಚಾಲಕರಾಗಿ ಅರುಣ್ ಕುಮಾರ್ ರೈ ಆನಾಜೆ, ಕಾರ್ಯದರ್ಶಿಯಾಗಿ ಗಣೇಶ್ ಕಾಮತ್ ಮತ್ತು ಕೋಶಾಧಿಕಾರಿಯಾಗಿ ಕೇಶವ್ ಪ್ರಸಾದ್ ಬಿ.ವಿ. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸುಹಾಸ್ ಮರಿಕೆ, ಡಾ.ಅನನ್ಯ ಲಕ್ಷ್ಮಿ,ಶೇಖರ ಬ್ರಹ್ಮನಗರ,

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 15ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಆಯ್ಕೆ Read More »

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು

ಕಳಪೆ ಹೆಲ್ಮೆಟ್‌ ತಯಾರಿ-ಮಾರಾಟ ವಿರುದ್ಧ ಕೇಂದ್ರ ಸರ್ಕಾರ ಅಭಿಯಾನ ನವದೆಹಲಿ: ದ್ವಿಚಕ್ರ ವಾಹನ ಸವಾರರೇ ಎಚ್ಚರ! ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಡಿಮೆ ಕ್ರಯದ ಹೆಲ್ಮೆಟ್‌ ಖರೀದಿಸಿ ಪೊಲೀಸರ ಕಣ್ಣಿಗೆ ಮಣ್ಣೆರುತ್ತಿದ್ದೀರಾ? ನಿಮಗಿದೆ ಕೆಟ್ಟ ಸುದ್ದಿ. ಹೆಚ್ಚಿನವರು ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರುವ ಕಡಿಮೆ ಕ್ರಯದ ಹೆಲ್ಮೆ ಧರಿಸುತ್ತಾರೆ. ಇಂಥ ಹೆಲ್ಮೆಟ್‌ ಅಸುರಕ್ಷಿತ ಎಂದಿರುವ ಕೇಂದ್ರ ಸರ್ಕಾರ ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ. ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ

ದ್ವಿಚಕ್ರ ವಾಹನ ಸವಾರರು ಬಿಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನೇ ಧರಿಸಬೇಕು Read More »

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಿಎ ಅಂತಿಮ ಪರೀಕ್ಷೆಯಲ್ಲಿ ಆದಿತ್ಯ ಆರ್. ಬನ್ನೂರು ತೇರ್ಗಡೆ

ಪುತ್ತೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಮೇ 2025ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಅದಿತ್ಯ ಆರ್. ಬನ್ನೂರು ಉತ್ತೀರ್ಣರಾಗಿದ್ದಾರೆ. ಈವರು ಪುತ್ತೂರಿನ ಹಿರಿಯ ಬಿಜೆಪಿ ಕಾರ್ಯಕರ್ತ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಸುಧಾ ಕುಮಾರಿ ಪಿ.ಕೆ ದಂಪತಿ ಪುತ್ರ. ಅದಿತ್ಯ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಪೂರ್ಣಗೊಳಿಸಿದ್ದಾರೆ.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಿಎ ಅಂತಿಮ ಪರೀಕ್ಷೆಯಲ್ಲಿ ಆದಿತ್ಯ ಆರ್. ಬನ್ನೂರು ತೇರ್ಗಡೆ Read More »

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ : ರಾಜ್ಯ ಸರ್ಕಾರ ರಚಿಸಿದ ಸಮಿತಿ ವರದಿ

ಸರಣಿ ಹೃದಯಾಘಾತಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ ತಜ್ಞ ವೈದ್ಯರ ಸಮಿತಿಯಿಂದ ಅಧ್ಯಯನ ಬೆಂಗಳೂರು: ಐಸಿಎಂಆರ್‌ ಬಳಿಕ ರಾಜ್ಯ ಸರ್ಕಾರವೇ ರಚಿಸಿದ ಸಮಿತಿ ಕೂಡ ಹೃದಯಾಘಾತಗಳಿಗೆ ಕೋವಿಡ್‌ ಲಸಿಕೆ ಕಾರಣವಲ್ಲ ಎಂದು ವರದಿ ನೀಡಿದೆ. ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ಜುಲೈ 2ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್-19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ

ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ : ರಾಜ್ಯ ಸರ್ಕಾರ ರಚಿಸಿದ ಸಮಿತಿ ವರದಿ Read More »

ಮಂಗಳೂರಿನ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.16 ಕೋಟಿ ರೂ. ಲೂಟಿ

ಪತಿಯ ಹೆಸರಿನಲ್ಲಿ ಸಿಮ್‌ ಖರೀದಿಸಿ ವಂಚನೆ ಎಸಗಲಾಗಿದೆ ಎಂದು ಬೆದರಿಸಿದ್ದ ವಂಚಕರು ಮಂಗಳೂರು : ಮಂಗಳೂರಿನ ಮಹಿಳೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 3.16 ಕೋಟಿ ರೂ. ಖಾತೆಯಿಂದ ಎಗರಿಸಿದ ಕುರಿತು ದೂರು ದಾಖಲಾಗಿದೆ. ಮಹಿಳೆಯ ಪತಿಯ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಿ ಅದರಿಂದ ವಂಚನೆಯ ಕರೆ ಮಾಡಲಾಗಿದೆ ಮತ್ತು ಸಂಶಯಾಸ್ಪದ ಲಿಂಕ್ ಕಳುಹಿಸಲಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು 3,16,52,142 ರೂ. ಲೂಟಿ ಮಾಡಿದ್ದಾರೆ. ಜೂನ್ 5ರಂದು ಮುಂಬೈ ಸಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನುಶರ್ಮ

ಮಂಗಳೂರಿನ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.16 ಕೋಟಿ ರೂ. ಲೂಟಿ Read More »

ಗಣಪತಿ, ನಾಗರ ವಿಗ್ರಹಕ್ಕೆ ಅನ್ಯಕೋಮಿನವರಿಂದ ಅಪಚಾರ : ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ

ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ದುಷ್ಕರ್ಮಿಗಳು ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಶನಿವಾರ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲಿಗೆ ಅಪಚಾರ ಮಾಡಿರುವ ಘಟನೆಯಿಂದ ಶಿವಮೊಗ್ಗದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಿಂದೂ ಮುಖಂಡರು ಕೆರಳಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗಣಪತಿ, ನಾಗರ ವಿಗ್ರಹಕ್ಕೆ ಅನ್ಯಕೋಮಿನವರಿಂದ ಅಪಚಾರ : ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ Read More »

error: Content is protected !!
Scroll to Top