ಕುಕ್ಕೆ ಜಾತ್ರೆ: ಭಕ್ತರಿಗೆ ಮೂಲಮೃತ್ತಿಕೆ ವಿತರಣೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ ಭಾನುವಾರ ಮೂಲಮೃತಿಕ ಪ್ರಸಾದ ತೆಗೆದು ಭಕ್ತರಿಗೆ ವಿತರಿಸಲಾಯಿತು. ಈ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತಾಯ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಮೃತ್ತಿಕೆಯನ್ನು ತಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗ, ಮಾಜಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರುಗಳು ಸದಸ್ಯರುಗಳು ಅಲ್ಲದೆ ನೆರೆದ ಸಾವಿರಾರು ಭಕ್ತಾದಿಗಳಿಗೆ ಮೃತ್ವಿಕೆಯನ್ನು ವಿತರಣೆ ಮಾಡಿದರು.

ಕುಕ್ಕೆ ಜಾತ್ರೆ: ಭಕ್ತರಿಗೆ ಮೂಲಮೃತ್ತಿಕೆ ವಿತರಣೆ Read More »

370 ವಿಧಿ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ | ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಸಾಂವಿಧಾನಿಕ ಪೀಠ!

ನವದೆಹಲಿ: 370 ವಿಧಿ ರದ್ದುಗೊಳಿಸಿದ ಕೇಂದ್ರ ಸರಕಾರದ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇಂದ್ರದ ನಿರ್ಧಾರ ಸರಿಯಾಗಿಯೇ ಇದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಸರಿ ಇದೆ. ಹಾಗಾಗಿ 2024ರ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ವಿಳಂಬ ಮಾಡಬಾರದು. ಆದಷ್ಟು ಶೀಘ್ರದಲ್ಲಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವಂತೆ ಸುಪ್ರೀಂ ಸಾಂವಿಧಾನಿಕ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕಾಶ್ಮೀರದ ಲಡಾಖ್ ಪ್ರತ್ಯೇಕಗೊಳಿಸಿದ ನರೇಂದ್ರ ಮೋದಿ

370 ವಿಧಿ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ | ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಸಾಂವಿಧಾನಿಕ ಪೀಠ! Read More »

ಮುರುಡೇಶ್ವರದಲ್ಲಿ ರಾಜ್ಯದ ಅತಿ ಉದ್ದದ ತೇಲುವ ಸೇತುವೆ!

ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಮತ್ತು ಇತರ ಕಾರ್ಯಕ್ರಮಗಳ ಜೊತೆಗೆ ತೇಲುವ ಸೇತುವೆಯನ್ನು  ನಿರ್ಮಿಸಲಾಗಿದೆ. ನೀರಿನಲ್ಲಿ ಮುಳುಗುವ ಭಯದಿಂದ ಅನೇಕ ಪ್ರವಾಸಿಗರು ಆದಷ್ಟು ನೀರಿನಿಂದ ದೂರವೇ ಉಳಿಯುತ್ತಾರೆ. ಪ್ರವಾಸಿಗರು ಕೊಚ್ಚಿಕೊಂಡು ಹೋದ ಹಲವಾರು ನಿದರ್ಶನಗಳೂ ಇವೆ. ಅದರೆ, ಇದೆಲ್ಲದರ ಮಧ್ಯೆಯೇ ಪ್ರವಾಸಿಗರಿಗೆ ಉತ್ತಮ ಅನುಭವವನ್ನು ಒದಗಿಸಲೆಂದು ತೇಲುವ ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಪ್ರವಾಸಿಗರು ಸಮುದ್ರದಲ್ಲಿ ಹೆಜ್ಜೆ ಹಾಕಬಹುದಾಗಿದೆ. ರಾಜ್ಯದಲ್ಲಿಯೇ ಅತಿ ಉದ್ಧದ ತೂಗು ಸೇತುವೆ ಇದೀಗ ಮುರುಡೇಶ್ವರದಲ್ಲಿ ನಿರ್ಮಾಣಗೊಂಡಿದೆ. 130 ಮೀಟರ್ ಉದ್ದದ ಈ

ಮುರುಡೇಶ್ವರದಲ್ಲಿ ರಾಜ್ಯದ ಅತಿ ಉದ್ದದ ತೇಲುವ ಸೇತುವೆ! Read More »

ಕ್ರೆಡಿಟ್‌ ಕಾರ್ಡ್‌ ನೆಪದಲ್ಲಿ ಹಿರಿಯ ನಾಗರಿಕರೋರ್ವರ ಸುಲಿಗೆ!

ಕೆನರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಕೊಡಿಸುವುದಾಗಿ ಹಿರಿಯ ನಾಗರಿಕರೋರ್ವರನ್ನು ನಂಬಿಸಿ 4.77 ಲಕ್ಷ ರೂ. ಹಣ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಡಿಚಿಕ್ಕನಹಳ್ಳಿ ನಿವಾಸಿ ಸತ್ಯನಾರಾಯಣ (70) ಸೈಬರ್‌ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡವರು. ವಂಚನೆ ಸಂಬಂಧ ಇವರ ಪುತ್ರ ಸುರ್ಜಿತ್‌ ಕಾಮತ್‌ ನೀಡಿದ ದೂರಿನ ಮೇರೆಗೆ ಐಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸತ್ಯನಾರಾಯಣ ಕಾಮತ್‌ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತರು, ತಾವು

ಕ್ರೆಡಿಟ್‌ ಕಾರ್ಡ್‌ ನೆಪದಲ್ಲಿ ಹಿರಿಯ ನಾಗರಿಕರೋರ್ವರ ಸುಲಿಗೆ! Read More »

12 ಎಕರೆ ಆಸ್ತಿಗಾಗಿ ವಕೀಲ ಈರಣ್ಣ ಗೌಡ ಕಗ್ಗೊಲೆ! | 3 ನಿಮಿಷ, 30ಕ್ಕೂ ಹೆಚ್ಚು ಬಾರಿ ಅಟ್ಯಾಕ್‌!! | ಹತ್ಯೆಯ ಮಾಸ್ಟರ್ ಮೈಂಡ್ ದಂಪತಿ ಅರೆಸ್ಟ್‌!!

ಕಲಬುರಗಿಯಲ್ಲಿ ವಕೀಲ ಈರಣ್ಣ ಮರ್ಡರ್‌ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕವನ್ನೇ ನಡುಗಿಸಿದ ಭೀಭತ್ಸ ಕೃತ್ಯ. ಈ ಕೃತ್ಯದ ಮತ್ತೊಂದು ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಖತರ್ನಾಕ್ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ. ಕಲಬುರಗಿ  ಮಾತ್ರವಲ್ಲದೆ ಇಡೀ ರಾಜ್ಯದ ಜನ ಬೆಚ್ಚಿ ಬೀಳಿಸಿದ ಘಟನೆ ಇದು. ಸ್ವಲ್ಪವೂ ಕರುಣೆ, ದಯೆ ಇರದ ಮನಸ್ಥಿತಿಗಳು ವಕೀಲನನ್ನು ಮನಸೋ ಇಚ್ಛೆ ಕತ್ತರಿಸಿ ಕೊಂದು ಹಾಕಿದ್ದಾರೆ. ಡಿ. 7ರಂದು ಕಲಬುರಗಿಯಲ್ಲಿ ನಡೆದಿದ್ದ ವಕೀಲ ಈರಣ್ಣಗೌಡನ  ಹತ್ಯೆಗೆ ಜನ ಆತಂಕಕ್ಕೀಡಾಗಿದ್ದರು. ಏಕೆಂದರೆ

12 ಎಕರೆ ಆಸ್ತಿಗಾಗಿ ವಕೀಲ ಈರಣ್ಣ ಗೌಡ ಕಗ್ಗೊಲೆ! | 3 ನಿಮಿಷ, 30ಕ್ಕೂ ಹೆಚ್ಚು ಬಾರಿ ಅಟ್ಯಾಕ್‌!! | ಹತ್ಯೆಯ ಮಾಸ್ಟರ್ ಮೈಂಡ್ ದಂಪತಿ ಅರೆಸ್ಟ್‌!! Read More »

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ!

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಮಂದಿಯನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿನ ಸೈಬರ್‌ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ಬಂಧಿತರು ಜಾರ್ಖಂಡಿನ ರಾಜಧಾನಿ ರಾಂಚಿಯಿಂದ 105 ಕಿ.ಮೀ ದೂರದಲ್ಲಿರುವ ಕೊರ್ರಾ ಪ್ರದೇಶದಲ್ಲಿ ಸೆರೆಯಾಗಿದ್ದಾರೆ. ಈ ಗುಂಪು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಗೆ ₹ 1.63 ಲಕ್ಷ ವಂಚಿಸಿತ್ತು. ಆದರೆ, ಅದಕ್ಕಾಗಿ ಬಳಸಿದ್ದ ಮೊಬೈಲ್‌ ಸಂಖ್ಯೆಯು ಜಾರ್ಖಂಡ್‌ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿತ್ತು. ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಬಂಧಿತರಿಂದ ಒಂದು ಕಾರು, ಎರಡು ದ್ವಿಚಕ್ರ ವಾಹನ, 10 ಮೊಬೈಲ್‌

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ! Read More »

ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ!

ಹೆತ್ತೂರು: ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ಅರ್ಜನನ ಕಾಲಿಗೆ ಕೂಳೆ ಚುಚ್ಚಿ ಗಾಯ ಆಗಿತ್ತು. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಿವಳಿಕೆ ತಜ್ಞ ಡಾ. ರಮೇಶ್‌ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯೂ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್‍ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ್‍ರೆಯಿಂದ ಆನೆ ಸಾಯುವುದಿಲ್ಲ. ಕಾಡಾನೆ ಹೆದರಿಸಲು ಮಾತ್ರ

ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ! Read More »

ಆರ್ಟಿಕಲ್ 370 ರದ್ದು: ಸುಪ್ರೀಂ ಮಹತ್ವದ ತೀರ್ಪಿಗೆ ಕ್ಷಣಗಣನೆ! | ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ

ಶ್ರೀನಗರ: ಆರ್ಟಿಕಲ್ 370 ರದ್ದಿನ ವಿರುದ್ಧ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆಯ ತೀರ್ಪು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. 2019ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು. ಹಲವು ಸುತ್ತಿನ ವಾದ-ವಿವಾದಗಳ ನಂತರ ಇಂದು ಸೋಮವಾರ ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ.  ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಈ ಹಿನ್ನೆಲೆಯಲ್ಲಿ

ಆರ್ಟಿಕಲ್ 370 ರದ್ದು: ಸುಪ್ರೀಂ ಮಹತ್ವದ ತೀರ್ಪಿಗೆ ಕ್ಷಣಗಣನೆ! | ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ Read More »

ಸಹಕಾರ ರಂಗಕ್ಕೂ ಪುತ್ತಿಲ ಪರಿವಾರ ಎಂಟ್ರಿ | ಸಹಕಾರ ಸಂಘದ ಚುನಾವಣೆಯಲ್ಲಿ 4 ಸ್ಥಾನ

ಪುತ್ತೂರು: ಪುತ್ತಿಲ ಪರಿವಾರ ಇದೀಗ ಸಹಕಾರ ರಂಗಕ್ಕೂ ಕಾಲಿಟ್ಟಿದ್ದು, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿ ಸಹಕಾರ ರಂಗಕ್ಕೆ ಪ್ರವೇಶ ಮಾಡಿದ್ದರೂ, ಪುತ್ತಿಲ ಪರಿವಾರ ಯಶ ಕಂಡಿದೆ. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿ. 10ರಂದು ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಮೂಲಕ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ವಿಶ್ವನಾಥ ಬಲ್ಯಾಯ, ನವೀನ್ ಡಿ. ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ

ಸಹಕಾರ ರಂಗಕ್ಕೂ ಪುತ್ತಿಲ ಪರಿವಾರ ಎಂಟ್ರಿ | ಸಹಕಾರ ಸಂಘದ ಚುನಾವಣೆಯಲ್ಲಿ 4 ಸ್ಥಾನ Read More »

ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ | ಬಿಜೆಪಿ ಬೆಂಬಲಿತರಿಗೆ ಭರ್ಜರಿ ಗೆಲುವು

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ 12 ಸ್ಥಾನಗಳಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಒಟ್ಟು 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದಾಗ 9 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು 3 ಮಂದಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು

ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ | ಬಿಜೆಪಿ ಬೆಂಬಲಿತರಿಗೆ ಭರ್ಜರಿ ಗೆಲುವು Read More »

error: Content is protected !!
Scroll to Top