ಬನ್ನೂರು ಕಳವು ಪ್ರಕರಣದ ಎರಡನೇ ಆರೋಪಿ ಬಂಧನ
ಪುತ್ತೂರು: ಐದು ತಿಂಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 5 ತಿಂಗಳ ಹಿಂದೆ ಬನ್ನೂರು ಆನೆಮಜಲು ನಿವಾಸಿ ಮೌನೇಶ್ ಎಂಬವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಇನ್ನೋರ್ವ ಆರೋಪಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿಯಂತೆ ಇನ್ನೋರ್ವ ಆರೋಪಿಯನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.
ಬನ್ನೂರು ಕಳವು ಪ್ರಕರಣದ ಎರಡನೇ ಆರೋಪಿ ಬಂಧನ Read More »










