ಯಾಕಾಗಿ ನಡೆಯಿತು ಬಿಜೆಪಿ – ಜೆಡಿಎಸ್ ಮೈತ್ರಿ? ಒಳಗುಟ್ಟು ಬಿಚ್ಚಿಟ್ಟ ದೇವೇಗೌಡ!

ಸುಬ್ರಹ್ಮಣ್ಯ: ಕುಮಾರಸ್ವಾಮಿಯವರು ಈಗಾಗಲೇ ಗೃಹಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೇ. ದಸರಾ ಕಳೆದು ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ದಕ್ಷಿಣ ಭಾರತದ ಹೆಸರಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮೈತ್ರಿಗೆ ಮೊದಲು ಜೆಡಿಎಸ್’ನ 19 ಶಾಸಕರು, 8 ಸಂಸದರು ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆ ಎರಡು […]

ಯಾಕಾಗಿ ನಡೆಯಿತು ಬಿಜೆಪಿ – ಜೆಡಿಎಸ್ ಮೈತ್ರಿ? ಒಳಗುಟ್ಟು ಬಿಚ್ಚಿಟ್ಟ ದೇವೇಗೌಡ! Read More »

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್??

ಟೆಲ್ ಅವಿವ್: ಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಯುದ್ಧಕ್ಕಿಳಿದಿದ್ದು, ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು. ಆದರೆ ಉತ್ತರ ಇಸ್ರೇಲ್ನಲ್ಲಿ ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು. ಗಾಜಾದಿಂದ ಅನಿರೀಕ್ಷಿತ ದಾಳಿಯ 24 ಗಂಟೆಗಳ ನಂತರ ಇನ್ನೂ ದಾಳಿ ಮುಂದುವರಿದಿದೆ. ಇದರಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ನ ಭದ್ರತಾ ತಡೆಗೋಡೆಯನ್ನು ಭೇದಿಸಿ ಮತ್ತು ಹತ್ತಿರದ ಸ್ಥಳಗಳ ಮೂಲಕ ಆಗಮಿಸಿದರು. ಇಸ್ರೇಲ್ನಲ್ಲಿ ಕನಿಷ್ಠ 600

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್?? Read More »

ಕುಕ್ಕೆಗೆ ಆಗಮಿಸಿದ ಎಚ್.ಡಿ. ದೇವೇಗೌಡ ದಂಪತಿ | ಹೆಲಿಕಾಫ್ಟರ್ ರದ್ದು ಮಾಡಿ, ವಿಮಾನದಲ್ಲಿ ಆಗಮಿಸಿದ ಮಾಜಿ ಪ್ರಧಾನಿ

ಸುಬ್ರಹ್ಮಣ್ಯ : ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ ಅ. 9ರಂದು ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡ ದಂಪತಿ ಅ. 8ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಬಂದು ಅಲ್ಲಿಂದ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿ ಅ. 9ರಂದು ಪ್ರಾತಃ ಕಾಲ ವಿಶೇಷ ಸೇವೆ ನೆರವೇರಿಸಿದರು. ಹೆಚ್.ಡಿ. ದೇವೇಗೌಡ ದಂಪತಿ ನಿನ್ನೆ

ಕುಕ್ಕೆಗೆ ಆಗಮಿಸಿದ ಎಚ್.ಡಿ. ದೇವೇಗೌಡ ದಂಪತಿ | ಹೆಲಿಕಾಫ್ಟರ್ ರದ್ದು ಮಾಡಿ, ವಿಮಾನದಲ್ಲಿ ಆಗಮಿಸಿದ ಮಾಜಿ ಪ್ರಧಾನಿ Read More »

ಇಂದಿನ ಕೃಷಿ ಮಾರುಕಟ್ಟೆ ಧಾರಣೆ

ಪುತ್ತೂರು: ಸೋಮವಾರ (09-10-2023)ದ ಕೃಷಿ ಮಾರುಕಟ್ಟೆ ಧಾರಣೆ ಈ ರೀತಿ ಇದೆ. ಹೊಸಅಡಿಕೆ 325- 365 ರೂ.. ಹಳೆ ಅಡಿಕೆ 380 -447 ರೂ. ಹಾಗೂ 448-450 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 480 ರೂ. ಹಾಗೂ 481- 485 ರೂ. (ಗುಣಮಟ್ಟ) ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-73 ರೂ. ರಬ್ಬರ್ ಆರ್.ಎಸ್.ಎಸ್4

ಇಂದಿನ ಕೃಷಿ ಮಾರುಕಟ್ಟೆ ಧಾರಣೆ Read More »

ಜ್ವರದಿಂದ ಬಳಲುತ್ತಿದ್ದ ಮಗು ಸಾನಿಧ್ಯ ಮೃತ್ಯು!

ಪುತ್ತೂರು: ಜ್ವರದಿಂದ ಬಳಲುತ್ತಿದ್ದ ಸುಮಾರು 8 ವರ್ಷದ ಮಗು ಸಾನಿಧ್ಯ ಸೋಮವಾರ ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರಿನ ಬೊಳುವಾರಿನಲ್ಲಿ ವಾಸ್ತವ್ಯ ಹೊಂದಿರುವ, ಮೂಲತಃ ಸುರತ್ಕಲ್ ಕೃಷ್ಣಾಪುರ ನಿವಾಸಿ ನಾಮ್’ದೇವ್ ಆಚಾರ್ಯ ಅವರ ಪುತ್ರಿ ಸಾನಿಧ್ಯ. ಜ್ವರದಿಂದ ಬಳಲುತ್ತಿದ್ದ ಮಗುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಡೆಂಗ್ಯೂ ಹಾಗೂ ನ್ಯೂಮೋನಿಯಾ ಆಗಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಸಾನಿಧ್ಯ ಅವರು ತಂದೆ, ತಾಯಿಯನ್ನು ಅಗಲಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಮಗು ಸಾನಿಧ್ಯ ಮೃತ್ಯು! Read More »

ಪರಸ್ಪರ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ | ಇರ್ದೆ- ಪೇರಳ್ತಡ್ಕ ನವೀಕೃತ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ದೇಶದ ಸ್ವಾತಂತ್ರ್ಯಕ್ಕೆ ಇಲ್ಲಿರುವ ಎಲ್ಲಾ ಧರ್ಮಗಳ ನೇತಾರರು ಹೋರಾಟ ಮಾಡಿದ್ದಾರೆ. ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ನಮ್ಮ ದೇಶಕ್ಕೆ ಸುಲಭದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನಾವಿಂದು ದೇಶದ ಇತಿಹಾಸವನ್ನು ಮರೆತು ಧರ್ಮ, ಜಾತಿಯ ಹೆಸರಿನಲ್ಲಿ ಕಚ್ಚಾಟ ನಡೆಸಿ ಭಾರತದ ಸೌಂದರ್ಯವನ್ನೇ ಹಾಳುಮಾಡುತ್ತಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆ ಪೇರಲ್ತಡ್ಕದಲ್ಲಿ ನವೀಕೃತಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಧರ್ಮಗಳು

ಪರಸ್ಪರ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ | ಇರ್ದೆ- ಪೇರಳ್ತಡ್ಕ ನವೀಕೃತ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ Read More »

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ

ಸುಬ್ರಹ್ಮಣ್ಯ: ಮಾಜಿ ಪ್ರಧಾನಿ ದೇವೆ ಗೌಡ ಅವರು ಇಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಬಂದು ಸಕಲೇಶಪುರದಲ್ಲಿ ಇಳಿದು ಶ್ರೀ ಕ್ಷೇತ್ರಕ್ಕೆ ಬರುವವರಿದ್ದರು. ಆದರೆ ಸಕಲೇಶಪುರ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಹೆಲಿಕಾಪ್ಟರ್ ಬರಲು ಅನಾನುಕೂಲ ವಾತಾವರಣ ಉಂಟಾಗಿದ್ಧ ಹಿನ್ನೆಲೆಯಲ್ಲಿ ಮಂಗಳೂರಿನವರೆಗೆ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ಸುಮಾರು ರಾತ್ರಿ 11:30ಕ್ಕೆ ಸುಬ್ರಹ್ಮಣ್ಯ ತಲುಪಲಿದ್ದಾರೆ.

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ Read More »

ಪುತ್ತೂರು ಮಾಯಿದೆ ದೇವುಸ್ ಚರ್ಚ್ ನಲ್ಲಿ ವಿದ್ಯಾರ್ಥಿ ಸಾಧಕರು, ಕ್ರೀಡಾ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ

ಪುತ್ತೂರು : ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಪುತ್ತೂರಿನ ವಿದ್ಯಾರ್ಥಿ ಸಾಧಕರನ್ನು ಮತ್ತು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ’ಪ್ರತಿಭಾ ಪುರಸ್ಕಾರ-೨೦೨೩’ ಕಾರ್ಯಕ್ರಮ ಭಾನುವಾರ ಮಾಯಿದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರ ಅಭಿವೃದ್ಧಿಗೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ನೀಡಿದೆ. ಜನರ ಕಣ್ಣೀರೊರೆಸುವ ಕಾರ್ಯ ನಮ್ಮಿಂದ ಹಾಗೂ ಸರಕಾರದಿಂದ ಆಗುತ್ತಿದೆ ಎಂದರು. ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್

ಪುತ್ತೂರು ಮಾಯಿದೆ ದೇವುಸ್ ಚರ್ಚ್ ನಲ್ಲಿ ವಿದ್ಯಾರ್ಥಿ ಸಾಧಕರು, ಕ್ರೀಡಾ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ Read More »

ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ

ಪುತ್ತೂರು: ಅಂತಾರಾಜ್ಯ ದರೋಡೆ ಪ್ರಕರಣದಿಂದ ಸುದ್ದಿಯಾಗಿದ್ದ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನ ಪ್ರಕರಣ ನಡೆದಿದೆ. ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಗೆ ಶನಿವಾರ ರಾತ್ರಿ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿ ತುಂಬಾ ಜಾಲಾಡಿದ್ದಾರೆ. ಅಂಗಡಿ ಮಾಲಕ ಶೇಖರ್ ನಾಯಕ್ ಯಾವುದೇ ನಗದು ಅಂಗಡಿಯಲ್ಲಿ ಇರಿಸದ ಕಾರಣ ಬಚಾವಾಗಿದ್ದಾರೆ. ಅಂಗಡಿಯ ಡ್ರಾಯರ್ ನಿಂದ ಚಿಲ್ಲರೆ ಹಣ ಕಳವಾಗಿದೆ. ಬೆಳಿಗ್ಗೆ ಅಂಗಡಿ ಮಾಲಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಬಡಗನ್ನೂರಿನಲ್ಲಿ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ Read More »

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಇಸ್ರೋ ʻವಿಶ್ವ ಅಂತರಿಕ್ಷ ಸಪ್ತಾಹʼ

ಪುತ್ತೂರು: ಚಂದ್ರಯಾನ -3 ಮತ್ತು ಆದಿತ್ಯ ಎಲ್‌1ʼ ಬಾಹ್ಯಾಕಾಶ ಯೋಜನೆ ಮೂಲಕ ದೇಶದ ಮನೆಮಾತಾಗಿರುವ ಇಸ್ರೋ ವಿಜ್ಞಾನಿಗಳ ತಂಡ ಪುತ್ತೂರಿನಲ್ಲಿ ʻವಿಶ್ವ ಅಂತರಿಕ್ಷ ಸಪ್ತಾಹ -23ʼ ಕಾರ್ಯಕ್ರಮವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಅಡಿಟೋರಿಯಂನಲ್ಲಿ ಆಯೋಜಿಸಿತ್ತು. ಇಸ್ರೋ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ದಿನವಿಡೀ ಸ್ಪರ್ಧೆ, ಇಸ್ರೋ ಮಾದರಿಗಳ ಪ್ರದರ್ಶನ, ರಸಪ್ರಶ್ನೆ, ವಿಚಾರ ಸಂಕಿರಣಗಳ ಮೂಲಕ ಶಾಲೆಯಲ್ಲಿ ಬಾಹ್ಯಾಕಾಶ ವಿಜ್ಞಾನದ ವಾತಾವರಣ ಸೃಷ್ಟಿಸಿತು. ಬೆಳಿಗ್ಗೆ ರಾಷ್ಟ್ರೀಯ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಇಸ್ರೋ ʻವಿಶ್ವ ಅಂತರಿಕ್ಷ ಸಪ್ತಾಹʼ Read More »

error: Content is protected !!
Scroll to Top