ಪಾದಚಾರಿ ಲಾರಿ ಚಾಲಕರಿಬ್ಬರಿಗೆ ಕಾರು ಡಿಕ್ಕಿ : ಗಂಭೀರ ಗಾಯ

ನೆಲ್ಯಾಡಿ: ಚಹಾ ಕುಡಿದು ಲಾರಿಯತ್ತ ಬರುತ್ತಿದ್ದ ಇಬ್ಬರು ಲಾರಿ ಚಾಲಕರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ನಡುವೆ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ನಡೆದಿದೆ. ಸಕಲೇಶಪುರ ಮೂಲದ ಲಾರಿ ಚಾಲಕರಾದ ವಿನಯ ಕುಮಾರ್ ಹಾಗೂ ಮಂಜ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲ್ಪೆಯಲ್ಲಿ ಲಾರಿ ನಿಲ್ಲಿಸಿ ಪಕ್ಕದ ಕ್ಯಾಂಟಿನ್ ವೊಂದರಲ್ಲಿ ಚಹಾ ಕುಡಿದು ಲಾರಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ […]

ಪಾದಚಾರಿ ಲಾರಿ ಚಾಲಕರಿಬ್ಬರಿಗೆ ಕಾರು ಡಿಕ್ಕಿ : ಗಂಭೀರ ಗಾಯ Read More »

ಕೇಪುಳು-ಸಿದ್ಯಾಳ-ಶಾಂತಿನಗರ ರಸ್ತೆಗೆ ಶಿಲಾನ್ಯಾಸ, ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ | ಶಿಲಾನ್ಯಾಸ ನೆರವೇರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕೇಪುಳು-ಸಿದ್ಯಾಳ-ಶಾಂತಿನಗರ ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಹಾಗೂ 6 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ಸೋಮವಾರ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ, ನಗರಸಭೆಯಲ್ಲಿ ಅಭಿವೃದ್ಧಿ ಶಾಖೆಯನ್ನು ನಾವು ಹಿಂದೆ ಐದು ವರ್ಷದಲ್ಲಿ ಕಂಡಿದ್ದೇವೆ. ಇಡೀ ರಾಜ್ಯದಲ್ಲಿ ಸ್ವಚ್ಛತೆಯಲ್ಲಿ 11 ನೇ ಸ್ಥಾನದಲ್ಲಿದ್ದ ಪುತ್ತೂರನ್ನು 3ನೇ ಸ್ಥಾನ ತಂದು ಕೊಡುವಲ್ಲಿ ನಮ್ಮ ನಗರಸಭೆ ಪೌರ ಕಾರ್ಮಿಕರು ಕೆಲಸ ಮಾಡಿದ್ದಾರೆ. ನಗರಸಭೆಯಲ್ಲಿ ಅಭಿವೃದ್ಧಿ ಜತೆಗೆ

ಕೇಪುಳು-ಸಿದ್ಯಾಳ-ಶಾಂತಿನಗರ ರಸ್ತೆಗೆ ಶಿಲಾನ್ಯಾಸ, ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ | ಶಿಲಾನ್ಯಾಸ ನೆರವೇರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ನ ಕಾರ್ಯಕಾರಿಣಿ ಸಭೆ | ಪ್ರತೀ ತಾಲೂಕಿನಲ್ಲಿ ಜಿಲ್ಲಾ ಸಮಿತಿಯ ಸಭೆ ನಡೆಸಲು ನಿರ್ಧಾರ

ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಮಿತಿ ಸಭೆ ಪುತ್ತೂರಿನ ದರ್ಬೆಯಲ್ಲಿರುವ ಶ್ರೀರಾಮ ಸೌಧದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಆವರಣದಲ್ಲಿ ನಡೆಯಿತು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ.ಶ್ರೀನಾಥ್‍ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತೀ ತಾಲೂಕುಗಳಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಗಳನ್ನು ಸರದಿಯಂತೆ ನಡೆಸಲು ನಿರ್ಧರಿಸಲಾಯಿತು. . ಕಳೆದ ತಿಂಗಳು ಉಜಿರೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಗೌರವ ಕಾರ್ಯದರ್ಶಿ ರಾಜೇಶ್ವರಿ ಸಭೆಗೆ ಓದಿ ಹೇಳಿದರು. ಗೌರವ ಕೋಶಾಧ್ಯಕ್ಷ ಐತಪ್ಪ ನಾಯ್ಕ್, ರಾಜ್ಯ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ನ ಕಾರ್ಯಕಾರಿಣಿ ಸಭೆ | ಪ್ರತೀ ತಾಲೂಕಿನಲ್ಲಿ ಜಿಲ್ಲಾ ಸಮಿತಿಯ ಸಭೆ ನಡೆಸಲು ನಿರ್ಧಾರ Read More »

ಜು 13 : ವಿಟ್ಲದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖೆಯ ಪರಮಪೂಜ್ಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ

ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪೈರ್ ಮಹಲ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2002ರಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾ ಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಸಹಕಾರ ಸಂಘವು ಪುತ್ತೂರು ಎ.ಪಿ.ಎಂ.ಸಿ ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಪುತ್ತೂರು ಎಸ್.ಎಂ.ಟಿ ಶಾಖೆ, ಕಾಣಿಯೂರು ಮತ್ತು ಬೆಳ್ಳಾರೆ ಶಾಖೆಗಳಲ್ಲಿ

ಜು 13 : ವಿಟ್ಲದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖೆಯ ಪರಮಪೂಜ್ಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ Read More »

ಶರತ್ ಮಡಿವಾಳ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ಕ್ಯಾ.ಬ್ರಿಜೇಶ್ ಚೌಟ

ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‍.ಎಸ್‍.ಎಸ್‍ ಸ್ವಯಂ ಸೇವಕ ಶರತ್ ಮಡಿವಾಳ ಸ್ಮಾರಕಕ್ಕೆ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು. ತಾಯಿ ಭಾರತೀಯ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟು ವೀರ ಮರಣಹೊಂದಿದ ಸ್ವಯಂಸೇವಕ ಶರತ್ ಮಡಿವಾಳ ಅವರ ಬಲಿದಾನ ದಿನದ ಸ್ಮರಣಾರ್ಥವಾಗಿ ಸಜಿಪ ಕಂದೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶರತ್ ಮಡಿವಾಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಶರತ್ ಮಡಿವಾಳ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ಕ್ಯಾ.ಬ್ರಿಜೇಶ್ ಚೌಟ Read More »

ಆಟೋಟ ಸ್ಪರ್ಧೆಗಳು ಕೇವಲ ಬಹುಮಾನಕ್ಕೆ ಸೀಮಿತವಾಗಿರಬಾರದು | ಸವಣೂರು ಯುವಕ ಮಂಡಲದಿಂದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಕೆ.ಸೀತಾರಾಮ ರೈ ಸವಣೂರು

ಸವಣೂರು: ಸವಣೂರು ಯುವಕ ಮಂಡಲದ ವತಿಯಿಂದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ಭಾನುವಾರ ಸವಣೂರು ಬಸದಿ ವಠಾರದಲ್ಲಿರುವ ನಿರ್ಮಲ್ ಕುಮಾರ್ ಜೈನ್ ಅವರ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸಿ ಮಾತನಾಡಿ, ಆಟೋಟ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದು ಮುಖ್ಯ ಅಲ್ಲ. ಬದಲಾಗಿ ಭಾಗವಹಿಸುವುದೇ ಮುಖ್ಯ. ಸವಣೂರು ಯುವಕ ಮಂಡಲದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದ ಅವರು, ಕೆಸರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಔಷಧವಿದೆ. ಈ ನಿಟ್ಟಿನಲ್ಲಿ

ಆಟೋಟ ಸ್ಪರ್ಧೆಗಳು ಕೇವಲ ಬಹುಮಾನಕ್ಕೆ ಸೀಮಿತವಾಗಿರಬಾರದು | ಸವಣೂರು ಯುವಕ ಮಂಡಲದಿಂದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಕೆ.ಸೀತಾರಾಮ ರೈ ಸವಣೂರು Read More »

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ l ನದಿಯಲ್ಲಿ ಸಿಲುಕಿ ಸಹಾಯಕ್ಕೆ ಅಂಗಲಾಚಿದ

ಕಡಬ:  ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುಳಿಕುಕ್ಕು ಸೇತುವೆಯಲ್ಲಿ ಸೋಮವಾರ ನಡೆದಿದೆ. ನಿರಂತರ ಮಳೆಗೆ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಪುಳಿಕುಕ್ಕು ಸೇತುವೆ ಮತ್ತು ರೈಲು ಸೇತುವೆ ಮದ್ಯ ಭಾಗದಲ್ಲಿರುವ ಪೊದೆಯೊಂದರಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಕೂಗಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿಯಿಂದಲೇ ಕೂಗಾಡುವ ಧ್ವನಿ ಕೇಳುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಬ್ಯಾಗ್ ಸೇತುವೆ ಪಕ್ಕ ಪತ್ತೆಯಾಗಿದೆ ಎನ್ನಲಾಗುತ್ತಿದ್ದು ನದಿಯಿಂದ ಕೆಳಕ್ಕೆ ಹಾರಿದ್ದಾನೆ ಅಥವಾ ಇನ್ಯಾವುದಾದರೂ ಘಟನೆ ನಡೆಯಿತೆ ಎಂಬ

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ l ನದಿಯಲ್ಲಿ ಸಿಲುಕಿ ಸಹಾಯಕ್ಕೆ ಅಂಗಲಾಚಿದ Read More »

ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಜಯಂತ್ ಕುಂಜೂರು ಪಂಜ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ರೈ ಕಲ್ನೋಟೆ, ಕೋಶಾಧಿಕಾರಿಯಾಗಿ ಸುರೇಶ್ ನಾಯ್ಕ ದೇವಸ್ಯ, ಕಾರ್ಯದರ್ಶಿಯಾಗಿ ರಾಜೇಶ್ ಗೌಡ ಬಂಗಾರಡ್ಕ, ಜೊತೆ ಕಾರ್ಯದರ್ಶಿಯಾಗಿ ನವೀನ್ ಪೂಜಾರಿ ಕುಂಜೂರು ಪಂಜ ಆಯ್ಕೆಯಾದರು. ಈ ಸಂಧರ್ಭದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಜಿ ರಾಧಾಕೃಷ್ಣ ಗೌಡ, ಕಾರ್ಯದರ್ಶಿ ಜಗದೀಶ್ ಒಳತ್ತಡ್ಕ, ಹಾಗೂ

ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ನೂತನ ಪದಾಧಿಕಾರಿಗಳ ಆಯ್ಕೆ Read More »

ದಿ.ಕುಂಬ್ಳೆ ಶ್ರೀಧರ್ ರಾವ್ ಸವ್ಯಸಾಚಿ ಕಲಾವಿದ –ಗಾಳಿಮನೆ ವಿನಾಯಕ ಭಟ್ | ಕುಂಬ್ಳೆ ಶ್ರೀಧರ ರಾವ್ ಗೆ ನುಡಿನಮನ

ಉಪ್ಪಿನಂಗಡಿ: ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ ಕುಂಬ್ಳೆ ಶ್ರೀಧರ ರಾವ್ ನಿರ್ವಹಿಸಿದ ಪಾತ್ರಗಳು ಅತ್ಯಂತ ಪ್ರಬುದ್ಧವಾಗಿದ್ದು ಹಿರಿಯ ಕಲಾವಿದರೊಂದಿಗಿನ ದೀರ್ಘ ಒಡನಾಟದಲ್ಲಿ ಅವರು ಗಳಿಸಿದ ಜ್ಞಾನವನ್ನು ಅಭಿನಯ ಮತ್ತು ಮಾತುಗಲ್ಲಿ ಕೇಳುವ ಅವಕಾಶ ಇನ್ನಿಲ್ಲವೆನ್ನುವ ಕೊರಗು ಕಲಾವಲಯದಲ್ಲಿ ಮೂಡಿದೆ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಕಲಾವಿದ ವಿದ್ವಾನ್ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಕುಂಬ್ಳೆ ಶ್ರೀಧರ್ ರಾವ್ ನುಡಿನಮನ ಕಾರ್ಯಕ್ರಮದಲ್ಲಿ

ದಿ.ಕುಂಬ್ಳೆ ಶ್ರೀಧರ್ ರಾವ್ ಸವ್ಯಸಾಚಿ ಕಲಾವಿದ –ಗಾಳಿಮನೆ ವಿನಾಯಕ ಭಟ್ | ಕುಂಬ್ಳೆ ಶ್ರೀಧರ ರಾವ್ ಗೆ ನುಡಿನಮನ Read More »

ಭಾರೀ ಮಳೆ : ಮಂಗಳೂರು ತಾಲೂಕಿನ ಶಾಲಾ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.8 ಸೋಮವಾರ ರಜೆ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ತಾಲೂಕಿನ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಸಂಭಾವ್ಯ ಅಪಾಯ ಸಂಭವಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನದಿ, ಸಮುದ್ರ ದಡಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಲಾಗಿದೆ.

ಭಾರೀ ಮಳೆ : ಮಂಗಳೂರು ತಾಲೂಕಿನ ಶಾಲಾ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ Read More »

error: Content is protected !!
Scroll to Top