ನಾಳೆ ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಏ.19 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ದಿವ್ಯಾಪ್ರಭಾ ಚಿಲ್ತಡ್ಕ ಅವರು ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೇಟ್ ಸಿಗದ ಹಿನ್ನಲೆಯಲ್ಲಿ  ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‍ ಪಕ್ಷಕ್ಕೆ ಸೇರಿದ್ದು, ಪುತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಟಿಕೇಟ್ ಪಡೆದಿದ್ದರು.

ನಾಳೆ ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ Read More »

ಕರಾವಳಿ ಗಡಿಯಲ್ಲಿ ಗೋ ಹತ್ಯೆಗೆ ಕಡಿವಾಣ ಹಾಕಿದ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು | ಮುರಳೀಕೃಷ್ಣ ಹಸಂತ್ತಡ್ಕ ವೀಡಿಯೋ ವೈರಲ್

ಪುತ್ತೂರು: ಕರಾವಳಿಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ, ಕರಾವಳಿ ಗಡಿಯಲ್ಲಿ ಹತೋಟಿಗೆ ಬಂದಿರುವ ಗೋ ಹತ್ಯೆ ಪ್ರಕರಣಕ್ಕೆ ಪೂರ್ಣ ವಿರಾಮ ಹಾಕಲು ಸಾಧ್ಯ ಎಂದು ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ವೀಡಿಯೋ ಹೇಳಿಕೆ ನೀಡಿರುವ ಮುರಳೀಕೃಷ್ಣ ಹಸಂತ್ತಡ್ಕ, ಪುತ್ತೂರು ತಾಲೂಕಿಗೆ ತಾಗಿಕೊಂಡಂತೆ ಕೇರಳ ಗಡಿ ಇದೆ. ಈ ಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಗೋ ಸಾಗಾಟ, ಗೋ ಹತ್ಯೆ ನಡೆಯುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಇದಕ್ಕೆ ಕಡಿವಾಣ ಹಾಕಲಾಗಿದೆ. ಇನ್ನಷ್ಟು ಪರಿಣಾಮಕಾರಿ ಕ್ರಮ

ಕರಾವಳಿ ಗಡಿಯಲ್ಲಿ ಗೋ ಹತ್ಯೆಗೆ ಕಡಿವಾಣ ಹಾಕಿದ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು | ಮುರಳೀಕೃಷ್ಣ ಹಸಂತ್ತಡ್ಕ ವೀಡಿಯೋ ವೈರಲ್ Read More »

ಇಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ | ವೀರಮಂಗಲದ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಇಂದು ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ತೆರಳಲಿದ್ದಾರೆ. ಸಂಜೆ ಶ್ರೀ ದೇವರ ಬಲಿ ಹೊರಟು ಬಳಿಕ ರಕ್ತೇಶ್ವರ ದೈವದೊಂದಿಗೆ ನುಡಿಗಟ್ಟು ನಡೆಯಲಿದೆ. ಅದಾದ ಬಳಿಕ ಶ್ರೀ ದೇವರು ವೀರಮಂಗಲಕ್ಕೆ ಸಾವಿರಾರು ಭಕ್ತಾದಿಗಳೊಂದಿಗೆ ತೆರಳಲಿದ್ದಾರೆ. ಶ್ರೀ ದೇವರು ಮಂಗಳವಾರ ಸಂಜೆ ಹೊರಟು ಬುಧವಾರ ಪ್ರಾತಃಕಾಲ ವೀರಮಂಗಲ ತಲುಪಿ ಅಲ್ಲಿ ಕುಮಾರಧಾರ ನದಿಕಿನಾರೆಯಲ್ಲಿ ಜಳಕ ಮಾಡಿ, ಬಳಿಕ ಕಟ್ಟೆಯಲ್ಲಿ ಪೂಜೆಗೊಂಡು ಪುನಃ ಹಿಂದಿರುಗಲಿದ್ದಾರೆ. ಸುಮಾರು 15 ಕಿ.ಮೀ.

ಇಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ | ವೀರಮಂಗಲದ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ | ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಸೋಮವಾರ ರಾತ್ರಿ ನಡೆಯಿತು. ರಥೋತ್ಸವದ ಅಂಗವಾಗಿ ಸಂಜೆ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ರಾತ್ರಿ 9 ಗಂಟೆ ಸುಮಾರಿ ಶ್ರೀ ದೇವರು ರಥಾರೂಢನಾದನು. ಬಳಿಕ ಬ್ರಹ್ಮರಥೋತ್ಸವ ಸೇವೆ ಮಾಡಿಸಿದವರು ಸಂಕಲ್ಪ ಮಾಡಿ ಪ್ರಸಾದ ಸ್ವೀಕರಿಸಿದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಪುತ್ತೂರು ಬೆಡಿ ಎಂದೇ ಪ್ರಸಿದ್ಧಿ ಪಡೆದೆ ಸುಡುಮದ್ದು

ಪುತ್ತೂರು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ | ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು Read More »

ಬೆಳ್ತಂಗಡಿ : ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕರ್ತರ ಮಧ್ಯೆ ಘರ್ಷಣೆ

ಬಿಜೆಪಿ ಕಾರ್ಯಕರ್ತರ ಕಾರಿನ ಗಾಜು ಪುಡಿ ಪುಡಿ ಬೆಳ್ತಂಗಡಿ : ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸಂಘರ್ಷ ನಡೆದ ಘಟನೆ ಏ. 17 ರಂದು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಸಂಭವಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಸೇರಿದ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ನಾಮಪತ್ರ ಸಲ್ಲಿಸಿ ವಾಪಾಸ್ ತೆರಳುತ್ತಿದ್ದಾಗ ರಕ್ಷಿತ್ ಶಿವರಾಂ ರೋಡ್ ಶೋ

ಬೆಳ್ತಂಗಡಿ : ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕರ್ತರ ಮಧ್ಯೆ ಘರ್ಷಣೆ Read More »

ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಏ. 16 ರಂದು ಕೌಳಿಗೆ ಮನೆ ಸಜಿಪ ಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ. ಪರಮೇಶ್ವರ ಎನ್ ಕೆ(75) ಎಂಬವರೇ ಮೃತ ವ್ಯಕ್ತಿ. ಏ. 14 ರಂದು ರಾತ್ರಿ 10.00 ಗಂಟೆಗೆ ಟಾರ್ಚ ಹಿಡಿದುಕೊಂಡು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೇ ಇದ್ದಾಗ ಮನೆಯ ಸುತ್ತ ಮುತ್ತ ಪರಿಸರದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಯಾವುದೇ ಮಾಹಿತಿ ಸಿಗದ ಕಾರಣ ಮಗನಾದ ಶಿವಾನಂದ ರ ಹೇಳಿಕೆಯಂತೆ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ

ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ Read More »

ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ | ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ಉತ್ಸವ ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು. ಬೆಳಿಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ನಡೆದು ಬಳಿಕ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.

ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ | ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ Read More »

ಮಾರ್ಚ್ ತಿಂಗಳ ಸಗಟು ಬೆಲೆ ಹಣದುಬ್ಬರ ಕುಸಿತ

ದೆಹಲಿ : ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ಕಳೆದ ತಿಂಗಳು ಮಾರ್ಚ್ ನಲ್ಲಿ 29 ತಿಂಗಳ ಕನಿಷ್ಠ ಮಟ್ಟಕ್ಕೆ ಶೇಕಡಾ 1.34ಕ್ಕೆ ಇಳಿದಿದೆ.ಮೂಲ ಲೋಹಗಳು ಮತ್ತು ಆಹಾರ ಉತ್ಪನ್ನಗಳ ಬೆಲೆಗಳಲ್ಲಿನ ಮಿತವ್ಯಯದಿಂದಾಗಿ ಹಣದುಬ್ಬರ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತವೆ. ಇದು ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಇಳಿಕೆಯಾದ ಸತತ ಹತ್ತನೇ ತಿಂಗಳು. ಉತ್ಪನ್ನ ವಸ್ತುಗಳು ಮತ್ತು ಇಂಧನ ಮತ್ತು ವಿದ್ಯುತ್ ಬೆಲೆಗಳನ್ನು ಸರಾಗಗೊಳಿಸುವ ಮೂಲಕ ಫೆಬ್ರವರಿ ತಿಂಗಳಲ್ಲಿ ಇದು ಶೇಕಡಾ 3.85ರಷ್ಟಿತ್ತು. ಮಾರ್ಚ್ ತಿಂಗಳಲ್ಲಿ

ಮಾರ್ಚ್ ತಿಂಗಳ ಸಗಟು ಬೆಲೆ ಹಣದುಬ್ಬರ ಕುಸಿತ Read More »

ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಮೊದಲ ಸೆಮಿಸ್ಟರ್ ಫಲಿತಾಂಶ

ಪುತ್ತೂರು:  ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್ ಫಲಿತಾಂಶವು ದಿನಾಂಕ ಏ.18 ರಂದು ಬೆಳಿಗ್ಗೆಯಿಂದ ಕಾಲೇಜಿನ ವೆಬ್‌ಸೈಟ್‌ನಲ್ಲಿ (vcputtur.ac.in) ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರನ್ನು ಬಳಸಿ ಫಲಿತಾಂಶವನ್ನು ಪಡೆಯಲು ಅವಕಾಶವಿದೆ. ಒಟ್ಟು ಶೇ.98 ಉತ್ತೀರ್ಣತೆ ದಾಖಲಾಗಿದೆ. ಪ್ರಥಮ ಎಂ.ಎ. (ಪತ್ರಿಕೋದ್ಯಮ) ಶೇ.100, ಎಂ.ಎಸ್ಸಿ. (ಗಣಿತಶಾಸ್ತ್ರ) ಶೇ.60, ಎಂ.ಕಾಂ. ಶೇ. 100,  ಎಂ.ಎಸ್ಸಿ. (ರಸಾಯನಶಾಸ್ತ್ರ) ಶೇ.100 ರಂತೆ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತನೆಯಾದ ಬಳಿಕ ಪ್ರಕಟವಾಗುತ್ತಿರುವ

ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಮೊದಲ ಸೆಮಿಸ್ಟರ್ ಫಲಿತಾಂಶ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾ ಕಚೇರಿ ಉದ್ಘಾಟನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿ ಸೋಮವಾರ ದರ್ಬೆ ರೈ ಎಸ್ಟೇಟ್ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಂಡಿತು. ಗಣಹೋಮದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ  ಶಕುಂತಳಾ ಶೆಟ್ಟಿ,  ಕಾಂಗ್ರೆಸ್ ಮುಖಂಡರಾದ ಎಂಎಸ್ ಮುಹಮ್ಮದ್, ಚಂದ್ರಹಾಸ ಶೆಟ್ಟಿ  ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಡಾ ರಾಜಾರಾಂ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂಬಿ ವಿಶ್ವನಾಥ ರೈ,  ಈಶ್ವರ ಭಟ್ ಪಂಜಿಗುಡ್ಡೆ, ಮುರಳೀಧರ ರೈ ಮಠಂತಬೆಟ್ಟು

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾ ಕಚೇರಿ ಉದ್ಘಾಟನೆ Read More »

error: Content is protected !!
Scroll to Top