ಸುದ್ದಿ

ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ್ವಿತೀಯ ಪಿಯುಸಿ  ಪರೀಕ್ಷೆಗೆ ನಿಯಮಗಳು ಅನ್ವಯ

ಮಾರ್ಚ್ ತಿಂಗಳಲ್ಲಿ ಶಾಲಾ- ಕಾಲೇಜುಗಳಿಗೆ ಪರೀಕ್ಷೆಗಳು ಆರಂಭವಾಗಿದ್ದು.  ವಿದ್ಯಾರ್ಥಿಗಳು ಪರೀಕ್ಷೆ ಸಲುವಾಗಿ ಪೂರ್ವತಯಾರಿಯನ್ನು ನಡೆಸುತ್ತಿದ್ದಾರೆ.  ಇದೇ ಮಾರ್ಚ್ 01 ರಿಂದ 20 ರವರೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪದವಿ ಪೂರ್ವ ವಿದ್ಯಾರ್ಥಿಗಳು ಪರೀಕ್ಷೆಯ ಪೂರ್ ಸಿದ್ದತೆಯಲ್ಲಿದ್ದರೆ. ಎಕ್ಸಾಮ್‍ ಬೋರ್ಡ್‍ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ನಿಯಮ- ಸೂಚನೆಗಳ ಪೂರ್ವ ತಯಾರಿಯನ್ನು ಮಾಡಿದೆ.  ಈ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯವನ್ನು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ […]

ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ್ವಿತೀಯ ಪಿಯುಸಿ  ಪರೀಕ್ಷೆಗೆ ನಿಯಮಗಳು ಅನ್ವಯ Read More »

ಲಾರಿ – ರಿಕ್ಷಾ ನಡುವೆ ಅಪಘಾತ  | ಮೂವರು ಮಹಿಳೆಯರಿಗೆ ಗಂಭೀರ ಗಾಯ

ಪುತ್ತೂರು: ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗದ ಘಟನೆ ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕ ಎಂಬಲ್ಲಿ ನಡೆದಿದ್ದು, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯರನ್ನು ಸರೋಜಿನಿ, ವೇದಾವತಿ ಹಾಗೂ ಮಾಲತಿ ಎನ್ನಲಾಗಿದೆ. ಸರ್ವೆ ಕಡೆಗೆ ಹೋಗುತ್ತಿದ್ದ ಲಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಅವಿನಾಶ್ ಎಂಬವರ ರಿಕ್ಷಾದಲ್ಲಿ ಮೂವರು ಮಹಿಳೆಯರು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಪುತ್ತೂರು

ಲಾರಿ – ರಿಕ್ಷಾ ನಡುವೆ ಅಪಘಾತ  | ಮೂವರು ಮಹಿಳೆಯರಿಗೆ ಗಂಭೀರ ಗಾಯ Read More »

ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಲು ಕುಮ್ಮಕ್ಕು ನೀಡಿದ್ದ ಮೌಲ್ವಿ ಕೊನೆಗೂ ಬಂಧನ

ಪ್ರಚೋದನಕಾರಿ ಭಾಷಣ ಮಾಡಿ ಜನರನ್ನು ಕೆರಳಿಸಿದ್ದ ಮೌಲ್ವಿ ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೌಲ್ವಿ ಮುಫ್ತಿ ಮುಸ್ತಾಕ್‌ನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಗುರುವಾರ ಮೌಲ್ವಿ ಮುಫ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ, ಗಲಾಟೆ ನಡೆದು 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಬಂಧಿಸಿದಂತಾಗಿದೆ. ಮೌಲ್ವಿಯನ್ನು ಬಂಧಿಸುವ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿತ್ತು. ಇದೀಗ ಕೊನೆಗೂ ಆತನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಲು ಕುಮ್ಮಕ್ಕು ನೀಡಿದ್ದ ಮೌಲ್ವಿ ಕೊನೆಗೂ ಬಂಧನ Read More »

ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶ | ಕಾರ್ಮಿಕನೋರ್ವ ಮೃತ್ಯು..!

ಉಪ್ಪಿನಂಗಡಿ : ತೋಟದಲ್ಲಿ ಎಳನೀರನ್ನು ಕೀಳುತ್ತಿರುವಾಗ ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ. ಈ ವೇಳೆ  ತೋಟದ ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರರವರು ಆಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಬುಧವಾರದಂದು ಬಜತ್ತೂರು ಗ್ರಾಮದ ಕುವೆಚ್ಚಾರ್ ನಲ್ಲಿ ನಡೆದಿದೆ. ಕುವೆಚ್ಚಾರ್ ತೋಟದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ತೋಟದಲ್ಲಿದ್ದ ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ದೋಟಿ ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ದೋಟಿಗೆ ಸ್ಪರ್ಶವಾಗಿ ವೀರಭದ್ರ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೀರಭದ್ರ

ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶ | ಕಾರ್ಮಿಕನೋರ್ವ ಮೃತ್ಯು..! Read More »

ಪುತ್ತೂರು (ಫೆ. 26):  ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜ್ರಂಭನೆಯ ಮಹಾಶಿವರಾತ್ರಿ ಉತ್ಸವ

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.26ರಂದು ರಾತ್ರಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಹಾಶಿವರಾತ್ರಿ ಉತ್ಸವದ ವಿಶೇಷವಾಗಿ ಬೆಳಗ್ಗೆ 7:30ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, 9 ಗಂಟೆಗೆ ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ಹಾಗೂ ಭಜನಾ ಕಾರ್ಯಕ್ರಮ ನೆರವೇರಲಿದೆ.  ಬಳಿಕ ಸಂಜೆ 7:30ಕ್ಕೆ ಮಹಾಶಿವರಾತ್ರಿ ಉತ್ಸವ ಜರುಗಲಿದೆ. ಭಕ್ತರು ಹೆಚ್ಚಿನ ಸಂಖೆಯಲ್ಲಿ ಉತ್ಸವದಲ್ಲಿ ಭಾಗವಹಿಸಿ ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್‍ ಪಂಜಿಗುಡ್ಡೆ  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪುತ್ತೂರು (ಫೆ. 26):  ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜ್ರಂಭನೆಯ ಮಹಾಶಿವರಾತ್ರಿ ಉತ್ಸವ Read More »

ಕಾಡಿನಂಚಿನಲ್ಲಿ ಯುವಕ-ಯುವತಿ ನಿಗೂಢ ಸಾವು

ಸಾವಿನ ಸುತ್ತ ಹಲವು ಅನುಮಾನ ಚಿಕ್ಕಮಗಳೂರು: ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಯುವತಿ ಕಾರಿನೊಳಗೆ ಸಾವನ್ನಪ್ಪಿದ್ದಾಳೆ. ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ನೇತಾಡುತ್ತಿತ್ತು. ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾನೆ. ನೇಣು ಹಾಕಿಕೊಂಡಿರುವ

ಕಾಡಿನಂಚಿನಲ್ಲಿ ಯುವಕ-ಯುವತಿ ನಿಗೂಢ ಸಾವು Read More »

ಮೆಕ್ಸಿಕೋದ ಬೀಚ್‌ನಲ್ಲಿ ಕಂಡುಬಂತು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು!

ಈ ಮೀನು ಕಾಣಿಸಿದರೆ ಬ್ರಹ್ಮಾಂಡದ ಅಂತ್ಯ ಸಮೀಪಿಸುತ್ತಿದೆ ಎಂಬ ನಂಬಿಕೆ ಮೆಕ್ಸಿಕೋ: ಮೆಕ್ಸಿಕೊದ ಬಾಜಾ ಕ್ಯಾಲಿಫೋರ್ನಿಯಾ ಸುರ್‌ ಎಂಬ ಬೀಚ್‌ನಲ್ಲಿ ಇತ್ತೀಚೆಗೆ ಕಂಡು ಬಂದ ಮೀನೊಂದು ಈ ಜಗತ್ತು ಅಂತ್ಯವಾಗುವ ಮುನ್ಸೂಚನೆ ಎಂಬ ಭೀತಿಯನ್ನು ಸೃಷ್ಟಿಸಿದೆ. ಈ ಮೀನನ್ನು ಜನರು ಕರೆಯುವುದೇ ಡೂಮ್ಸ್‌ಡೇ ಮೀನು (ಬ್ರಹ್ಮಾಂಡದ ಅಂತ್ಯವನ್ನು ಸೂಚಿಸುವ ಮೀನು) ಎಂದು. ಇದು ಜನರ ಕಣ್ಣಿಗೆ ಬೀಳುವುದೇ ಇಲ್ಲ, ಎಲ್ಲಾದರೂ ಕಂಡು ಬಂದರೆ ಜಗತ್ತಿನ ಅಂತ್ಯದ ಮುನ್ಸೂಚನೆ ಎಂಬ ನಂಬಿಕೆ ಪಾಶ್ಚಾತ್ಯರಲ್ಲಿದೆ. ಈ ಮೀನು ಇತ್ತೀಚೆಗೆ ಮೆಕ್ಸಿಕೊದ

ಮೆಕ್ಸಿಕೋದ ಬೀಚ್‌ನಲ್ಲಿ ಕಂಡುಬಂತು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು! Read More »

ಮಾ.11 : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್

ಪುತ್ತೂರು : ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಮಾ.11 ರಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ  ನಡೆಯಲಿದೆ. ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ  ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು  ಪರಿಶೀಲಿಸಲಾಗುವುದು.  ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು   ಪತ್ರಮುಖೇನ, ಅಂಚೆ ಅದಾಲತ್ ತಲೆಬರಹದಡಿ ಮಾ.7 ರೊಳಗೆ ಹಿರಿಯ ಅಂಚೆ  ಅಧೀಕ್ಷಕರು, ಪುತ್ತೂರು ವಿಭಾಗ,

ಮಾ.11 : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ Read More »

ಕೈದಿಗಳಿಗೂ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನದ ಭಾಗ್ಯ

90 ಸಾವಿರ ಕೈದಿಗಳಿಗಾಗಿ ಜೈಲಿಗೆ ಹರಿಯಲಿದೆ ತ್ರಿವೇಣಿ ಸಂಗಮದ ಜಲ ಪ್ರಯಾಗ್‌ರಾಜ್‌: ಉತ್ತರ ಪ್ರದೇಶ ಸರ್ಕಾರ ರಾಜ್ಯದ ವಿವಿಧ ಜೈಲುಗಳಲ್ಲಿ ಸೆರೆವಾಸದಲ್ಲಿರುವ ಕೈದಿಗಳಿಗೂ ಪವಿತ್ರ ಸ್ನಾನ ಮಾಡುವ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಕೈದಿಗಳಿಗೂ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಅವಕಾಶ ನೀಡಲಿದೆ. ಉತ್ತರ ಪ್ರದೇಶದ ಜೈಲು ಆಡಳಿತ ರಾಜ್ಯದಲ್ಲಿರುವ 75 ಜೈಲುಗಳಿಗೆ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ತರಲು ವ್ಯವಸ್ಥೆ ಮಾಡುತ್ತಿದೆ. ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ ಅವರ

ಕೈದಿಗಳಿಗೂ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನದ ಭಾಗ್ಯ Read More »

ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ಐತಿಹಾಸಿಕ ದುರಂತ : ಬಿಜೆಪಿ ಟೀಕೆ

ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆ ಎಂದು ಕಿಡಿಕಾರಿದ ಬಿಜೆಪಿ ನಾಯಕರು ಬೆಂಗಳೂರು: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿ ನಾಲ್ವರು ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿದ್ದು, ಈ ತನಿಖೆಯಲ್ಲಿ ಪಕ್ಷಪಾತ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಮುಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆ ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ

ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ಐತಿಹಾಸಿಕ ದುರಂತ : ಬಿಜೆಪಿ ಟೀಕೆ Read More »

error: Content is protected !!
Scroll to Top