ಸುದ್ದಿ

ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಾಳೆ ಗೋಪೂಜೆಗೆ ‌ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ದೀಪಾವಳಿ ಹಿನ್ನೆಲೆ ನಾಳೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಬಲಿಪಾಡ್ಯಮಿ ಹಿನ್ನೆಲೆ ಗೋಪೂಜೆ ನಡೆಸುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರು, ಕರ್ನಾಟಕ ಸರ್ಕಾರದ ಪರ ಬಲಿಪಾಡ್ಯಮಿಯಂದು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಗೋ ಪೂಜೆ ನಡೆಸುವಂತೆ ಆದೇಶಿಸಿರುವುದಾಗಿದೆ. ಹಿಂದೂ ಧರ್ಮದಲ್ಲಿ ಗೋವಿಗೆ ‌ವಿಶೇಷ ಸ್ಥಾನಮಾನ ಇದ್ದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಗೋವುಗಳ ಮಹತ್ವ ಮತ್ತು ಅವುಗಳ […]

ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಾಳೆ ಗೋಪೂಜೆಗೆ ‌ರಾಜ್ಯ ಸರ್ಕಾರ ಆದೇಶ Read More »

ಮಾವೋವಾದ ಇತಿಹಾಸದ ಪುಟ ಸೇರಲಿದೆ: ರಾಜನಾಥ್ ಸಿಂಗ್

ನವದೆಹಲಿ: ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಕಾರ್ಯಾಚರಣೆಯ ಫಲವಾಗಿ ಭಾರತದಲ್ಲಿ ಮಾವೋವಾದ ಶೀಘ್ರದಲ್ಲೇ ಇತಿಹಾಸದ ಪುಟಗಳನ್ನು ಸೇರಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಸಮಯದಲ್ಲಿ ಸರ್ಕಾರದ ವಿರುದ್ಧ ಶಸ್ತ್ರ ಹಿಡಿದ ನಕ್ಸಲರು ಈಗ ಶರಣಾಗತರಾಗುತ್ತಿದ್ದು, ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇದು ದೇಶ ನಕ್ಸಲಿಸಂ ಮುಕ್ತವಾಗುತ್ತಿರುವುದರಲ್ಲಿ ಯಶಸ್ಸು ಕಾಣುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ

ಮಾವೋವಾದ ಇತಿಹಾಸದ ಪುಟ ಸೇರಲಿದೆ: ರಾಜನಾಥ್ ಸಿಂಗ್ Read More »

ಸಿಡಿಲು ಬಡಿದು ಮೃತಪಟ್ಟ ‌ವ್ಯಕ್ತಿಯ ಕುಟುಂಬಕ್ಕೆ ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದಿಂದ ನೆರವಿನ ಹಸ್ತ

ಪುತ್ತೂರು: ಇತ್ತೀಚೆಗೆ ಸಿಡಿಲು ಬಡಿದು ಮೃತರಾದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ವಾಮನ ಅವರ ಕುಟುಂಬಕ್ಕೆ ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಹಾಯ ಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ನರಿಮೊಗರು ಶಕ್ತಿ ಕೇಂದ್ರದ ಪ್ರಮುಖ ಲಕ್ಷ್ಮಿ ಪ್ರಸಾದ್, ಶಾಂತಿಗೋಡು ಶಕ್ತಿ ಕೇಂದ್ರ ಪ್ರಮುಖ ವಿಶ್ವನಾಥ ಬಲ್ಲ್ಯಾಯ, ನರಿಮೊಗರು ಸಿಎ ಬ್ಯಾಂಕಿನ ಅಧ್ಯಕ್ಷ ನವೀನ್ ಡಿ. ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ರೈ ಶಿಬರ, ದಿನೇಶ್ ಆನಡ್ಕ , ತಾರಾನಾಥ, ಮತ್ತು ಪದ್ಮಯ ಗೌಡ ಹಾಗೂ ಪಕ್ಷದ ಕಾರ್ಯಕರ್ತರು

ಸಿಡಿಲು ಬಡಿದು ಮೃತಪಟ್ಟ ‌ವ್ಯಕ್ತಿಯ ಕುಟುಂಬಕ್ಕೆ ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದಿಂದ ನೆರವಿನ ಹಸ್ತ Read More »

ಉದ್ಯಮಿ ಕಿರಣ್ ಮಜುಂದಾರ್ ಶಾ – ಡಿ ಕೆ ಶಿವಕುಮಾರ್ ಭೇಟಿ

ಬೆಂಗಳೂರು: ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಟ್ವೀಟ್ ವಾರ್ ನಡೆಸಿದ್ದ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಸದ ಸಮಸ್ಯೆ, ರಸ್ತೆ ಹೊಂಡ ಗುಂಡಿಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದ ಹಾಗೆ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮೂಲಕ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಾ ಅವರ ಟ್ವೀಟ್‌ಗಳ ಹಿಂದೆ ಇನ್ಯಾವುದೋ ಅಜೆಂಡಾ ಇದೆ ಎಂಬುದಾಗಿ

ಉದ್ಯಮಿ ಕಿರಣ್ ಮಜುಂದಾರ್ ಶಾ – ಡಿ ಕೆ ಶಿವಕುಮಾರ್ ಭೇಟಿ Read More »

ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಮೋದಿ ಭಾವನಾತ್ಮಕ ಪತ್ರ

ಸಹಕಾರ, ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ ಎಂದು ಹಾರೈಕೆ ನವದೆಹಲಿ : ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಹಬ್ಬದ ಆಶಯದೊಂದಿಗೆ ದೇಶ ಹೇಗೆ ಮುನ್ನಡೆಯುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾದ ಆಪರೇಷನ್ ಸಿಂದೂರ ಸಮಯದಲ್ಲಿ ಭಾರತ ಸದಾಚಾರವನ್ನು ಎತ್ತಿಹಿಡಿಯಿತು ಮಾತ್ರವಲ್ಲದೆ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಜಾಗತಿಕ ಸಂಘರ್ಷಗಳು ನಡೆಯುತ್ತಿರುವ ಹೊರತಾಗಿಯೂ ದೇಶವು ಸ್ಥಿರತೆ ಮತ್ತು ಸೂಕ್ಷ್ಮತೆಯ

ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಮೋದಿ ಭಾವನಾತ್ಮಕ ಪತ್ರ Read More »

ವಿಷ ಸೇವಿಸಿದ್ದ ವ್ಯಕ್ತಿ ಮೃತ್ಯು

ಬೆಳ್ತಂಗಡಿ: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದ್ದು ಧರ್ಮಸ್ಥಳ ‌ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ. ಕಳೆಂಜ ಗ್ರಾಮದ ನಿವಾಸಿ ಅನುರಾಜ್ (43) ಮೃತ ವ್ಯಕ್ತಿಯಾಗಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿದ್ದ ಈತ ಅ.17ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿದ್ದು ಆತನನ್ನು ಕೂಡಲೇ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಅ18ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತನ ಸಹೋದರ ಬಾಬು ನೀಡಿರುವ ದೂರಿನಂತೆ‌ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ

ವಿಷ ಸೇವಿಸಿದ್ದ ವ್ಯಕ್ತಿ ಮೃತ್ಯು Read More »

ದೀಪಾವಳಿ ಬೋನಸ್‌ ಕೊಡದ ಮಾಲೀಕ : ಟೋಲ್‌ಗೇಟ್‌ ತೆರೆದಿಟ್ಟು ಪ್ರತಿಭಟಿಸಿದ ನೌಕರರು

ಇಡೀ ದಿನ ಟೋಲ್‌ ಸಂಗ್ರಹಿಸದೆ ಕಂಪನಿಗೆ ಲಕ್ಷಾಂತರ ರೂ. ನಷ್ಟ ಮಾಡಿ ಸೇಡು ತೀರಿಸಿಕೊಂಡ ನೌಕರರು ನವದೆಹಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲೀಕರು ಕೊಡುವ ಬೋನಸ್‌ ಮತ್ತು ಉಡುಗೊರೆಗಾಗಿ ನೌಕರರು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಬೋನಸ್‌ ಮತ್ತು ಉಡುಗೊರೆ ಕೊಡುತ್ತವೆ. ಆದರೆ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಫತೇಬಾದ್‌ನಲ್ಲಿರುವ ಟೋಲ್‌ ಗೇಟ್‌ ಸಿಬ್ಬಂದಿಗೆ ಮಾಲೀಕರು ಈ ವರ್ಷ ಅತ್ಯಲ್ಪ ಮೊತ್ತ ಬೋನಸ್‌ ನೀಡಿದ್ದರು. ಇದರಿಂದ ಕೆರಳಿದ ಸಿಬ್ಬಂದಿ

ದೀಪಾವಳಿ ಬೋನಸ್‌ ಕೊಡದ ಮಾಲೀಕ : ಟೋಲ್‌ಗೇಟ್‌ ತೆರೆದಿಟ್ಟು ಪ್ರತಿಭಟಿಸಿದ ನೌಕರರು Read More »

ಶಾಲಾ ಆವರಣಗಳಲ್ಲಿ ಕಾರ್ಯಕ್ರಮ ನಿಷೇಧಿಸಲು ಜಗದೀಶ್‌ ಶೆಟ್ಟರ್‌ ಸುತ್ತೋಲೆ ಹೊರಡಿಸಿದ್ದಕ್ಕೆ ಸಾಕ್ಷಿ ಇಲ್ಲ : ಆರ್‌. ಅಶೋಕ್‌

ಕಾಂಗ್ರೆಸ್‌ ಸರ್ಕಾರದಿಂದ ರೌಡಿಯಿಸಂ, ಬೆದರಿಕೆ ತಂತ್ರ ಎಂದು ಆರೋಪ ಬೆಂಗಳೂರು : ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಹಿಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ. ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿತ್ತು. ಇದನ್ನು ಎಲ್ಲದ್ದಕ್ಕೂ ಅನ್ವಯಿಸಿ ಮಾರ್ಪಾಡು ಮಾಡಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್‌ ಶೆಟ್ಟರ್‌ ಅಥವಾ

ಶಾಲಾ ಆವರಣಗಳಲ್ಲಿ ಕಾರ್ಯಕ್ರಮ ನಿಷೇಧಿಸಲು ಜಗದೀಶ್‌ ಶೆಟ್ಟರ್‌ ಸುತ್ತೋಲೆ ಹೊರಡಿಸಿದ್ದಕ್ಕೆ ಸಾಕ್ಷಿ ಇಲ್ಲ : ಆರ್‌. ಅಶೋಕ್‌ Read More »

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ಮಲತಂದೆ ಬಂಧನ

ಐದು ವರ್ಷ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿ ಪೀಡಿಸಿದ್ದ ತಂದೆ ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆಕೆಯ ಮಲತಂದೆಯೇ ಹಲವು ವರ್ಷಗಳಿಂದ ಅತ್ಯಾಚಾರಗೈದ ಆಘಾತಕಾರಿ ಘಟನೆ ಉಳ್ಳಾಲದಲ್ಲಿ ಬೆಳಕಿಗೆ ಬಂದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಮೀರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯ ತಂದೆ ಮೃತಪಟ್ಟ ಬಳಿಕ ಆಕೆಯ ತಾಯಿ ಅಮೀರ್ ಎಂಬಾತನ ಜೊತೆ ವಿವಾಹವಾಗಿ ಕುಂಪಲದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಈ ಮಧ್ಯೆ ತಾಯಿ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ಮಲತಂದೆ ಬಂಧನ Read More »

26,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯಾದ್ಯಂತ 26,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ನೇಮಕಾತಿ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅ. 23 ರಿಂದ ನ. 9 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಡಿ. 7 ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಶೀಘ್ರವೇ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಯನ್ನೂ ಸರ್ಕಾರ ಹೊರಡಿಸಲಿದೆ. ಹೊಸದಾಗಿ ರಾಜ್ಯದಲ್ಲಿ 800 ಕೆಪಿಎಸ್ ‌ಶಾಲೆಗಳನ್ನೂ ಆರಂಭ ಮಾಡಲಾಗುತ್ತದೆ. ಆರನೇ

26,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ Read More »

error: Content is protected !!
Scroll to Top