ಕುದ್ಮಾರು ಶಾಲೆಗೆ ಬೋಳಾಸ್ ಸಂಸ್ಥೆಯಿಂದ ಬೋರ್‌ವೆಲ್ – ನೀರಿನ ಟ್ಯಾಂಕ್ ಕೊಡುಗೆ | 4 ಲಕ್ಷ ರೂ. ವೆಚ್ಚದ ಯೋಜನೆಗೆ ಅನುದಾನ
ಪುತ್ತೂರು : ಗೇರು ಹಾಗೂ ಡ್ರೈಫ್ರೂಟ್ಸ್ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಬೋಳಾಸ್ ಸಂಸ್ಥೆಯು ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಗೆ ಬೋರ್‌ವೆಲ್ ಹಾಗೂ ನೀರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ನೀಡಿದೆ. ಪತ್ರಕರ್ತ, ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ರಾಮಚಂದ್ರ ಬರೆಪ್ಪಾಡಿ ಅವರ ಮನವಿ ಮೇರೆಗೆ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ದಾಮೋದರ್ ಕಾಮತ್ ಅವರು ಬೋರ್‌ವೆಲ್ ಹಾಗೂ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಒಟ್ಟು 4 ಲಕ್ಷ ರೂ. ಅನುದಾನ ಒದಗಿಸಿರುತ್ತಾರೆ. ಬೋಳಾಸ್ ಬಗ್ಗೆ 1958ರಲ್ಲಿ ಕಾರ್ಕಳದಲ್ಲಿ […]










