ಸುದ್ದಿ

ಶ್ಯಾಮ್‌ಜಿ ‌ಕೃಷ್ಣ ವರ್ಮಾ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಕ್ರಾಂತಿಕಾರಿ, ವಕೀಲ ಮತ್ತು ಪತ್ರಕರ್ತ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತಾಂಬೆಯ ಶ್ರದ್ಧಾವಂತ ಪುತ್ರ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ಜನ್ಮ ದಿನದಂದು ದೇಶದ ಎಲ್ಲಾ ಜನರ ಪರವಾಗಿ ಗೌರವಯುತ ನಮನಗಳು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅವರ ಸೇವೆ, ಸಮರ್ಪಣೆ, ಧೈರ್ಯವನ್ನು ಸದಾ ಭಕ್ತಿಯಿಂದ ಸ್ಮರಣೆ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ಭಾರತ […]

ಶ್ಯಾಮ್‌ಜಿ ‌ಕೃಷ್ಣ ವರ್ಮಾ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ Read More »

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ

ಉಡುಪಿ : ಉಡುಪಿ ನಗರಸಭೆಗೆ ಸಂಬಂಧಿಸಿದ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಭಾರಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಘಟಕವನ್ನು ಆವರಿಸಿತು. ಇದರಿಂದ ಕಟ್ಟಡ, ಶೆಡ್‌ನಲ್ಲಿರುವ ಹಲವು ಯಂತ್ರೋಪಕಣಗಳು, ತ್ಯಾಜ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ Read More »

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ

ಕಫ್‌ ಸಿರಪ್‌ ಸೇವಿಸಿ 13 ಮಕ್ಕಳು ಸಾವಿಗೀಡಾದ ಬಳಿಕ ಆತಂಕ ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 12 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದ ಬಳಿಕ ಕಫ್‌ ಸಿರಫ್‌ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 3 ಮಕ್ಕಳು ಸೇರಿ ಒಟ್ಟು 12 ಕಂದಮ್ಮಗಳು

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ Read More »

ಬೈಕ್‌-ಕಾರು ತೂಕದ ಉದಾಹರಣೆ ನೀಡಿ ನಗೆಪಾಟಲಿಗೀಡಾದ ರಾಹುಲ್‌ ಗಾಂಧಿ

ವಿದೇಶದಲ್ಲಿ ರಾಗಾ ಮತ್ತೆ ಅಪ್ರಬುದ್ಧ ಭಾಷಣ ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿದೇಶದಲ್ಲಿ ಮತ್ತೊಮ್ಮೆ ತನ್ನ ಅಪ್ರಬುದ್ಧ ಭಾಷಣದಿಂದ ನಗೆಪಾಟಲಿಗೀಡಾಗಿದ್ದಾರೆ. ಕಾರು ಮತ್ತು ಬೈಕ್‌ಗಳ ತೂಕದ ಕುರಿತು ಅವರು ನೀಡಿದ ಉದಾಹರಣೆ ಸಿಕ್ಕಾಪಟ್ಟೆ ಲೇವಡಿಗೆ ಗುರಿಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಜನರು ಇದಕ್ಕೆ ನಾನಾ ಪ್ರತಿಕ್ರಿಯೆ ನೀಡಿ ರಾಹುಲ್‌ ಮತ್ತು ಕಾಂಗ್ರೆಸ್‌ನ ಕಾಲೆಲೆದಿದ್ದಾರೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ

ಬೈಕ್‌-ಕಾರು ತೂಕದ ಉದಾಹರಣೆ ನೀಡಿ ನಗೆಪಾಟಲಿಗೀಡಾದ ರಾಹುಲ್‌ ಗಾಂಧಿ Read More »

ಹೆಚ್ಚು ಲಾಭ ಗಳಿಸುವ ಹೂಡಿಕೆ ನಂಬಿ 42.50 ಲ.ರೂ. ಕಳೆದುಕೊಂಡ ವ್ಯಕ್ತಿ

ವಾಟ್ಸ್‌ಆ್ಯಪ್‌ ಲಿಂಕ್‌ ಕಳುಹಿಸಿ ವಂಚನೆ ಮಂಗಳೂರು: ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸುವ ಲಿಂಕ್‌ ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 42.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ 42.50 ಲಕ್ಷ ರೂ. ಕಳೆದುಕೊಂಡ ಬಗ್ಗೆ ಅವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜು.13ರಂದು ಪ್ರಿಯಾ ಅಗರ್ವಾಲ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಹೂಡಿಕೆ ಬಗ್ಗೆ ಮಾಹಿತಿ ಇರುವ ಲಿಂಕ್ ತನಗೆ ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡಿ ನೋಡಿದ ಬಳಿಕ

ಹೆಚ್ಚು ಲಾಭ ಗಳಿಸುವ ಹೂಡಿಕೆ ನಂಬಿ 42.50 ಲ.ರೂ. ಕಳೆದುಕೊಂಡ ವ್ಯಕ್ತಿ Read More »

ದಸರಾ ಮೆರವಣಿಗೆಯಲ್ಲಿ ಸಿಎಂ ಜೊತೆ ಸಚಿವರ ಮೊಮ್ಮಗ : ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು

ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಸಚಿವ ಮಹದೇವಪ್ಪನವರ ಮೊಮ್ಮಗ ಪ್ರೇಮ ಮೈಸೂರು: ದಸರಾ ಮೆರವಣಿಗೆಯ ವೇಳೆ ತೆರೆದ ಜೀಪಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಎಕ.ಶಿವಕುಮಾರ್‌ ಹಾಗೂ ಸಚಿವರ ಜೊತೆ ಸಚಿವ ಮಹದೇವಪ್ಪ ಅವರ ಮೊಮ್ಮಗ ಪ್ರಯಾಣಿಸಿದ್ದು ಭಾರಿ ಟೀಕೆಗೆ ಗುರಿಯಾಗಿದೆ. ಶಿಷ್ಟಾಚಾರ ಉಲ್ಲಂಘಿಸಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಚ್‌.ಸಿ.ಮಹದೇವಪ್ಪ ಮೊಮ್ಮಗನನ್ನು ಮೆರವಣಿಗೆಯಲ್ಲಿ ಕರೆದೊಯ್ದಿರುವುದರ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಧಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ರಾಜ್ಯ

ದಸರಾ ಮೆರವಣಿಗೆಯಲ್ಲಿ ಸಿಎಂ ಜೊತೆ ಸಚಿವರ ಮೊಮ್ಮಗ : ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು Read More »

ಬೆಳಗಾವಿಯಲ್ಲಿ ಐ ಲವ್‌ ಮೊಹಮ್ಮದ್‌ ವಿವಾದ : ಕಲ್ಲು ತೂರಾಟ

ಕೋಮು ಸಂಘರ್ಷಕ್ಕೆ ತಿರುಗಿದ ಉರೂಸ್‌ ಮೆರವಣಿಗೆ ಬೆಂಗಳೂರು : ಬೆಳಗಾವಿಯಲ್ಲಿ ಶುಕ್ರವಾರ ನಡೆದ ಉರೂಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ. ಭಾರಿ ಕಲ್ಲು ತೂರಾಟ ನಡೆದಿದ್ದು, ಅಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಖಡೇಬಜಾರ್‌ನ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರೂಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್‌ ಗಲ್ಲಿ ಮೂಲಕ ಮೆರವಣಿಗೆ ಸಾಗಿದೆ. ಕೆಲ

ಬೆಳಗಾವಿಯಲ್ಲಿ ಐ ಲವ್‌ ಮೊಹಮ್ಮದ್‌ ವಿವಾದ : ಕಲ್ಲು ತೂರಾಟ Read More »

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದೆ: ಎಚ್.ಡಿ. ದೇವೇಗೌಡ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಸರ್ಕಾರದ ಬಳಿ ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ‌ಯನ್ನು ನಿರ್ವಹಣೆ ಮಾಡುವುದಕ್ಕೂ ಹಣವಿಲ್ಲ. ಒಂದು ವಾರದೊಳಗಾಗಿ ಕಲಬುರ್ಗಿ ಸೇರಿದಂತೆ ಇತರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ನೆರೆ ಪೀಡಿತ ಪ್ರದೇಶಗಳ ಪರಿಸ್ಥಿತಿ ಬಗ್ಗೆ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದೆ: ಎಚ್.ಡಿ. ದೇವೇಗೌಡ Read More »

ಅ.9: ತಾಲೀಬಾನ್ ‌ವಿದೇಶಾಂಗ ಸಚಿವ ಮುತ್ತಕಿ ಭಾರತಕ್ಕೆ

ನವದೆಹಲಿ: ಅ‌. 9 ರಂದು ತಾಲೀಬಾನ್ ಸರ್ಕಾರದ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯು ಭಾರತ ಮತ್ತು ತಾಲೀಬಾನ್ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ಸಾಧ್ಯತೆ ಇದೆ. ತಾಲೀಬಾನ್ 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ಕೈವಶ ಮಾಡಿಕೊಂಡ ಬಳಿಕ ಭಾರತಕ್ಕೆ ನೀಡುತ್ತಿರುವ ಉನ್ನತ ಮಟ್ಟದ ಭೇಟಿ ಇದಾಗಿದೆ. ವಿಶ್ವಸಂಸ್ಥೆಯು ಭದ್ರತಾ ಮಂಡಳಿಯು ಮುತ್ತಕಿ ಅವರ ವಿದೇಶಿ ಪ್ರವಾಸಗಳಿಗೆ ಹೇರಿದ್ದ ನಿರ್ಬಂಧಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದ್ದು, ಇದರಿಂದಾಗಿ ಅವರು

ಅ.9: ತಾಲೀಬಾನ್ ‌ವಿದೇಶಾಂಗ ಸಚಿವ ಮುತ್ತಕಿ ಭಾರತಕ್ಕೆ Read More »

ವಿದೇಶದಲ್ಲಿ ನಿಂತು ಭಾರತ, RSS ವಿರುದ್ಧ ನಾಲಿಗೆ ಹರಿಯಬಿಟ್ಟ ರಾಹುಲ್ ಗಾಂಧಿ

ನವದೆಹಲಿ: ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಟೀಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಿವಾದ ಸೃಷ್ಟಿ ಮಾಡಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವದ ಮೇಲೆ ತೀವ್ರ ದಾಳಿ ನಡೆಸುತ್ತಿದ್ದು, ಇದು ದೇಶಕ್ಕೆ ಎದುರಾಗಿರುವ ಬಹುದೊಡ್ಡ ಬೆದರಿಕೆ ಎಂದು ನಾಲಿಗೆ ಹರಿಯ ಬಿಟ್ಟಿದ್ದು, ಆ ಮೂಲಕ ಭಾರತೀಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾರತದ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳಿವೆ. ಈ ಅಪಾಯಗಳಿಂದ ದೇಶ ಹೊರಬರಬೇಕಿದೆ. ಅದರಲ್ಲಿ

ವಿದೇಶದಲ್ಲಿ ನಿಂತು ಭಾರತ, RSS ವಿರುದ್ಧ ನಾಲಿಗೆ ಹರಿಯಬಿಟ್ಟ ರಾಹುಲ್ ಗಾಂಧಿ Read More »

error: Content is protected !!
Scroll to Top