ಸುದ್ದಿ

ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

10ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್‌ ಮಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ ಸಮೀಪ ಮದನಿನಗರದ ಕೆ2 ಅಪಾರ್ಟ್‌ಮೆಂಟ್ ನಿವಾಸಿ ಫರಾಜ್ ಅಲಿಯಾಸ್‌ ಮೊಹಮ್ಮದ್ ಫರಾಜ್ (32) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆಯತ್ನ, ಮಾದಕ ವಸ್ತು ಮಾರಾಟ, ಕಳವು ಹಾಗೂ ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ […]

ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಏ.1ರಂದು ತುಮಕೂರಿಗೆ ರಾಷ್ಟ್ರಪತಿ ಆಗಮನ

ಬೆಂಗಳೂರು: ತುಮಕೂರಿನಲ್ಲಿ ಏ.1ರಂದು ಶಿವೈಕ್ಯ ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಮಾ.31ರಂದು ಸಂಜೆ ಬೆಂಗಳೂರಿಗೆ ಆಗಮಿಸಿ ರಾಜಭವನದಲ್ಲಿ ತಂಗಲಿದ್ದಾರೆ. ಏ.1ರಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಸಿದ್ದಗಂಗಾ ಶ್ರೀಗಳ ಗದ್ದಿಗೆ ದರ್ಶನ ಪಡೆದು ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು ಒಂದೂವರೆ ಗಂಟೆಗಳ ಕಾಲ ಇರಲಿದ್ದಾರೆ ಎಂದು ಸಿದ್ದಗಂಗಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಮಾಹಿತಿ

ಏ.1ರಂದು ತುಮಕೂರಿಗೆ ರಾಷ್ಟ್ರಪತಿ ಆಗಮನ Read More »

ಶಾಮನೂರು ಮೊಮ್ಮಗ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ

ಮುಸ್ಲಿಮರ ಬೇಡಿಕೆಗೆ ಸಿಗದ ಮನ್ನಣೆ ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್​​ಗೆ ದೊಡ್ಡ ತಲೆನೋವಾಗಿದ್ದ ದಾವಣಗೆರೆ ದಕ್ಷಿಣ ಟಿಕೆಟ್​​ ಗೊಂದಲ ಕೊನೆಗೂ ಬಗೆಹರಿದಿದೆ. ಶಾಮನೂರ ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರ್​​​​​ಗೆ ಕಾಂಗ್ರೆಸ್ ಹೈಕಮಾಂಡ್​​ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಮತ್ತೆ ಶಾಮನೂರ ಕುಟುಂಬದ ಪಾಲಾಗಿದೆ. ದಾವಣಗೆರೆ ಟಿಕೆಟ್‌ಗಾಗಿ ಮುಸ್ಲಿಮ್‌ ಸಮುದಾಯದವರು ಪಟ್ಟುಹಿಡಿದಿದ್ದರು. ಸಚಿವ ಜಮೀರ್‌ ಅಹ್ಮದ್‌ಖಾನ್‌ ಅಖಾಡಕ್ಕಿಳಿದು ಟಿಕೆಟ್‌ ಮುಸ್ಲಿಮರಿಗೆ ಟಿಕೆಟ್‌ ಕೊಡದಿದ್ದರೆ ರಾಜೀನಾಮೆ ನೀಡುವ ಧಮಕಿ

ಶಾಮನೂರು ಮೊಮ್ಮಗ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ Read More »

ಭೀಕರ ಅಪಘಾತ : ಮೂವರು ಮಹಿಳೆಯರ ಸಹಿತ ಆರು ಮಂದಿ ಸಾವು

ಬೆಂಗಳೂರು: ಬೆಂಗಳೂರಿನ ಆಸುಪಾಸಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಎರಡು ಭೀಕರ ಅಪಘಾತದಲ್ಲಿ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೆಯಿಂದ ಸರ್ವೀಸ್ ರಸ್ತೆಗೆ‌ ಬರುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ.

ಭೀಕರ ಅಪಘಾತ : ಮೂವರು ಮಹಿಳೆಯರ ಸಹಿತ ಆರು ಮಂದಿ ಸಾವು Read More »

ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು

ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ. ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ

ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು Read More »

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ವಂಚನೆಗೆ ಬಳಕೆ ಮಾಡುವ ಮೊಬೈಲ್ ಡಿವೈಸ್ ಐಡಿ‌ಗಳನ್ನು ‌ಶಾಶ್ವತವಾಗಿ ಬ್ಲಾಕ್ ಮಾಡುವಂತೆ ವಾಟ್ಸಾಪ್ ‌ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಂಚಕರು ಬಳಸುವ ಸಾಧನವನ್ನು ಗುರುತಿಸಿದ ತಕ್ಷಣ ಅದರ ಡಿವೈಸ್ ಐಡಿಯನ್ನು ನಿರ್ಬಂಧಿಸುವುದರಿಂದ, ಅದೇ ಫೋನ್ ಮೂಲಕ ಮತ್ತೆ ಖಾತೆ ತೆರೆಯುವ ಅವಕಾಶ ಕಡಿಮೆಯಾಗಲಿದೆ. ಜೊತೆಗೆ, ಅಳಿಸಲಾದ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ,

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ Read More »

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು

ಬಂಟ್ವಾಳ: ಮೆಲ್ಕಾರಿನ ಬೊಗೋಡಿಯಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿ ಒಂದರಲ್ಲಿ ಹಲ್ಲೆ ಮತ್ತು ವಸ್ತುಗಳಿಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿದ ಹಾಗೆ ಮ್ಯಾನೇಜರ್ ಕುನಲ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಾ. 20 ರಂದು ಅಟೋರಿಕ್ಷಾ ಚಾಲಕನೊಬ್ಬ ತನ್ನ ಅಟೋವನ್ನು ಪಂಪ್ ಒಳಗೆ ತಂದಿದ್ದು, ಕಚೇರಿಯ ಸಿಬ್ಬಂದಿ ಅಶ್ವಿನ್ ಎಂಬುವವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಹಾಗೆಯೇ ಆ ಬಳಿಕ ಪಂಪ್‌ನ ಸೊತ್ತುಗಳಿಗೆ ಹಾನಿ ಎಸಗಿದ್ದಾನೆ. ಈ ಘಟನೆಯಿಂದ ಸುಮಾರು ನಲವತ್ತೆಂಟು ಸಾವಿರ

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು Read More »

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ

ಉಜಿರೆ: ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಯಕ್ಷಭಾರತಿ ರಿ. ಕನ್ಯಾಡಿ ಹನ್ನೊಂದನೇ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ರೂಪಿಸಲಾದ “ದಶಪರ್ವ” ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಶಾಸಕ ಪ್ರತಾಪಸಿಂಹ ನಾಯಕ್ ಲೋಕಾರ್ಪಣೆಗೊಳಿಸಿದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕಲಾ ಪೋಷಕ ಶ್ರೀಪತಿ ಭಟ್, ಮೂಡಬಿದಿರೆ ಸಂಪಾದಕ ಮಂಡಳಿಯ ಮಹೇಶ ಕನ್ಯಾಡಿ, ಹರಿದಾಸ ಗಾಂಭೀರ, ಭವ್ಯ ಹೊಳ್ಳ, ಕೌಶಿಕ್ ರಾವ್ ಕನ್ಯಾಡಿ, ರತ್ನವರ್ಮ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು. ದಶಪರ್ವದ ಸಂಪಾದಕ

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ Read More »

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಸಿದ್ಧ ಚಲನಚಿತ್ರ ನಟ, ಕರುನಾಡ ಅಣ್ಣಾವ್ರು ವರನಟ ಡಾ‌. ರಾಜ್‌ಕುಮಾರ್ ಅವರ ಅಭಿಮಾನಿಗಳ ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜ್‌ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ರಾಜ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ. ರಾಜ್‌ಕುಮಾರ್ ಅಭಿನಯದ ಶ್ರೀ ಕೃಷ್ಣದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಅವರು ‘ದೇವಿಯ ಮೇಲಿನ ನಂಬಿಕೆ ಭಕ್ತರಿಗೆ ಹೊಸ ಶಕ್ತಿ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ Read More »

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ

ಕೊಟ್ಟಿಗೆಹಾರ: ಟಿಟಿ ‌ವಾಹನವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ‌ನಡೆದಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಹೋಗುತ್ತಿತ್ತು. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ ಇದು, ಗಾಯಾಳು ಒಂಬತ್ತು ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳೀಯರು ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗಾಯ ಆಲಿ ಗಳನ್ನು ನೆರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ Read More »

error: Content is protected !!
Scroll to Top