ಉತ್ತರಕಾಶಿಯಲ್ಲಿ ಭೀಕರ ಮೇಘಸ್ಪೋಟ

ಉತ್ತರಾಖಂಡ: ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಪೋಟಕ್ಕೆ ಮನೆಗಳು ಕೊಚ್ಚಿ ಹೋಗಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಕಾಶಿಯ ಧರೇಲಿ ಗ್ರಾಮದಲ್ಲಿ ಗಂಗಾ ನದಿಯಲ್ಲಿ ಭಾರೀ ಮಳೆಯ ಕಾರಣಕ್ಕೆ ಪ್ರವಾಹ ಉಂಟಾಗಿದೆ. ಪರಿಣಾಮ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಸುಮಾರು 50 ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ನಾಪತ್ತೆಯಾಗಿದ್ದಾಗಿ ಸಂಬಂಧಿಸಿದ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಬೆಟ್ಟ ಪ್ರದೇಶದಿಂದ ಏಕಾಏಕಿ ಮೇಘಸ್ಪೋಟ ಸಂಭವಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನದಿ ತೀರದಲ್ಲಿನ ‌ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಉತ್ತರಕಾಶಿಯಲ್ಲಿ ಭೀಕರ ಮೇಘಸ್ಪೋಟ Read More »

NDA ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ಸಮರ್ಪಣೆ

ಆಪರೇಷನ್ ಸಿಂಧೂರ್, ಆಪರೇಷನ್ ಮಹಾದೇವ್ ಯಶಸ್ಸಿಗಾಗಿ ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಕೆ ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಯಶಸ್ಸಿನ ಹಿನ್ನೆಲೆ NDA ಪಕ್ಷದ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಗೌರವಿಸಲಾಯಿತು. ಈ‌ ಸಂದರ್ಭದಲ್ಲಿ ಸಭೆಯಲ್ಲಿ ಹರ ಹರ ಮಹಾದೇವ್ ಘೋಷಣೆ ಮೊಳಗಿತು. ಉಗ್ರರ ವಿರುದ್ಧ ಭಾರತ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಲಾಯಿತು. ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಲಾಯಿತು. ಆ. 7 ರಂದು ಉಪರಾಷ್ಟ್ರಪತಿ

NDA ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ಸಮರ್ಪಣೆ Read More »

ಸರ್ಕಾರದ ಜೊತೆ ಕೈಜೋಡಿಸಿ: ಸಾರಿಗೆ‌ ನೌಕರರಿಗೆ ಡಿ ಕೆ ಶಿವಕುಮಾರ್ ಮನವಿ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಸರ್ಕಾರದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನೌಕರರಿಗೆ ನೆರವಾಗುವ ಮನಸ್ಥಿತಿಯನ್ನು ಸಿ ಎಂ, ಸಾರಿಗೆ ಸಚಿವರು ಹೊಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ನೌಕರರು ಅರಿತು ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮುಷ್ಕರವಿದ್ದರೂ ಕೆಲವು ನೌಕರರು ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಸಾರ್ವಜನಿಕರ ಜೀವನ ಮುಖ್ಯ‌. ಹಾಗಾಗಿ ಸರ್ಕಾರದ ಜೊತೆ ಕೈ ಜೋಡಿಸಿ. ಸರ್ಕಾರ

ಸರ್ಕಾರದ ಜೊತೆ ಕೈಜೋಡಿಸಿ: ಸಾರಿಗೆ‌ ನೌಕರರಿಗೆ ಡಿ ಕೆ ಶಿವಕುಮಾರ್ ಮನವಿ Read More »

ಕೆಂಪುಕೋಟೆಗೆ ಅಕ್ರಮ ಪ್ರವೇಶ ಯತ್ನ: ಬಾಂಗ್ಲಾ ಅಕ್ರಮ ವಲಸಿಗರ ಬಂಧನ

ನವದೆಹಲಿ: ಕೆಂಪು ಕೋಟೆಯ ಆವರಣದೊಳಕ್ಕೆ ಪ್ರವೇಶಿಸಲು ಪ್ರಯತ್ನ ನಡೆಸಿದ ಐವರು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಹತ್ತೇ ದಿನಗಳು ಉಳಿದಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕೆಂಪು ಕೋಟೆಯ ಸುತ್ತ ಭದ್ರತೆ ಹೆಚ್ಚಿಸಿದ್ದಾರೆ. ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಬಿಂದುವಿನಲ್ಲಿ ನಿಯೋಜನೆ ಮಾಡಲಾದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ. ನಿಯಮಿತವಾದ ದಾಖಲೆ ತೋರಿಸದ ಕಾರಣ ಆರೋಪಿಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಅವರು ಅಕ್ರಮವಾಗಿ ನೆಲೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಕೆಂಪುಕೋಟೆಗೆ ಅಕ್ರಮ ಪ್ರವೇಶ ಯತ್ನ: ಬಾಂಗ್ಲಾ ಅಕ್ರಮ ವಲಸಿಗರ ಬಂಧನ Read More »

ಆ.14 : ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 14ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2025”

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 14ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2025” ಆ.14 ಗುರುವಾರ ಬೆಳಗ್ಗೆ 10 ಕ್ಕೆ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 13 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬರುತ್ತಿದ್ದೇವೆ. ಪ್ರತೀ ವರ್ಷ ಆ.14 ರಂದು ದಿ.ಶೀಂಟೂರರ

ಆ.14 : ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 14ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2025” Read More »

ಸನಾತನ ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್

ಚೆನೈ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೆಲ ಸಮಯದ ಹಿಂದೆ ವಿವಾದ ಸೃಷ್ಟಿಸಿಕೊಂಡಿದ್ದ ನಟ ಕಮಲ್ ಹಾಸನ್ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಮಲ್ ಸನಾತನ ಧರ್ಮದ ಬಗ್ಗೆ ನಾಲಿಗೆ ಬಿಟ್ಟಿದ್ದು, ಶಿಕ್ಷಣ ಸನಾತನ ಧರ್ಮ ಮತ್ತು ಸರ್ವಾಧಿಕಾರದ ಸಂಕೋಲೆಗಳನ್ನು ತುಂಡು ಮಾಡಬಲ್ಲ ಏಕೈಕ ಅಸ್ತ್ರ ಎಂದು ಹೇಳಿದ್ದಾರೆ. ಸನಾತನ ಧರ್ಮವನ್ನು ಸಂಕೋಲೆಗೆ ಹೋಲಿಕೆ ಮಾಡಿ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಮಲ್ ಹಾಸನ್ ಹೇಳಿಕೆಯನ್ನು ತಮಿಳುನಾಡಿನ ಬಿಜೆಪಿ ಖಂಡಿಸಿದ್ದು, ಹಿಂದೆ ಭಾಷೆಗೆ ಸಂಬಂಧಿಸಿದ

ಸನಾತನ ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್ Read More »

ಧರ್ಮಸ್ಥಳ ಪ್ರಕರಣ : ಇಂದು 11ನೇ ಪಾಯಿಂಟ್‌ನಲ್ಲಿ ನೆಲ ಅಗೆಯುವ ಕಾರ್ಯಾಚರಣೆ

ಗುರುತಿಸಿದ ಎಲ್ಲ ಸ್ಥಳಗಳಲ್ಲಿ ಅಗೆಯಲು ತೀರ್ಮಾನ ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೆಲ ಅಗೆಯುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಪಾಯಿಂಟ್‌ನಲ್ಲಿ ಎಸ್ಐಟಿ ಇಂದು ಶೋಧ ಕಾರ್ಯಾಚರಣೆ ಆರಂಭಿಸಿದೆ. ಸೋಮವಾರದ ಕಾರ್ಯಾಚರಣೆಯ ವೇಳೆ ದೂರುದಾರ ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಅವುಗಳನ್ನು ತಜ್ಞರ

ಧರ್ಮಸ್ಥಳ ಪ್ರಕರಣ : ಇಂದು 11ನೇ ಪಾಯಿಂಟ್‌ನಲ್ಲಿ ನೆಲ ಅಗೆಯುವ ಕಾರ್ಯಾಚರಣೆ Read More »

ಆಪರೇಷನ್ ಮಹಾದೇವ್‌ನಲ್ಲಿ ಹತರಾದವರು ಪಾಕಿಸ್ತಾನಿ ಉಗ್ರರು ಎಂಬುದಕ್ಕೆ ದಾಖಲೆ ಇದೆ: ಭದ್ರತಾ ಪಡೆ

ಶ್ರೀನಗರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ನಡೆಸಿದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಮೃತಪಟ್ಟ‌ ಉಗ್ರರು ಪಾಕಿಸ್ತಾನಕ್ಕೆ ಸೇರಿದವರು ಎಂಬುದಕ್ಕೆ ಭದ್ರತಾ ಪಡೆಗಳು ಸಾಕ್ಷ್ಯ ಸಂಗ್ರಹ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರ ಬಳಿಯಲ್ಲಿ ಪಾಕಿಸ್ತಾನದ ಮತದಾರರ ಗುರುತಿನ ಚೀಟಿ, ಬಯೋಮೆಟ್ರಿಕ್, ಸ್ಯಾಟಲೈಟ್ ಕರೆ ದತ್ತಾಂಶಗಳು, GPS ವೇಪಾಯಿಂಟ್‌ಗಳು, ಪಾಕ್‌ನಲ್ಲಿ ತಯಾರು ಮಾಡಲಾದ ಚಾಕಲೇಟುಗಳು ಮತ್ತು ಸಾಕ್ಷ್ಯಗಳ ಹೇಳಿಕೆಯಿಂದ ಅವರು ಪಾಕಿಸ್ತಾನದ ನಾಗರಿಕರು ಎಂದು ಸಾಬೀತಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಸಂದೇಹಕ್ಕೆ

ಆಪರೇಷನ್ ಮಹಾದೇವ್‌ನಲ್ಲಿ ಹತರಾದವರು ಪಾಕಿಸ್ತಾನಿ ಉಗ್ರರು ಎಂಬುದಕ್ಕೆ ದಾಖಲೆ ಇದೆ: ಭದ್ರತಾ ಪಡೆ Read More »

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವನ ಬಂಧನ

ಗಡಿ ಭಾಗದ ಭದ್ರತಾ ನೆಲೆಗಳ ಕುರಿತು ಮಾಹಿತಿ ರವಾನಿಸುತ್ತಿದ್ದ ಬೇಹುಗಾರ ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೊಬ್ಬ ಶಂಕಿತನನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ. ರಾಜಸ್ಥಾನದ ಜೈಸಲ್ಮೇರ್‌ನ ಚಂದನ್ ಗ್ರಾಮದ ನಿವಾಸಿ ಮಹೇಂದ್ರ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಈತ ಜೈಸಲ್ಮೇರ್‌ನ ಡಿಆರ್‌ಡಿಒ ಅತಿಥಿ ಗೃಹದಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಮಿಲಿಟರಿ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಈ ಅತಿಥಿ ಗೃಹದಲ್ಲಿ ತಂಗುತ್ತಿದ್ದರು. ಮಹೇಂದ್ರ ಸಿಂಗ್ ಮೇಲೆ ಪೋಖ್ರಾನ್ ಫೈರಿಂಗ್ ರೇಂಜ್‌ನಂತಹ ಸೂಕ್ಷ್ಮ ಮಿಲಿಟರಿ ಪ್ರದೇಶಗಳ ಬಗ್ಗೆ

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವನ ಬಂಧನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ವಾರ್ಷಿಕೋತ್ಸವ

ಉಪ್ಪಿನಂಗಡಿ: ಶ್ರೇಷ್ಠತೆ, ಸಮಗ್ರತೆ, ಸಾಮರಸ್ಯ, ಐಕ್ಯತೆಗೆ ಒಕ್ಕೂಟಗಳಲ್ಲಿ ಒಗ್ಗಟ್ಟು ಬೇಕು. ಒಕ್ಕೂಟದ ಬಲವರ್ಧನೆಗೆ ಐಕ್ಯಮತಿ ಇರಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸ್ವೀಕರಿಸಿದವರು ಅಭಿವೃದ್ಧಿಯಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ ಎಂದು ಶೇಖರ್ ರೈ ಪ್ರಾಂಶುಪಾಲರು ತಿಳಿಸಿದರು. ಇವರು ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅಧ್ಯಾಪಕ ವಿಠ್ಠಲ ನಾಯಕ್ ಕಾರ್ಯಾಡಿ ಕಂಬಳಬೆಟ್ಟು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ವಾರ್ಷಿಕೋತ್ಸವ Read More »

error: Content is protected !!
Scroll to Top