ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಾರಿಷಸ್‌‌ಗೆ ಇಂಟರ್ನ್‌ಶಿಪ್‌ಗೆ ಆಯ್ಕೆ

ಪುತ್ತೂರು: ಸಂಪ್ಯದ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟಿನ ಮುಖಾಂತರ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದ್ದು, ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಏವಿಯೇಷನ್(Aviation), ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಹಾಸ್ಪಿಟಾಲಿಟಿ ಸೈನ್ಸ್(Hotel Management) ಕೋರ್ಸ್ಗಳನ್ನು ಪರಿಚಯಿಸಿದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈಗಾಗಲೇ ಸತತ ಮೂರು ವರ್ಷಗಳಿಂದ ಏವಿಯೇಷನ್ ಕೋರ್ಸ್ ಮುಖಾಂತರ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಏರ್‌ಲೈನ್ಸ್‌ಗಳಲ್ಲಿ […]

ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಾರಿಷಸ್‌‌ಗೆ ಇಂಟರ್ನ್‌ಶಿಪ್‌ಗೆ ಆಯ್ಕೆ Read More »

ಫೆ: 22: ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇವುಗಳ ಸಹಯೋಗದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ ಕಾರ್ಯಕ್ರಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ

ಫೆ: 22: ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ Read More »

ಕರಾವಳಿಯಲ್ಲಿ ಗುರುವಾರದಿಂದ ರಮ್ಜಾನ್‌ ಉಪವಾಸ ಆರಂಭ

ಮಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಗುರುವಾರದಿಂದ ಪವಿತ್ರ ರಮ್ಜಾನ್‌ ಉಪವಾಸ ಆರಂಭವಾಗಲಿದೆ. ಪವಿತ್ರ ರಮ್ಜಾನ್‌ನ ಪ್ರಥಮ ಚಂದ್ರದರ್ಶನ ಮಂಗಳವಾರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಗುರುವಾರದಿಂದ ಉಪವಾಸ ವ್ರತ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಸ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ದಾನಿ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ. ಚಂದ್ರದರ್ಶನವಾಗದ ಕಾರಣ ಗುರುವಾರದಿಂದ ರಮಝಾನ್ ಪ್ರಾರಂಭ ಎಂದು

ಕರಾವಳಿಯಲ್ಲಿ ಗುರುವಾರದಿಂದ ರಮ್ಜಾನ್‌ ಉಪವಾಸ ಆರಂಭ Read More »

ಟ್ಯಾಕ್ಸಿಯಲ್ಲೇ ಮಗುವನ್ನು ಮರೆತು ಬಿಟ್ಟುಹೋದ ದಂಪತಿ!

ಪೊಲೀಸರ ತಕ್ಷಣದ ಸ್ಪಂದನೆಯಿಂದ ತಾಯಿ ಮಡಿಲು ಸೇರಿದ ಮಗು ಬೆಂಗಳೂರು: ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ತಮ್ಮ ಮಗುವನ್ನೇ ಟ್ಯಾಕ್ಸಿಯಲ್ಲಿ ಮರೆತು ಬಿಟ್ಟುಹೋದ ಘಟನೆ ಬೆಂಗಳೂರಿನ ಹೆಣ್ಣೂರು ಸಮೀಪ ಪೊನ್ನಪ್ಪ ಲೇಔಟ್‌ನಲ್ಲಿ ನಡೆದಿದ್ದು, ಹೊಯ್ಸಳ ಪೊಲೀಸರ ತಕ್ಷಣದ ಸ್ಪಂದನೆಯಿಂದ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ. ಪೊನ್ನಪ್ಪ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ದಂಪತಿ ನಾಲ್ಕು ವರ್ಷದ ಮಗುವಿನೊಂದಿಗೆ ಫೆ.14ರಂದು ಹೊರ ಹೋಗಿದ್ದರು. ನಂತರ ಬಾಡಿಗೆ ಕ್ಯಾಬ್‌ನಲ್ಲಿ ಅಪಾರ್ಟ್‌ಮೆಂಟ್‌ಗೆ ವಾಪಸ್‌ ಬಂದಿದ್ದ ದಂಪತಿ, ನಿದ್ದೆ ಮಾಡುತ್ತಿದ್ದ ಮಗುವನ್ನು ಕ್ಯಾಬ್‌ನಲ್ಲೇ ಮರೆತು

ಟ್ಯಾಕ್ಸಿಯಲ್ಲೇ ಮಗುವನ್ನು ಮರೆತು ಬಿಟ್ಟುಹೋದ ದಂಪತಿ! Read More »

ಮಗನ ಸಾವಿನ ದುಃಖದಲ್ಲಿ 6 ಕೋಟಿ ರೂ. ಮೌಲ್ಯದ ಕಾರನ್ನೇ ಸಮಾಧಿ ಮಾಡಿದ ತಂದೆ

ಗುಂಡಿ ತೋಡಿ ಕಾರನ್ನು ಸಮಾಧಿ ಮಾಡಿ ಕಾಂಕ್ರೀಟ್‌ ಹಾಕಿದ ಮುಚ್ಚಿದ ತಂದೆ ಮಾಸ್ಕೊ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಮಗನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಸಮಾಧಿ ಮಾಡಿರುವ ಘಟನೆ ರಷ್ಯಾದ ಮಾಸ್ಕೊದಲ್ಲಿ ನಡೆದಿದೆ. ಈ ಭಾವನಾತ್ಮಕ ದೃಶ್ಯದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಕಾಮೆಂಟ್‌ಗಳು ಹರಿದುಬರುತ್ತಿವೆ. ತಂದೆ ತನ್ನ ಮಗನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ಬಿಎಂಡಬ್ಲ್ಯೂ ಕಾರು ನೀಡಿದ್ದರು.

ಮಗನ ಸಾವಿನ ದುಃಖದಲ್ಲಿ 6 ಕೋಟಿ ರೂ. ಮೌಲ್ಯದ ಕಾರನ್ನೇ ಸಮಾಧಿ ಮಾಡಿದ ತಂದೆ Read More »

ನೌಕಾ ನೆಲೆಯ ರಹಸ್ಯ ಮಾಹಿತಿ ರವಾನೆ : ಇನ್ನೋರ್ವ ಆರೋಪಿ ಸೆರೆ

ಕೇರಳದ ವಯನಾಡಿನಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದ ಪೊಲೀಸರು ಉಡುಪಿ: ನೌಕಾ ನೆಲೆಯ ರಹಸ್ಯ ಮಾಹಿತಿಗಳನ್ನು ವಿದೇಶಕ್ಕಡ ರವಾನಿಸಿದ ಇನ್ನೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಕೇರಳದ ವಯನಾಡಿನಲ್ಲಿ ಬಂಧಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ರವಾನಿಸಿದ ಪ್ರಕರಣದಲ್ಲಿ ಸೆರೆಯಾಗಿರುವ ಐದನೇ ಆರೋಪಿ ಈತ. ಬಂಧಿತ ಆರೋಪಿಯನ್ನು ದಿ.ಇಜಾಜುಲ್ ಇಸ್ಲಾಂ ಎಂಬವರ ಪುತ್ರ ಅಲಿಫ್ ಇಸ್ಲಾಂ (21) ಎಂದು ಗುರುತಿಸಲಾಗಿದೆ. ಮೂಲತಃ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಬರ್ಗರಿಯಾ ಗ್ರಾಮದ ನಿವಾಸಿಯಾಗಿದ್ದ ಈತ ಪ್ರಸ್ತುತ

ನೌಕಾ ನೆಲೆಯ ರಹಸ್ಯ ಮಾಹಿತಿ ರವಾನೆ : ಇನ್ನೋರ್ವ ಆರೋಪಿ ಸೆರೆ Read More »

ಮೀಟರ್‌ ರೀಡರ್‌ ಸಿಬ್ಬಂದಿ ಮೇಲೆ ನಾಯಿ ದಾಳಿ : ಆಸ್ಪತ್ರೆಗೆ ದಾಖಲು

ಬಂಟ್ವಾಳ : ಮೆಸ್ಕಾಂ ಮೀಟರ್‌ ರೀಡರ್‌ ಮಾಡುವ ವ್ಯಕ್ತಿಯ ಮೇಲೆ ಮನೆಯ ಅಕುನಾಯಿ ದಾಳಿ ಮಾಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಹೊರಗುತ್ತಿಗೆ ಆಧಾರದಲ್ಲಿ ಮೀಟರ್‌ ರೀಡಿಂಗ್‌ ಮಾಡುವ ಸಂಪತ್‌ ದಾಳಿಗೊಳಗಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿರುವ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಎಂಬವರ ಮೇಲೆ ನಾಯಿ ದಾಳಿ ಮಾಡಿದೆ. ಸಂಪತ್ ಬಂಟ್ವಾಳ ಮೆಸ್ಕಾಂ ಇಲಾಖೆಯ ಹೊರಗುತ್ತಿಗೆಯಲ್ಲಿ ಸೂಪರ್‌ವೈಸರ್ ವೃತ್ತಿಯಲ್ಲಿದ್ದಾರೆ. ಆದರೆ ಕಳೆದ ಹತ್ತು ತಿಂಗಳಿನಿಂದ ಮೀಟರ್ ರೀಡಿಂಗ್

ಮೀಟರ್‌ ರೀಡರ್‌ ಸಿಬ್ಬಂದಿ ಮೇಲೆ ನಾಯಿ ದಾಳಿ : ಆಸ್ಪತ್ರೆಗೆ ದಾಖಲು Read More »

ಕುರ್ಚಿ ಕಿತ್ತಾಟದ ಮಧ್ಯೆ ವಿದೇಶಕ್ಕೆ ಹಾರಿದ ಶಾಸಕರು

ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸಕ್ಕೆ ನಾನಾ ಅರ್ಥ ಬೆಂಗಳೂರು : ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ತೀವ್ರಗೊಂಡಿರುವಾಗಲೇ ಕೆಲವು ಶಾಸಕರು ಮತ್ತು ಎಂಎಲ್‌ಸಿಗಳು ವಿದೇಶಕ್ಕಡಡ ಹಾರಿದ್ದಾರೆ. ಇವರೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದವರು ಎನ್ನುವುದು ಗಮನಾರ್ಹ. ಮೊದಲು ಸರ್ಕಾರಿ ಪ್ರಾಯೋಜಿತ ಎಂದು ಹೇಳಲಾಗಿದ್ದ ಈ ಟೂರ್, ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಖಾಸಗಿ ಟ್ರಿಪ್ ಎಂದು ಬದಲಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ. ಶಾಸಕರಾದ ದೇವೇಂದ್ರಪ್ಪ, ಎಚ್.ಡಿ ತಮ್ಮಯ್ಯ, ಹಂಪನಗೌಡ ಬಾದರ್ಲಿ,

ಕುರ್ಚಿ ಕಿತ್ತಾಟದ ಮಧ್ಯೆ ವಿದೇಶಕ್ಕೆ ಹಾರಿದ ಶಾಸಕರು Read More »

ಸುಳ್ಳು ಜಾಹೀರಾತು ಕೇಸ್‌ : ರಾಹುಲ್‌ ಗಾಂಧಿಗೆ ರಿಲೀಫ್‌

ತಾಂತ್ರಿಕ ಕಾರಣಗಳ ನೆಲೆಯಲ್ಲಿ ರಾಹುಲ್‌ ಗಾಂಧಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌ ಬೆಂಗಳೂರು: ಸುಳ್ಳು ಜಾಹೀರಾತು ಪ್ರಕರಣದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕರ್ನಾಟಕ ಹೈಕೋರ್ಟ್‌ ರಿಲೀಫ್‌ ನೀಡಿದೆ. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ

ಸುಳ್ಳು ಜಾಹೀರಾತು ಕೇಸ್‌ : ರಾಹುಲ್‌ ಗಾಂಧಿಗೆ ರಿಲೀಫ್‌ Read More »

SSLC, PUC ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಚಿವ ಮಧು ಬಂಗಾರಪ್ಪ ಅವರು ಪ್ರಕಟಿಸಿದ್ದಾರೆ. ಫೆ. 28 ರಿಂದ ಮಾ. 17 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಮತ್ತು ಮಾ. 18 ರಿಂದ ಏ. 2 ರ ವರೆಗೆ ಹತ್ತನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಮತ್ತು ಹತ್ತನೇ ತರಗತಿ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರ ವರೆಗೆ

SSLC, PUC ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ Read More »

error: Content is protected !!
Scroll to Top