ಶ್ರೀರಾಮ ತಾರಕ ಮಂತ್ರದ ಮೂಲಕ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳಬೇಕು | ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ
ಪುತ್ತೂರು: ನಿತ್ಯ ಶ್ರೀರಾಮ ತಾರಕ ಮಂತ್ರ ಜಪದ ಮೂಲಕ ಪ್ರತಿಯೊಬ್ಬ ಹಿಂದೂ ತನ್ನ ಮನೆಯನ್ನೇ ರಾಮಮಂದಿರ ಮಾಡಿಕೊಳ್ಳುವ ಮೂಲಕ ಹಿಂದೂ ಸಮಾಜದ ಉದ್ಧಾರಕ್ಕೆ ಪಣತೊಡಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು. ಅವರು ಭಾನುವಾರ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶ್ರೀ ರಾಮ ತಾರಕ ಮಂತ್ರದ ಜತೆಗೆ ಧ್ಯಾನ ಮಾಡುವ ಮೂಲಕ […]










