ಸುದ್ದಿ

ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿದ ಯುವಕ ಸೆರೆ

ಕಾರು ಚಾಲಕನನ್ನು ಅಡ್ಡಗಟ್ಟಿ ಪಿಸ್ತೂಲು ತೋರಿಸಿ ಬೆದರಿಸಿದ್ದ ಯುವಕ ಪುತ್ತೂರು: ಪುತ್ತೂರಿನ ರಿಲಯನ್ಸ್ ಮಾಲ್ ಬಳಿ ಕಾರು ಚಾಲಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ, ಗುಂಡು ಹಾರಿಸಲು ಯತ್ನಿಸಿದ 19 ವರ್ಷದ ಯುವಕನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್‌ ಎಂದು ಗುರುತಿಸಲಾಗಿದೆ. ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ನೀಡಿದ ದೂರಿನ ಪ್ರಕಾರ, ಮಾರ್ಚ್ 2ರ ಮಧ್ಯಾಹ್ನ ಹಕೀಂ ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಹೆಲ್ಮೆಟ್ ಧರಿಸದ […]

ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿದ ಯುವಕ ಸೆರೆ Read More »

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬಾಗಿಲು ತೆರೆಯದೆ ಎರಡು ತಾಸು ಲೋಕಾಯುಕ್ತ ಅಧಿಕಾರಿಗಳನ್ನು ಸತಾಯಿಸಿದ ಎಇಇ ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ಬೆಂಗಳೂರಿನ 4 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಕೆಆರ್‌ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ. ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಒ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಒ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ,

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ Read More »

ನದಿಯಲ್ಲಿ ತೇಲಿ ಬಂತು ರಾಶಿ ರಾಶಿ ಆಧಾರ್‌ ಕಾರ್ಡ್‌!

ನಾನಾ ರೀತಿಯ ಅನುಮಾನಗಳಿಗೆ ಕಾರಣವಾದ ನದಿಯಲ್ಲಿ ಸಿಕ್ಕಿದ ಆಧಾರ್‌ ಬಂಟ್ವಾಳ: ರಾಶಿ ರಾಶಿ ಆಧಾರ್‌ ಕಾರ್ಡ್‌ ನೇತ್ರಾವತಿ ನದಿಯಲ್ಲಿ ತೇಲಿ ಬಂದು ಬಂಟ್ವಾಳದ ಫರಂಗಿಪೇಟೆ ಸಮೀಪ ದಡಕ್ಕೆ ಬಿದ್ದಿರುವದು ಕಂಡು ಬಂದಿದ್ದು, ಈ ವಿದ್ಯಮಾನ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಹೆಚ್ಚಿನೆಲ್ಲ ಆಧಾರ್‌ ಕಾರ್ಡ್‌ಗಳು ಪುದು ಗ್ರಾಮದ ನಿವಾಸಿಗಳ ವಿಳಾಸಗಳನ್ನು ಹೊಂದಿವೆ. ಯಾರು, ಯಾಕಾಗಿ ಈ ಆಧಾರ್‌ ಕಾರ್ಡ್‌ಗಳನ್ನು ನದಿಗೆ ಎಸೆದಿದ್ದಾರೆ ಎಂಬ ಅನುಮಾನ ಉಂಟಾಗಿದೆ. ಮಂಗಳವಾರ ಸಂಜೆ ಹೊತ್ತು ನದಿ ದಡದಲ್ಲಿ ರಾಶಿ ರಾಶಿ ಅಧಾರ್‌

ನದಿಯಲ್ಲಿ ತೇಲಿ ಬಂತು ರಾಶಿ ರಾಶಿ ಆಧಾರ್‌ ಕಾರ್ಡ್‌! Read More »

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಉಡುಪಿಯಲ್ಲಿ ನರ್ಸಿಂಗ್‌ ಕಲಿಯುತ್ತಿದ್ದ ವಿದ್ಯಾರ್ಥಿನಿ ಉಡುಪಿ : ವೈಯಕ್ತಿಕ ಕಾರಣದಿಂದ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕಡಬ ರೆಂಜಿಲಾಡಿಯ ಲಾರೆನ್ಸ್ ಎಂಬವರ ಮಗಳು ಸ್ವೀಟಿ (18) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಸ್ಪತ್ರೆಯ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಫೆ.25ರಂದು ರಾತ್ರಿ ವಸತಿ ನಿಲಯದಲ್ಲಿರುವಾಗ ಇಲಿ ಪಾಷಣ ಸೇವಿಸಿದ್ದು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು.

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ Read More »

ಇರಾನ್‌ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ : 80ಕ್ಕೂ ಅಧಿಕ ಮಂದಿ ಸಾವು

ಭಾರತದಲ್ಲಿ ಸಮರಾಭ್ಯಾಸ ಮಾಡಿ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಜಲಾಂತರ್ಗಾಮಿಯಿಂದ ದಾಳಿ ವಾಷಿಂಗ್ಟನ್‌ : ಶ್ರೀಲಂಕಾದ ಕರಾವಳಿ ಸಮೀಪ ಇರಾನ್​ ಯುದ್ಧನೌಕೆಯನ್ನು ಮುಳುಗಿಸಿದ್ದು ನಾವೇ ಎಂದು ಅಮೆರಿಕ ಹೇಳಿಕೊಂಡಿದೆ. ಜಲಾಂತರ್ಗಾಮಿಯ ಮೂಲಕ ನೌಕಾ ಸ್ಫೋಟಕ ಬಳಸಿ ಹೊಡೆದು ಮುಳುಗಿಸಿದ್ದೇವೆ. ಅಂತಾರಾಷ್ಟ್ರೀಯ ಜಲ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್‌ನ ಐಆರ್​ಐಎಸ್ ದೇನಾವನ್ನು ಹಿಂದೂ ಮಹಾಸಾಗರದಲ್ಲಿ ಮುಳುಗಿಸಿದ್ದೇವೆ ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿಕೊಂಡು ಯುದ್ಧನೌಕೆಯನ್ನು ಹೊಡೆದುರುಳಿಸಿ ಮುಳುಗಿಸಿದ ಕಾರ್ಯಾಚರಣೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಾಗರದಲ್ಲಿ

ಇರಾನ್‌ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ : 80ಕ್ಕೂ ಅಧಿಕ ಮಂದಿ ಸಾವು Read More »

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ

ಸತತ ಮೂರನೇ ಸಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಇಂಡಿಯಾ-ಇಂಗ್ಲಂಡ್‌ ಮುಂಬೈ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಎರಡನೇ ಪಂದ್ಯ ಇಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲಂಡ್‌ ನಡುವೆ ನಡೆಯಲಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ನ್ಯೂಜಿಲೆಂಡ್‌ ಮಖಾಡೆ ಮಲಗಿಸಿ ಫೈನಲ್‌ಗೇರಿದೆ. ನ್ಯೂಜಿಲೆಂಡ್‌ ಲೆಕ್ಕಕ್ಕೆ ಇಲ್ಲ ಎಂಬ ದಾಟಿಯಲ್ಲಿ ಮಾತನಾಡುತ್ತಿದ್ದ ದಕ್ಷಿಣ ಆಫ್ರಿಕ ಹೀನಾಯವಾಗಿ ಸೋತು ಗರ್ವಭಂಗವಾಗಿ ಕೂಟದಿಂದ ನಿರ್ಗಮಿಸಿದೆ. ಭಾರತ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ

ಟಿ20 ವಿಶ್ವಕಪ್‌ : ಇಂದು ಭಾರತ-ಇಂಗ್ಲಂಡ್‌ ಸೆಮಿ ಫೈನಲ್‌ ಕಾದಾಟ Read More »

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾಲಿ ಇರುವ ಅಕೌಂಟಿಂಗ್ – ಕಚೇರಿ ಸಹಾಯಕರ ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ: 9901355730 ನಂಬರ್ ಗೆ resume ಕಳುಹಿಸಿ.

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ Read More »

ಬೈಕ್ ಮೂಲಕ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ

ಬೆಳ್ತಂಗಡಿ: ರಸ್ತೆಗಳಲ್ಲಿ ವಿವಿಧ ಭಂಗಿಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ನಿರ್ಲಕ್ಷ್ಯತನದಿಂದ ‌ಮಾಡಿ ಸಾಮಾಜಿಕ ಜಾಲತಾಣಗಳ್ಲಿ ‌ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಬೆಳ್ತಂಗಡಿಯ ‌ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ನೂಜಿಲ ನಿವಾಸಿ ಸಂಪತ್(30) ಎಂದು ಗುರುತಿಸಲಾಗಿದೆ. ಆರೋಪಿ ವಿವಿಧ ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸಿ, ಸ್ಟಂಟ್ ‌ಮಾಡಿ, ಹೆಲ್ಮೆಟ್ ರಹಿತ ಚಾಲನೆ ಮಾಡುವ ಮೂಲಕ ಅಪರಾಧ ಎಸಗಿದ್ದ. ಫೆ. 8 ರಂದು ಸಾರ್ವಜನಿಕರಿಗೆ ಅಪಾಯ ಸಂಭವಿಸುವ ರೀತಿಯಲ್ಲಿ ಹೆಲ್ಮೆಟ್ ಸಹ ಧರಿಸದೆ ಅಪಾಯಕಾರಿ ಎಂಬಂತೆ ವೀಲಿಂಗ್ ‌ಮಾಡಿ ಬೈಕ್

ಬೈಕ್ ಮೂಲಕ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕನ ಬಂಧನ Read More »

ಪವಿತ್ರಾ ಗೌಡಗಿಲ್ಲ ಮನೆಯೂಟ: ಹೈಕೋರ್ಟ್

ಬೆಂಗಳೂರು: ಮನೆಯೂಟದ ‌ವಿಚಾರದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ‌ಕೊಲೆ‌ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇನ್ನಿಬ್ಬರು ಆರೋಪಿಗಳಿಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಪವಿತ್ರಾ ‌ಗೌಡ‌ಗೆ ಜೈಲಿನಲ್ಲಿ ಮನೆಯೂಟ ‌ನೀಡಲು ಅವಕಾಶ ಕಲ್ಪಿಸುವಂತೆ ಅವರ ಪರ ವಾಸಿಸುತ್ತಿರುವ ವಕೀಲರು ಸೆಶನ್ಸ್ ‌ಕೋರ್ಟ್‌ಗೆ ಮನವಿ ಮಾಡಿದ್ದರು. ಪವಿತ್ರಾ ಅವರಂತೆಯೇ ಆರೋಪಿಗಳಾದ ನಾಗ ರಾಜು ಮತ್ತು ಲಕ್ಷ್ಮಣ್ ಸಹ ಮನೆಯೂಟ ನೀಡುವಂತೆ ಕೋರ್ಟ್‌ಗೆ ‌ಮನವಿ ಸಲ್ಲಿಸಿದ್ದರು. ಸೆಶನ್ಸ್ ಕೋರ್ಟ್ ದಿನಕ್ಕೊಮ್ಮೆ ‌ಮನೆಯೂಟ ನೀಡುವ ಆದೇಶವನ್ನು ಆರಂಭದಲ್ಲಿ ನೀಡಿತ್ತು. ಬಳಿಕ ಆದೇಶವನ್ನು ಮಾರ್ಪಾಡು ಮಾಡಿ

ಪವಿತ್ರಾ ಗೌಡಗಿಲ್ಲ ಮನೆಯೂಟ: ಹೈಕೋರ್ಟ್ Read More »

ಹತ್ತು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಕುಂದಾಪುರ ಪೊಲೀಸರ ಬಲೆಗೆ

ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಹೀಗೆ ಹತ್ತು ವರ್ಷಗಳಿಂದ ಚಳ್ಳೆಹಣ್ಞು ತಿನ್ನಿಸಿ ನಾಪತ್ತೆಯಾಗಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಕುಂದಾಪುರ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಆರೋಪಿಯನ್ನು ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ ಶೆಟ್ಟಿ (44) ಎಂದು ಗುರುತಿಸಲಾಗಿದೆ. ಕುಂದಾಪುರದ ಯುವತಿಯ ಜೊತೆಗೆ 2015 ರಲ್ಲಿ ಆರೋಪಿ ಶಶಿಕಾಂತ ಶೆಟ್ಟಿ ಮದುವೆಯಾಗಿದ್ದು, ವರದಕ್ಷಿಣೆಗೆ ಸಂಬಂಧಿಸಿದ ಹಾಗೆ ಈ ಮದುವೆ ಮುರಿದು ಬಿದ್ದಿತ್ತು. ಅದರಂತೆ ಆತನ ಪತ್ನಿ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಆತ ತಲೆಮರೆಸಿಕೊಂಡಿದ್ದ. ಸದ್ಯ

ಹತ್ತು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಕುಂದಾಪುರ ಪೊಲೀಸರ ಬಲೆಗೆ Read More »

error: Content is protected !!
Scroll to Top