ಪುತ್ತೂರಿನ ಮೆಡಿಕಲ್ ಕಾಲೇಜು ಕನಸಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಪುತ್ತೂರು: ತಾಲೂಕಿನ ಜನರಿಗೆ ಶುಭ ಸುದ್ದಿ ಎಂಬಂತೆ ಪುತ್ತೂರಿನ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಅಧಿಕೃತ ಮಾನ್ಯತೆ ದೊರಕಿದೆ. ಈ ಕಾರಣಕ್ಕೆ ಶಾಸಕ ಅಶೋಕ್ ರೈ ಅವರು ದೇವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ‌ಶಾಸಕರು, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಆದೇಶ ಸಿಕ್ಕಿದೆ. ಹಾಗೆಯೇ 300 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗೂ ಅನುಮೋದನೆ ದೊರೆತಿದೆ. ಸಿಎಂ ‌ಸಿದ್ದರಾಮಯ್ಯ ಅವರು ಶಿಲಾನ್ಯಾಸ, ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರ ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಅನುಮೋದನೆ ನೀಡಿದ […]

ಪುತ್ತೂರಿನ ಮೆಡಿಕಲ್ ಕಾಲೇಜು ಕನಸಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ Read More »

ಅಯ್ಯಪ್ಪ ವ್ರತಧಾರಿ ‌ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ: ಪ್ರಾಂಶುಪಾಲರ ‌ವಿರುದ್ಧ ಹಿಂದೂಗಳ ಆಕ್ರೋಶ

ಚಿಕ್ಕಮಗಳೂರು: ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಕ್ಕೆ ಹಾಕಿರುವ ಘಟನೆ MESP ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿ ಮೂವರು ಅಯ್ಯಪ್ಪ ಮಾಲಾಧಾರಿ ‌ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹೊರಕ್ಕೆ ಹಾಕಿದ್ದಾರೆ. ಮಾಲೆ ತೆಗೆದು ಕಾಲೇಜಿಗೆ ಪ್ರವೇಶಿಸುವಂತೆ ತಾಕೀತು ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದ ಹಾಗೆಯೇ ಆಕ್ರೋಶಗೊಂಡ ಹಿಂದೂಗಳು, ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಕಾಲೇಜಿನ ಬಳಿಗೆ ಬಂದು ಹಿಂದೂ ವಿರೋಧಿ ನೀತಿ ಪ್ರದರ್ಶಿಸಿದ ಪ್ರಾಂಶುಪಾಲರನ್ನು ‌ತರಾಟೆಗೆ ತೆಗೆದುಕೊಂಡಿದ್ದಾರೆ. ಅಯ್ಯಪ್ಪ ವ್ರತದಲ್ಲಿರುವ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದಲ್ಲಿ ನೂರಾರು ವಿದ್ಯಾರ್ಥಿಗಳನ್ನು

ಅಯ್ಯಪ್ಪ ವ್ರತಧಾರಿ ‌ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ: ಪ್ರಾಂಶುಪಾಲರ ‌ವಿರುದ್ಧ ಹಿಂದೂಗಳ ಆಕ್ರೋಶ Read More »

ಪತಿಯ ಅಗಲಿಕೆಯಿಂದ ನೊಂದು ನೇಣಿಗೆ ಶರಣಾದ ಮಹಿಳೆ

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೌಭಾಗ್ಯ(31) ಎಂದು ಗುರುತಿಸಲಾಗಿದೆ. ಇವರ ಪುಟಾಣಿ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಎರಡು ವರ್ಷದ ಹಿಂದೆ ಇವರು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ತೀವ್ರ ದುಃಖದಿಂದ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಸೌಭಾಗ್ಯ ಅವರು ತಮ್ಮ ಕುಟುಂಬದ ನಿರ್ವಹಣೆಗಾಗಿ ದೇವಸ್ಥಾನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಡೆತ್ ನೋಟ್

ಪತಿಯ ಅಗಲಿಕೆಯಿಂದ ನೊಂದು ನೇಣಿಗೆ ಶರಣಾದ ಮಹಿಳೆ Read More »

ನೇಣು ಬಿಗಿದು ‌ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ: ಮನೆಯ ಕೊಟ್ಟಿಗೆಯ ‌ಪಕ್ಕಾಸಿಗೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮರೋಡಿ ‌ಗ್ರಾಮದ ಕಂಬಳದಡ್ಕ ನಿವಾಸಿ ಅಶೋಕ್(54) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಯಾವುದೋ ಕಾರಣಕ್ಕೆ ಮನ ನೊಂದು ಅಶೋಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ಗೋಪಾಲ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನೇಣು ಬಿಗಿದು ‌ವ್ಯಕ್ತಿ ಆತ್ಮಹತ್ಯೆ Read More »

ನಾಳೆ ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್‌ಫಾಸ್ಟ್‌

ರಾಜ್ಯ ರಾಜಕೀಯದಲ್ಲೀಗ ಬ್ರೇಕ್‌ಫಾಸ್ಟ್‌ ಕುತೂಹಲದ ಕೇಂದ್ರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೀಗ ಮಂಗಳವಾರ ತನ್ನ ಮನೆಗೆ ಸಿದ್ದರಾಮಯ್ಯ ಅವರನ್ನು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿದ್ದಾರೆ. ಬ್ರೇಕ್‌ಫಾಸ್ಟ್‌ದ ಮೀಡಿಂಗ್‌ನಲ್ಲಿ ಇಬ್ಬರ ನಡುವಿನ ಕುರ್ಚಿ ಕಿತ್ತಾಟ ಸದ್ಯಕ್ಕೆ ಶಮನಗೊಂಡಿರುವಂತೆ ಕಾಣಿಸುತ್ತಿದ್ದರೂ ನಾಳಿನ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮತ್ತೊಂದು ಸುತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತುಸುಮಟ್ಟಿನ ಶಮನ ದೊರೆತಿದ್ದರೂ ದೆಹಲಿ ಮಟ್ಟದಲ್ಲಿ ಮಾತುಕತೆ ಮುಂದುವರಿದಿದೆ. ಶನಿವಾರ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ‘ಬ್ರೇಕ್​ಫಾಸ್ಟ್ ಮೀಟಿಂಗ್’ ನಡೆದಿತ್ತು.

ನಾಳೆ ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್‌ಫಾಸ್ಟ್‌ Read More »

ಅಡುಗೆ ಗ್ಯಾಸ್‌ ಬೆಲೆ ತುಸು ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರಸ್ತುತ ಕಡಿಮೆಯಾದ ಪರಿಣಾಮವಾಗಿ ಅದರ ಉಪಉತ್ಪನ್ನವಾದ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆ ಸಹ ಕಡಿಮೆಯಾಗುತ್ತಿವೆ. ಹೀಗಾಗಿ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ತುಸು ಕಡಿಮೆ ಮಾಡಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 10 ರೂಪಾಯಿಗಳಷ್ಟು ಕಡಿಮೆ ಆಗಿದೆ. ಹೊಸ ಬೆಲೆ ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಒಂದು ತಿಂಗಳ ಹಿಂದೆ, ಬೆಲೆಯನ್ನು 5 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಸರ್ಕಾರಿ

ಅಡುಗೆ ಗ್ಯಾಸ್‌ ಬೆಲೆ ತುಸು ಇಳಿಕೆ Read More »

ಪುತ್ತೂರು : ಚಿಕನ್‌ ಅಂಗಡಿಯ ನೌಕರ ನಾಪತ್ತೆ

ಪುತ್ತೂರು: ನಗರದ ಪಡೀಲ್‌ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿ.ಕೆ (27) ಕಾಣೆಯಾದ ಯುವಕ. ಈತ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಜಿಂದಗಿ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ. ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೆ, ಮನೆಗೂ

ಪುತ್ತೂರು : ಚಿಕನ್‌ ಅಂಗಡಿಯ ನೌಕರ ನಾಪತ್ತೆ Read More »

ಇಬ್ಬರು ಆನ್‌ಲೈನ್‌ ವಂಚಕರ ಸೆರೆ : 6.15 ಲಕ್ಷ ರೂ. ವಶ

ಫ್ರಾಂಚೈಸಿ ಕೊಡುವ ನೆಪದಲ್ಲಿ ಉದ್ಯಮಿಗೆ ವಂಚಿದ್ದ ಚೋರರು ಉಡುಪಿ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 6,15,000 ರೂ. ಮೌಲ್ಯದ ನಗದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರದ ಪಾಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಬಂಧಿತ ಆರೋಪಿಗಳು. ಇವರಿಂದ 97 ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000 ರೂ. ಮೌಲ್ಯದ

ಇಬ್ಬರು ಆನ್‌ಲೈನ್‌ ವಂಚಕರ ಸೆರೆ : 6.15 ಲಕ್ಷ ರೂ. ವಶ Read More »

ಕೋಳಿ ಅಂಕಕ್ಕೆ ದಾಳಿ : ಮೂವರು ಪೊಲೀಸ್‌ ವಶ

ಬಂಟ್ವಾಳ : ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಇಡ್ಕಿದು ನಿವಾಸಿ ಉಮೇಶ (38), ಅನಂತಾಡಿ ನಿವಾಸಿ ಅಣ್ಣು (38), ವೀರಕಂಭ ನಿವಾಸಿ ಉಮೇಶ್ (30) ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಅಕ್ರಮವಾಗಿ ಕೋಳಿಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಬಿ.ಎಸ್ ನಾಯಕ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.

ಕೋಳಿ ಅಂಕಕ್ಕೆ ದಾಳಿ : ಮೂವರು ಪೊಲೀಸ್‌ ವಶ Read More »

ದೈವದ ಅಣಕ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ದೈವಾರಾಧಕರ ಆಕ್ರೋಶ

ಹೊಗಳುವ ಭರದಲ್ಲಿ ಅಣಕಿಸಿ ವಿವಾದ ಮೈಮೇಲೆ ಎಳೆದುಕೊಂಡ ನಟ ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ – ಚಾಪ್ಟರ್‌ 1 ಸಿನೆಮಾವನ್ನು ಹೊಗಳುವ ಭರದಲ್ಲಿ ದೈವವನ್ನು ದೆವ್ವ ಎಂದು ಕರೆದಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಕೆಲವರು ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟದ್ದು ರಿಷಬ್‌ ಶೆಟ್ಟಿ ಎಂದು ದೂಷಿಸುತ್ತಿದ್ದಾರೆ. ವೇದಿಕೆಯಲ್ಲಿ ದೈವಗಳನ್ನು ವಿಕೃತವಾಗಿ ಅನುಕರಣೆ ಮಾಡಿದ ನಟ ರಣ್‍ವೀರ್ ಸಿಂಗ್ ವಿರುದ್ಧ ದೈವಾರಾಧಕರು

ದೈವದ ಅಣಕ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ದೈವಾರಾಧಕರ ಆಕ್ರೋಶ Read More »

error: Content is protected !!
Scroll to Top