ಸುದ್ದಿ

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು

ಬಂಟ್ವಾಳ: ಮೆಲ್ಕಾರಿನ ಬೊಗೋಡಿಯಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿ ಒಂದರಲ್ಲಿ ಹಲ್ಲೆ ಮತ್ತು ವಸ್ತುಗಳಿಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿದ ಹಾಗೆ ಮ್ಯಾನೇಜರ್ ಕುನಲ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಾ. 20 ರಂದು ಅಟೋರಿಕ್ಷಾ ಚಾಲಕನೊಬ್ಬ ತನ್ನ ಅಟೋವನ್ನು ಪಂಪ್ ಒಳಗೆ ತಂದಿದ್ದು, ಕಚೇರಿಯ ಸಿಬ್ಬಂದಿ ಅಶ್ವಿನ್ ಎಂಬುವವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಹಾಗೆಯೇ ಆ ಬಳಿಕ ಪಂಪ್‌ನ ಸೊತ್ತುಗಳಿಗೆ ಹಾನಿ ಎಸಗಿದ್ದಾನೆ. ಈ ಘಟನೆಯಿಂದ ಸುಮಾರು ನಲವತ್ತೆಂಟು ಸಾವಿರ […]

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು Read More »

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ

ಉಜಿರೆ: ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಯಕ್ಷಭಾರತಿ ರಿ. ಕನ್ಯಾಡಿ ಹನ್ನೊಂದನೇ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ರೂಪಿಸಲಾದ “ದಶಪರ್ವ” ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಶಾಸಕ ಪ್ರತಾಪಸಿಂಹ ನಾಯಕ್ ಲೋಕಾರ್ಪಣೆಗೊಳಿಸಿದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕಲಾ ಪೋಷಕ ಶ್ರೀಪತಿ ಭಟ್, ಮೂಡಬಿದಿರೆ ಸಂಪಾದಕ ಮಂಡಳಿಯ ಮಹೇಶ ಕನ್ಯಾಡಿ, ಹರಿದಾಸ ಗಾಂಭೀರ, ಭವ್ಯ ಹೊಳ್ಳ, ಕೌಶಿಕ್ ರಾವ್ ಕನ್ಯಾಡಿ, ರತ್ನವರ್ಮ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು. ದಶಪರ್ವದ ಸಂಪಾದಕ

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ Read More »

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಸಿದ್ಧ ಚಲನಚಿತ್ರ ನಟ, ಕರುನಾಡ ಅಣ್ಣಾವ್ರು ವರನಟ ಡಾ‌. ರಾಜ್‌ಕುಮಾರ್ ಅವರ ಅಭಿಮಾನಿಗಳ ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜ್‌ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ರಾಜ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ. ರಾಜ್‌ಕುಮಾರ್ ಅಭಿನಯದ ಶ್ರೀ ಕೃಷ್ಣದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಅವರು ‘ದೇವಿಯ ಮೇಲಿನ ನಂಬಿಕೆ ಭಕ್ತರಿಗೆ ಹೊಸ ಶಕ್ತಿ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ Read More »

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ

ಕೊಟ್ಟಿಗೆಹಾರ: ಟಿಟಿ ‌ವಾಹನವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ‌ನಡೆದಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಹೋಗುತ್ತಿತ್ತು. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ ಇದು, ಗಾಯಾಳು ಒಂಬತ್ತು ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳೀಯರು ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗಾಯ ಆಲಿ ಗಳನ್ನು ನೆರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ Read More »

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ

ಚಿಕ್ಕಮಗಳೂರು: ವಿದ್ಯುತ್ ಕಂಬವೊಂದಕ್ಕೆ ಸರ್ಕಾರಿ ಬಸ್ ಗುದ್ದಿದ್ದು, ಎಂಟು ಮಂದಿ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಕೊಡಾಳ್ ಸಮೀಪ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಕುಕ್ಕನೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿತ್ತು. ನಲವತ್ತಕ್ಕೂ ಅಧಿಕ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಾಳು ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಪಘಾತದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ‌ತನಿಖೆ ನಡೆಸುತ್ತಿದ್ದಾರೆ.

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ Read More »

ವರ್ಕ್‌ ಫ್ರಂ ಹೋಂ, ವಾಹನಗಳ ವೇಗಕ್ಕೆ ಕಡಿವಾಣ : ಇಂಧನ ಉಳಿಸಲು ಸಲಹೆ

ಜಾಗತಿಕ ಇಂಧನ ಕೊರತೆ ಹಿನ್ನೆಲೆಯಲ್ಲಿ ಐಇಎಯಿಂದ ದೇಶಗಳಿಗೆ ಸಲಹೆ ನವದೆಹಲಿ : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ತೀವ್ರ ಇಂಧನ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂಧನ ಬಳಕೆ ಮೇಲೆ ಮಿತಿ ಹೇರಲು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಕೆಲವೊಂದು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಸಂದರ್ಭದ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಇಂಧನ ಬಳಕೆಯಲ್ಲಿ ಮಿಯವ್ಯಯ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಶಿಫಾರಸು ಮಾಡಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ

ವರ್ಕ್‌ ಫ್ರಂ ಹೋಂ, ವಾಹನಗಳ ವೇಗಕ್ಕೆ ಕಡಿವಾಣ : ಇಂಧನ ಉಳಿಸಲು ಸಲಹೆ Read More »

ಉದ್ಯಮಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ಲಪಟಾಯಿಸಿದ ಸೈಬರ್‌ ವಂಚಕರು

ಬೆಳಗಾವಿ: ವೃದ್ಧ ಉದ್ಯಮಿಯೊಬ್ಬರು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಕೋಟಿ ಕೋಟಿ ಹಣ ಕಳೆದುಕೊಂಡು ಉದ್ಯಮಿ ಕಂಗಾಲಾಗಿದ್ದಾರೆ. ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್‌ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಫ್ರಾಡ್‌ ಲಿಸ್ಟ್‌ನಲ್ಲಿ ತೋರಿಸುತ್ತಿದೆ. ನೀವು ಮನಿ ಲಾಡ್ರಿಂಗ್ ಮಾಡ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದಾರೆ.

ಉದ್ಯಮಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ಲಪಟಾಯಿಸಿದ ಸೈಬರ್‌ ವಂಚಕರು Read More »

ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಕಚೇರಿಯಲ್ಲೇ ಆತ್ಮಹತ್ಯೆ

ವಿಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳುಹಿಸಿ ನೇಣಿಗೆ ಶರಣಾದ ಅಧಿಕಾರಿ ಬೆಂಗಳೂರು: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತುಮಕೂರಿನ ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ವೀಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳುಹಿಸಿ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾದವರು. ಸಾವಿಗೂ ಮುನ್ನ ಮೇಲಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣವೆಂದು ವಿಡಿಯೋ ಮಾಡಿ ಸಹೊದ್ಯೋಗಿಗಳಿಗೆ ಕಳಿಸಿದ್ದಾರೆ. ಬಳಿಕ ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿರುವ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ತುಮಕೂರು ಸಮಾಜ

ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಕಚೇರಿಯಲ್ಲೇ ಆತ್ಮಹತ್ಯೆ Read More »

ಬಿಸಿಸಿಯಲ್ಲೂ ಇದೆ ವರ್ಣಭೇದ ನೀತಿ : ಶಿವರಾಮಕೃಷ್ಣನ್‌ ಆರೋಪ

ಕಾಮೆಂಟರಿ ಪ್ಯಾನೆಲ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಕ್ರಿಕೆಟಿಗ ನವದೆಹಲಿ: ಬಿಸಿಸಿಐಯಲ್ಲೂ ವರ್ಣಭೇದ ನೀತಿ ಇದೆ ಎಂದು ಆರೋಪಿಸಿ ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಶುಕ್ರವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾಮೆಂಟರಿ ಪ್ಯಾನೆಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಶಿವರಾಮಕೃಷ್ಣನ್ ತಮ್ಮ ನಿರ್ಧಾರದ ಹಿಂದೆ ಅವಕಾಶಗಳ ಕೊರತೆಯನ್ನು ಉಲ್ಲೇಖಿಸಿ ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿದ್ದಾರೆ. ಪಂದ್ಯದ ವೇಳೆ ಟಾಸ್ ಪ್ರಕ್ರಿಯೆ ಅಥವಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನನಗೆ ಅವಕಾಶ ನೀಡುತ್ತಿರಲಿಲ್ಲ. ಇದರ ಹಿಂದೆ

ಬಿಸಿಸಿಯಲ್ಲೂ ಇದೆ ವರ್ಣಭೇದ ನೀತಿ : ಶಿವರಾಮಕೃಷ್ಣನ್‌ ಆರೋಪ Read More »

ಇನ್‌ಸ್ಪೆಕ್ಟರ್‌ ಸಂದೇಶ್‌ ಮೊಬೈಲ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪರಿಶೀಲಿಸಿ : ಸಂತ್ರಸ್ತ ಮಹಿಳೆ ಒತ್ತಾಯ

ಮಂಗಳೂರು: ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನಹಾನಿ ಹಾಗೂ ಲೈಂಗಿಕ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್‌ಸ್ಪೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇನ್‌ಸ್ಪೆಕ್ಟರ್‌ ಸಂದೇಶ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರ ಮೊಬೈಲ್‌,

ಇನ್‌ಸ್ಪೆಕ್ಟರ್‌ ಸಂದೇಶ್‌ ಮೊಬೈಲ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪರಿಶೀಲಿಸಿ : ಸಂತ್ರಸ್ತ ಮಹಿಳೆ ಒತ್ತಾಯ Read More »

error: Content is protected !!
Scroll to Top