ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ | ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನ ಅರಿತು ಸೇವೆ ಸಲ್ಲಿಸೋಣ : ರೇಣುಕಾ ಸದಾನಂದ ಜಾಕೆ

ಸುಬ್ರಹ್ಮಣ್ಯ: ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವ ನಮ್ಮ ಅಂತರಾಷ್ಟ್ರೀಯ ಲಯನ್ಸ್ ನ ಉದ್ದೇಶದೊಂದಿಗೆ ಬಡವರ ಸೇವೆಯನ್ನು ನಿರಂತರವಾಗಿ ಮುಂದುವರಿಸೋಣ. ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವುಗಳಿಗೆ ಬೇಕಾದ ಆಹಾರವನ್ನು ಕಾಡಿನ ಅಂಚಿನಲ್ಲಿ ಸುಲಭವಾಗಿ ಸಿಗುವ ಹಾಗೆ ಬೀಜ ಬಿತ್ತನೆ ಹಾಗೂ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಅಂತರಾಷ್ಟ್ರೀಯ ಲಯನ್ಸ್  ಜಿಲ್ಲೆಯ 317 ಡಿ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಹೇಳಿದರು. ಅವರು ಕುಕ್ಕೆ ಸುಬ್ರಹ್ಮಣ್ಯ […]

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ | ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನ ಅರಿತು ಸೇವೆ ಸಲ್ಲಿಸೋಣ : ರೇಣುಕಾ ಸದಾನಂದ ಜಾಕೆ Read More »

ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಸಜಂಕಾಡಿ ಸರಕಾರಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ ಆಯ್ಕೆ

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಕುಂಬ್ರ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24 ನೇ ಸಾಲಿನ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಸಜಂಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳಾದ 6ನೇ ತರಗತಿಯ ಮಹಮ್ಮದ್ ಹಿಶಾಮ್ ಆಶುಭಾಷಣದಲ್ಲಿ ಪ್ರಥಮ, 3ನೇ ತರಗತಿಯ ಫಾತಿಮತ್ತ್ ಅಫೀಪ ಧಾರ್ಮಿಕ ಫಠಣ ಅರೇಬಿಕ್ ನಲ್ಲಿ

ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಸಜಂಕಾಡಿ ಸರಕಾರಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ ಆಯ್ಕೆ Read More »

ಪಾಂಬಾರು ಷಣ್ಮುಖ ಫ್ರೆಂಡ್ಸ್ ಕ್ಲಬ್‍ ವತಿಯಿಂದ ಸಂಪ್ಯ ಆನಂದಾಶ್ರಮಕ್ಕೆ ಗ್ರೈಂಡರ್, ಬೀರಮಲೆ ಪ್ರಜ್ಞಾ ಬುದ್ಧಿಮಾಂದ್ಯರ ಆಶ್ರಮಕ್ಕೆ ಸೋಲಾರ್ ಲೈಟ್ ಕೊಡುಗೆ

ಪಾಂಬಾರು: ಪಾಂಬಾರು ಷಣ್ಮುಖ ಫ್ರೆಂಡ್ಸ್ ಕ್ಲಬ್‍ ವತಿಯಿಂದ ಪುತ್ತೂರಿನ ಸಂಪ್ಯದಲ್ಲಿರುವ ಆನಂದಾಶ್ರಮಕ್ಕೆ ಸುಮಾರು 24 ಸಾವಿರ ರೂ. ಮೌಲ್ಯದ ಗ್ರೈಂಡರ್ ಹಾಗೂ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಬುದ್ಧಿಮಾಂದ್ಯರ ಆಶ್ರಮಕ್ಕೆ 15 ಸಾವಿರ ರೂ. ಮೌಲ್ಯದ ಸೋಲಾರ್ ಲೈಟನ್ನು ಶನಿವಾರ ನೀಡಲಾಯಿತು.   ಫ್ರೆಂಡ್ಸ್ ಕ್ಲಬ್‍ ಸದಸ್ಯರು ಹುಲಿವೇಷ ಹಾಕಿ ಕಲೆಕ್ಷನ್ ಮಾಡಿದ ಹಣದಲ್ಲಿ ಈ ಕೊಡುಗೆಗಳನ್ನು ನೀಡಲಾಯಿತು. ಆನಂದಾಶ್ರಮದ ಟ್ರಸ್ಟಿ ಸದಾಶಿವ ಪೈ ಅವರಿಗೆ ಗ್ರೈಂಡರನ್ನು ಹಸ್ತಾಂತರಿಸಲಾಯಿತು. ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ಅವರಿಗೆ ಸೋಲಾರ್ ಲೈಟನ್ನು

ಪಾಂಬಾರು ಷಣ್ಮುಖ ಫ್ರೆಂಡ್ಸ್ ಕ್ಲಬ್‍ ವತಿಯಿಂದ ಸಂಪ್ಯ ಆನಂದಾಶ್ರಮಕ್ಕೆ ಗ್ರೈಂಡರ್, ಬೀರಮಲೆ ಪ್ರಜ್ಞಾ ಬುದ್ಧಿಮಾಂದ್ಯರ ಆಶ್ರಮಕ್ಕೆ ಸೋಲಾರ್ ಲೈಟ್ ಕೊಡುಗೆ Read More »

ಅನಂತಪುರ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಂಡ ಮೊಸಳೆ | ಭಕ್ತರಲ್ಲಿ ಸಂತಸ

ಅನಂತಪುರ: ಕಾಸರಗೋಡು: ಇತಿಹಾಸ ಪ್ರಸಿದ್ಧ ಕೇರಳದ ಅನಂತಪುರ ದೇವಸ್ಥಾನದಲ್ಲಿ ಭಕ್ತಾದಿಗಳ ಆಸೆಯಂತೆ ಮೊಸಳೆ ಕಾಣ ಸಿಕ್ಕಿದೆ. ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾದ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು. ಒಂದು ವಾರದ ಹಿಂದೆ ಭಕ್ತಾದಿಯೊಬ್ಬರು ಮೊಸಳೆ ಕಂಡಂತೆ ಆಯಿತು ಅಂದರೂ ಸಾಕ್ಷ್ಯಾಧಾರ ಇಲ್ಲದಿದ್ದರಿಂದ ನಂಬಲು ಅಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ. ದೇವರ ಪ್ರತಿ ಬಿಂಬ

ಅನಂತಪುರ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಂಡ ಮೊಸಳೆ | ಭಕ್ತರಲ್ಲಿ ಸಂತಸ Read More »

ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಆನೆ ಪ್ರತ್ಯಕ್ಷ | ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಬೈಕ್ ಸವಾರ

ಜಾಲ್ಸೂರು: ಜಾಲ್ಲೂರು- ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಸುಳ್ಯ ಸಮೀಪದ ಪಂಜಿಕಲ್ಲಿನಲ್ಲಿ ಶನಿವಾರ ನಡೆದಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಗ್ರಾಮ ಸುತ್ತ ಮುತ್ತ ಕಾಡಿನಿಂದ  ಆವರಿಸಿದ್ದು, ಈ ಪರಿಸರದಲ್ಲಿ ರಾತ್ರಿ, ಹಗಲೆನ್ನದೆ ಆನೆಗಳು ಓಡಾಡುತ್ತಿರುತ್ತವೆ. ಇಲ್ಲಿನ ಜನ ಪ್ರತಿ ದಿನ ಆತಂಕದಲ್ಲೇ ಬದುಕುವಂತಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ ತೋಟಗಳಿಗೆ ದಾಳಿ ಇಡುತ್ತಿದ್ದು, ಕೃಷಿಯನ್ನು ಹಾನಿ ಮಾಡುತ್ತಿವೆ. ಕಾಸರಗೋಡು

ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಆನೆ ಪ್ರತ್ಯಕ್ಷ | ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಬೈಕ್ ಸವಾರ Read More »

ಡಿ.21 : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 4ನೇ ಜಿಲ್ಲಾ ಸಮ್ಮೇಳನ | ಲಾಂಛನ ಬಿಡುಗಡೆ

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯಲಿರುವ 4ನೇ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ ನ.11 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು. ಡಿ.21ರಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದ್ದು, ಲಾಂಛನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ

ಡಿ.21 : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 4ನೇ ಜಿಲ್ಲಾ ಸಮ್ಮೇಳನ | ಲಾಂಛನ ಬಿಡುಗಡೆ Read More »

ಉಡುಪಿ ಮಾಜಿ ಶಾಸಕರ ಪತ್ನಿ ಪದ್ಮಪ್ರಿಯ ನಾಪತ್ತೆ, ಆತ್ಮಹತ್ಯೆ ಪ್ರಕರಣ | ಆರೋಪಿ ಅತುಲ್ ರಾವ್‍ ಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ನ್ಯಾಯಾಲಯ

ಉಡುಪಿ: ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದಲ್ಲಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ. 15 ವರ್ಷಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಸಿಒಡಿ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಪುತ್ತೂರಿನ ಕೆ.ಶಿವಪ್ರಸಾದ್ ಆಳ್ವ ಅವರು ವಾದ ಮಂಡನೆ ಮಾಡಿ

ಉಡುಪಿ ಮಾಜಿ ಶಾಸಕರ ಪತ್ನಿ ಪದ್ಮಪ್ರಿಯ ನಾಪತ್ತೆ, ಆತ್ಮಹತ್ಯೆ ಪ್ರಕರಣ | ಆರೋಪಿ ಅತುಲ್ ರಾವ್‍ ಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ನ್ಯಾಯಾಲಯ Read More »

ನ.12-13 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲಿ ಹೊರಡುವುದು, ಸಾಮೂಹಿಕ ಗೋಪೂಜೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಪತ್ತನಾಜೆಯಂದು ಶ್ರೀ ದೇವರ ಬಲಿ ಉತ್ಸವಕ್ಕೆ ವಿರಾಮ ನೀಡಲಾಗಿದ್ದು, ಇದೀಗ ದೀಪಾವಳಿ ಹಬ್ಬದಂದು ಮತ್ತೆ ಬಲಿ ಉತ್ಸವ ಆರಂಭಗೊಳ್ಳಲಿದೆ. ನ.12 ಭಾನುವಾರ ರಾತ್ರಿ 7.30 ಕ್ಕೆ ಶ್ರೀ ದೇವರ ಬಲಿ ಹೊರಡುವುದು, ದೀಪಾವಳಿ ಹಬ್ಬ, ನ.13 ರಂದು ಸಂಜೆ 5 ಕ್ಕೆ ಸಾಮೂಹಿಕ ಗೋಪೂಜೆ ನಡೆಯಲಿರುವುದು. ಗೋಪೂಜೆ ಮಾಡಿಸುವವರಿಗೆ ಅವಕಾಶವಿದ್ದು, ಪೂಜೆ ಮಾಡಿಸುವವರು ಸಂಜೆ 4.30 ಕ್ಕೆ ಗೋಶಾಲೆಯಲ್ಲಿ ಸಂಕಲ್ಪ ಮಾಡಿಸಿ ಪೂಜೆಯಲ್ಲಿ ಭಾಗವಹಿಸಬಹುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ

ನ.12-13 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲಿ ಹೊರಡುವುದು, ಸಾಮೂಹಿಕ ಗೋಪೂಜೆ Read More »

ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಪುತ್ತೂರು: ಬೆಂಗಳೂರಿನ ತಣೀಸಂದ್ರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಿಶೋರ ವರ್ಗ ವಿಭಾಗದಲ್ಲಿ ಜಿ.ಪ್ರತೀಕ್ಷಾ ಆಳ್ವ, 10ನೇ ತರಗತಿ 100ಮೀ ಫ್ರೀ ಸ್ಟೈಲ್ 200 ಮೀ. ಫ್ರೀ ಸ್ಟೈಲ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 50 ಮೀ. ಪ್ರೀ ಸ್ಟೈಲ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, 10ನೇ ತರಗತಿಯ ವೇದ್‍ವೃತ್ ಭಂಡಾರಿ  50ಮೀ ಫ್ರೀ ಸ್ಟೈಲ್

ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ Read More »

ನ.13: ರೈ ಚಾರಿಟೇಬಲ್ ಟ್ರಸ್ಟ್ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮ | 37 ಗ್ರಾಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಆಮಂತ್ರಣ: ಸುಮಾ ಅಶೋಕ್ ರೈ

ಪುತ್ತೂರು: ನ.13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್  ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯಲಿರುವ 11ನೇ ವರ್ಷ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮಕ್ಕೆ ಒಟ್ಟು 37 ಗ್ರಾಮಗಳಲ್ಲಿ 50 ಸಾವಿರಕ್ಕೂ ಮಿಕ್ಕಿ ಮಂದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟಿನ ಮುಖ್ಯಸ್ಥೆ ಸುಮಾ ಅಶೋಕ್ ರೈ ತಿಳಿಸಿದರು. ಬನ್ನೂರು, ಚಿಕ್ಕಮುಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಬಜತ್ತೂರು, ವಿಟ್ಲಮುಡ್ನೂರು, ಮಾನಿಲ, ಅಳಿಕೆ,

ನ.13: ರೈ ಚಾರಿಟೇಬಲ್ ಟ್ರಸ್ಟ್ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮ | 37 ಗ್ರಾಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಆಮಂತ್ರಣ: ಸುಮಾ ಅಶೋಕ್ ರೈ Read More »

error: Content is protected !!
Scroll to Top