ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಲಿದ್ದಾರೆ. ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಡಿಯೂರಪ್ಪ ಅವರನ್ನು ನೇಮಕಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ! Read More »

ಅಡಿಕೆ ಕೃಷಿಗೆ ರೋಗಗಳ ಕಾಟ: ಪತ್ರಿಕಾಗೋಷ್ಠಿಯಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಆಮ್ ಆದ್ಮಿ ಪಕ್ಷ

ಪುತ್ತೂರು: ಜಿಲ್ಲೆಯ ಅಡಿಕೆ ಬೆಳೆಯುವ ರೈತರನ್ನು ಕಾಡುತ್ತಿರುವ ಎಲೆ ಚುಕ್ಕಿ ರೋಗ, ಹಳದಿ ರೋಗ ನಿವಾರಣೆಗೆ ಸರಿಯಾದ ಸಂಶೋಧನಾ ಕ್ರಮ ಹಾಗೂ ಪರಿಹಾರ, ಅಡಿಕೆ ಬೆಳೆಯುವ ರೈತನಿಗೆ ಸಿಗಬೇಕಾದ ಬೆಳೆ ವಿಮೆ ಕುರಿತು ಸರ್ಕಾರ ಒಂದು ತಿಂಗಳ ಒಳಗಾಗಿ ಸಮರ್ಪಕವಾದ ಮಾಹಿತಿಯನ್ನು ನೀಡದೇ ಹೋದರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರೈತರನ್ನು ಸೇರಿಸಿಕೊಂಡು ಆಮ್ ಆದ್ಮಿ ಪಕ್ಷ ಹೋರಾಟ ನಡೆಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಶು ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಅಡಿಕೆ ಕೃಷಿಗೆ ರೋಗಗಳ ಕಾಟ: ಪತ್ರಿಕಾಗೋಷ್ಠಿಯಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಆಮ್ ಆದ್ಮಿ ಪಕ್ಷ Read More »

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!!

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಲವಾರು ಝಳಪಿಸಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ‌‌ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!! Read More »

ರಾಜ್ಯ ಸರಕಾರಕ್ಕೆ ರೈತ ಹೋರಾಟದ ಎಚ್ಚರಿಕೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ

ಪುತ್ತೂರು: ರಾಜ್ಯದಲ್ಲಿ ಎಂದೂ ಕಂಡು ಕೇಳರಿಯದ ಬರಗಾಲ ಆವರಿಸಿದ್ದು, ರಾಜ್ಯ ಸರಕಾರ ಈ ಕುರಿತು ಗಮನ ಹರಿಸದೇ ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಬರ ಪರಿಹರಿಸುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡದಿದ್ದಲ್ಲಿ ಬಿಜೆಪಿ ಪಕ್ಷ ರೈತರನ್ನು ಸೇರಿಸಿಕೊಂಡು ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು. ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದ 216 ತಾಲೂಕುಗಳಲ್ಲಿ ಬರ ಆವರಿಸಿರುವ

ರಾಜ್ಯ ಸರಕಾರಕ್ಕೆ ರೈತ ಹೋರಾಟದ ಎಚ್ಚರಿಕೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ Read More »

ಪುತ್ತಿಲ ಪರಿವಾರ ಕಚೇರಿ ಮುಂದೆ ತಲವಾರು ಝಳಪಿಸಿದ ಯುವಕ!!

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿ ಮುಂಭಾಗದಲ್ಲಿ ಯುವಕನೋರ್ವ ತಲವಾರು ಹಿಡಿದು ಬೊಬ್ಬೆ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದ ಎನ್ನಲಾಗಿದೆ. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್‌ ಶೆಟ್ಟಿ ಮತ್ತಿತರರು ಇದ್ದರು. ಮನೀಶ್

ಪುತ್ತಿಲ ಪರಿವಾರ ಕಚೇರಿ ಮುಂದೆ ತಲವಾರು ಝಳಪಿಸಿದ ಯುವಕ!! Read More »

ಭಾರತೀಯ ಸಂಸ್ಕೃತಿ ಜತೆಗೆ ಆರೋಗ್ಯ ವೃದ್ಧಿಯಲ್ಲೂ ಚಿನ್ನ ಮಹತ್ತರ ಪಾತ್ರ ವಹಿಸಿದೆ | ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ”ಕ್ಕೆ ಚಾಲನೆ ನೀಡಿ ನಿವೃತ್ತ ಸಿಡಿಪಿಒ ಶಾಂತಿ ಹೆಗಡೆ

ಪುತ್ತೂರು: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್‍ನಲ್ಲಿ ‘ಮುಳಿಯ ಚಿನ್ನೋತ್ಸವ’ ಕಾರ್ಯಕ್ರಮ ಶುಕ್ರವಾರ ಉದ್ಘಾಟನೆಗೊಂಡಿತು. ನಿವೃತ್ತ ಸಿಡಿಪಿಒ ಶಾಂತಿ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಮಹತ್ತರ ಪಾತ್ರ ವಹಿಸಿದ್ದು, ಜತೆಗೆ ಆರೋಗ್ಯ ವೃದ್ಧಿಯಲ್ಲೂ ಮಹತ್ವವನ್ನು ಪಡೆದಿದೆ. ಈ ವಿಚಾರದಲ್ಲಿ ವೈಜ್ಞಾನಿಕ ಸತ್ಯವೂ ಆಡಗಿದೆ ಎಂದ ಅವರು, ಸಂಸ್ಥೆಯಲ್ಲಿ ಚಿನ್ನಾಭರಣ, ವಜ್ರ, ಬೆಳ್ಳಿ ಆಭರಣಗಳು ಪರಿಶುದ್ಧತೆಯಿಂದ ಕೂಡಿದ್ದು, ಗ್ರಾಹಕರ ಆಯ್ಕೆಗೆ ಅನುಗುಣವಾಗಿದೆ. ಸರಳ, ಸಜ್ಜನಿಕೆ, ಸಂಪ್ರದಾಯ ಮನಸ್ಸಿನೊಂದಿಗೆ ಸಂಸ್ಥೆಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿ ಜತೆಗೆ ಆರೋಗ್ಯ ವೃದ್ಧಿಯಲ್ಲೂ ಚಿನ್ನ ಮಹತ್ತರ ಪಾತ್ರ ವಹಿಸಿದೆ | ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ”ಕ್ಕೆ ಚಾಲನೆ ನೀಡಿ ನಿವೃತ್ತ ಸಿಡಿಪಿಒ ಶಾಂತಿ ಹೆಗಡೆ Read More »

ಬಸ್‌ಗಳಲ್ಲಿ ಆಡಿಯೋ ಪ್ರಕಟನೆಗೆ ಸೂಚನೆ!

ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಬಸ್‌ಗಳಲ್ಲಿ ಆಡಿಯೋ ರೂಪದಲ್ಲಿ ಪ್ರಕಟನೆ ವ್ಯವಸ್ಥೆ ಅಳವಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿದೆ. ಬೆಂಗಳೂರಿನ ದೃಷ್ಟಿ ವಿಶೇಷ ಚೇತನ ಎನ್‌. ಶ್ರೇಯಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಈ ಸಂಬಂಧ ಖಾಸಗಿ ಬಸ್‌ ಆಪರೇಟರ್‌ಗಳಿಗೆ ನಿರ್ದೇಶನ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ

ಬಸ್‌ಗಳಲ್ಲಿ ಆಡಿಯೋ ಪ್ರಕಟನೆಗೆ ಸೂಚನೆ! Read More »

ವಸ್ತ್ರ ವಿತರಣಾ ಕಾರ್ಯಕ್ರ‌ಮ: ಟ್ರಾಫಿಕ್ ವ್ಯವಸ್ಥೆ ಬಗ್ಗೆ ಸಮಾಲೋಚನೆ

ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ. 13ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿರುವ ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದ್ದು ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಬ್ ಇನ್ಸ್ ಪೆಕ್ಟರ್ ಉದಯ ರವಿ ಅವರು ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಅವರಿಂದ ಮಾಹಿತಿ ಪಡೆದುಕೊಂಡರು. 50 ಸಾವಿರಕ್ಕೂ‌ಮಿಕ್ಕಿ‌ ಜನರು ಕಾರ್ಯಕ್ರಮದಲ್ಲಿ‌ಭಾಗವಹಿಸುವ ನಿರೀಕ್ಷೆಯಿದ್ದು, ಟ್ರಾಫಿಕ್ ಜಾಮ್ ಆಗುವ ಸಂಭವ

ವಸ್ತ್ರ ವಿತರಣಾ ಕಾರ್ಯಕ್ರ‌ಮ: ಟ್ರಾಫಿಕ್ ವ್ಯವಸ್ಥೆ ಬಗ್ಗೆ ಸಮಾಲೋಚನೆ Read More »

ಬಂಟ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯಕ್ಕೆ 21 ವಿಭಾಗದಲ್ಲಿ ಬಹುಮಾನ

ಬಿಳಿನೆಲೆ: ಬಂಟ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯರ ವಿಭಾಗದ 21 ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಕೊಣಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಒಟ್ಟು 25 ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಪೈಕಿ 21 ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ, ಮುಖ್ಯಶಿಕ್ಷಕ ಪ್ರಶಾಂತ್‍, ಶಿಕ್ಷಕ ಉಮೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಬಂಟ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯಕ್ಕೆ 21 ವಿಭಾಗದಲ್ಲಿ ಬಹುಮಾನ Read More »

ನ. 11ರಂದು ಪುಣ್ಚತ್ತಾರಿನಲ್ಲಿ ಪ್ರೊ. ವಾಲಿಬಾಲ್ ಪಂದ್ಯಾಟ | ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆ

ಪುತ್ತೂರು: ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ಪ್ರೊ. ವಾಲಿಬಾಲ್ ಪಂದ್ಯಾಟ, ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ನ. 11ರಂದು ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಕ್ಲಬ್ಬಿನ ಸಕ್ರೀಯ ಸದಸ್ಯ ರವೀಂದ್ರ ಅನಿಲ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭವನ್ನು ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ಬಿ.ಕೆ. ಮಾಧವ ಉದ್ಘಾಟಿಸಲಿದ್ದು, ಪುಣ್ಚತ್ತಾರು ಶ್ರೀಹರಿ

ನ. 11ರಂದು ಪುಣ್ಚತ್ತಾರಿನಲ್ಲಿ ಪ್ರೊ. ವಾಲಿಬಾಲ್ ಪಂದ್ಯಾಟ | ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆ Read More »

error: Content is protected !!
Scroll to Top