ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು!

ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ. ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್‍.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು […]

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು! Read More »

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ

ಮಂಗಳೂರು: ಶುಕ್ರವಾರಕ್ಕಾಗಿ ಓದುಗರ ದೊಡ್ಡ ಗುಂಪೇ ಕಾದು ಕುಳಿತುಕೊಳ್ಳುತ್ತಿದ್ದರು. ಕಾರಣ, ಮಂಗಳ ಕುಟುಂಬ ವಾರಪತ್ರಿಕೆ ಪ್ರಕಟವಾಗುತ್ತಿದ್ದ ದಿನವದು. ಆದರೆ ಇನ್ನು ಅಂತಹ ಕಾತರತೆ ಇರದು. 40 ವರ್ಷಗಳ ಪತ್ರಿಕಾ ಯಾನಕ್ಕೆ ಮಂಗಳ ವಾರಪತ್ರಿಕೆ ಮಂಗಳ ಹಾಡಿದೆ. ಓದುಗರು ನಿರಾಸೆಯ ನಿಟ್ಟುಸಿರನ್ನಷ್ಟೇ ಹೊರಹಾಕುವಂತಾಗಿದೆ. ಈ ವಾರ ಮಂಗಳ ವಾರಪತ್ರಿಕೆಯ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಸಂಪಾದಕರು ಪ್ರಕಟಣೆಯನ್ನು ನೀಡಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ತನ್ನ ಛಾಯೆಯನ್ನು ಮೂಡಿಸಿದ್ದ ಮಂಗಳ, ಓದುಗ ವಲಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿತ್ತು. ಬಾಲಮಂಗಳ, ಚಿತ್ರಕತೆಯಿಂದ

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ Read More »

ಆಸ್ತಿ ತೆರಿಗೆ ವಸೂಲಿಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ | ತೆರಿಗೆ ಸಂಗ್ರಹ ತೃಪ್ತಿ ನೀಡಿಲ್ಲವೆಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ‌ ನಡೆಯದ ಹಿನ್ನೆಲೆ ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ಉಪ‌ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿ.ಕೆ ಶಿವಕುಮಾರ್ ಅವರು, ಬಿಬಿಎಂಪಿಯ ತೆರಿಗೆ ಸಂಗ್ರಹ ನನಗೆ ತೃಪ್ತಿ ನೀಡಿಲ್ಲ. ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ

ಆಸ್ತಿ ತೆರಿಗೆ ವಸೂಲಿಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ | ತೆರಿಗೆ ಸಂಗ್ರಹ ತೃಪ್ತಿ ನೀಡಿಲ್ಲವೆಂದ ಡಿ.ಕೆ. ಶಿವಕುಮಾರ್ Read More »

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!!

ಪುತ್ತೂರು: ಪುತ್ತೂರು – ಉಪ್ಪಿನಂಗಡಿ ಮುಖ್ಯರಸ್ತೆಯಿಂದ ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿಯೇ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ತಡೆ ನಿರ್ಮಿಸಿದೆ. ಮುಖ್ಯರಸ್ತೆಯಲ್ಲೇ ಬಾಯ್ದೆರೆದು ನಿಂತಿದ್ದ ಅಪಾಯದ ಬಗ್ಗೆ ‘ನ್ಯೂಸ್ ಪುತ್ತೂರು’ ಅಕ್ಟೋಬರ್ 5ರಂದು ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ತನ್ನ ಸಿಬ್ಬಂದಿಗಳ ಮೂಲಕ ತಾತ್ಕಾಲಿಕ ತಡೆ ಬೇಲಿ ನಿರ್ಮಿಸಿದೆ. ಮಾತ್ರವಲ್ಲ, ಮುರಿದು ಹೋಗಿದ್ದ ಚರಂಡಿಯ ಭಾಗಕ್ಕೆ ಮರಳು ತುಂಬಿದ್ದ ಚೀಲಗಳನ್ನಿಡಲಾಗಿದೆ. ಇದರಿಂದ ವಾಹನಗಳು ಸಂಚರಿಸುವಾಗ ರಸ್ತೆ ಬದಿಗೆ ಬಂದರೂ, ಯಾವುದೇ

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!! Read More »

ಇಂದಿನ ಕೃಷಿ ಮಾರುಕಟ್ಟೆ ಧಾರಣೆ

ಪುತ್ತೂರು: ಶುಕ್ರವಾರ (06-10-2023)ದ ಕೃಷಿ ಮಾರುಕಟ್ಟೆ ಧಾರಣೆ ಈ ರೀತಿ ಇದೆ. ಹೊಸಅಡಿಕೆ 325- 365 ರೂ.. ಹಳೆ ಅಡಿಕೆ 380 -447 ರೂ. ಹಾಗೂ 448-450 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 480 ರೂ. ಹಾಗೂ 481- 485 ರೂ. (ಗುಣಮಟ್ಟ) ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-73 ರೂ. ರಬ್ಬರ್ ಆರ್.ಎಸ್.ಎಸ್4

ಇಂದಿನ ಕೃಷಿ ಮಾರುಕಟ್ಟೆ ಧಾರಣೆ Read More »

ಪುನೀತ್ ಕೆರೆಹಳ್ಳಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ

ಬೆಂಗಳೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬೆಂಗಳೂರಿಗೆ ತೆರಳಿ ಪುನೀತ್ ಕೆರೆಹಳ್ಳಿ ಅವರನ್ನು ಭೇಟಿಯಾದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪುನೀತ್ ಕೆರೆಹಳ್ಳಿ ಅವರ ಜೊತೆ ಮಾತುಕತೆ ನಡೆಸಿ, ಬೆಂಬಲ ಸೂಚಿಸಲಾಯಿತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಪುನೀತ್ ಕೆರೆಹಳ್ಳಿ ಅವರ ಮೇಲೆ ದಾಖಲೆಗಳಿಲ್ಲದೆ ಹಾಕಿರುವ ಸುಳ್ಳು ಪ್ರಕರಣಗಳಿಗೆ ತಕ್ಷಣ ಕ್ಷಮೆ ಯಾಚಿಸಲೇಬೇಕು ಮತ್ತು ಹಿಂದೂ ಸಮಾಜ ಹೋರಾಟಕ್ಕಿಳಿಯುವ ಮುನ್ನ ಕಾಂಗ್ರೇಸ್ ತನ್ನ

ಪುನೀತ್ ಕೆರೆಹಳ್ಳಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ Read More »

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ

ಪುತ್ತೂರು: ಮುರ ನಿವಾಸಿ, ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಮಹಮ್ಮದ್ ಶರೀಫ್ (42) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಹಸಿಮೀನು ವ್ಯಾಪಾರ ಮಾಡುತ್ತಿದ್ದ ದಿ.ಖಾದರ್ ಅವರ ಮೂವರು ಪುತ್ರರಲ್ಲಿ ಕಿರಿಯ ಪುತ್ರರಾಗಿರುವ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಕಂಪೆನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು. ಇದೀಗ ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, ಮೂವರು ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ Read More »

ಅ. 7ರಂದು ನಡೆಯುವ ಶೌರ್ಯ ಜಾಗರಣ ರಥಯಾತ್ರೆ, ಹಿಂದೂ ಶೌರ್ಯ ಸಂಗಮದ ಆಮಂತ್ರಣ ವಿತರಣೆ

ಪುತ್ತೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹಿನ್ನಲೆಯಲ್ಲಿ ಅ. 7ರಂದು ಪುತ್ತೂರಿನಲ್ಲಿ ನಡೆಯಲಿರುವ ಶೌರ್ಯ ಜಾಗರಣ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಸಂಜೆ ಪುತ್ತೂರು ನಗರದಾದ್ಯಂತ ವಿತರಿಸಲಾಯಿತು. ನಗರದ ದರ್ಬೆ ವೃತ್ತದ ಬಳಿ ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಸಾಗಿ ಅಂಗಡಿ ಮುಂಗಟ್ಟುಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ

ಅ. 7ರಂದು ನಡೆಯುವ ಶೌರ್ಯ ಜಾಗರಣ ರಥಯಾತ್ರೆ, ಹಿಂದೂ ಶೌರ್ಯ ಸಂಗಮದ ಆಮಂತ್ರಣ ವಿತರಣೆ Read More »

ಶೃಂಗೇರಿಗೆ ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್ ಭೇಟಿ | ರಾಮ ಮಂದಿರ ಉದ್ಘಾಟನೆಗೆ ಶ್ರೀಗಳಿಗೆ ಆಹ್ವಾನವೇ?

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಶೃಂಗೇರಿ ಶಾರದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆದರು. ಗುರುವಾರ ಶಾರದ ದೇವಸ್ಥಾನಕ್ಕೆ ಭೇಟಿ ನೀಡಿದ ಮೋಹನ್ ಭಾಗವತ್ ಅವರು ಶಾರದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಿರಿಯ ಶ್ರೀಗಳಾದ ಭಾರತೀತೀರ್ಥ ಶ್ರೀಗಳು ಹಾಗೂ ಕಿರಿಯ ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದರು. ಭಾಗವತ್ ಅವರ ಜತೆ ಐವರು

ಶೃಂಗೇರಿಗೆ ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್ ಭೇಟಿ | ರಾಮ ಮಂದಿರ ಉದ್ಘಾಟನೆಗೆ ಶ್ರೀಗಳಿಗೆ ಆಹ್ವಾನವೇ? Read More »

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್

ಪುತ್ತೂರು: ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಕವಾಗಬಲ್ಲುದು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ ಎಂಬುದಕ್ಕೆ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಸಾಕ್ಷಿಯಾಗಿದೆ ಎಂದು ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕ ವೃತ್ತಿ

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್ Read More »

error: Content is protected !!
Scroll to Top