ಸುದ್ದಿ

ಲಂಚ ಸ್ವೀಕರಿಸಿದ ಎಸ್‌ಡಿಎ ಲೋಕಾಯುಕ್ತ ಬಲೆಗೆ

ವಿದ್ಯುತ್‌ ಗುತ್ತಿಗೆದಾರರಿಂದ ಲಂಚ ಕೇಳಿದ್ದ ಅಧಿಕಾರಿ ಮಂಗಳೂರು: ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳ ನಿರ್ವಹಿಸಿದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಿಗೆ ಕೆಲಸದ ಬಿಲ್ ಪಾವತಿಗೆ ಶೇ.4ರಂತೆ 22,600 ರೂ. ಕೊಡಬೇಕು ಎಂದು ಲಂಚದ ಬೇಡಿಕೆ ಇರಿಸಿದ್ದ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ತಂಡ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಎಸ್.ಡಿ.ಎ ಸಂಪತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ದೂರುದಾರರು ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ […]

ಲಂಚ ಸ್ವೀಕರಿಸಿದ ಎಸ್‌ಡಿಎ ಲೋಕಾಯುಕ್ತ ಬಲೆಗೆ Read More »

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ

ದೇವಾಲಯದ ಸಂಪ್ರದಾಯ, ಭಕ್ತರ ನಂಬಿಕೆ ಎತ್ತಿ ಹಿಡಿಯಲು ಆದ್ಯತೆ ತಿರುವಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂಬ ಮಹತ್ವದ ತೀರ್ಮಾನವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ. ಋತುಮತಿಯರಾಗುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್‌ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ದೇವಸ್ವಂ ಬೋರ್ಡ್‌ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ. ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ.

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ Read More »

ಕೋಝಿಕ್ಕೋಡ್ ಬಿಜೆಪಿ ಚುನಾವಣಾ ಪ್ರಭಾರಿಯಾಗಿ ‌ಸಂಜೀವ ಮಠಂದೂರು

ಬೆಂಗಳೂರು: ಮುಂಬರುವ ಕೇರಳ ವಿಧಾನ ಸಭಾ ಚುನಾವಣಾ ಪ್ರಯುಕ್ತ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಸಂಜೀವ ಮಠಂದೂರು ‌ಅವರನ್ನು ಕೋಝಿಕ್ಕೋಡ್ ವಲಯದ ಚುನಾವಣಾ ಪ್ರಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಮೇರೆಗೆ ಮುಂಬರುವ ಕೇರಳ ವಿಧಾನ ಸಭಾ ಚುನಾವಣೆಯ ನಿಮಿತ್ತ ಕೊಝಿಕೋಡ್ ವಲಯದ ಚುನಾವಣಾ ಪ್ರಭಾರಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರು ನೇಮಕ ಮಾಡಿರುವುದಾಗಿದೆ.

ಕೋಝಿಕ್ಕೋಡ್ ಬಿಜೆಪಿ ಚುನಾವಣಾ ಪ್ರಭಾರಿಯಾಗಿ ‌ಸಂಜೀವ ಮಠಂದೂರು Read More »

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಗುವಿನ ‌ವಾತಾವರಣ: ದೇಶದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸೂಚನೆ

ನವದೆಹಲಿ: ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ಪರಿಣಾಮ ಭಾರತದಲ್ಲೂ ಕಂಡು ಬರುವ ಸಾಧ್ಯತೆ ಇರುವುದಾಗಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದೇಶದ ಎಲ್ಲಾ ರಾಜ್ಯಗಳ ಸರ್ಕಾರಗಳು, ಭದ್ರತಾ ಸಂಸ್ಥೆಗಳು ಹೆಚ್ಚುವರಿ ಕಾಳಜಿ ವಹಿಸುವಂತೆ ಕೇಂದ್ರ ಸರ್ಕಾರ ಪತ್ರದ ಮುಖೇನ ತಿಳಿಸಿರುವುದಾಗಿದೆ. ದೇಶದಲ್ಲಿ ಸಾರ್ವಜನಿಕ ಕೂಟಗಳು, ಧಾರ್ಮಿಕ ಸಭೆಗಳಲ್ಲಿ ಉದ್ರೇಕಕಾರಿ ಭಾಷಣಗಳ ಮೂಲಕ ಅಶಾಂತಿ ಹುಟ್ಟಿಸುವ ಸಾಧ್ಯತೆ ಸಹ ಇದೆ. ಆದ್ದರಿಂದ ಇಂತಹ ಎಲ್ಲಾ ವಿಷಯಗಳ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಗುವಿನ ‌ವಾತಾವರಣ: ದೇಶದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸೂಚನೆ Read More »

ಬಾಲಕಿ ಮೇಲೆ ಅತ್ಯಾಚಾರ: ಒಂದೇ ದಿನದಲ್ಲಿ ಆರೋಪಿ ಬಂಧನ

ತುಮಕೂರು: ವಿಳಾಸ ಕೇಳಿಕೊಂಡು ಬಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿರುವ‌ ಘಟನೆ ಗುಬ್ಬಿ ಗ್ರಾಮದಲ್ಲಿ ನಡೆದಿದೆ. ಶನಿವಾರದಂದು ಶಾಲೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಬಾಲಕಿಯ ‌ಬಳಿ ಆರೋಪಿ ವಿಳಾಸ ಕೇಳಿದ್ದಾನೆ. ಆಕೆ ಆತ ಹೇಳಿದ ವಿಳಾಸದ ರಸ್ತೆ ತೋರಿಸಲು ಹೋಗಿದ್ದಾಳೆ. ಈ ಸಮಯ ನಿರ್ಜನ ಪ್ರದೇಶವೊಂದರಲ್ಲಿ ಆಕೆಯ ಮೇಲೆ ಕಾಮುಕ ಅತ್ಯಾಚಾರ ನಡೆಸಿರುವುದಾಗಿದೆ. ಬಾಲಕಿ ಮನೆಗೆ ಓಡಿ ಹೋಗಿ ಈ ಸಂಗತಿಯನ್ನು ತಿಳಿಸಿದ್ದಾಳೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದ್ದು,

ಬಾಲಕಿ ಮೇಲೆ ಅತ್ಯಾಚಾರ: ಒಂದೇ ದಿನದಲ್ಲಿ ಆರೋಪಿ ಬಂಧನ Read More »

ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ

ವೇಣೂರು: ಬಂಗಾರದ ಒಡವೆಗಳಿಗೆ ಪಾಲಿಶ್ ಮಾಡುವ ಮತ್ತು ತೊಳೆದು ಕೊಡುವುದಾಗಿ ನಂಬಿಸಿ ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಫೆ. 10 ರಂದು ಕಾಶಿಪಟ್ಣದ ಪಾಣಿಲಾಜೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನ ತೊಳೆದು, ಪಾಲಿಶ್ ಮಾಡುವುದಾಗಿ ಹೇಳಿ ರಾಸಾಯನಿಕದ ಮೂಲಕ ಚಿನ್ನವನ್ನು ಕರಗಿಸಿ ಮನೆಮಂದಿಗೆ ವಂಚಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಬಿಹಾರ ಮೂಲದ ಚಂದನ್ (30) ಎಂಬಾತ ಸೆರೆಯಾಗಿದ್ದಾನೆ. ಆತನನ್ನು

ಪಾಲಿಶ್ ಹೆಸರಲ್ಲಿ ಚಿನ್ನವನ್ನು ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸ್ ವಶಕ್ಕೆ Read More »

ಪ್ರೇಯಸಿಯನ್ನು ಕಾಣಲು ಬುರ್ಖಾ ‌ತೊಟ್ಟು ಬಂದ ಅಪ್ರಾಪ್ತ: ಪೊಲೀಸರಿಗೊಪ್ಪಿಸಿದ ‌ಸ್ಥಳೀಯರು

ಸಾಗರ: ಬುರ್ಖಾ ‌ಧರಿಸಿ‌ ಪ್ರೇಯಸಿಯನ್ನು ಕಾಣಲು ಬಂದ ಅಪ್ರಾಪ್ತ ಯುವಕನನ್ನು ‌ಕಂಡು ಅನುಮಾನಗೊಂಡ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜನ್ನತ್ ‌ನಗರದಲ್ಲಿ ನಡೆದಿದೆ. ತ್ಯಾಗರ್ತಿಯ ಯುವಕ ತನ್ನ ಪ್ರೇಮಿಯನ್ನು ‌ಕಾಣಲು ಬುರ್ಖಾ ಧರಿಸಿ ಬಂದಿದ್ದ. ಆದರೆ ಈತನ ನಡೆ ಕಂಡ ಸ್ಥಳೀಯರು ಈತ ಮಕ್ಕಳ ಕಳ್ಳ ಆಗಿರಬೇಕು ಎಂದು ತಿಳಿದು, ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್‌ ವಿಚಾರಣೆ ವೇಳೆಗೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಒಟ್ಟಿನಲ್ಲಿ ರಹಸ್ಯವಾಗಿ ಪ್ರೇಯಸಿಯ ಭೇಟಿಗೆ ಬಂದು, ಪೊಲೀಸರ ವಶಕ್ಕೆ

ಪ್ರೇಯಸಿಯನ್ನು ಕಾಣಲು ಬುರ್ಖಾ ‌ತೊಟ್ಟು ಬಂದ ಅಪ್ರಾಪ್ತ: ಪೊಲೀಸರಿಗೊಪ್ಪಿಸಿದ ‌ಸ್ಥಳೀಯರು Read More »

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ

ಮಡಿಕೇರಿ: ಕಾಡಾನೆಯ ದಾಳಿಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಬೆಟ್ಟತ್ತೂರಿನಲ್ಲಿ ‌ನಡೆದಿದೆ. ಪೂಜಾ(17) ಎಂಬಾಕೆಯೇ ಮೃತ ದುರ್ದೈವಿ. ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಎಂದು ತಿಳಿದು ಬಂದಿದೆ. ಫೆ. 28 ರಂದು ಕಾಲೇಜು ಮುಗಿಸಿ ಬೆಟ್ಟತ್ತೂರಿನ ತನ್ನ ಮನೆಯ ಸಮೀಪ ಬಸ್ಸಿನಿಂದ ಇಳಿದಿದ್ದಳು. ಆ ಬಳಿಕ ಆಕೆಯನ್ನು ಕಾಡಾನೆ ದಾಳಿ ನಡೆಸಿ ಕೊಂದಿದೆ ಎಂದು ಹೇಳಲಾಗಿದೆ. ಪ್ರಕರಣ ನಡೆದ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಂತಹ

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ Read More »

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಧರ್ಮಸ್ಥಳ: ಮಂಗಳವಾರ ಚಂದ್ರ ಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಸೇರಿದಂತೆ ಕರಾವಳಿಯ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಪೂಜೆಯ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1.30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ Read More »

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿದ್ದ ವಾಯುನೆಲೆ ಇಸ್ಲಾಮಾಬಾದ್ : ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ದಾಳಿ ಮಾಡಿದ್ದ ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಇದೀಗ ಅಫಘಾನಿಸ್ತಾನ ಕೂಡ ದಾಳಿ ಮಾಡಿ ಭಾರಿ ಹಾನಿ ಎಸಗಿದೆ. ಭಾರತ ನಡೆಸಿದ ದಾಳಿಯಿಂದ ಕುಸಿದು ಬಿದ್ದು, ಬಳಿಕ ಎದ್ದು ನಿಂತಿದ್ದ ಪಾಕಿಸ್ತಾನದ ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಅಫ್ಘಾನಿಸ್ತಾನದಿಂದ ವಾಯುದಾಳಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತವು ಇದೇ ವಾಯುನೆಲೆ ಮೇಲೆ ದಾಳಿ

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ Read More »

error: Content is protected !!
Scroll to Top