ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಲಕ್ಷಾಂತರ ವಂಚನೆ

ಬೆಳ್ತಂಗಡಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ವ್ಯಕ್ತಿಯೊಬ್ಬರಿಂದ ವಂಚಕರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಬೆಳ್ತಂಗಡಿ ವ್ಯಕ್ತಿಯೊಬ್ಬರು ಇನ್ ಸ್ಟಾಗ್ರಾಮ್ ನಲ್ಲಿ ಬಂದ ಲಿಂಕ್ ಮೂಲಕ ವಾಟ್ಸಪ್ ಗ್ರೂಪಿಗೆ ಸೇರಿದ ವ್ಯಕ್ತಿಗೆ ಅಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಬಳಿಕ ಅವರು ಕಳುಹಿಸಿದ ಲಿಂಕ್ ಮುಖಾಂತರ ಎ.ಸಿ ಮಾಕ್ಸ್, JOHCM ಎಂಬ ಎರಡು ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ ಬಳಿಕ ಈ ಆಪ್ ಗಳ ಮೂಲಕ ದೂರುದಾರರ ಖಾತೆಯಿಂದ ಅವರು ಹೇಳಿದ […]

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಲಕ್ಷಾಂತರ ವಂಚನೆ Read More »

ಬನ್ನೂರಿನಲ್ಲಿ ಆರೋಗ್ಯ ಮತ್ತು ಕ್ಷೇಮ‌ ಕೇಂದ್ರ ಉದ್ಘಾಟನೆ

ಪುತ್ತೂರು: ಜನರ ಆರೋಗ್ಯಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಮಾಡುತ್ತಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು‌, ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಅಶೋಕ್ ಕುಮಾರ್  ರೈ ಹೇಳಿದರು. ಅವರು ಮಂಗಳವಾರ ಬನ್ನೂರು ಕಜೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ‌ಮಾತನಾಡಿದರು. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ‌ ಕರ್ನಾಟಕ ಸರಕಾರ ಸರಕಾರಿ ‌ಆಸ್ಪತ್ರೆ,  ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ‌ ಎಲ್ಲಾ ರೀತಿಯ ಸೌಲಭ್ಯವನ್ನು

ಬನ್ನೂರಿನಲ್ಲಿ ಆರೋಗ್ಯ ಮತ್ತು ಕ್ಷೇಮ‌ ಕೇಂದ್ರ ಉದ್ಘಾಟನೆ Read More »

ಇಂದು ರೋಟರಿ ಯುವ ಕ್ಲಬ್‍ ನ ದಶಮಾನೋತ್ಸವ | ಪದಗ್ರಹಣ ಸ್ವೀಕರಿಸಲಿರುವ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭಿಷ್‍ ಕೆ.

ಪುತ್ತೂರು:  ರೋಟರಿ ಕ್ಲಬ್ ಯುವ ಸ್ಥಾಪನೆಯಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿದ್ದು, 2024-25 ಅವಧಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನ ಜಯರಾಂ, ಕೋಶಾಧಿಕಾರಿಯಾಗಿ ಅಭಿಷ್ ಕೆ ಇಂದು ಪದಗ್ರಹಣಗೊಳ್ಳಲಿದ್ದಾರೆ. ಪಿಡಿಜಿ ಡಾ. ಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಲಿದ್ದಾರೆ. ಕ್ಲಬ್ ನ ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ಕುಸುಮ್ ರಾಜ್, ವೊಕೇಷ ನಲ್ ಸರ್ವಿಸ್ ಡೈರೆಕ್ಟರ್ ಆಗಿ ಗೌರವ ಭಾರದ್ವಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಆಗಿ ನಿಹಾಲ್ ಶೆಟ್ಟಿ, ಇಂಟರ‍ ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ಆಗಿ ವಿನೀತ್

ಇಂದು ರೋಟರಿ ಯುವ ಕ್ಲಬ್‍ ನ ದಶಮಾನೋತ್ಸವ | ಪದಗ್ರಹಣ ಸ್ವೀಕರಿಸಲಿರುವ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭಿಷ್‍ ಕೆ. Read More »

ಅಡಿಕೆಯನ್ನು ವಿವಿಧ ರೀತಿಯಲ್ಲಿ ಬಳಕೆ ಸಹಿತ ರೋಗ ಮುಕ್ತವಾಗುವಲ್ಲಿ ಸಂಶೋಧನೆಯ ಅಗತ್ಯವಿದೆ | ಮಾಸ್‍ ಲಿ. ವತಿಯಿಂದ ಕಾವು ಸಿ.ಎ.ಬ್ಯಾಂಕ್‍ ವಠಾರದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ಮಂಗಳೂರು ಕೃಷಿಕರ ಸಹಕಾರಿ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್‍.ರಾಜೇಂದ್ರ ಕುಮಾರ್ ಅವರ ಸಹಕಾರದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಕಾವು ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಮಂಗಳವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ, ಅಡಿಕೆ ಸಂಶೋಧನಾ ಕೇಂದ್ರ ಅಡಿಕೆ ಕುರಿತು ಸರಿಯಾದ ಗಮನ ಹರಿಸದೆ ಇರುವುದೇ ಅಡಿಕೆಗೆ ಹೆಚ್ಚಿನ ಬೆಲೆ, ಅನುದಾನ ಪಡೆಯುವಲ್ಲಿ ಹಿಂದೆ ಬಿದ್ದಿದೆ. ಈ

ಅಡಿಕೆಯನ್ನು ವಿವಿಧ ರೀತಿಯಲ್ಲಿ ಬಳಕೆ ಸಹಿತ ರೋಗ ಮುಕ್ತವಾಗುವಲ್ಲಿ ಸಂಶೋಧನೆಯ ಅಗತ್ಯವಿದೆ | ಮಾಸ್‍ ಲಿ. ವತಿಯಿಂದ ಕಾವು ಸಿ.ಎ.ಬ್ಯಾಂಕ್‍ ವಠಾರದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಶಾಸಕ ಅಶೋಕ್ ರೈ Read More »

ಇಂಡಿಯಾ ಟೀಮ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ | ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಗೆದ್ದ ಬಳಿಕ ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸ್ಪಾರ್ ಕ್ರಿಕೆಟರ್ ಗೆ ಸ್ವಾಗತ ಕೋರಲಾಯಿತು. ನೂತನವಾಗಿ ನಿರ್ಮಾಣವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದಂಪತಿ ಪೂಜೆ ಸಲ್ಲಿಸಿ, ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇಂಡಿಯಾ ಟೀಮ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ | ವಿಶೇಷ ಪೂಜೆ ಸಲ್ಲಿಕೆ Read More »

ದೇವಾಲಯದ ಒಳಗ್ಗೆ ನುಗ್ಗಿ ಯುವಕನಿಂದ ದಾಂಧಲೆ | ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಮಂಗಳೂರು: ದೇವಾಲಯದ ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ನಡೆದಿದೆ. ಬೈಕ್ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದ ಯುವಕ, ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ರಂಪಾಟ ಮಾಡಿದ್ದಾನೆ. ಅಲ್ಲದೆ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬಾತ ಈ ರೀತಿಯ ದಾಂಧಲೆ ನಡೆಸಿದಾತ. ಈ ವೇಳೆ ಪ್ರಶ್ನೆ

ದೇವಾಲಯದ ಒಳಗ್ಗೆ ನುಗ್ಗಿ ಯುವಕನಿಂದ ದಾಂಧಲೆ | ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು Read More »

ರೋಟರಿ ಕ್ಲಬ್ ಪುತ್ತೂರು ಯುವದಿಂದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ |ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ

ಪುತ್ತೂರು: ಕಳೆದ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿ ವಾಸ್ತವ್ಯವನ್ನು ಹೂಡಿದ್ದ ಸುಮಾರು 50 ವರ್ಷ ಪ್ರಾಯದ ಕಮಲ ಎಂಬ ಮಹಿಳೆಯನ್ನು ಪ್ರಾಧ್ಯಾಪಕಿ ಗೀತಾ ಕೊಂಕೋಡಿ ಅವರ ವಿನಂತಿಯ ಮೇರೆಗೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಈ ಮಾನಸಿಕ ಅಸ್ವಸ್ಥ ಮಹಿಳೆಯು ಬಸ್ಸು ತಂಗುದಾಣದಲ್ಲಿ ವಾಸ್ತವ ಹೂಡಿರುವ ಕಾರಣ ಕೆಲವೊಮ್ಮೆ ಈಕೆ ಮಾಡುವ

ರೋಟರಿ ಕ್ಲಬ್ ಪುತ್ತೂರು ಯುವದಿಂದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ |ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ Read More »

ಪ್ರಕರಣವೊಂದರಲ್ಲಿ ಸಿಎಂ ಸಿದ್ಧರಾಮಯ್ಯಗೆ ಸಂಕಷ್ಟ ಎದುರು | ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ನಕಲಿ ದಾಖಲೆ ಸೃಷ್ಟಿ

ಮೈಸೂರು : ಮುಡಾ ದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು , ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ವಿಜಯನಗರ ಠಾಣೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್‌ಟಿಐ ಕಾರ್ಯಕರ್ತರು ಒಬ್ಬರು ದೂರು ನೀಡಿದ್ದಾರೆ. ಮುಡಾ ಪ್ರಕರಣದಲ್ಲಿ ಸೈಟ್ ಹಂಚಿಕೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.ಮುಡಾ ಸೈಟ್ ಹಂಚಿಕೆ ವಿಚಾರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್

ಪ್ರಕರಣವೊಂದರಲ್ಲಿ ಸಿಎಂ ಸಿದ್ಧರಾಮಯ್ಯಗೆ ಸಂಕಷ್ಟ ಎದುರು | ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ನಕಲಿ ದಾಖಲೆ ಸೃಷ್ಟಿ Read More »

ಪುತ್ತಿಲ ಪರಿವಾರದಿಂದ ಮನೆ ‘ಸೇವಾಶ್ರಯ’ ಹಸ್ತಾಂತರ

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಉಪ್ಪಿನಂಗಡಿ ಘಟಕ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಉಪ್ಪಿನಂಗಡಿ ಸಹಕಾರದೊಂದಿಗೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಿರ್ಮಿಸಿದ ಮನೆ ಸೇವಾಶ್ರಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಆನಂದ ಮತ್ತು ಸುಂದರಿ ದಂಪತಿಗಳಿಗೆ ನೂತನವಾಗಿ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಮಾರ್ತಾ,  ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್,  ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಮುಖರಾದ ಚಂದಪ್ಪ ಮೂಲ್ಯ,  ಮಹೇಂದ್ರ ವರ್ಮ,

ಪುತ್ತಿಲ ಪರಿವಾರದಿಂದ ಮನೆ ‘ಸೇವಾಶ್ರಯ’ ಹಸ್ತಾಂತರ Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ 83 ಶಾಲೆಗಳಿಗೆ ಹಾನಿ l ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಮುಂಗಾರು ಮಳೆ ಶುರುವಾದ ಒಂದೇ ತಿಂಗಳಲ್ಲಿಯೇ 83 ಶಾಲೆಗಳಿಗೆ ಹಾನಿಯಾಗಿದ್ದು, ಸರಿಸುಮಾರು 3 ಕೋಟಿ ರೂ.ನಷ್ಟು ನಷ್ಟವಾಗಿದೆ. ಬಂಟ್ವಾಳ ಹಾಗೂ ಉಳ್ಳಾಲ ಭಾಗದಲ್ಲೇ ಅತೀ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. ಕೆಲವೊಂದು ಶಾಲೆಗಳಿಗೆ ತೀವ್ರ ಹಾನಿಯಾದರೆ ಇನ್ನು ಕೆಲವು ಕಡೆಯಲ್ಲಿ ಸಾಧಾರಣ ಹಾನಿಯಾಗಿದೆ. ಮುಂಗಾರು ಮಳೆಯ ಅಬ್ಬರ ಜೂನ್‌ನಲ್ಲಿ ಶುರುವಾಗಿ ಕೆಲವು ಭಾಗದ ಶಾಲೆಗಳು ಗಾಳಿ, ಮಳೆಯ ಅಬ್ಬರದಲ್ಲಿ ಹಾನಿಯಾಗಿದೆ. ಜೂನ್‌ನ ಕೇವಲ 15 ದಿನಗಳಲ್ಲಿಯೇ ಮಳೆಯ ತೀವ್ರತೆಯಲ್ಲಿ ಶಾಲೆಗಳು ಕಂಗಾಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಹಾನಿಯಾಗಿರುವ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ 83 ಶಾಲೆಗಳಿಗೆ ಹಾನಿ l ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಮನವಿ Read More »

error: Content is protected !!
Scroll to Top