ಸುದ್ದಿ

48 ಕೆಜಿ ಡ್ರಗ್ಸ್‌ ವಶ : ಇಬ್ಬರು ಆರೋಪಿಗಳ ಬಂಧನ

ಮೈಸೂರು : ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ದಾಸ್ತಾನು ಪತ್ತೆ ಮಾಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಆರೋಪಿಗಳಾಗಿದ್ದು, ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು ಸಂಗ್ರಹಣೆ ನಡೆಸಲಾಗುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದಾಸನಪುರ […]

48 ಕೆಜಿ ಡ್ರಗ್ಸ್‌ ವಶ : ಇಬ್ಬರು ಆರೋಪಿಗಳ ಬಂಧನ Read More »

ಮೂರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

ವಿಜಯನಗರ: ಮೂವರು ಮಕ್ಕಳ ಜೊತೆಗೆ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂಡಿ ತಾಲೂಕಿನ ಮಿರಗಿಯಲ್ಲಿ ‌ನಡೆದಿದೆ. ಮೃತರನ್ನು ‌ರಾಜಶ್ರೀ ಶಂಕ್ರಪ್ಪ ಹಳ್ಳೂರ, ಮಕ್ಕಳಾದ ಅನುಶ್ರೀ, ತನು ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಪತಿ ಶಂಕ್ರಪ್ಪ ಖಾಸಗಿ ಬಸ್ಸಿನ ಡ್ರೈವರ್ ಆಗಿದ್ದು, ಘಟನೆ ನಡೆದ ವೇಳೆ ಅವರು ಊರಿನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ರಾಜಶ್ರೀ ಅವರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿರುವುದಾಗಿದೆ. ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಕುಟುಂಬಸ್ಥರ

ಮೂರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಹಾಡುಹಗಲೇ ಮಹಿಳೆಯ ಮಾಂಗಲ್ಯ ಸರಕ್ಕೆ ಕನ್ನ ಹಾಕಿದ ಖದೀಮರು

ಬೆಂಗಳೂರು: ನೆಲಮಂಗಲ ಸಮೀಪದ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿಯಲ್ಲಿ ಹಾಡುಹಗಲೇ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ನಡೆದಿದೆ. ಬೇಕರಿಯ ‌ಸಮೀಪ ನಿಂತಿದ್ದ ಮಹಿಳೆಯೊಬ್ಬರ ತಾಳಿ ಸರವನ್ನು ಖದೀಮರು ದೋಚಿದ್ದಾರೆೆ‌. ಬೇಕರಿಯಲ್ಲಿ ಜ್ಯೂಸ್ ಕುಡಿಯುವಂತೆ ನಟನೆ ಮಾಡಿ ಕಳ್ಳರು ಅವರ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಸರ ಎಳೆದ ರಭಸಕ್ಕೆ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ಸರ 55 ಗ್ರಾಂ ತೂಕವಿತ್ತು ಎಂದು ತಿಳಿದು ಬಂದಿದೆ‌. ಸಿಸಿಟಿವಿಯಲ್ಲಿಯೂ ‌ಸರಗಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ

ಹಾಡುಹಗಲೇ ಮಹಿಳೆಯ ಮಾಂಗಲ್ಯ ಸರಕ್ಕೆ ಕನ್ನ ಹಾಕಿದ ಖದೀಮರು Read More »

ಹುಸಿಬಾಂಬ್‌ ಬೆದರಿಕೆಗಳ ಹಿಂದಿದ್ದ ಆರೋಪಿ ಸೆರೆ

ಮೈಸೂರಿನಲ್ಲಿ ಅಡಗಿ ಕುಳಿತು ಪೊಲೀಸರನ್ನು ಆಟವಾಡಿಸುತ್ತಿದ್ದ ಆರೋಪಿ ಮೈಸೂರು : ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಮೈಸೂರು ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ.

ಹುಸಿಬಾಂಬ್‌ ಬೆದರಿಕೆಗಳ ಹಿಂದಿದ್ದ ಆರೋಪಿ ಸೆರೆ Read More »

ವಿವಾದದ ಕಿಡಿ ಹೊತ್ತಿಸಿದ ಹಿಂದಿ ಅಂಕ ಕೈಬಿಡುವ ನಿರ್ಧಾರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ದಿಢೀರ್‌ ಎಂದು ಹಿಂದಿ ಕೈಬಿಟ್ಟ ಸರ್ಕಾರ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹಿಂದಿಯ ಅಂಕವನ್ನು ದಿಢೀರ್‌ ಎಂದು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಮತ್ತೊಮ್ಮೆ ಭಾಷಾ ವಿವಾದ ಭುಗಿಲೇಳುವಂತೆ ಮಾಡಿದೆ. ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು, ಭಾಷಾ ಹೋರಾಟಗಾರರು ಈ ಕುರಿತು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಪರೀಕ್ಷೆ ನಡೆಯುತ್ತಿರುವಾಗಲೇ ಯಾವುದೇ ಮುನ್ಸೂಚನೆ ನೀಡದೆ ದಿಢೀರ್‌ ಎಂದು ಸರ್ಕಾರ ಹಿಂದಿಯನ್ನು ಕೈಬಿಡುವ ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯ ಕಾರಣವೇ ಗುರಿಯಾಗಿರುವಂತೆ ಕಾಣಿಸುತ್ತಿದೆ. ಹಿಂದಿ ಅಂಕಗಳನ್ನು

ವಿವಾದದ ಕಿಡಿ ಹೊತ್ತಿಸಿದ ಹಿಂದಿ ಅಂಕ ಕೈಬಿಡುವ ನಿರ್ಧಾರ Read More »

ಭೀಕರ ಅಪಘಾತ : 4 ವರ್ಷದ ಮಗು ಸಹಿತ ದಂಪತಿ ಸಾವು

ತಿರುಪತಿಗೆ ಹೊರಟವರ ದುರಂತ ಅಂತ್ಯ ಬೆಂಗಳೂರು: ನಗರದಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ಪಲಮನೇರ್‌ನಿಂದ ಚಿತ್ತೂರಿಗೆ ಬರುತ್ತಿದ್ದ ಬಸ್ಸು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಿಂತಿತ್ತು. ಈ ವೇಳೆ

ಭೀಕರ ಅಪಘಾತ : 4 ವರ್ಷದ ಮಗು ಸಹಿತ ದಂಪತಿ ಸಾವು Read More »

ದೇವಸ್ಥಾನದಲ್ಲಿ ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ತಡೆದ 7 ಮಂದಿ ಬಂಧನ

ಫೋಟೊಗ್ರಾಫರ್‌ ಮೇಲೆ ಹಲ್ಲೆ ನಡೆಸಿದ ಕುರಿತು ದೂರು ದಾಖಲು ಮಂಗಳೂರು: ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ಗೆ ತೆರಳಿದ್ದ ಫೋಟೊಗ್ರಾಫರ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಗುಲದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಮಾಡುತ್ತಿದ್ದ ವೇಳೆ ಸ್ಥಳೀಯ ಕೆಲವರು ಫೋಟೊಶೂಟ್‌ ಮಾಡದಂತೆ ಅಡ್ಡಿ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಛಾಯಾಗ್ರಾಹಕ ಯಶ್‌ ಹಾಗೂ ತಂಡದ ಮೇಲೆ ಸ್ಥಳೀಯರ

ದೇವಸ್ಥಾನದಲ್ಲಿ ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ತಡೆದ 7 ಮಂದಿ ಬಂಧನ Read More »

ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ

ಪ್ರೊಪೆಸರ್‌ಗೆ ಥಳಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಬೆದರಿಕೆ ಬೆಂಗಳೂರು: ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದುಲ್‌ ಎಂಬಾತ ತರಗತಿಯಲ್ಲಿ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಡಾ.ಅಬ್ದುಲ್‌ಗೆ ವಿದ್ಯಾರ್ಥಿನಿ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್‌ ಆಗಿದೆ. ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್

ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ Read More »

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು

ಬಾವಿ ಕೊರೆಯುವಾಗ ಸಂಭವಿಸಿದ ದುರಂತ ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಸಮೀಪ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30) ಮೃತರು ಎಂದು ಗುರುತಿಸಲಾಗಿದೆ.ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು Read More »

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ

ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ Read More »

error: Content is protected !!
Scroll to Top