ಸುದ್ದಿ

ದಾರಿ ಕೇಳುವ ನೆಪದಲ್ಲಿ ಚಿನ್ನ ಕದ್ದು ಪರಾರಿ

ಪುತ್ತೂರು : ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರವನ್ನು  ಎಳೆದು ಕದ್ದೊಯ್ದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ದಾರಿ ಕೇಳಿದ್ದಾನೆ. ಈ ಸಂದರ್ಭ ದಾರಿ ಹೇಳಲು ಬಂದ ವ್ಯಕ್ತಿಯ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ದಾರಿ ಕೇಳುವ ನೆಪದಲ್ಲಿ ಚಿನ್ನ ಕದ್ದು ಪರಾರಿ Read More »

ನಟಿ ಸೌಂದರ್ಯ ಸಾವಿಗೆ ಈ ನಟನೇ ಕಾರಣವಂತೆ

ನಟಿ ಸತ್ತು 21 ವರ್ಷಗಳ ಬಳಿಕ ದಾಖಲಾಯಿತು ದೂರು ಬೆಂಗಳೂರು: ಕನ್ನಡದ ಮೋಹಕ ನಟಿ ಸೌಂದರ್ಯಾ ಹೆಲಿಕಾಪ್ಟರ್‌ ಅಪಘಾತದಲ್ಲಿ ತೀರಿಕೊಂಡು 20 ವರ್ಷಗಳೇ ಕಳೆದಿವೆ. ಈಗ ಅವರ ಸಾವಿನ ಬಗ್ಗೆ ಪ್ರಕಣವೊಂದು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ತೆಲುಗಿನ ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ಕೈವಾಡ ಇದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಈ ವಿಚಾರ ಸಾಕಷ್ಟು ಈಗ ಸಂಚಲನ ಸೃಷ್ಟಿ ಮಾಡಿದೆ. ಸೌಂದರ್ಯಾ 2004ರ ಏಪ್ರಿಲ್ 17ರಂದು ನಿಧನ ಹೊಂದಿದ್ದಾರೆ. ಅವರಿದ್ದ ಖಾಸಗಿ ಹೆಲಿಕಾಪ್ಟರ್‌

ನಟಿ ಸೌಂದರ್ಯ ಸಾವಿಗೆ ಈ ನಟನೇ ಕಾರಣವಂತೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಸಂಚಲನ ಹುಟ್ಟಿಸಿದ ಸುನಿಲ್‌ ಕುಮಾರ್‌ ಪ್ರಶ್ನೆ

ಚಿನ್ನ ಸದಾಶಿವ ನಗರಕ್ಕೆ ಹೋಗಿದೆಯಾ? ಚಾಮರಾಜ ನಗರಕ್ಕೆ ಹೋಗಿದೆಯಾ ಹೇಳಿಕೆಯಿಂದ ಸಚಿವರಿಗೆ ಕಸಿವಿಸಿ ಬೆಂಗಳೂರು: ಚಿತ್ರನಟಿ ರನ್ಯಾ ರಾವ್ ಶಾಮೀಲಾಗಿರುವ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಶಾಸಕ ಸುನಿಲ್‌ ಕುಮಾರ್‌ ನೀಡಿದ ಹೇಳಿಕೆ ಸಂಚಲನ ಹುಟ್ಟಿಸಿದೆ. ಈ ಹೇಳಿಕೆಗೆ ಹಲವು ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರ ಜೊತೆಗೆ ಮಾತನಾಡುವಾಗ ಸುನಿಲ್‌ ಕುಮಾರ್‌ ನಟಿ ರನ್ಯಾ ರಾವ್‌ ತಂದ ಚಿನ್ನ ಎಲ್ಲಿಗೆ ಹೋಗಿದೆ ಸದಾಶಿವ ನಗರಕ್ಕೆ ಹೋಗಿದೆಯಾ ಅಥವಾ ಚಾಮರಾಜ ನಗರಕ್ಕೆ ಹೋಗಿದೆಯಾ ಎಂಬುದರ ಬಗ್ಗೆ ತನಿಖೆಯಾಗಲಿ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಸಂಚಲನ ಹುಟ್ಟಿಸಿದ ಸುನಿಲ್‌ ಕುಮಾರ್‌ ಪ್ರಶ್ನೆ Read More »

ಮತ್ತೆ ಮದ್ಯದ ಬೆಲೆ ಏರಿಕೆ?

ಬಜೆಟ್‌ನಲ್ಲಿ ನೀಡಿದ ಗುರಿ ತಲುಪಲು ಬೆಲೆ ಹೆಚ್ಚಿಸುವುದು ಅನಿವಾರ್ಯ ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮದ್ಯದ ದರ ಹೆಚ್ಚಿಸಲು ಚಿಂತನೆ ನಡೆದಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ದರ ಹೆಚ್ಚಳ ಮಾಡುವ ಬಗ್ಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಲಾಗಿದೆ. ಹೆಚ್ಚುವರಿ ಗುರಿಯನ್ನು

ಮತ್ತೆ ಮದ್ಯದ ಬೆಲೆ ಏರಿಕೆ? Read More »

ಉಪ್ಪಿನಂಗಡಿ ನದಿಯಲ್ಲಿ  ವ್ಯಕ್ತಿಯೋರ್ವನ ಶವ ಪತ್ತೆ

ಉಪ್ಪಿನಂಗಡಿ : ಉಪ್ಪಿನಂಗಡಿ ನದಿಯಲ್ಲಿ ಶವವೊಂದು ಪತ್ತೆಯಾದ ಘಟನೆ ಇಂದು ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿ ಬಳಿಕ, ಸ್ಥಳಕ್ಕೆ ಪೊಲೀಸರು ಹಾಗೂ ಅಗತ್ಯ ತಂಡಗಳು ತೆರಳಿ ಶವವನ್ನು ಹೊರತೆಗೆದಿದ್ದಾರೆ. ಶವದ ಗುರುತಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಉಪ್ಪಿನಂಗಡಿ ನದಿಯಲ್ಲಿ  ವ್ಯಕ್ತಿಯೋರ್ವನ ಶವ ಪತ್ತೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶ

ವಿಮಾನ ನಿಲ್ದಾಣದಿಂದ ಹೊರಬರಲು ವಿಶೇಷ ಪ್ರೊಟೊಕಾಲ್‌ ಒದಗಿಸಿದ ಅನುಮಾನ ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್ ಒಳಗೊಂಡಿರುವ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಆಕೆಯ ಮಲತಂದೆ ಡಿಜಿಪಿ ಡಾ.ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೊಟೊಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶ Read More »

ಕೆ.ಎಸ್. ಎಸ್ ಕಾಲೇಜು ವಿದ್ಯಾರ್ಥಿಗಳಿಂದ ನ್ಯಾಯಾಲಯಕ್ಕೆ ಭೇಟಿ

ಪುತ್ತೂರು : ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಮಾರ್ಚ್ 10 ರಂದು ಪುತ್ತೂರು ಸ್ಟೇಷನ್, ನ್ಯಾಯಾಲಯಕ್ಕೆ ಅಂತಿಮ ಬಿಬಿಎ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭೇಟಿ ಕಾರ್ಯಕ್ರಮ ನಡೆಯಿತು. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಶಿವಪ್ರಸಾದ್ ಎಸ್ ಅವರ ಮಾರ್ಗದರ್ಶನದಲ್ಲಿ ಹಿರಿಯ ವಕೀಲ ಮತ್ತು ನೋಟರಿ ಜಯರಾಮ್ ಚಿಲ್ತಡ್ಕ ಮತ್ತು ವಕೀಲ ಚೇತನ್ ಕೆ ಅವರ ಸಹಕಾರದಿಂದ ವಿದ್ಯಾರ್ಥಿಗಳು ನ್ಯಾಯಾಲಯದ ವಿಚಾರಣೆಗಳ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಪಡೆದರು  ಪಠ್ಯಕ್ಕೆ ಸಂಬಂಧಪಟ್ಟಂತೆ ಅನುಭವಾತ್ಮಕ ಕಲಿಕೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಅಂಶಗಳ ಮಾಹಿತಿ

ಕೆ.ಎಸ್. ಎಸ್ ಕಾಲೇಜು ವಿದ್ಯಾರ್ಥಿಗಳಿಂದ ನ್ಯಾಯಾಲಯಕ್ಕೆ ಭೇಟಿ Read More »

ನೇಣುಬಿಗಿದು ಯುವತಿ ಆತ್ಮಹತ್ಯೆ

ಬ್ರಹ್ಮಾವರ : ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಮನನೊಂದು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೆಲಿನ್ ಡಿಸೋಜ(46) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.9ರಂದು ಸಂಜೆ ಮನೆಯ ಹಾಲ್‌ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ಯುವತಿ ಆತ್ಮಹತ್ಯೆ Read More »

ಸದನದಲ್ಲಿ ಪ್ರತಿಧ್ವನಿಸಿದ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌

ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ಬಹಿರಂಗಪಡಿಸಲು ಸುನಿಲ್‌ ಕುಮಾರ್‌ ಒತ್ತಾಯ ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಜೊತೆ ನಂಟು ಹೊಂದಿರುವ ರಾಜ್ಯದ ಇಬ್ಬರು ಸಚಿವರ ಹೆಸರು ಬಹಿರಂಗಪಡಿಸಲು ಮತ್ತು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ಶಾಸಕ ಸುನಿಲ್‌ ಕುಮಾರ್‌ ನಿನ್ನೆ ಸದನದಲ್ಲಿ ಒತ್ತಾಯಸಿದ್ದಾರೆ. ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುನಿಲ್‌ ಕುಮಾರ್‌ ನಟಿಯೊಬ್ಬರು ಭಾರಿ ಪ್ರಮಾಣದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ವಿಚಾರ ಮಾಧ್ಯಮಗಳಲ್ಲಿ ಬಂದಿದೆ. ಈ ನಟಿಯ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳಿದ್ದು,

ಸದನದಲ್ಲಿ ಪ್ರತಿಧ್ವನಿಸಿದ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ Read More »

ಶರವೂರು ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆ

ಅಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬ ಕಲಾಸಂಗಮ   ಶರವೂರು ಇದರ ವತಿಯಿಂದ ಇಷ್ಟಾರ್ಥ ಸಿದ್ಧಿಗಾಗಿ  ಯಕ್ಷಗಾನ ತಾಳಮದ್ದಳೆ ಸೇವೆಯು ಶ್ರೀ ದೇವಿ ಸನ್ನಿದಿಯಲ್ಲಿ ಅರ್ಚಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಹರೀಶ ಉಪಾಧ್ಯಾಯ ಮತ್ತು ರಾಘವೇಂದ್ರ ಪ್ರಸಾದರು  ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರದಲ್ಲಿ ದೇವಿಗೆ ಪ್ರಿಯವಾದ  ಯಕ್ಷಗಾನ ಸೇವೆ   ಹಿಂದಿನಿಂದಲೂ ನಡೆಯುತ್ತಿದ್ದು ಇಷ್ಟಾರ್ಥ ಸಿದ್ಧಿಗಾಗಿ  ಈಗ ಆರಂಭಿಸಲ್ಪಡುತ್ತಿರುವ ತಾಳಮದ್ದಳೆಯು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ 

ಶರವೂರು ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆ Read More »

error: Content is protected !!
Scroll to Top