ಬೇರೆ ಬೇರೆ ಹೆಸರಲ್ಲಿ ಯುವಕರನ್ನು ದೋಚುತ್ತಿದ್ದ ಮಹಿಳೆ ಪೊಲೀಸ್ ವಶಕ್ಕೆ

ಧಾರವಾಡ: ಮೂರು ಹೆಸರುಗಳ ಮೂಲಕ ಮಹಿಳೆಯೊಬ್ಬಳು ಯುವಕರ ಜೊತೆಗೆ ಪ್ರೀತಿಯ ನಾಟಕವಾಡಿ, ಹಣ ದೋಚುತ್ತಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ. ಆರೋಪಿ ಮಹಿಳೆ ಐಶ್ವರ್ಯ, ರೇಣುಕಾ, ಆರೋಹಿ ಮೊದಲಾದ ಹೆಸರುಗಳಲ್ಲಿ ಯುವಕರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದಳು. ಆ ಬಳಿಕ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ದೋಚುವ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಅವಳ ಸುಳ್ಳು ಪ್ರೀತಿಯ ಬಲೆಗೆ ಬಿದ್ದ ಗುರು ಎಂಬಾತ ಆಕೆಗೆ 7 ಲಕ್ಷ ರೂ. ಗಳನ್ನು ನೀಡಿದ್ದ. ಹಣ ಕೈ ಸೇರುತ್ತಿದ್ದ ಹಾಗೆ […]

ಬೇರೆ ಬೇರೆ ಹೆಸರಲ್ಲಿ ಯುವಕರನ್ನು ದೋಚುತ್ತಿದ್ದ ಮಹಿಳೆ ಪೊಲೀಸ್ ವಶಕ್ಕೆ Read More »

ಶಾಲಾ ಬಾವಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ಕಲಬುರ್ಗಿ: ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಬಬಲಾದ ಡಾನ್ ಬಾಸ್ಕೊ ನಗರದಲ್ಲಿ ನಡೆದಿದೆ. ಮೃತನನ್ನು ಚಿಂಚೋಳಿ ನಿವಾಸಿ ಗುರು(15) ಎಂದು ಗುರುತಿಸಲಾಗಿದೆ. ಗುರು ಕಳೆದ ಮೂರು ದಿನಗಳಿಂದ ಶಾಲೆಯಿಂದ ನಾಪತ್ತೆಯಾಗಿದ್ದ. ಇಂದು ಆತನ ಶವ ಶಾಲಾ ಆವರಣದ ಬಾವಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ವಿವರ: ಗುರು ಶಾಲೆಗೆ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಢಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್‌ಗೆ ಹಾನಿಯಾಗಿದ್ದು ಸಿಬ್ಬಂದಿ ಶಾಲೆಯ

ಶಾಲಾ ಬಾವಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ Read More »

ಪ್ರೀತಿಸಲ್ಲ ಎಂದ ಯುವತಿಗೆ ಬಿಯರ್ ಬಾಟಲಿನಿಂದ ಚುಚ್ಚಿದ ಯುವಕ

ಶಿವಮೊಗ್ಗ: ಯುವತಿಯೊಬ್ಬಳು ತನ್ನ ಪ್ರೇಮ ನಿವೇದನೆಯನ್ನು ‌ತಿರಸ್ಕರಿಸಿದಳು ಎನ್ನುವ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಬಿಯರ್ ಬಾಟಲಿನಿಂದ ಚುಚ್ಚಿದ ಘಟನೆ ತೀರ್ಥಹಳ್ಳಿಯ ಆಲ್ಮನೆಯಲ್ಲಿ ನಡೆದಿದೆ. ಆರೋಪಿಯನ್ನು ಸ್ವರೂಪ್ ಎಂದು ಗುರುತಿಸಲಾಗಿದೆ. ಆತ ಕೆಲ ದಿನಗಳ ಹಿಂದೆ ಓರ್ವ ಯುವತಿಗೆ ಪ್ರೇಮಿಸುವುದಾಗಿ ತಿಳಿಸಿದ್ದ. ಆದರೆ ಆ ಯುವತಿ ಅದನ್ನು ತಿರಸ್ಕರಿಸಿದ್ದಾಳೆ. ಇದರಿಂದ ಕುಪಿತನಾದ ಆತ ಆಕೆಗೆ ಬಿಯರ್ ಬಾಟಲಿಯಿಂದ ಕೈ ಮತ್ತು ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ಯುವಕ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದು ಆತನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ

ಪ್ರೀತಿಸಲ್ಲ ಎಂದ ಯುವತಿಗೆ ಬಿಯರ್ ಬಾಟಲಿನಿಂದ ಚುಚ್ಚಿದ ಯುವಕ Read More »

ವೋಟ್ ಚೋರಿ ಕಹಾಂ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ : ಅಶೋಕ್‌ ಲೇವಡಿ

ಶಾಸಕ ಸ್ಥಾನದಿಂದ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಂಡಿರುವ ಹಿನ್ನೆಲೆಯಲ್ಲಿ ಟೀಕೆ ಬೆಂಗಳೂರು: ಬಾಗೇಪಲ್ಲಿ ಶಾಸಕ ಸ್ಥಾನದಿಂದ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ವೋಟ್ ಚೋರಿ ಕಹಾ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಈಗ ಬಾಗೇಪಲ್ಲಿಗೆ ಬಂದು ವೋಟ್ ಚೋರಿ, ಇಲೆಕ್ಷನ್ ಚೋರಿ ವಿರುದ್ಧ ಪ್ರತಿಭಟನೆ ಮಾಡ್ತಾರಾ? ಎಂದು

ವೋಟ್ ಚೋರಿ ಕಹಾಂ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ : ಅಶೋಕ್‌ ಲೇವಡಿ Read More »

ಆಸ್ತಿ ಆಸೆಗೆ ಜನ್ಮದಾತನನ್ನೇ ಕೊಂದ ಪಾಪಿ ಪುತ್ರ

ಬೆಂಗಳೂರು: ಆಸ್ತಿ ಪಡೆಯುವ ಹುಚ್ಚಿಗೆ ಜನ್ಮ ಕೊಟ್ಟ ತಂದೆಯನ್ನೇ ಮಗನೊಬ್ಬ ಇರಿದು ಹತ್ಯೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನಿಕೃಷ್ಣ(70) ಎಂಬವರೇ ‌ಮೃತ ದುರ್ದೈವಿ. ಕೊಲೆಗೈದ ಆರೋಪಿಯನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. ತಂದೆ ಮತ್ತು ಮಕ್ಕಳ ನಡುವೆ ಆಸ್ತಿಗಾಗಿ ಹಲವು ಬಾರಿ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ. ಆರೋಪಿ ಮೋಹನ್ ಕಳೆದ ಎರಡು ದಿನಗಳ ಹಿಂದೆ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಮುನಿಕೃಷ್ಣ ಅವರನ್ನು

ಆಸ್ತಿ ಆಸೆಗೆ ಜನ್ಮದಾತನನ್ನೇ ಕೊಂದ ಪಾಪಿ ಪುತ್ರ Read More »

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಓರ್ವನ ಕೊಲೆ ಮಾಡಿದ್ದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

ಕೊಪ್ಪಳ: ಅಮೆರಿಕ ಮೂಲದ ಪ್ರವಾಸಿಗನ ಕೊಲೆ, ಇಸ್ರೇಲ್ ಮತ್ತು ಭಾರತ ಮೂಲದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಂಗಾವತಿಯ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗಳಾದ ಮಲ್ಲೇಶ್ ಯಾನೆ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪನಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿರುವುದಾಗಿದೆ. ಕಳೆದ ಫೆ. 6 ರಂದು ಈ ಮೂವರು ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿತ್ತು. ಇದೀಗ ಆರೋಪಿಗಳಿಗೆ ಗಲ್ಲು

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಓರ್ವನ ಕೊಲೆ ಮಾಡಿದ್ದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್ Read More »

ಅತಿವೇಗದಿಂದ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ಸವಾರರಿಬ್ಬರು ಪವಾಡ ಸದೃಶ ಪಾರು

ಮಂಗಳೂರು: ಅತಿ ವೇಗದಿಂದ ಬಂದ ಬೈಕ್ ಒಂದು ಸವಾರನ ‌ನಿಯಂತ್ರಣಕ್ಕೆ ಸಿಗದೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರರಾದ ವಿದ್ಯಾರ್ಥಿಗಳಿಬ್ಬರು ಪವಾಡ ಎಂಬಂತೆ ಪಾರಾದ ಘಟನೆ ಉಳ್ಳಾಲದ ಕಿನ್ಯ ಸಂಕೇಶದಲ್ಲಿ ‌ನಡೆದಿದೆ. ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲೂ ಲಭ್ಯವಾಗಿವೆ. ದ್ವಿಚಕ್ರ ವಾಹನದಲ್ಲಿ ಬಿಜಾಪುರ ಮೂಲದ ಇಬ್ಬರು ಯುವಕರಿದ್ದರು ಎಂದು ತಿಳಿದು ಬಂದಿದೆ. ವಿದ್ಯುತ್ ಕಂಬ ಮುರಿದು ತಂತಿಗಳು ರಸ್ತೆಗೆ ಬಿದ್ದಿದ್ದು ‌ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಭಯದಿಂದ ಸಾರ್ವಜನಿಕರು ಅತ್ತ

ಅತಿವೇಗದಿಂದ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ಸವಾರರಿಬ್ಬರು ಪವಾಡ ಸದೃಶ ಪಾರು Read More »

ಇಂದು ರಿಂಗ್‌ ಆಫ್‌ ಫಯರ್‌ ಖಗೋಲ ವಿದ್ಯಮಾನ

ಏಷ್ಯಾದ ಜನರಿಗಿಲ್ಲ ಗ್ರಹಣ ವೀಕ್ಷಿಸುವ ಅವಕಾಶ ನವದೆಹಲಿ: ಅಪರೂಪದ ಖಗೋಳ ವಿದ್ಯಮಾನಕ್ಕೆ ಜಗತ್ತು ಇಂದು ಸಾಕ್ಷಿಯಾಗಲಿದೆ. ಇಂದು ಅಪರಾಹ್ನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಜಗತ್ತಿನ ಹಲವೆಡೆ ರಿಂಗ್ ಆಫ್ ಫೈರ್ ಎಂಬ ಈ ಅದ್ಭುತ ದೃಶ್ಯ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 3.26ಕ್ಕೆ ಆರಂಭವಾಗಿ ಸಂಜೆ 7.57ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು ಸುಮಾರು 4 ಗಂಟೆ 32 ನಿಮಿಷಗಳ ಕಾಲ ಈ ಗ್ರಹಣ ಇರಲಿದೆ. ಗ್ರಹಣದ ಗರಿಷ್ಠ ಹಂತ ಸಂಜೆ 5.42ರ ಸುಮಾರಿಗೆ ಸಂಭವಿಸಲಿದೆ.

ಇಂದು ರಿಂಗ್‌ ಆಫ್‌ ಫಯರ್‌ ಖಗೋಲ ವಿದ್ಯಮಾನ Read More »

ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ

ಪಿಲಿಚಂಡಿ ನೇಮೋತ್ಸವದ ವೇಳೆ ಮಹಿಮೆ ಮೆರೆಯಿತು ದೈವ ಮಂಗಳೂರು : ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಮಂಚ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದ್ದು, ಇದು ದೈವದ ಮಹಿಮೆ ಎಂದೇ ಜನರು ನಂಬಿದ್ದಾರೆ. ನೇಮೋತ್ಸವ ನಡೆಯುತ್ತಿರುವಾಗಲೇ ಯಾರೋ ಕುಳಿತು ನಿಧಾನವಾಗಿ

ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ Read More »

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ

ಸಂವಿಧಾನ ಪೀಠದಲ್ಲಿ ಏ.22ರೊಳಗೆ ಮುಕ್ತಾಯವಾಗಲಿರುವ ವಿಚಾರಣೆ ನವದೆಹಲಿ: ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸುವ ತಾರತಮ್ಯ ಕುರಿತಾದ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ. ಈ ಸಾಂವಿಧಾನಿಕ ಪೀಠ ಏ.7ರಿಂದ ಅರ್ಜಿಗಳ ವಿಚಾರಣೆ ಆರಂಭಿಸಿ ಏ.22ರೊಳಗೆ ಮುಕ್ತಾಯಗೊಳಿಸಲಿದೆ. ಪುನರ್‌ ಪರಿಶೀಲನೆಯನ್ನು ಬೆಂಬಲಿಸುವವರ ಅರ್ಜಿ ಏ.7ರಿಂದ ಏ.9ರ ನಡುವೆ ವಿಚಾರಣೆಗೆ ಬರಲಿದೆ. ಆ ಬಳಿಕ ಏ.14ರಿಂದ ಏ.16ರವರೆಗೆ ತೀರ್ಪಿನ ಪುನರ್‌ ಪರಿಶೀಲನಾ ಅರ್ಜಿಗಳ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ Read More »

error: Content is protected !!
Scroll to Top