ಯುವತಿ ನಾಪತ್ತೆ: ಲವ್ ಜಿಹಾದ್ ಶಂಕೆ

ಕಲಬುರ್ಗಿ: ನಗರದ ಖಾಸಗಿ ಕಾಲೇಜೊಂದರಲ್ಲಿ ಬಿ.ಎಸ್ಸಿ. ಓದುತ್ತಿದ್ದ ಜೈನ ಯುವತಿಯೊಬ್ಬಳು ನಾಪತ್ತೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಗೊಬ್ಬುರ ಗ್ರಾಮದ ಯುವತಿ ನಾಪತ್ತೆಯಾಗಿರುವುದಾಗಿದೆ. ಜುಲೈ 30 ರಂದು ಬಿ.ಎಸ್ಸಿ. ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ ಆಕೆ ಬಳಿಕ ಮನೆಗೆ ಹಿಂದಿರುಗದೆ‌ ನಾಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗಿರುವುದರ ಹಿಂದೆ ಮುಸ್ಲಿಂ ಯುವಕನ ಕೈವಾರ ಇದೆ ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಯುವತಿ ಮುಸ್ಲಿಂ ಯುವಕ ಮಶಾಕ್ ಎಂಬಾತನ ಜೊತೆಗೆ ಸಲುಗೆಯಿಂದಿದ್ದಳು. ಇದೇ […]

ಯುವತಿ ನಾಪತ್ತೆ: ಲವ್ ಜಿಹಾದ್ ಶಂಕೆ Read More »

ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾ ಭೇಟಿ

ನವದೆಹಲಿ: ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾ‌ಗೆ ಭೇಟಿ ನೀಡಿದ್ದು, ಅಮೆರಿಕಾ ಜೊತೆ ಭಾರತದ ವ್ಯಾಪಾರ ಸಂಬಂಧ ಬಿಗಡಾಯಿಸಿರುವ ನಡುವೆಯೇ ದೋವಲ್ ರಷ್ಯಾ ಭೇಟಿ ಸಾಕಷ್ಟು ಕುತೂಹಲಕ್ಕೆ ‌ಕಾರಣವಾಗಿದೆ. TASS ವರದಿಯ ಪ್ರಕಾರ ಈ ಭೇಟಿ ಯೋಜಿತ ವೇಳಾಪಟ್ಟಿಯ ಭಾಗವಾಗಿದೆ. ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರದ ಮೇಲೆ ಕೇಂದ್ರೀಕೃತವಾಗಿದೆ. ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಚರ್ಚೆ, ರಷ್ಯಾದಿಂದ ಭಾರತಕ್ಕೆ ತೈಲ ಪೂರೈಕೆಗೆ ಸಂಬಂಧಿಸಿದ ಹಾಗೆ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾ ಭೇಟಿ Read More »

98 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ಬೆಂಗಳೂರು: ವಾಟ್ಸಾಪ್ ಆ್ಯಪ್ಲಿಕೇಶನ್ 98 ಲಕ್ಷ ಭಾರತೀಯ ಬಳಕೆದಾರರ ಖಾತೆಗಳನ್ನು ತನ್ನ ಫ್ಲಾಟ್‌ಫಾರ್ಮ್‌ನಿಂದ ನಿಷೇಧಿಸಿದೆ. ಈ ವಿಚಾರವನ್ನು ಮೆಟಾ ಬಹಿರಂಗ ಮಾಡಿದ್ದು, ವದಂತಿಗಳನ್ನು ಹಬ್ಬುವುದು, ವೇದಿಕೆಯನ್ನು ದುರುಪಯೋಗ ಮಾಡಿಕೊಳ್ಳುವುದು ಇತ್ಯಾದಿ ಕಾರಣಗಳಿಗಾಗಿ ಈ ಕ್ರಮ ಕೈಗೊಂಡಿರುವುದಾಗಿದೆ. ಈ ಹಿಂದೆಯೂ ವಾಟ್ಸಾಪ್ ಇಂತಹ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿ ತಿಂಗಳು ಸಹ ವಾಟ್ಸಾಪ್ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ವಾಟ್ಸಾಪ್ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

98 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ Read More »

ಪಶು ವೈದ್ಯೆ ಕೀರ್ತನಾ ಜೋಶಿ ಆತ್ಮಹತ್ಯೆ

ಪುತ್ತೂರು: ಇಲ್ಲಿನ ಬಪ್ಪಳಿಗೆ ನಿವಾಸಿ, ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ ಕೀರ್ತನಾ ಜೋಶಿ (27 ವ.) ಅವರು ಸೋಮವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪಶುವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿರುವ ಡಾ. ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸೋಮವಾರ ತಡರಾತ್ರಿ ಸ್ವಗೃಹದಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು

ಪಶು ವೈದ್ಯೆ ಕೀರ್ತನಾ ಜೋಶಿ ಆತ್ಮಹತ್ಯೆ Read More »

ಸಾರ್ವಜನಿಕ ಶ್ರೀ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಸವಣೂರು:  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಸವಣೂರು. ಇದರ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಗೌರವಧ್ಯಕ್ಷರಾದ ಶ್ರೀ ಕೆ ಸೀತಾರಾಮ ರೈಯವರ ಉಪಸ್ಥಿತಿಯಲ್ಲಿ ಆಗಸ್ಟ್ 4 ರಂದು ಸವಣೂರಿನ ವಿನಾಯಕ ಸಭಾ ಭವನದಲ್ಲಿ ನಡೆಯಿತು.  ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ನಡುಬೈಲು ಗಣೇಶೋತ್ಸವ ಸಮಿತಿ ಪೋಷಕರು ಉದ್ಯಮಿಗಳು ಬೆಳ್ಳಿಯ ಕಿರೀಟದ ಸೇವಕರ್ತಾರಾದ ಶ್ರೀ ಎನ್ ಸುಂದರ ರೈ ಸವಣೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ರಾಕೇಶ್ ರೈ ಕೆಡೆಂಜಿ,

ಸಾರ್ವಜನಿಕ ಶ್ರೀ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸ್ವಾಮೀಜಿಗೆ ಆನ್‌ಲೈನ್‌ನಲ್ಲಿ ಬಂತು ಮುಸ್ಲಿಂ ಟೋಪಿ!

ಮೂಲ ಧರ್ಮ ಮರೆಮಾಚಿದ ಹಿನ್ನೆಲೆಯಲ್ಲಿ ಮಠ ತೊರೆದಿದ್ದ ಸ್ವಾಮೀಜಿಯ ನಡೆ ಬಗ್ಗೆ ಅನುಮಾನ ಚಾಮರಾಜನಗರ : ಮೂಲ ಧರ್ಮ ಮರೆಮಾಚಿ ಗುಂಡ್ಲುಪೇಟೆಯ ಲಿಂಗಾಯತ ಮಠವೊಂದಕ್ಕೆ ಮಠಾಧೀಶರಾಗಿದ್ದ ಮುಸ್ಲಿಂ ಯುವಕನ ಹೆಸರಿಗೆ ಆನ್‌ಲೈನ್‌ ಮೂಲಕ ಮುಸ್ಲಿಂ ಟೋಪಿ ಬಂದಿರುವುದು ಮತ್ತು ಅವರ ಕೆಲವು ಫೋಟೊ ಮತ್ತು ವಿಡಿಯೋಗಳು ಬಹಿರಂಗವಾಗಿ ಹೊಸ ವಿವಾದ ಸೃಷ್ಟಿಯಾಗಿದೆ. ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ಯುವಕ ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹಾಗೂ ತಮ್ಮ ದಾಖಲಾತಿಗಳಲ್ಲಿ ಮೂಲಧರ್ಮದ ಹೆಸರನ್ನು ಉಳಿಸಿಕೊಂಡಿರುವುದು

ಸ್ವಾಮೀಜಿಗೆ ಆನ್‌ಲೈನ್‌ನಲ್ಲಿ ಬಂತು ಮುಸ್ಲಿಂ ಟೋಪಿ! Read More »

ಬೆಳ್ತಂಗಡಿ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆತ

ಬೆಳ್ತಂಗಡಿ: ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ಕಲ್ಲು ಹೊಡೆದು ಹಾನಿಯುಂಟುಮಾಡಿದ ಘಟನೆ ಮಂಗಳವಾರ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ಡಿಪ್ಪೋದ ಸಂಚಾರ ನಿಯಂತ್ರಕ ಪಿ ದಾವೂದ್ ಎಂಬವರು ಬಸ್ಸಿಗೆ ಅಜ್ಞಾತ ದುಷ್ಕರ್ಮಿಗಳು ಕಲ್ಲು ಹೊಡೆದಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಕೆ.ಎ 21 ಎಫ್ 0103 ನಂಬರ್‌ನ ಬಸ್ಸನ್ನು ಚಾಲಕ ಧರ್ಮಸ್ಥಳದಿಂದ ಸುಬ್ರಹ್ಮಣ್ಯದ ಕಡೆಗೆ ಚಲಾಯಿಸುತ್ತಿದ್ದ ವೇಳೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್

ಬೆಳ್ತಂಗಡಿ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆತ Read More »

ಧರ್ಮಸ್ಥಳ ಪ್ರಕರಣ ಪಾರದರ್ಶಕ ತನಿಖೆ : ಪರಮೇಶ್ವರ

ಎಸ್‌ಐಟಿ ವಿವೇಚನೆಯಂತೆ ತನಿಖೆ; ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟನೆ ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಇದು ಗಂಭೀರವಾದ ಪ್ರಕರಣವಾದ್ದರಿಂದ ಎಚ್ಚರಿಕೆಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಗುರುತಿಸುವ ಸ್ಥಳಗಳನ್ನು ಎಸ್‍ಐಟಿ ಅಧಿಕಾರಿಗಳು ಅಗೆಯುವ ಬಗ್ಗೆ ತೀರ್ಮಾನ ಮಾಡುತ್ತಾರೆ, ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಎಸ್‍ಐಟಿ ತಂಡ ಪಾರದರ್ಶಕವಾಗಿ ತನಿಖೆ ತನಿಖೆ ನಡೆಸುವ ವಿಶ್ವಾಸವಿದೆ. ಸಂಪೂರ್ಣ ತನಿಖೆ ಬಳಿಕ ವರದಿಯನ್ನು ಸಲ್ಲಿಸಿದಾಗ ಸರ್ಕಾರ

ಧರ್ಮಸ್ಥಳ ಪ್ರಕರಣ ಪಾರದರ್ಶಕ ತನಿಖೆ : ಪರಮೇಶ್ವರ Read More »

ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ : ಒಂದೇ ದಿನದಲ್ಲಿ ಮುಗಿದ ಸಾರಿಗೆ ನೌಕರರ ಮುಷ್ಕರ

ಎಸ್ಮಾ ಕಾಯಿದೆಯಡಿ ಮುಷ್ಕರ ನಿರತ ನೌಕರರನ್ನು ಬಂಧಿಸಬಹುದು ಎಂದು ಎಚ್ಚರಿಕೆ ನೀಡಿದ ಹೈಕೋರ್ಟ್‌ ಬೆಂಗಳೂರು : ಕರ್ನಾಟಕ ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ಒಂದೇ ದಿನದಲ್ಲಿ ಮುಕ್ತಾಯವಾಗಿದ್ದು, ನಿನ್ನೆಯೇ ಬಸ್‌ಗಳು ರಸ್ತೆಗಿಳಿದಿವೆ. ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದು, ರಾಜ್ಯಾದ್ಯಂತ ನಾಲ್ಕೂ ನಿಗಮಗಳ ಬಸ್​ ಸಂಚಾರ ಆರಂಭವಾಗಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿವೆ. 38 ತಿಂಗಳ ಹಿಂಬಾಕಿ ಪಾವತಿ ಸಹಿತ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ

ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ : ಒಂದೇ ದಿನದಲ್ಲಿ ಮುಗಿದ ಸಾರಿಗೆ ನೌಕರರ ಮುಷ್ಕರ Read More »

ಶಿಕ್ಷಕರು ಸಾಹಿತ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು: ಪ್ರೊ. ವಿ. ಬಿ. ಅರ್ತಿಕಜೆ

ಜಿ. ಎಲ್. ಆಚಾರ್ಯ ಶತಮಾನೋತ್ಸವ ಆಚಾರ್ಯ ಕವಿಗೋಷ್ಠಿ ಪುತ್ತೂರು: ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು . ಮಾತನಾಡುವಾಗ ಅರ್ಥ ಸಹಿತ ತಿಳಿದುಕೊಂಡು ಪದ ಬಳಕೆ ಮಾಡಬೇಕು. ರಸಭರಿತ ವಿಚಾರದಿಂದ ಕೂಡಿದ ಮಾತುಗಳನ್ನು ಹಾಸ್ಯಾಸ್ಪದ ಎಂದು ಟೀಕೆ ಮಾಡಬಾರದು ಎಂದು ಹಿರಿಯ ಪತ್ರಕರ್ತ ನಿವೃತ್ತ ಪ್ರಾಧ್ಯಾಪಕ ಪ್ರೋ. ವಿ. ಬಿ. ಅರ್ತಿಕಜೆ ಹೇಳಿದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ, ಸ್ವರ್ಣೋದ್ಯಮಿ ಜಿ. ಎಲ್. ಆಚಾರ್ಯ ಶತಮಾನೋತ್ಸವ ಸಮಿತಿ ವತಿಯಿಂದ ಪುತ್ತೂರಿನ ರೋಟರಿ ಜಿ.

ಶಿಕ್ಷಕರು ಸಾಹಿತ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು: ಪ್ರೊ. ವಿ. ಬಿ. ಅರ್ತಿಕಜೆ Read More »

error: Content is protected !!
Scroll to Top