ಸುದ್ದಿ

ಸ್ವಯಂ ಘೋಷಿತ ದೇವಮಾನವನ ‌ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಯಾದಗಿರಿ: ಸ್ವಯಂ ಘೋಷಿತ ದೇವ ಮಾನವ ಶಹಾಪುರದ ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಮಲ್ಲಿಕಾರ್ಜುನ್ ಓರ್ವ ಬಾಲಕಿಯರ ಜೊತೆ ಅಸಂಬದ್ಧ ಎಂಬಂತೆ ನಡೆದುಕೊಳ್ಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ‌ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ತುಣುಕನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲು ಮಾಡಿಕೊಂಡಿದೆ. ಈ ವಿಡಿಯೋದ ತುಣುಕುಗಳನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮದ ಬಗ್ಗೆ ಮರು ಟಪಾಲಿನಲ್ಲಿ ಮಾಹಿತಿ ಸಲ್ಲಿಸುವಂತೆ ಆಯೋಗ ಜಿಲ್ಲಾ ಪೋಲೀಸ್ […]

ಸ್ವಯಂ ಘೋಷಿತ ದೇವಮಾನವನ ‌ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಅಪ್ರಾಪ್ತ ಹುಡುಗನ ಮೇಲೆ ಹಲ್ಲೆ, ನಿಂದನೆ: ಪ್ರಕರಣ ದಾಖಲು

ಮಂಗಳೂರು: ನಗರದ ಬಾಬುಗುಡ್ಡೆಯ ಸಮೀಪದಲ್ಲಿ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಹುಡುಗ ಫೆ. 23 ರಂದು ತನ್ನ ಸ್ನೇಹಿತೆಯ ಜೊತೆಗೆ ರೈಲ್ವೆ ಟ್ರಾಕ್ ಸಮೀಪ ಕುಳಿತು ಮಾತನಾಡುತ್ತಿದ್ದ. ಈ‌ ವೇಳೆ ಅವರಿಬ್ಬರ ವಿಡಿಯೋ ಮಾಡುತ್ತಾ ಸ್ಟೀವನ್ ಮೊಂತೆರೋ ‌ಮತ್ತು ಅವರ ಪುತ್ರ ಅವಿಲ್ ಅಲ್ಲಿಗೆ ಬಂದಿದ್ದಾರೆ. ಅಪ್ರಾಪ್ತ ಹುಡುಗ ಮತ್ತು ಅವನ ಸ್ನೇಹಿತೆಗೆ ‘ನೀವಿಲ್ಲಿ ಕಿಸ್ಸಿಂಗ್ ಮಾಡುತ್ತಿದ್ದ ತೀರಾ, ನಾನು ವಿಡಿಯೋ ಮಾಡಿ ಸಾಮಾಜಿಕ

ಅಪ್ರಾಪ್ತ ಹುಡುಗನ ಮೇಲೆ ಹಲ್ಲೆ, ನಿಂದನೆ: ಪ್ರಕರಣ ದಾಖಲು Read More »

ಕೈಕಾರದಲ್ಲಿ ಭೀಕರ ಅಪಘಾತ: ಚಾಲಕ ಗಂಭೀರ

ಪುತ್ತೂರು: ಕೈಕಾರಗಲ್ಲಿ ಪಿಕಪ್ ಮತ್ತು ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪ್ರಕರಣದಲ್ಲಿ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು,‌ ಗಂಭೀರ ಗಾಯಗೊಂಡ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಕೈಕಾರದಲ್ಲಿ ಭೀಕರ ಅಪಘಾತ: ಚಾಲಕ ಗಂಭೀರ Read More »

ಇಸ್ರೇಲಿನಲ್ಲಿ ಉಗ್ರವಾದದ ‌ವಿರುದ್ಧ ಗುಡುಗಿದ ಪ್ರಧಾನಿ ಮೋದಿ

ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ್ದು, ಭಾರತ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಭಾರತದ ಪ್ರಧಾನಿಯಾಗಿ ಮತ್ತು ಒಂದು ಪ್ರಾಚೀನ ನಾಗರೀಕತೆಯ ಪ್ರತಿನಿಧಿಯಾಗಿ ಮತ್ತೊಂದು ನಾಗರೀಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಭಾರತ ಉಗ್ರವಾದವನ್ನು ಎಂದಿಗೂ ಸಹಿಸಲಾರದು. ಜಾಗತಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಉಗ್ರವಾದ ಬಹುದೊಡ್ಡ ಸವಾಲಾಗಿದೆ. ಇದು ಮಾನವೀಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಉಗ್ರಗಾಮಿತ್ವವನ್ನು ಒಪ್ಪಲು ಯಾರಿಂದಲೂ ‌ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆ. 7ರಂದು ಹಮಾಸ್

ಇಸ್ರೇಲಿನಲ್ಲಿ ಉಗ್ರವಾದದ ‌ವಿರುದ್ಧ ಗುಡುಗಿದ ಪ್ರಧಾನಿ ಮೋದಿ Read More »

ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ: ದೂರು ದಾಖಲು

ಪುತ್ತೂರು: ಪತಿಯಿಂದ ಹಲ್ಲೆಗೊಳಗಾದ ಮಹಿಳೆಯೊಬ್ಬರು ಪುತ್ತೂರಿನ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದು, ಘಟನೆಗೆ ಸಂಬಂಧಿಸಿದ ಹಾಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಹದಿನಾರು ವರ್ಷಗಳ ಹಿಂದೆ ಮನೋಜ್ ಎಂಬವರ ಜೊತೆಗೆ ನನ್ನ ವಿವಾಹವಾಗಿದೆ. ಒಂಬತ್ತನೇ ತರಗತಿಯ ಮಗನೂ ಇದ್ದಾನೆ. ಗಂಡ ನನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಫೆ. 25 ರಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ: ದೂರು ದಾಖಲು Read More »

ಪಿಯುಸಿ ಪರೀಕ್ಷೆ ಆರಂಭವಾಗುವ ಹೊತ್ತಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ

ಇನ್‌ಸ್ಟಾಗ್ರಾಂನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಪೋಸ್ಟ್‌ ಹಾಕಿದ ಕಿಡಿಗೇಡಿ ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶುರುವಾಗಲು ಇನ್ನೆರಡು ದಿನ ಬಾಕಿಯಿರುವಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ ಮತ್ತೆ ಎದುರಾಗಿದೆ. ಫೆಬ್ರವರಿ 28ರಿಂದ ಪರೀಕ್ಷೆಗಳು ಶುರುವಾಗಲಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಬಗ್ಗೆ ಪೋಸ್ಟ್ ಒಂದು ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿದ್ದಾನೆ. ಯಾವುದಾದರೂ ಪ್ರಶ್ನೆ

ಪಿಯುಸಿ ಪರೀಕ್ಷೆ ಆರಂಭವಾಗುವ ಹೊತ್ತಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ Read More »

ಮಂಗಳೂರು : ಡಿಜಿಟಲ್‌ ಅರೆಸ್ಟ್‌ ಮಾಡಿ 41.85 ಕೋ. ರೂ. ಲಪಟಾಯಿಸಿದ ವಂಚಕ

ಮಂಗಳೂರು: ಮುಂಬೈಯ ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮಂಗಳೂರಿನ ವ್ಯಕ್ತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 41.85 ಲಕ್ಷ ರೂ. ಲಪಟಾಯಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಜ.31ರಂದು ಅಪರಿಚಿತ ವ್ಯಕ್ತಿ ನವದೆಹಲಿಯಿಂದ ಕರೆ ಮಾಡಿ ತನ್ನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡು, ನಿಮ್ಮ ಗುರುತಿನ ಚೀಟಿ ಉಪಯೋಗಿಸಿಕೊಂಡು ಮುಂಬೈಯ ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ. ಅದರಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದೆ. ಗುರುತಿನ ಚೀಟಿಯ ನಂಬರ್ ಉಪಯೋಗಿಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ. ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅಕ್ರಮ

ಮಂಗಳೂರು : ಡಿಜಿಟಲ್‌ ಅರೆಸ್ಟ್‌ ಮಾಡಿ 41.85 ಕೋ. ರೂ. ಲಪಟಾಯಿಸಿದ ವಂಚಕ Read More »

ದೆಹಲಿಯ 20 ಪೊಲೀಸರನ್ನು ಬಂಧಿಸಿದ ಹಿಮಾಚಲ ಪ್ರದೇಶ ಪೊಲೀಸರು!

ಅರೆಬೆತ್ತಲೆ ಪ್ರಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲು ಹೋದಾಗ ಗಡಿಯಲ್ಲಿ ಹೈಡ್ರಾಮಾ ನವದೆಹಲಿ: ಎಐ ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲು ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ ದಿಲ್ಲಿಯ 20 ಪೊಲೀಸ್ ಸಿಬ್ಬಂದಿಯನ್ನು ಶಿಮ್ಲಾ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ಘಟನೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಎಐ ಇಂಪ್ಯಾಕ್ಟ್​ ಶೃಂಗಸಭೆಯಲ್ಲಿ ಶರ್ಟ್​ ಬಿಚ್ಚಿ ಪ್ರತಿಭಟನೆ ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮೂವರನ್ನು ಹಿಡಿಯಲು ದೆಹಲಿ ಪೊಲೀಸರು

ದೆಹಲಿಯ 20 ಪೊಲೀಸರನ್ನು ಬಂಧಿಸಿದ ಹಿಮಾಚಲ ಪ್ರದೇಶ ಪೊಲೀಸರು! Read More »

ಮಹಿಳೆಗೆ ಕಿರುಕುಳ : ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ಕೇಸ್‌

ಉಡುಪಿ: ರಾಷ್ಟ್ರೀಯಕೃತ ಬ್ಯಾಂಕ್ ಒಂದರ ಆದಿ ಉಡುಪಿ ಶಾಖೆಯ ಮ್ಯಾನೇಜರ್ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಜ್ಯೋತಿ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 74ರ ಅಡಿಯಲ್ಲಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಫೆ.7ರಂದು ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸಾಲದ ವಿಷಯದ ಬಗ್ಗೆ ಚರ್ಚಿಸಬೇಕೆಂದು ಹೇಳಿ ಮ್ಯಾನೇಜರ್ ತಮ್ಮನ್ನು

ಮಹಿಳೆಗೆ ಕಿರುಕುಳ : ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ಕೇಸ್‌ Read More »

ಉದ್ಯೋಗ ನೆಪದಲ್ಲಿ ವಂಚನೆ : ಖಾಸಗಿ ಸಂಸ್ಥೆ ವಿರುದ್ಧ ದೂರು ದಾಖಲಿಸಿದ ಕಾಲೇಜು ವಿದ್ಯಾರ್ಥಿಗಳು

ಮೂರು ದಿನದ ತರಬೇತಿಗೆ 2 ಸಾವಿರ ರೂ. ಪಡೆದು ಬ್ರೈನ್‌ವಾಶ್‌ ಮಾಡಿದ ಆರೋಪ ಮಂಗಳೂರು : ನಗರದಲ್ಲಿ ಕಾರ್ಯಾಚರಿಸುತ್ತಿರುವ Vexon ಎಂಬ ಖಾಸಗಿ ಸಂಸ್ಥೆ ತರಬೇತಿ ಮತ್ತು ಉದ್ಯೋಗದ ಆಮಿಷವೊಡ್ಡಿ ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ. ಕುದ್ರೋಳಿಯ ಶ್ರೇಯಸ್ ಸ್ವೀಟ್ಸ್ ಎದುರು ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಂಚಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಸ್ಥೆಯು ತರಬೇತಿಯ ಹೆಸರಿನಲ್ಲಿ ಪ್ರತಿ ವಿದ್ಯಾರ್ಥಿಯಿಂದ 2,000 ರೂಪಾಯಿ ಸಂಗ್ರಹಿಸುತ್ತದೆ ಮತ್ತು

ಉದ್ಯೋಗ ನೆಪದಲ್ಲಿ ವಂಚನೆ : ಖಾಸಗಿ ಸಂಸ್ಥೆ ವಿರುದ್ಧ ದೂರು ದಾಖಲಿಸಿದ ಕಾಲೇಜು ವಿದ್ಯಾರ್ಥಿಗಳು Read More »

error: Content is protected !!
Scroll to Top