ವಿಟ್ಲ: 94 ಸಿ, 94 ಸಿಸಿ ಹಕ್ಕುಪತ್ರ ವಿತರಿಸಿದ ಶಾಸಕ ಸಂಜೀವ ಮಠಂದೂರು | 1300 ಜನರಿಗೆ ಸಾಗುವಳಿ ಚೀಟಿ, ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ

ವಿಟ್ಲ: ಬಂಟ್ವಾಳ ಹೋಬಳಿಯ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಣೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಗುರುವಾರ ಇಲ್ಲಿನ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆಯಿತು. ಹಕ್ಕುಪತ್ರ ವಿತರಿಸಿ, ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಕೋವಿಡ್ ಸಮಸ್ಯೆಯ ನಡುವೆಯೂ 1300 ಜನರಿಗೆ ಸಾಗುವಳಿ ಚೀಟಿ ಕೊಡುವ ಕೆಲಸ ಮಾಡಲಾಗಿದೆ. ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ನೀಡಲಾಗಿದೆ. ಈಗಾಗಲೇ ಸಾಧ್ಯವಾದಷ್ಟು ಜನರಿಗೆ ಪ್ರಾಮಾಣಿಕವಾಗಿ ಹಕ್ಕುಪತ್ರ ನೀಡುತ್ತಿದ್ದೇವೆ. ಹಕ್ಕುಪತ್ರ ಸಿಗದವರಿಗೆ ಚುನಾವಣೆ […]

ವಿಟ್ಲ: 94 ಸಿ, 94 ಸಿಸಿ ಹಕ್ಕುಪತ್ರ ವಿತರಿಸಿದ ಶಾಸಕ ಸಂಜೀವ ಮಠಂದೂರು | 1300 ಜನರಿಗೆ ಸಾಗುವಳಿ ಚೀಟಿ, ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ Read More »

ಮೋದಿ ಉಪನಾಮ ಟೀಕೆಗೆ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು

ದೆಹಲಿ : ಮೋದಿ ಹೆಸರು ಇರುವವರೆಲ್ಲ ವಂಚಕರು ಎಂದು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ದೋಷಿ ಎಂದು ಗುಜರಾತ್‌ನ ನ್ಯಾಯಾಲಯ ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.ರಾಹುಲ್ ಗಾಂಧಿ ಮಾಡಿರುವ ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಗುಜರಾತಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸೂರತ್ ನ್ಯಾಯಾಲಯ ಇಂದು ಈ ಪ್ರಕರಣದ ತೀರ್ಪು ನೀಡಿದೆ. ಎಲ್ಲ ಕಳ್ಳರ ಉಪನಾಮ ಮೋದಿ ಎಂದಿರುವುದು ಹೇಗೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಮತ್ತು, ಮಾಜಿ

ಮೋದಿ ಉಪನಾಮ ಟೀಕೆಗೆ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು Read More »

ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ

ಬೆಂಗಳೂರು: ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ನ್ನು ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್

ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ Read More »

ಮಾರ್ಚ್ 26ರಂದು ಪುತ್ತೂರಿನಲ್ಲಿ ಯುವ ಜಾಥಾ | ಬಿಜೆಪಿ ಯುವಮೋರ್ಚಾದಿಂದ ಪೂರ್ವಭಾವಿ ಸಭೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಮಾ. 26ರಂದು ಪುತ್ತೂರಿನಲ್ಲಿ ನಡೆಯಲಿರುವ ಯುವ ಜಾಥಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಸಹಜ್ ರೈ ಬಳೆಜ್ಜ ಪ್ರಾಸ್ತಾವಿಕವಾಗಿ ಮಾತನಾಡಿ, ಮಾರ್ಚ್ 26ರಂದು ಮಧ್ಯಾಹ್ನ 3 ಗಂಟೆಗೆ ಜಾಥಾ ನಡೆಯಲಿದ್ದು, ಜಾಥಾವು ಎರಡು ಭಾಗಳಿಂದ ಆಗಮಿಸಲಿದೆ. ವಿಟ್ಲದಿಂದ ಹಾಗೂ ಕುಂಬ್ರದಿಂದ ಜಾಥಾ ಆಗಮಿಸಿ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಸೇರಲಿದೆ. ಕಾರ್ಯಕ್ರಮದ ಯಶಸ್ಸಿಗೆ

ಮಾರ್ಚ್ 26ರಂದು ಪುತ್ತೂರಿನಲ್ಲಿ ಯುವ ಜಾಥಾ | ಬಿಜೆಪಿ ಯುವಮೋರ್ಚಾದಿಂದ ಪೂರ್ವಭಾವಿ ಸಭೆ Read More »

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ (72 ವರ್ಷ) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.ಬಿಎ, ಬಿ.ಎಲ್ ಪದವೀಧರರಾದ ಅಂಜನ ಮೂರ್ತಿ 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. 1989-1994 ಮತ್ತು 1999, ಫೆ.23 2004 ರಿಂದ 2007 ಠಂಪಿಂಗ್ ಮೂರು ಬಾರಿ ಆಯ್ಕೆ ಸಮೀಪದ ಪ್ರತಿಸ್ಪರ್ಧಿಗಿಂತ 37000 ಮತಗಳ ಬಹುಮತ ಸಾಧಿಸಿದ್ದರು.

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ Read More »

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ

ಸ್ವಾಮೀಜಿ ಮೂಲತಃ ಹೆಬ್ರಿ ಸಮೀಪದ ವರಂಗದವರು ಹಾಸನ: ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ ಆಗಿದ್ದಾರೆ. 1970, ಏಪ್ರಿಲ್‌ 19ರಂದು ಪಟ್ಟಾಭೀಷಿಕ್ತರಾದ ಸ್ವಾಮೀಜಿ ಸುಮಾರು 50 ವರ್ಷಗಳಿಂದ ಮಠವನ್ನು ಮುನ್ನಡೆಸಿದ್ದಾರೆ. ನಾಲ್ಕು ಮಹಾ ಮಸ್ತಕಾಭಿಷೇಕ ಪೂರೈಸಿದ ಕೀರ್ತಿ ಸ್ವಾಮೀಜಿಗಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಸ್ವಾಮೀಜಿ ಕೊಡುಗೆ ಅಗಣಿತ. ಸಮಾಜಮುಖಿ ಕಾರ್ಯಗಳಿಂದ ಶ್ರವಣಬೆಳಗೊಳ ಸುತ್ತಮುತ್ತಲಿನ ಎಲ್ಲ ಧರ್ಮದವರ ಬದುಕು ಸುಧಾರಿಸಲು ಬಹಳಷ್ಟು ಕೆಲಸ ಮಾಡಿದ್ದ ಸ್ವಾಮೀಜಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು.

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ Read More »

ನಾಳೆ (ಮಾ.24) : ಹಿಂ.ಜಾ.ವೇ. ವತಿಯಿಂದ  ಆ‍ಶ್ಲೇಷ ಬಲಿ, ಅರ್ಧ ಏಕಹಾ ಭಜನೆ, ಜನಜಾಗೃತಿ ಸಭೆ

ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ ಆಶ್ಲೇಷ ಬಲಿ, ಧಾರ್ಮಿಕ ಸಭೆ ಹಾಗೂ ಅರ್ಧ ಏಕಾಹ ಭಜನೆ ಮಾ.24 ಶುಕ್ರವಾರ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಸ್ಥಳದಲ್ಲಿ ನಡೆಯಲಿದೆ. ಬೆಳಿಗ್ಗೆ 6 ರಿಂದ ಗಣಪತಿ ಹೋಮ, 7 ರಿಂದ ಅರ್ಧಏಕಹಾ ಭಜನೆ, ಸಂಜೆ 6 ರಿಂದ ಆಶ್ಲೇಷ ಬಲಿ, 7 ಕ್ಕೆ ಜನಜಾಗೃತಿ ಸಭೆ, 8 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಹಿಂದೂ ಸಮಾಜದ ದೇವಸ್ಥಾನ, ದೈವಸ್ಥಾನ,

ನಾಳೆ (ಮಾ.24) : ಹಿಂ.ಜಾ.ವೇ. ವತಿಯಿಂದ  ಆ‍ಶ್ಲೇಷ ಬಲಿ, ಅರ್ಧ ಏಕಹಾ ಭಜನೆ, ಜನಜಾಗೃತಿ ಸಭೆ Read More »

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಮಂಗಳೂರು : ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಆಗಮಿಸಲಿದೆ. ರೈಲು ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮೂಲಕ ಕರ್ನಾಟಕದ ಕರಾವಳಿಗೆ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು Read More »

ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ |ಶಾಸಕ ಮಠಂದೂರು ಅವರಿಂದ ಉದ್ಘಾಟನೆ

ಪುತ್ತೂರು: ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಸಡಕ್ ಯೋಜನೆಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಅಭಿವೃದ್ಧಿ ಕಾರ್ಯದಿಂದ ಊರಿನ ಚಿತ್ರಣ ಬದಲಾಗಿದೆ : ಮೀನಾಕ್ಷಿ ಶಾಂತಿಗೋಡು ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ನನ್ನ ಜಿಲ್ಲಾ ಪಂಚಾಯಿತಿ ಅವಧಿ ಆಗಿರಬಹುದು, ಶಾಸಕರ ಐದು ವರ್ಷದ ಅವಧಿ ಆಗಿರಬಹುದು. ಹಲವು ಕೋಟಿ ಅನುದಾನ ಶಾಂತಿಗೋಡಿಗೆ

ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ |ಶಾಸಕ ಮಠಂದೂರು ಅವರಿಂದ ಉದ್ಘಾಟನೆ Read More »

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು

ಮಾಸ್ಕೊ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳನ್ನು ಬರೆದು ಹಾಡಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾದ ಜನಪ್ರಿಯ ಪಾಪ್ ತಾರೆ ಡಿಮಾ ನೋವಾ (35) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಡಿಮಾ ನೋವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕ್ರೀಮ್ ಸೋಡಾ ಮ್ಯೂಸಿಕ್‌ ಗ್ರೂಪ್‌ ಸ್ಥಾಪಿಸಿದ್ದ ಡಿಮಾ ನೋವಾ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು.

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು Read More »

error: Content is protected !!
Scroll to Top