ಮೋಹನ್ ಯಾದವ್‌ ಮಧ್ಯಪ್ರದೇಶ ಸಿಎಂ!

ಮಧ್ಯಪ್ರದೇಶ: ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ಸಿಎಂ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿದಿದೆ. ಸಿಎಂ ರೇಸ್‌ನಲ್ಲಿದ್ದ ಎಲ್ಲರನ್ನೂ ಹಿಂದಿಕ್ಕಿ ಮೋಹನ್ ಯಾದವ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬಿಜೆಪಿ ಕೇಂದ್ರ ನಾಯಕರ ನೇತೃತ್ವದಲ್ಲಿ ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಭಾಗವಹಿಸಿದ್ದರು. ಸಭೆಯಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ರೇಸ್‌ನಲ್ಲಿ […]

ಮೋಹನ್ ಯಾದವ್‌ ಮಧ್ಯಪ್ರದೇಶ ಸಿಎಂ! Read More »

ಇಬ್ಭಾಗವಾದ ಜೆ.ಡಿ.ಎಸ್.ಗೆ ಸಿ.ಕೆ. ನಾಣು ಅಧ್ಯಕ್ಷ!

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ  ಅವರಿಗೆ ಅಸಮಾಧಾನಿತ ಹಾಗೂ ಉಚ್ಛಾಟಿತ ನಾಯಕರು ಸೆಡ್ಡು ಹೊಡೆದಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಉಚ್ಛಾಟಿತ ನಾಯಕ ಸಿ.ಕೆ. ನಾಣು ಅವರನ್ನು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನ ಕೆ.ಜಿ. ಹಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿ.ಕೆ. ನಾಣು ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿ.ಎಂ ಇಬ್ರಾಹಿಂ ಮಾಹಿತಿ ನೀಡಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಜೆಡಿಎಸ್ ನೂತನ

ಇಬ್ಭಾಗವಾದ ಜೆ.ಡಿ.ಎಸ್.ಗೆ ಸಿ.ಕೆ. ನಾಣು ಅಧ್ಯಕ್ಷ! Read More »

ಆಶೀರ್ವಾದದ ರೂಪದಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ..

ಪುತ್ತೂರು: ಹೊಸ ಮನೆ ನಿರ್ಮಿಸಬೆಕು ಎನ್ನುವುದು ಎಲ್ಲರ ಕನಸು. ಆ ಕನಸು ನಿಮಗೆ ಅದೃಷ್ಟವಾಗಿ ಒಲಿದು ಬಂದರೆ ಹೇಗಿರಬಹುದು. ಹೌದು, ಇಂತಹದೊಂದು ಅವಕಾಶ ನಿಮ್ಮ ಮುಂದಿದೆ. ಆಶೀರ್ವಾದ ಎಂಟರ್ಪ್ರೈಸಸ್ ಇಂತಹ ಹೊಸ ಅವಕಾಶ ಒಂದನ್ನು ನಿಮ್ಮ ಮುಂದಿಟ್ಟಿದೆ. ಅದು ಮಾತ್ರ ಅಲ್ಲದೆ ಪ್ರತೀ ತಿಂಗಳು ಕಾರು, ಬೈಕ್, ಚಿನ್ನ, ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಂ ಮೂಲಕ ನೀವು ಪಡೆದುಕೊಳ್ಳಬಹುದು. ಪ್ರತೀ ತಿಂಗಳು 50 ಆಕರ್ಷಕ ಬಹುಮಾನವನ್ನು ಸಹ ನೀವು ಪಡೆದುಕೊಳ್ಳಬಹುದು.

ಆಶೀರ್ವಾದದ ರೂಪದಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ.. Read More »

ಬ್ರಹ್ಮಚಾರಿಗಳ ಸಂಘಕ್ಕೆ ರಾಷ್ಟ್ರಾಧ್ಯಕ್ಷರಾಗ್ತಾರಾ ರಾಹುಲ್ ಗಾಂಧಿ!?

ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣಕ್ಕೆ ಬೇಸತ್ತು ಜನವರಿಯಲ್ಲಿ ಚುಂಚನಗಿರಿಗೆ ಪಾದಯಾತ್ರೆ ನಡೆಸಿ ಅರಿವು ಮೂಡಿಸಲು ಬ್ರಹ್ಮಚಾರಿ ಸಂಘ ಪ್ಲಾನ್ ಮಾಡುತ್ತಿದೆ. ಚುಂಚನಗಿರಿ ಪಾದಯಾತ್ರೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ರಾಹುಲ್ ಗಾಂಧಿಗೆ ಆಹ್ವಾನ! ಈ ಪಾದಯಾತ್ರೆಗೆ ಇನ್ನೂ ಮದುವೆಯಾಗದ ಸಂಸದ ರಾಹುಲ್ ಗಾಂಧಿಯನ್ನು ಕರೆಸಲು ಚಿಂತನೆ ನಡೆಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ಪ್ರಮುಖರಾದ ಮಲ್ಲೇಶ್ ತಿಳಿಸಿದ್ದಾರೆ. ಅಲ್ಲದೇ, ವೀರೇಶ್ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬ್ರಹ್ಮಚಾರಿಗಳಿಗೆ ಆಹ್ವಾನವನ್ನೂ ನೀಡಿದ್ದಾರೆ.

ಬ್ರಹ್ಮಚಾರಿಗಳ ಸಂಘಕ್ಕೆ ರಾಷ್ಟ್ರಾಧ್ಯಕ್ಷರಾಗ್ತಾರಾ ರಾಹುಲ್ ಗಾಂಧಿ!? Read More »

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷ ದೀಪೋತ್ಸವ | ಬೆಳಗಲಿದೆ ಭಕ್ತರಿಂದ ಲಕ್ಷಾಂತರ ದೀಪ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಡಿ.12 ಮಂಗಳವಾರ ಲಕ್ಷದೀಪೋತ್ಸವ ನಡೆಯಲಿದ್ದು, ಈಗಾಗಲೇ ಒಂದು ಸುತ್ತಿನ ಸ್ವಚ್ಛತಾ ಕಾರ್ಯ ನಡೆದಿದೆ. ಸ್ವಚ್ಛತೆಯ ಹಿನ್ನಲೆಯಲ್ಲಿ ಭಾನುವಾರ ಸಂಜೆಯಿಂದಲೇ ರಥಬೀದಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ ಸೇವೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಕ್ತಾದಿಗಳಿಂದ ಭಜನಾ ಸೇವೆ, ಸಂಜೆ 6.30 ರಿಂದ ದೀಪ ಪ್ರಜ್ವಲನ, ರಂಗೋಲಿ, 7.30 ರ ಪೂಜೆ ಬಳಿಕ ಶ್ರೀ ದೇವರ

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷ ದೀಪೋತ್ಸವ | ಬೆಳಗಲಿದೆ ಭಕ್ತರಿಂದ ಲಕ್ಷಾಂತರ ದೀಪ Read More »

ವಿದ್ಯಾರ್ಥಿಯ ಅತಿರೇಕ ವರ್ತನೆ : ಮಕ್ಕಳ ಪೋಷಕರಿಂದ ವಿದ್ಯಾರ್ಥಿಯ ವಿರುದ್ಧ ಪ್ರತಿಭಟನೆ

ಪುತ್ತೂರು: ವಿದ್ಯಾರ್ಥಿಯೊಬ್ಬನ ಕಿರುಕುಳ ಸಹಿಸದೆ ವಿದ್ಯಾರ್ಥಿಗಳ ಪೋಷಕರು ಶಾಲೆಯ 6ನೇ ತರಗತಿ ವಿದ್ಯಾರ್ಥಿಯೊಬ್ಬನ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಮೇನಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ. ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ವಿರುದ್ದ ಮಕ್ಕಳ ಪೋಷಕರು ಒಂದಾಗಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಕ್ಕಳಿಗೆ ಹೊಡೆಯುವ ಅಧ್ಯಾಪಕರ ವಿರುದ್ಧ ಪೋಷಕರು ಪ್ರತಿಭಟನೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇದು ಹಾಗಲ್ಲ ಬದಲಾಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ತುಂಟಾಟ, ಕೀಟಲೆ, ಪೋಕರಿತನದಿಂದ ಶಾಲೆಯಲ್ಲಿ

ವಿದ್ಯಾರ್ಥಿಯ ಅತಿರೇಕ ವರ್ತನೆ : ಮಕ್ಕಳ ಪೋಷಕರಿಂದ ವಿದ್ಯಾರ್ಥಿಯ ವಿರುದ್ಧ ಪ್ರತಿಭಟನೆ Read More »

ನುಳಿಯಾಲು ಸೀತಾರಾಮ ರೈ ತೋಟದಮೂಲೆ ನಿಧನ

ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾಮದ ನುಳಿಯಾಲು ತರವಾಡು ಕುಟುಂಬದ ಹಿರಿಯರಾದ ನುಳಿಯಾಲು ಸೀತಾರಾಮ ರೈ ತೋಟದ ಮೂಲೆ (80) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ, ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರಾಗಿ, ವಿನಾಯಕ ನಗರ ಶ್ರೀ ಸಿದ್ಧಿವಿನಾಯಕ ಮಂದಿರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.

ನುಳಿಯಾಲು ಸೀತಾರಾಮ ರೈ ತೋಟದಮೂಲೆ ನಿಧನ Read More »

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ!

ಟಿಬೆಟ್‌ ಮೇಲಿನ ತನ್ನ ಆಕ್ರಮಣವನ್ನು ಮತ್ತಷ್ಟು ಮುಂದುವರೆಸಿರುವ ಚೀನಾ ಸರ್ಕಾರ, ಇದೀಗ ಟಿಬೆಟ್ ಹೆಸರನ್ನೇ ಬದಲಾಯಿಸಿದೆ. ಬಹಳ ವರ್ಷಗಳಿಂದಲೂ ಟಿಬೆಟ್‌ ಮೇಲೆ ನಿಯಂತ್ರಣ ಸಾಧಿಸಿದ್ದರೂ, ಟಿಬೆಟ್‌ ಕುರಿತ ಮಾಹಿತಿ ನೀಡುವಾಗ ಟಿಬೆಟ್‌ ಎಂದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಬೆಟ್‌ ಕುರಿತ ಶ್ವೇತಪತ್ರದಲ್ಲಿ ಟಿಬೆಟ್‌ನ ಹೆಸರಿನ ಇಂಗ್ಲಿಷ್‌ ಭಾವಾನುವಾದ `ಕ್ಸಿ ಜಾಂಗ್‌’ ಎಂದು ಪ್ರಸ್ತಾಪಿಸಲಾಗಿದೆ. ಈ ಮೂಲಕ ಟಿಬೆಟ್‌ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಚೀನಾ ಈ ಹೆಸರನ್ನು ಶ್ವೇತಪತ್ರಗಳಲ್ಲಿ ಬಳಸಿರುವ ಹಿನ್ನೆಲೆಯಲ್ಲಿ

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ! Read More »

ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ!

ಬೆಳಗಾವಿ: ಒಂದೆಡೆ ರಾಜ್ಯದ ಸಮಸ್ಯೆಗಳ ಚರ್ಚೆಗಾಗಿ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರೆ, ಅದೇ ಅಧಿವೇಶನ ನಡೆಯುತ್ತಿರುವ ಸೌಧದ ಹೊರಗಡೆ ರಾಜ್ಯವೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವತಿ ಸಂಬಂಧಿಕರು, ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆಗೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮ ಸಾಕ್ಷಿಯಾಗಿದೆ. ವಂಟಮೂರಿ ಗ್ರಾಮದ ನಿವಾಸಿ ದುಂಡಪ್ಪ ಅಶೋಕ ನಾಯಕ್ ಟ್ರಕ್‌ ಡೈವರ್‌ ಆಗಿದ್ದಾನೆ. ಈತನ ತಾಯಿ ಕಮಲವ್ವ ಅವರ  ಮೇಲೆ

ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ! Read More »

ಡಿ.16-19 : ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ | ನೆರವೇರಿತು ಗೊನೆಮುಹೂರ್ತ

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.16 ರಿಂದ 19 ರ ತನಕ ನಡೆಯಲಿರುವ ವರ್ಷಾವಧಿ ಷಷ್ಠಿ ಮಹೋತ್ಸವದ ಅಂಗವಾಗಿ ಗೊನೆ ಮುಹೂರ್ತ ಸೋಮವಾರ ನಡೆಯಿತು. ಅರ್ಚಕ ಯೋಗೀಶ್ ಭಟ್‍ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ನಾಗೇಶ್ ತಂತ್ರಿಗಳ ತೋಟದಲ್ಲಿ ಹಿರಿಯರಾದ ಸದಾಶಿವ ಮೂಡಂಬಡಿತ್ತಾಯ ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಉಪತಹಶೀಲ್ದಾರ್ ಸುಲೋಚನಾ ಪಿ.ಕೆ., ಉತ್ಸವ ಸಮಿತಿ ಅಧ್ಯಕ್ಷ ತಂತ್ರಿ ಕೆ.ಸುಬ್ರಹ್ಮಣ್ಯ ಬಳ್ಳಕ್ಕುರಾಯ,

ಡಿ.16-19 : ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ | ನೆರವೇರಿತು ಗೊನೆಮುಹೂರ್ತ Read More »

error: Content is protected !!
Scroll to Top