ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿನ ಕರ್ತವ್ಯ ಭವನವನ್ನು ಉದ್ಘಾಟನೆ ಮಾಡಿದರು. ಕೇಂದ್ರ ವಿಸ್ಟಾದ ವಿಶಾಲವಾದ ಭಾಗವಾಗಿದೆ ಕರ್ತವ್ಯ ಭವನ -03. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ, ವೇಗ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಕಟ್ಟಡಗಳ ಪೈಕಿ ಇದು ಮೊದಲನೆಯದಾಗಿದೆ. ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ. ಈ ಯೋಜನೆಯು ಸರ್ಕಾರದ ವಿಶಾಲ ಆಡಳಿತ ಸುಧಾರಣಾ ಕಾರ್ಯಸೂಚಿಯನ್ನು ಸಾಕಾರಗೊಳಿಸುತ್ತದೆ. ಸಚಿವಾಲಯಗಳನ್ನು ಸಹ-ಸ್ಥಳೀಕರಿಸುವ ಮೂಲಕ ಮತ್ತು ಅತ್ಯಾಧುನಿಕ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳುವ ಮೂಲಕ, ಸಾಮಾನ್ಯ ಕೇಂದ್ರ […]

ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ Read More »

ಧರ್ಮಸ್ಥಳ ಪ್ರಕರಣ: SIT ತಂಡದಿಂದ ತನಿಖಾ ಬೆಳವಣಿಗೆಗಳ ಮಾಹಿತಿ ಪಡೆದ ಮೊಹಂತಿ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ ತನಿಖಾ ತಂಡದಿಂದ ಈ ವರೆಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈಗಾಗಲೇ ಅನಾಮಿಕ ದೂರುದಾರ ಗುರುತು ಮಾಡಿರುವ ಸ್ಥಳಗಳಲ್ಲಿ ಶೋಧ ಕಾರ್ಯ ಬುಧವಾರ ಮುಗಿಯುತ್ತಿದ್ದು, ಆ ನಂತರದಲ್ಲಿ SIT ಯಾವ ರೀತಿಯಲ್ಲಿ ತನಿಖೆ ನಡೆಸಲಿದೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧರ್ಮಸ್ಥಳ ಪ್ರಕರಣ: SIT ತಂಡದಿಂದ ತನಿಖಾ ಬೆಳವಣಿಗೆಗಳ ಮಾಹಿತಿ ಪಡೆದ ಮೊಹಂತಿ Read More »

5 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ ಅತ್ಯಾಚಾರ: ಆರೋಪಿ ಬಂಧನ

ಬೆಳಗಾವಿ: ಯರಗಟ್ಟಿ ಪಟ್ಟಣದ ಮಸೀದಿಯಲ್ಲಿ 2023 ರ ಅಕ್ಟೋಬರ್ ತಿಂಗಳಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ತುಫೆಲಹ್ಮದ್ ದಾದಾಪೀರ್ ನಾಗರ್ಚಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಹಿಂದೂ ಕಾರ್ಯಕರ್ತ ಪುನೀತ್ ಕೆರೇಹಳ್ಳಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಸೀದಿ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿದ ಕಾರಣಕ್ಕೆ ಬೆಳಕಿಗೆ ಬಂದಿದೆ. ಟ್ವಿಟರ್ ಮೂಲಕ ಈ ಮಾಹಿತಿ ತಿಳಿದ ತಕ್ಷಣವೇ ಬೆಳಗಾವಿ ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

5 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ ಅತ್ಯಾಚಾರ: ಆರೋಪಿ ಬಂಧನ Read More »

ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಪವಿತ್ರಾ ಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್, ಪವಿತ್ರಾ ಸೇರಿದಂತೆ ಇನ್ನುಳಿದ ಆರೋಪಿಗಳ ಜಾಮೀನು ರದ್ದಾಗುವ ಭೀತಿ ಎದುರಾಗಿದೆ. ಈ‌ ಸಂಬಂಧ ಪ್ರಮುಖ ಆರೋಪಿ ಪವಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ತಮ್ಮ ವಕೀಲರ ಮೂಲಕ ವರದಿ ಸಲ್ಲಿಸಿದ್ದು, ರೇಣುಕಾಸ್ವಾಮಿ ಹತ್ಯೆಗೂ ತಮಗೂ ಸಂಬಂಧ ಇಲ್ಲ. ಆತನ ಮೃತ ದೇಹದ ಮೇಲಿದ್ದ ಗಾಯಗಳು ಪವಿತ್ರಾರಿಂದ ಆಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವೊಬ್ಬ ಪೋಷಕಿಯಾಗಿದ್ದು, ಹತ್ತನೇ ತರಗತಿ ಓದುತ್ತಿರುವ ಮಗಳಿದ್ದಾಳೆ. ವಯಸ್ಸಾದ ಪೋಷಕರೂ ಇದ್ದು, ಅವರನ್ನೂ ನೋಡಿಕೊಳ್ಳಬೇಕಾದ

ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಪವಿತ್ರಾ ಗೌಡ Read More »

ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾರ್ಖಂಡ್‌ನ ಜೈಬಾಸಾದ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರಾಹುಲ್ ಗಾಂಧಿ 2018 ರ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ್ದರು. ಇಂದು ಜಾರ್ಖಂಡ್ ಹೈಕೋರ್ಟ್ ನಿರ್ದೇಶನದಂತೆ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಸದ್ಯ ರಾಹುಲ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಈ

ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು Read More »

ಪಿಗ್ಮಿ ಸಂಗ್ರಹಕನಿಂದ ನಗದು ಕಳವು: ಆರೋಪಿ ಆರೆಸ್ಟ್

ಬ್ರಹ್ಮಾವರ: ಬೈಕಿನ ಸೈಟ್ ಬಾಕ್ಸ್‌ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳವು ಆರೋಪಿಯನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ ಹನುಮಂತ ಕಟ್ಟಿಮನಿ (39) ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ 32,000ರೂ. ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಕೊಳ್ಳಲಾಗಿದೆ. ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕ ಅ.4ರಂದು ಸಂಜೆ ಬ್ರಹ್ಮಾವರ ಶಿವಳ್ಳಿ ಹೋಬೆಲ್ ಎದುರುಗಡೆ ಕರ್ನಾಟಕ ಬ್ಯಾಂಕ್ ಎಟಿಎಮ್ ಬಳಿ ಪಿಗ್ಮಿ ಕಲೆಕ್ಷನ್ ಮಾಡಿದ ನಗದನ್ನು ಬೈಕ್‌ನ

ಪಿಗ್ಮಿ ಸಂಗ್ರಹಕನಿಂದ ನಗದು ಕಳವು: ಆರೋಪಿ ಆರೆಸ್ಟ್ Read More »

ಕೆದಂಬಾಡಿ MRF ಘಟಕಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ

ಪುತ್ತೂರು: ಗ್ರಾಮ ಪಂಚಾಯತ್‌ಗಳಿಂದ ನಿರಂತರವಾಗಿ ಒಣ ಕಸ ಸಂಗ್ರಹಣೆ ಆಗದಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸುವ ಹಾಗೂ ಘಟಕದ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು MRF ಘಟಕಕ್ಕೆ ಭೇಟಿ ನೀಡಿದರು. ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯ 68 ಗ್ರಾಮ ಪಂಚಾಯತ್‌ಗಳಿಂದ ಒಣ ಕಸವನ್ನು ಸಂಗ್ರಹಿಸುತ್ತಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ (MRF – Material Recovery Facility) ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,

ಕೆದಂಬಾಡಿ MRF ಘಟಕಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ Read More »

ಅಕ್ಷಯ ಕಾಲೇಜಿನಲ್ಲಿ ಪಾಟ್ಲಕ್ ಕಾರ್ಯಾಗಾರ

ಪುತ್ತೂರು: ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವತಿಯಿಂದ “ಪಾಟ್ಲಕ್” ಎಂಬ ಕಾರ್ಯಾಗಾರ ನಡೆಯಿತು.ಈ ಕಾರ್ಯಾಗಾರವು ಪಾಕಶಾಲೆಯ ಕಲೆಗಳು ಮತ್ತು ಆಹಾರ ಪ್ರಸ್ತುತಿಯ ಮೇಲೆ ಕೇಂದ್ರೀಕರಿಸಿತ್ತು. ಗಯಾ ಕೆಫೆಯ ಪ್ರಸಿದ್ಧ ಪಾಕಶಾಲೆಯ ತಜ್ಞ ಶೆಫ್ ಪ್ರಜ್ವಲ್ ಡಿ’ಸೋಜ ನೇತೃತ್ವ ವಹಿಸಿದ್ದರು. ಅವರು ಆಹಾರ ಕ್ಯಾನ್ವಾಸ್, ಆಹಾರ ಅಲಂಕಾರ ತಂತ್ರಗಳು ಮತ್ತು ಆಹಾರದ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ಬಣ್ಣಗಳ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು. ಶೆಫ್ ಪ್ರಜ್ವಲ್ ಡಿ’ಸೋಜ ಅವರ ಅಧಿವೇಶನವು ಮಾಹಿತಿಯುಕ್ತವಾಗಿದ್ದು, ವಿದ್ಯಾರ್ಥಿಗಳಿಗೆ ಪಾಕಶಾಲೆಯ ಪ್ರಸ್ತುತಿಯ ಬಗ್ಗೆ

ಅಕ್ಷಯ ಕಾಲೇಜಿನಲ್ಲಿ ಪಾಟ್ಲಕ್ ಕಾರ್ಯಾಗಾರ Read More »

ಫ್ಲವರ್ ಶೋ‌ಗೆ ಲಾಲ್‌ಬಾಗ್ ಸಿದ್ಧ: ಈ ಬಾರಿಯ ವಿಶೇಷತೆ ಏನು ಗೊತ್ತಾ?

ಬೆಂಗಳೂರು: ಸ್ವಾತಂತ್ರ್ಯ ದಿನಕ್ಕೆ ನಗರದ ಲಾಲ್‌ಭಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪ್ರದರ್ಶನ ಇದಾಗಿರಲಿದೆ. ಆ. 7 ರಿಂದ ಆ. 18 ರ ವರೆಗೆ ಒಟ್ಟು 12 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿಎಂ ‌ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ‌. ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿ ಕಿತ್ತೂರಿನ ಬೃಹತ್ ಹೂವಿನ ಕೋಟೆಯಾಗಿರಲಿದೆ. ಇದನ್ನು ಗುಲಾಬಿ ಮತ್ತು ಸೇವಂತಿಗೆ ಹೂವುಗಳಿಂದ ಸಿಂಗಾರ

ಫ್ಲವರ್ ಶೋ‌ಗೆ ಲಾಲ್‌ಬಾಗ್ ಸಿದ್ಧ: ಈ ಬಾರಿಯ ವಿಶೇಷತೆ ಏನು ಗೊತ್ತಾ? Read More »

35.36 ಕೋಟಿ ಭೂಕಂದಾಯ ದಾಖಲೆಗಳ ಡಿಜಿಟಲೀಕರಣ ಪೂರ್ಣ: ಕೃಷ್ಣ ಭೈರೇಗೌಡ

ಬೆಂಗಳೂರು: ಕರ್ನಾಟಕದ 100 ಕೋಟಿ ಭೂಕಂದಾಯ ದಾಖಲೆಗಳಲ್ಲಿ 35.36 ಕೋಟಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ಈ ವರ್ಷದ ಡಿಸೆಂಬರ್ ಮೊದಲು ಉಳಿದ ಭೂ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹಾಗೆಯೇ ಇಂದಿನಿಂದ ಮೊದಲ್ಗೊಂಡು ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿಯೂ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

35.36 ಕೋಟಿ ಭೂಕಂದಾಯ ದಾಖಲೆಗಳ ಡಿಜಿಟಲೀಕರಣ ಪೂರ್ಣ: ಕೃಷ್ಣ ಭೈರೇಗೌಡ Read More »

error: Content is protected !!
Scroll to Top