ಸುದ್ದಿ

ಶ್ರೀಮತಿ ಲೇಖಲತಾ ದಿನೇಶ್ ಮೆದು ಅವರಿಗೆ ಚಿನ್ನದ ಪದಕ

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುಮಾಸ್ತೆಯಾಗಿರುವ ಶ್ರೀಮತಿ ಲೇಖಲತಾ ದಿನೇಶ್ ಮೆದು ಅವರು ಇತ್ತೀಚೆಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಕೃಷಿ ವಿಜ್ಞಾನ ಕೇಂದ್ರ (ದ.ಕ.) ಮಂಗಳೂರು ಸಮೇತಿ (ದಕ್ಷಿಣ) ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಬೆಂಗಳೂರು, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ ಮತ್ತು ಕೃಷಿ ಇಲಾಖೆ ದಕ್ಷಿಣ ಕನ್ನಡ […]

ಶ್ರೀಮತಿ ಲೇಖಲತಾ ದಿನೇಶ್ ಮೆದು ಅವರಿಗೆ ಚಿನ್ನದ ಪದಕ Read More »

ಪುತ್ತೂರು : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಪುತ್ತೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.169/2018ರ ಕಲಂ 323, 504, 506, 406, 424 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳದ ಮಲಪ್ಪುರಂ ನಿವಾಸಿ ನಿಖಿಲ್ ಕೆ (36) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜನಾರ್ದನ ಕೆ.ಎಂ ಹಾಗೂ ಸಿಬ್ಬಂದಿ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿಲುವೈಪುರದಲ್ಲಿ

ಪುತ್ತೂರು : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಜೇಬಿನಲ್ಲೇ ಸ್ಫೋಟಿಸಿದ ಮೊಬೈಲ್‌ : ಯುವಕನಿಗೆ ಗಾಯ

ಸುಳ್ಯ: ಮೊಬೈಲ್‌ ಫೋನ್‌ ಜೇಬಿನಲ್ಲೇ ಸ್ಫೋಟಿಸಿದ ಪರಿಣಾಮ ಯುವಕ ಗಾಯಗೊಂಡ ಘಟನೆ ಸುಳ್ಯದಲ್ಲಿ ಸಂಭವಿಸಿದೆ. ಸುಳ್ಯದ ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಗಾಯಗೊಂಡವರು. ಗುರುಪ್ರಸಾದ್ ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲನ್ನು ತನ್ನ ಪ್ಯಾಂಟ್‌ನ ಜೇಬಿನೊಳಗೆ ಹಾಕಿಕೊಂಡಿದ್ದರು. ಈ ವೇಳೆ ಮೊಬೈಲ್‌ ಸ್ಫೋಟಗೊಂಡಿದೆ. ಪ್ಯಾಂಟ್‌ ಜೇಬಿನೊಳಗಿದ್ದ ಕಾರಣ ತೊಡೆಯ ಚರ್ಮ ಬೆಂದು ಹೋಗಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಜೇಬಿನಲ್ಲೇ ಸ್ಫೋಟಿಸಿದ ಮೊಬೈಲ್‌ : ಯುವಕನಿಗೆ ಗಾಯ Read More »

ಬೆಂಕಿ ಅವಘಡ : ಟಯರ್‌ ಪಂಕ್ಚರ್‌ ಅಂಗಡಿ ನಾಶ

ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಸಿಡಿದು ಅನಾಹುತ ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಜಾ ಸಮೀಪವಿರುವ ಟೈರ್ ಪಂಕ್ಚರ್ ಅಂಗಡಿಯೊಂದು ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಹತ್ತಿರದ ಇಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ನಿಂದ ಹೊರಬಂದ ಕಿಡಿಗಳು ಒಣ ಹುಲ್ಲಿಗೆ ತಗುಲಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಹರಡಿ, ಬಿಹಾರ ಮೂಲದ ಸೈಫುಲ್ಲಾ ಎಂಬುವವರಿಗೆ ಸೇರಿದ ಅಂಗಡಿಗೆ ತಗುಲಿದೆ. ಅಂಗಡಿಯಲ್ಲಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್‌ಗಳು ಮತ್ತು ದಾಸ್ತಾನು ಮಾಡಲಾಗಿದ್ದ

ಬೆಂಕಿ ಅವಘಡ : ಟಯರ್‌ ಪಂಕ್ಚರ್‌ ಅಂಗಡಿ ನಾಶ Read More »

ಬಸ್‌ ಡಿವೈಡರ್‌ಗೆ ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು

ಚಾಲಕನ ನಿದ್ರೆಯ ಮಂಪರಿನಿಂದ ಸಂಭವಿಸಿದ ಭೀಕರ ಅಪಘಾತ ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ಬಳಿ ಬೆಳ್ಳಂಬೆಳಗ್ಗೆ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೇರಳಂ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್‌ ಕೇರಳದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಪುಟ್ಟಪ್ಪನದೊಡ್ಡಿ ಬಳಿ ಬಸ್‌ ಡಿವೈಡರ್‌ಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬಸ್‌ ಡಿವೈಡರ್‌ಗೆ ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು Read More »

ಅತ್ಯಾಚಾರ ದೂರು ದಾಖಲಿಸಿದ ಶಿಕ್ಷಕಿಗೆ ಬೆದರಿಕೆ?

ಇನ್‌ಸ್ಪೆಕ್ಟರ್‌ ಸಂದೇಶ್‌ ಪರವಾಗಿ ಮಹಿಳೆಯರಿಬ್ಬರಿಂದ ಬೆದರಿಕೆ ಎಂದು ಆರೋಪ ಮಂಗಳೂರು: ಅಮಾನತಿನಲ್ಲಿರುವ ಮೂಡುಬಿದಿರೆ ಇನ್‌ಸ್ಪೆಕ್ಟರ್​​​ ಸಂದೇಶ್ ವಿರುದ್ಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೊ ಎಂಬಿಬ್ಬರು ಮಹಿಳೆಯರ ಮೂಲಕ ಸಂದೇಶ್​​ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನು ಸಂತ್ರಸ್ತೆ ಶಿಕ್ಷಕಿಯ ಮನೆಗೆ ಕಳುಹಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ

ಅತ್ಯಾಚಾರ ದೂರು ದಾಖಲಿಸಿದ ಶಿಕ್ಷಕಿಗೆ ಬೆದರಿಕೆ? Read More »

ಕೃಷ್ಣನಗರದ ಹಳೆಯ ಮನೆಗೆ ಹೊಸ ಕಾಯಕ: ಸಾಯಿ ಸೇವಾ ಕಾರ್ಯ

ಪುತ್ತೂರು:ಪುತ್ತೂರಿನ ಕೃಷ್ಣನಗರದ ಸಮೀಪವಿರುವ ಹಳೆಯ ಮನೆಯೊಂದರ ಮೇಲ್ಛಾವಣಿಯು ಸಂಪೂರ್ಣವಾಗಿ ಶಿಥಿಲಗೊಂಡು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದಾಗ, ಶ್ರೀ ಸತ್ಯಸಾಯಿ ಸ್ವಯಂಸೇವಕರು ಮಾನವೀಯತೆಯ ನೆಲೆಯಲ್ಲಿ ನೆರವಿಗೆ ಧಾವಿಸಿದ್ದಾರೆ. ಮಳೆಗಾಲದ ಮುನ್ನವೇ ಈ ಮನೆಯನ್ನು ದುರಸ್ತಿಗೊಳಿಸುವ ಉದ್ದೇಶದಿಂದ, ವಿಶೇಷ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದಸ್ಯರು ಸ್ವತಃ ಶ್ರಮದಾನದಲ್ಲಿ ಪಾಲ್ಗೊಂಡು, ಹಳೆಯ ಮೇಲ್ಛಾವಣಿಯನ್ನು ತೆರವುಗೊಳಿಸಿ ಹೊಸ ಶೀಟ್ ಹಾಗೂ ಅಗತ್ಯ ಸಾಮಗ್ರಿಗಳನ್ನು ಅಳವಡಿಸುವ ಮೂಲಕ ಮನೆಯನ್ನು ಸುಸ್ಥಿತಿಗೆ ತಂದಿದ್ದಾರೆ. ಈ ಉದಾತ್ತ ಸೇವಾ ಕಾರ್ಯದಲ್ಲಿ ಪ್ರೊ. ಗೋವಿಂದ ಭಟ್, ರಮೇಶ್ ಆಚಾರ್, ಜಗನ್ನಾಥ

ಕೃಷ್ಣನಗರದ ಹಳೆಯ ಮನೆಗೆ ಹೊಸ ಕಾಯಕ: ಸಾಯಿ ಸೇವಾ ಕಾರ್ಯ Read More »

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ವಿರುದ್ಧ ಅತ್ಯಾಚಾರ ದೂರು ದಾಖಲು

ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಶಿಕ್ಷಕಿ ಮಂಗಳೂರು : ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಅಸಭ್ಯ ವರ್ತನೆಯ ಕಾರಣಕ್ಕೆ ಅಮಾನತುಗೊಂಡಿರುವ ಮೂಡುಬಿದಿರೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ.ವಿರುದ್ಧ ಬೆಳ್ತಂಗಡಿಯ ವೇಣೂರು ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಶಿಕ್ಷಕಿಯೊಬ್ಬರು ಇನ್‌ಸ್ಪೆಕ್ಟರ್ ಸಂದೇಶ್ ವಿರುದ್ಧ ದೂರು ನೀಡಿದ್ದಾರೆ. ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು ಸಂದೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಗಂಡಂದಿರ ಮೇಲೆ ಕೇಸ್ ಹಾಕಿ ಅವರ

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ವಿರುದ್ಧ ಅತ್ಯಾಚಾರ ದೂರು ದಾಖಲು Read More »

ಹಾರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ಗೆ 48 ತಾಸುಗಳ ಗಡುವು ನೀಡಿದ ಟ್ರಂಪ್‌

ತೆರೆಯದಿದ್ದರೆ ಇರಾನ್‌ನ ವಿದ್ಯುತ್‌ ಸ್ಥಾವರಗಳನ್ನು ನಾಶ ಮಾಡುವ ಬೆದರಿಕೆ ವಾಷಿಂಗ್ಟನ್ : ವಿಶ್ವಕ್ಕೆ ಐದನೇ ಒಂದು ಭಾಗದಷ್ಟು ತೈಲ ಸಾಗಾಟವಾಗುವ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಮುಕ್ತ ಸಂಚಾರಕ್ಕಾಗಿ ಮತ್ತೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಅಮೆರಿಕ ಹಲವಾರು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿರಿಸಿ ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 28ರಂದು

ಹಾರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ಗೆ 48 ತಾಸುಗಳ ಗಡುವು ನೀಡಿದ ಟ್ರಂಪ್‌ Read More »

ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು

ಚೀನಾಕ್ಕೆಂದು ಹೊರಟಿದ್ದ ಬೃಹತ್‌ ತೈಲ ಟ್ಯಾಂಕರ್‌ ಭಾರತಕ್ಕೆ ಯು ಟರ್ನ್‌ ಮಂಗಳೂರು: ಚೀನಾಕ್ಕೆ ಹೊರಟಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ಹಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಹತ್ವದ ಬೆಳವಣಿಗೆಯಿಂದ ಯುಟರ್ನ್ ಹೊಡೆದು ಶನಿವಾರ ಮಂಗಳೂರಿಗೆ ಆಗಮಿಸಿದೆ. ರಷ್ಯಾದ ಅಕ್ವಾ ಟೈಟಾನ್‌ ಹಡಗು ಸುಮಾರು 86 ಸಾವಿರ ಮೆಟ್ರಿಕ್ ಟನ್ ತೈಲ ಹೊತ್ತು ಮಂಗಳೂರಿಗೆ ಆಗಮಿಸಿದೆ. ಚೀನಾಕ್ಕೆ ಹೊರಟ ಈ ಹಡಗಿಗೆ ಜನವರಿಯಲ್ಲಿ ತೈಲ ತುಂಬಲಾಗಿದ್ದು, ಮಾರ್ಚ್ ಮಧ್ಯದಲ್ಲಿ ಆಗ್ನೇಯ ಏಷ್ಯಾದಲ್ಲಿ ಸಂಚರಿಸುತ್ತಿತ್ತು. ಈ ಸಂದರ್ಭ ಚೀನಾದ ರಿಝಾವೊ

ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು Read More »

error: Content is protected !!
Scroll to Top