ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು

ಕಾಸರಗೋಡು: ಚಾಲಕನೋರ್ವ ಲಾರಿಯಡಿಗೆ ಸಿಲುಕಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕದಲ್ಲಿ ನಡೆದಿದೆ. ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತಪಟ್ಟವರು. ಲಾರಿಯನ್ನು ಸ್ಟಾರ್ಟಿನಲ್ಲಿರಿಸಿ ಗೇಟ್ ತೆರೆಯಲು ತೆರಳಿದ ಸಂದರ್ಭ ಲಾರಿ ಮುಂದಕ್ಕೆ ಚಲಿಸಿದೆ. ಎದುರಿನಲ್ಲಿದ್ದ ಮಹಮ್ಮದ್ ನೌಫಲ್ ಲಾರಿಯಡಿಗೆ ಸಿಲುಕಿದ್ದು, ತಕ್ಷಣ ಅವರನ್ನು ಕುಂಬಳೆ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು Read More »

ನಿಂತಿದ್ದ ಟ್ರ್ಯಾಕ್ಟರಿಗೆ ಆ್ಯಂಬುಲೆನ್ಸ್ ಡಿಕ್ಕಿ: ತುಂಬು ಗರ್ಭಿಣಿ ಮೃತ್ಯು!

ನಿಂತಿದ್ದ ಟ್ರ್ಯಾಕ್ಟರಿಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ, ತುಂಬು ಗರ್ಭಿಣಿ ಮೃತಪಟ್ಟ ಘಟನೆ ವಿಜಯಪುರದ ತಾಳಿಕೋಟೆಯಲ್ಲಿ ನಡೆದಿದೆ. ಮೃತರನ್ನು ಭಾಗ್ಯಶ್ರೀ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಹಾದಿಯಲ್ಲಿ ಗರ್ಭಿಣಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ  ಎಂದು ದೂರಲಾಗಿದೆ. ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ರಸ್ತೆ ಬದಿ ನಿಂತಿತ್ತು. ಆ್ಯಂಬುಲೆನ್ಸ್’ನಲ್ಲಿದ್ದ ತುಂಬು ಗರ್ಭಿಣಿ ಸಹಿತ ಇಬ್ಬರು ಸ್ಟಾಫ್ ನರ್ಸ್, ಓರ್ವ ಸಹಾಯಕ ಗಾಯಗೊಂಡಿದ್ದರು. ತಾಳಿಕೋಟೆ ಸಮುದಾಯ

ನಿಂತಿದ್ದ ಟ್ರ್ಯಾಕ್ಟರಿಗೆ ಆ್ಯಂಬುಲೆನ್ಸ್ ಡಿಕ್ಕಿ: ತುಂಬು ಗರ್ಭಿಣಿ ಮೃತ್ಯು! Read More »

ಪುಟಿನ್ ಮತ್ತೆ ರಷ್ಯಾ ಅಧ್ಯಕ್ಷ!!??

2024ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ದೃಢಪಡಿಸಿದ್ದು, ಮತ್ತೊಮ್ಮೆ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿರುವ ವಿಶ್ವದ ಕೆಲವೇ ಕೆಲವು ನಾಯಕರ ಪೈಕಿ ಪುಟಿನ್ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ಉಕ್ರೇನ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಸೈನಿಕರ ಜೊತೆ ಮಾತನಾಡುತ್ತಾ, ತಾನು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭ ಝೋಗಾ ಅವರಿಗೆ ರಷ್ಯಾದ ಅತ್ಯುನ್ನತ ಮಿಲಿಟರಿ ಗೌರವವಾದ ಹೀರೋ ಆಫ್ ರಷ್ಯಾ ಗೋಲ್ಡ್ ಸ್ಟಾರ್ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ

ಪುಟಿನ್ ಮತ್ತೆ ರಷ್ಯಾ ಅಧ್ಯಕ್ಷ!!?? Read More »

ಆಸ್ಪತ್ರೆಯ ಡಸ್ಟ್ ಬಿನ್ ನಲ್ಲಿ ನವಜಾತ ಶಿಶುವಿನ ಶವ ಪತ್ತೆ!

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಸಿಯಾನ್ ಆಸ್ಪತ್ರೆ ಎಂದೇ ಜನಪ್ರಿಯವಾಗಿರುವ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯ ವಾಶ್ ರೂಂನ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶುವಿನ ಶವವೊಂದನ್ನು ಕಸ ಗುಡಿಸುವವರೊಬ್ಬರು ಪತ್ತೆ ಮಾಡಿದ್ದಾರೆ. ನಂತರ ಅದರ ಬಗ್ಗೆ ಕರ್ತವ್ಯ ನಿರತ ವೈದ್ಯರಿಗೆ ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.  ವೈದ್ಯರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಪರಿಚಿತ ಮಹಿಳೆಯ ವಿರುದ್ಧ ಭಾರತೀಯ ದಂಡ

ಆಸ್ಪತ್ರೆಯ ಡಸ್ಟ್ ಬಿನ್ ನಲ್ಲಿ ನವಜಾತ ಶಿಶುವಿನ ಶವ ಪತ್ತೆ! Read More »

ಅಕ್ಬರುದ್ದಿನ್ ಓವೈಸಿ ತೆಲಂಗಾಣದ ಹಂಗಾಮಿ ಸ್ಪೀಕರ್: ವಿರೋಧ

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿ ತೆಲಂಗಾಣದಲ್ಲಿ ಸರ್ಕಾರ ರಚನೆ ಮಾಡಿದೆ. ಇದೀಗ ಎಐಎಂಐಎಂ ಶಾಸಕ ಅಕ್ಬರುದ್ದಿನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಈ ನಿರ್ಧಾರಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ. ಅಕ್ಬರುದ್ದಿನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ ನಿರ್ಧಾರವನ್ನು ವಿರೋಧಿಸಿದ ಬಿಜೆಪಿ ಶಾಸಕರು, ಅವರಿಂದ ಪ್ರಮಾಣ ವಚನ ಸ್ವೀಕರಿಸಲೂ ನಿರಾಕರಿಸಿದ್ದಾರೆ. ಓವೈಸಿ ಅವರಿಂದ ಪಕ್ಷದ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು

ಅಕ್ಬರುದ್ದಿನ್ ಓವೈಸಿ ತೆಲಂಗಾಣದ ಹಂಗಾಮಿ ಸ್ಪೀಕರ್: ವಿರೋಧ Read More »

ಜಮೀನು ಕಾಯುತ್ತಿದ್ದ ರೈತನ ಭೀಕರ ಕೊಲೆ!! | ರುಂಡ ಸಮೇತ ನಾಪತ್ತೆಯಾಗಿರುವ ದುಷ್ಕರ್ಮಿಗಳು!

ರೈತರೊಬ್ಬರ ದೇಹದಿಂದ ರುಂಡವನ್ನು ತುಂಡರಿಸಿ, ರುಂಡ ಸಮೇತ ಆರೋಪಿಗಳು ನಾಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣಹನಂತಪ್ಪ ವಜ್ರದ್ (60) ಎಂದು ಗುರುತಿಸಲಾಗಿದೆ. ರೈತ ಮೆಣಸಿನಕಾಯಿ ಕೃಷಿ ಮಾಡಿದ್ದು, ಇದರ ಕಾವಲು ಕಾಯುತ್ತಿದ್ದಾಗ ಭೀಕರ ಘಟನೆ ನಡೆದಿದೆ. ಮೆಣಸಿನಕಾಯಿ ಕಾಯಲು, ಗುಡಿಸಲಲ್ಲಿ ಮಲಗಿದ್ದರು. ಈ ವೇಳೆ ಆಗಮಿಸಿದ ದುಷ್ಕರ್ಮಿಗಳು, ರುಂಡವನ್ನು ತುಂಡರಿಸಿ, ದೇಹವನ್ನು ಬಿಟ್ಟು ಹೋಗಿದ್ದಾರೆ. ಕೊಲೆ ಮಾಡಿ‌ದ ಬಳಿಕ ಕೊಲೆಗಾರರು ರುಂಡ

ಜಮೀನು ಕಾಯುತ್ತಿದ್ದ ರೈತನ ಭೀಕರ ಕೊಲೆ!! | ರುಂಡ ಸಮೇತ ನಾಪತ್ತೆಯಾಗಿರುವ ದುಷ್ಕರ್ಮಿಗಳು! Read More »

ಭತ್ತ ಬೇಸಾಯ ತಂದುಕೊಟ್ಟ ಲಾಭ! | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ 18 ಕ್ವಿಂಟಾಲ್ ಭತ್ತ ಕೊಯ್ಲು!!

ಪುತ್ತೂರು: ‘ಭತ್ತ ಬೆಳೆಯೋಣ ಗದ್ದೆಗಿಳಿಯೋಣ’ ಅಭಿಯಾನದ ಮೂಲಕ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಈ ಬಾರಿ 50 ಸಾವಿರ ರೂ. ಆದಾಯ ಗಳಿಸಿದ್ದು, ಈ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೃಷಿಕರ ಬದುಕಿಗೆ ಮಾದರಿಯಾಗಿದೆ. ಮೂರು ವರ್ಷಗಳ ಹಿಂದೆ ಧಾರ್ಮಿಕ ಕ್ಷೇತ್ರಗಳಲ್ಲಿ ‘ಭತ್ತ ಬೆಳೆಯೋಣ ಗದ್ದೆಗಿಳಿಯೋಣ’ ಅಭಿಯಾನವನ್ನು ಆರಂಭಗೊಳಿಸಲಾಗಿತ್ತು. ಅದರಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಗದ್ದೆಯಲ್ಲಿ ಭತ್ತವನ್ನು ಬೆಳೆದು ಬೇಸಾಯದಿಂದಲೂ ಲಾಭ ಗಳಿಸಬಹುದು ಅನ್ನೋದನ್ನು ತೋರಿಸಿಕೊಟ್ಟಿದೆ. ಅದರಲ್ಲೂ ಈ ಬಾರಿ ಉತ್ತಮ

ಭತ್ತ ಬೇಸಾಯ ತಂದುಕೊಟ್ಟ ಲಾಭ! | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ 18 ಕ್ವಿಂಟಾಲ್ ಭತ್ತ ಕೊಯ್ಲು!! Read More »

ಹೊಟೇಲ್ ಉದ್ಯಮಿ ರಾಮಣ್ಣ ರೈ ನಿಧನ

ಪುತ್ತೂರು: ಹೊಟೇಲ್ ರಾಮಣ್ಣ ಎಂದೇ ಚಿರಪರಿಚಿತರಾಗಿದ್ದ ಕುಂಬ್ರದ ಹಿರಿಯ ಹೊಟೇಲ್ ಉದ್ಯಮಿ ರಾಮಣ್ಣ ರೈ ಕುಂಬ್ರ (78) ರವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಕುಂಬ್ರದ ಸ್ವಗೃಹದಲ್ಲಿ ನಿಧನರಾದರು. ಕುಂಬ್ರದಲ್ಲಿ ಅನೇಕ ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಹೊಟೇಲ್ ಉದ್ಯಮಿ ರಾಮಣ್ಣ ರೈ ನಿಧನ Read More »

ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಈ ಕ್ರಮ 31 ಮಾರ್ಚ್ 2024ರವರೆಗೆ ಜಾರಿಯಲ್ಲಿರಲಿದೆ. ಈರುಳ್ಳಿ, ಟೊಮೇಟೊ ಬೆಲೆ ಏರಿಕೆಯಿಂದ ಥಾಲಿ ಬೆಲೆ ಏರಿಕೆಯಾಗಿದೆ ಎಂಬ ಸುದ್ದಿ ದಿನದ ಹಿಂದೆಯಷ್ಟೇ ಬಂದಿತ್ತು. ಕಳೆದ ಅಕ್ಟೋಬರ್‌ನಲ್ಲಿ ಈರುಳ್ಳಿ ಶತಮಾನದ ಗಡಿ ದಾಟಿದಾಗ ಸರ್ಕಾರ ಈರುಳ್ಳಿ ರಫ್ತಿಗೆ ಕನಿಷ್ಠ ಬೆಲೆ ನಿಗದಿ ಮಾಡಿತ್ತು. ಬೆಲೆಗಳನ್ನು ಎಷ್ಟು ನಿಗದಿಪಡಿಸಲಾಗಿದೆ ಎಂದರೆ ಆ ಬೆಲೆಗೆ ಪ್ರಪಂಚದಾದ್ಯಂತ ಭಾರತೀಯ ಈರುಳ್ಳಿಯನ್ನು ಖರೀದಿಸಲು ಯಾರು ಮುಂದೆ ಬಂದಿಲ್ಲ. ಹೀಗಾಗಿ ಇದರಿಂದಾಗಿ ಈರುಳ್ಳಿ

ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ Read More »

ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಪಡೆದ ಮಂಗಳೂರಿನ ಮುಹಮ್ಮದ್ ಆಶಿಕ್

ಸೋನಿ ಲೈವ್ ಒಟಿಟಿ ವೇದಿಕೆ ಮುಂಬಯಿಯಲ್ಲಿ ಆಯೋಜಿಸಿದ ಮಾಸ್ಟರ್ ಶೆಫ್ ಇಂಡಿಯಾ ಸ್ಪರ್ಧೆಯ ಫೈನಲ್ ನಲ್ಲಿ ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್ ಅವರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಮುಹಮ್ಮದ್ ಆಶಿಕ್ ಒಬ್ಬರಾಗಿದ್ದರು. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಈ ಸ್ಪರ್ಧೆಯನ್ನು ಗೆದ್ದ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿ ಎಂಬ ಹೆಗ್ಗಳಿಯನ್ನು ಅವರು ಪಡೆದಿದ್ದಾರೆ.

ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಪಡೆದ ಮಂಗಳೂರಿನ ಮುಹಮ್ಮದ್ ಆಶಿಕ್ Read More »

error: Content is protected !!
Scroll to Top