ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದಿಂದ ವೃಕ್ಷರೋಪಣ

ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಬಜರಂಗದಳ ಸೇವಾ ಸಪ್ತಾಹ ಪ್ರಯುಕ್ತ ವೃಕ್ಷರೋಪಣ ಕಾರ್ಯಕ್ರಮ ಕಡಬದ ಹಳೇ ಸ್ಟೇಷನ್ ಅಮೃತ ಸರೋವರದ ಬಳಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಗಿಡ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ  ಧರ್ಮ ಪ್ರಸಾರ ಪ್ರಮುಖ್ ವಿಶಾಖ್ ಸಶಿಹಿತ್ಲು, ಜಿಲ್ಲಾ ಬಜರಂಗದಳ ಸಹ ಸಂಯೋಜಕ ಸಂತೋಷ್ ಕುಮಾರ್ ಪೆರಿಯಡ್ಕ, ಬಜರಂಗದಳ ಜಿಲ್ಲಾ ಸಹ ಸುರಕ್ಷಾ ಪ್ರಮುಖ್ ತಿಲಕ್ ನಂದುಗುರಿ, ಕಡಬ ಪ್ರಖಂಡ ಬಜರಂಗದಳ ಸಂಯೋಜಕ ಅಶ್ವಿತ್ ಕಂಡಿಗ,ಸಹ […]

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದಿಂದ ವೃಕ್ಷರೋಪಣ Read More »

ಡೀಸೆಲ್‌ ಸಾಗಿಸುತ್ತಿದ್ದ ರೈಲಿನಲ್ಲಿ ಭಾರಿ ಬೆಂಕಿ ಅವಘಡ

ಧಗಧಗನೆ ಉರಿದ ರೈಲಿನ ವ್ಯಾಗನ್‌ಗಳು ಚೆನ್ನೈ: ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ 4 ವ್ಯಾಗನ್‌ಗಳು ಬೆಂಕಿ ಹತ್ತಿಕೊಂಡು ಧಗಧಗನೆ ಉರಿದ ಘಟನೆ ತಮಿಳುನಾಡಿನ ತಿರುವಲ್ಲೂರು ರೈಲು ನಿಲ್ದಾಣದ ಬಳಿ ನಡೆದಿದೆ. ಭಾನುವಾರ ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಅವಘಡದಿಂದ ರೈಲು ಹೊತ್ತಿ ಉರಿದಿದ್ದು, ಆಕಾಶದಲ್ಲಿ ಕಪ್ಪು ದಟ್ಟಹೊಗೆ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ರೈಲಿನಲ್ಲಿ ಡೀಸೆಲ್ ಇದ್ದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ

ಡೀಸೆಲ್‌ ಸಾಗಿಸುತ್ತಿದ್ದ ರೈಲಿನಲ್ಲಿ ಭಾರಿ ಬೆಂಕಿ ಅವಘಡ Read More »

ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಶಿಕ್ಷಕಿ, ವಿವಾಹಿತ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ ಬೆಳ್ತಂಗಡಿ ತಾಲೂಕಿನ ಕೊಯೂರು ಗ್ರಾಮದ ದರ್ಖಾಸ್ ನಿವಾಸಿ ದೇವಪ್ಪ ಬಂಗೇರ ಎಂಬವರ ಪುತ್ರಿ ರಮ್ಯ (32) ಮನೆಯ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ವರ್ಷದ ಹಿಂದೆ ಕೊಯೂರು ಗ್ರಾಮದ ಪಾದಡ್ಕ ನಿವಾಸಿ ಲತೀಶ್ ನೊಂದಿಗೆ ಈಕೆಯ ವಿವಾಹವಾಗಿತ್ತು. ರಮ್ಯ ಬೆಳ್ತಂಗಡಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮ್ಯಗೆ ಆರೋಗ್ಯ ಸಮಸ್ಯೆಗಳಿತ್ತು ಎಂದು ತಿಳಿದುಬಂದಿದೆ. ರಮ್ಯ

ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ Read More »

ಕೆದಿಲ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಸಹಾಯ ಹಸ್ತ ವಿತರಣೆ

ಪುತ್ತೂರು: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಣೇಶ್  ವಳಂಗಜೆ ಕೆದಿಲ ಇವರಿಗೆ “ಅರುಣ ಸಾರಥಿ”ಚಾಲಕರ ಸಂಘಟನೆಯ ಸಹಯೋಗದಲ್ಲಿ 10,000 ರೂಪಾಯಿ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ  ವತಿಯಿಂದ ನೀಡಲಾಯಿತು. ಟ್ರಸ್ಟ್‍ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ  “ಹಿಂದವಿ” ಕಚೇರಿ ಯಲ್ಲಿ ನೀಡಲಾಯಿತು. ಈಗಾಗಲೇ ಪ್ರತೀ ತಿಂಗಳಿಗೆ 10,000 ರೂಪಾಯಿಯಂತೆ ಕಳೆದ 7 ತಿಂಗಳಿನಲ್ಲಿ  ರೂಪಾಯಿ 70,000 ಸಾವಿರ ಧನ ಸಹಾಯ ವನ್ನು ಅನಾರೋಗ್ಯದಲ್ಲಿರುವವರಿಗೆ  ವಿತರಣೆ ಮಾಡಲಾಗಿದೆ.

ಕೆದಿಲ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಸಹಾಯ ಹಸ್ತ ವಿತರಣೆ Read More »

ಇಬ್ಬರು ಕುಖ್ಯಾತ ಅಂತರ್‌ರಾಜ್ಯ ಕಳ್ಳರ ಬಂಧನ

ಪುತ್ತೂರು, ವಿಟ್ಲ, ಉಪ್ಪಿನಂಗಡಿ ಮತ್ತಿತರೆಡೆ ಕಳ್ಳತನ ಮಾಡಿದ್ದ ಆರೋಪಿಗಳು ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ ಮತ್ತು ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತರ್‌ ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೊಯ್ದ ಗ್ರಾಮದ ಕಲಾಯಿ ಹೌಸ್ ನಿವಾಸಿ ಇಬ್ರಾಹಿಂ ಕಲಂದರ್ ಹಾಗೂ ಕಾಸರಗೋಡು ಜಿಲ್ಲೆಯ ಕುಂಬಳೆ ಉರ್ಮಿಚಾಲ್ ಬೇಕೂರು ನಿವಾಸಿ ಮಹಮ್ಮದ್ ರಿಯಾಜ್ ಅಲಿಯಾಸ್ ಕಡಪ್ಪ ರಿಯಾಜ್

ಇಬ್ಬರು ಕುಖ್ಯಾತ ಅಂತರ್‌ರಾಜ್ಯ ಕಳ್ಳರ ಬಂಧನ Read More »

ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನೆ

ಪುತ್ತೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು , ಕಬಕ ಗ್ರಾಮ ಪಂಚಾಯತ್ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ನೂತನ ಕಚೇರಿ ಮತ್ತು ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಭಾಗವಹಿಸಿದರು ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲ, ಉಪಾಧ್ಯಕ್ಷೆ ಗೀತಾ,

ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನೆ Read More »

ಹಿರಿಯ ನಟ ಕೋಟ ಶ್ರೀನಿವಾಸ್‌ ರಾವ್‌ ನಿಧನ

ಕನ್ನಡ ಸೇರಿ ವಿವಿಧ ಭಾಷೆಗಳ 750ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ನಟ ಹೈದರಾಬಾದ್‌: ತೆಲುಗಿನ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ (83) ಭಾನುವಾರ ಬೆಳಗಿನ ಜಾವ ನಿಧನರಾದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್​ನಲ್ಲಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದರು. ವೃದ್ಧಾಪ್ಯದಿಂದಾಗಿ ನಡೆಯಲು ಸಾಧ್ಯವಾಗದಿದ್ದರೂ ಎರಡು ವರ್ಷಗಳ ಹಿಂದಿನವರೆಗೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದರು. ಅವರ ಕೊನೆಯ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಸುವರ್ಣ ಸುಂದರಿ’. ಕೋಟ ಶ್ರೀನಿವಾಸ ರಾವ್ ಅವರು 750ಕ್ಕೂ

ಹಿರಿಯ ನಟ ಕೋಟ ಶ್ರೀನಿವಾಸ್‌ ರಾವ್‌ ನಿಧನ Read More »

ದ.ಕ.ಜಿಲ್ಲೆಯಲ್ಲಿ  ಮರಳು ಸಮಸ್ಯೆ | ಸರಿಪಡಿಸುವಂತೆ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯ ಬಗ್ಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಗಣಿಗಾರಿಕೆ ಬಗೆಗಿನ ಸಭೆಯಲ್ಲಿ ದ.ಕ.ಜಿಲ್ಲಾ ಮರಳು ವ್ಯಾ ಪಾರಸ್ಥರ ಸಂಘದ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಚಿವರು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘ ಮನವಿ ಕುರಿತು ಚರ್ಚಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ದ.ಕ.ಜಿಲ್ಲೆಯಲ್ಲಿ  ಮರಳು ಸಮಸ್ಯೆ | ಸರಿಪಡಿಸುವಂತೆ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ Read More »

ಕೇಂದ್ರ ಸಚಿವ ಚಿರಾಗ್ ಪಸ್ವಾನ್ ಅವರಿಗೆ ಕೊಲೆ ಬೆದರಿಕೆ, ದೂರು ದಾಖಲು

ಪಾಟ್ನಾ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಪ್ಪಿತಸ್ಥರಿಗೆ ಶೀಘ್ರವೇ ಕಠಿಣ ಶಿಕ್ಷೆ ನೀಡುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಚಿರಾಗ್ ಪಸ್ವಾನ್ ಅವರ ಜನಪ್ರಿಯತೆ ಹೆಚ್ಚುತ್ತಿದ್ದು ಈ ಕಾರಣದಿಂದಲೇ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೈಬರ್ ಪೊಲೀಸ್ ಡಿಸಿಪಿ ನಿತೇಶ್ ಚಂದ್ರ ಧರಿಯಾ, ಚಿರಾಗ್ ಪಸ್ವಾನ್ ಅವರಿಗೆ ಜುಲೈ 11 ರಂದು ರಾತ್ರಿ 9 ಗಂಟೆ

ಕೇಂದ್ರ ಸಚಿವ ಚಿರಾಗ್ ಪಸ್ವಾನ್ ಅವರಿಗೆ ಕೊಲೆ ಬೆದರಿಕೆ, ದೂರು ದಾಖಲು Read More »

ಎ ವಿ ಜಿ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ | ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣದ ಉದ್ದೇಶ :. ಚಂದ್ರಶೇಖರ್ ಕೆದ್ದೋಟೆ

ಪುತ್ತೂರು: ನೈತಿಕತೆ ಎನ್ನುವಂತದ್ದು ಒತ್ತಾಯಪೂರ್ವಕವಾಗಿ ಬರುವಂತದ್ದಲ್ಲ .ಮಕ್ಕಳು ಭಯಮುಕ್ತರಾಗಿ ಖುಷಿ ಖುಷಿಯಿಂದ ಕಲಿಯುವಂತಾಗಬೇಕು ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ  ಕೆದ್ದೋಟೆ ಹೇಳಿದರು.  ಅವರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ 2025 -26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಜೊತೆಗೆ ಕೆಟ್ಟ ಚಟಗಳತ್ತ ಮುಖ ಮಾಡದಂತೆ

ಎ ವಿ ಜಿ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ | ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣದ ಉದ್ದೇಶ :. ಚಂದ್ರಶೇಖರ್ ಕೆದ್ದೋಟೆ Read More »

error: Content is protected !!
Scroll to Top