ಸುದ್ದಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮೂಲಕ ಡಿಸಿಎಂ ‌ಡಿಕೆ ಶಿವಕುಮಾರ್ ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು, ಜವಾಬ್ದಾರಿಯ ಕರೆ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ ನಡೆಸಲಾದ ಜಾಥ ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಅರಣ್ಯವಾಗಿದ್ದ ಪ್ರದೇಶಗಳೆಲ್ಲವೂ ಈಗ ನಾಡಾಗಿ ಪರಿವರ್ತನೆ ಆಗಿವೆ. ಮುಂದಿನ ಪೀಳಿಗೆಗಾಗಿ ನಾವು ಅರಣ್ಯಗಳನ್ನು ‌ಸಂರಕ್ಷಣೆ ಮಾಡಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ನಿಸರ್ಗ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ನಮ್ಮ ಪೂರ್ವಿಕರು ನಿಸರ್ಗವನ್ನು ದೇವರು ಎಂದು ಪೂಜೆ […]

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಿ.ಕೆ. ಶಿವಕುಮಾರ್ Read More »

ಮೋದಿಯನ್ನು ರಾವಣ ಎಂದು ಕರೆದ ಕಾಂಗ್ರೆಸ್‌ ನಾಯಕ

ಮೋದಿಯನ್ನು ಸುಡಬೇಕೆಂದು ವಿವಾದಿತ ಹೇಳಿಕೆ ನೀಡಿದ ಉದಿತ್‌ ರಾಜ್‌ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ರಾವಣನ ಸಂಕೇತ ಎಂದು ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತ. ಅವರು ತಮ್ಮ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆ. ಒಮ್ಮೆ ಅದನ್ನು ಪ್ರವೇಶಿಸಿದ ನಂತರ ಅದೇ ಚಿನ್ನದ ಅರಮನೆ ಉರಿದು ಹೋಗುವುದನ್ನು ನೋಡುತ್ತಾರೆ ಎಂದು ನಾಲಗೆ ಹರಿಬಿಟ್ಟಿದ್ದಾರೆ. ದೆಹಲಿಯ ರಾವಣನನ್ನು ಸುಡಬೇಕು. ದೆಹಲಿಯ ರಾವಣನನ್ನು ಸುಡುವ ದಿನ ಹತ್ತಿರದಲ್ಲಿದೆ ಎಂದು

ಮೋದಿಯನ್ನು ರಾವಣ ಎಂದು ಕರೆದ ಕಾಂಗ್ರೆಸ್‌ ನಾಯಕ Read More »

ಬಂಟ್ವಾಳ : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಬಂಟ್ವಾಳ : ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಟೂರು ಕ್ರಾಸ್‌ನಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44) ಮೃತ ದುರ್ದೈವಿ. ಲೋಕೇಶ್ ಅವರು ಕಲ್ಲಡ್ಕದ ನಾಯರ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ರಸ್ತೆ ದಾಟುವ ವೇಳೆ ಅತಿವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಅವರನ್ನು ಮಂಗಳೂರು ಖಾಸಗಿ

ಬಂಟ್ವಾಳ : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು Read More »

ಬೇಡಿಕೆಗಳಿಗೆ ಮಣಿಯುವ ರಾಷ್ಟ್ರವಲ್ಲ ಭಾರತ: ಅಮೆರಿಕಾಗೆ ರಷ್ಯಾ ಅಧ್ಯಕ್ಷರ ಟಾಂಗ್

ನವದೆಹಲಿ: ಭಾರತದ ಮೇಲೆ ರಷ್ಯಾದಿಂದ ಕಚ್ಚಾ ತೈಲ ವ್ಯಾಪಾರ ವಹಿವಾಟು ಸ್ಥಗಿತ ಮಾಡುವಂತೆ ಅಮೆರಿಕಾ ಒತ್ತಡ ಹೇರುತ್ತಿದ್ದು, ಇದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಖಂಡಿಸಿದ್ದಾರೆ. ಭಾರತ ಅಂತಹ ಒತ್ತಡಗಳಿಗೆ ಎಂದಿಗೂ ಮಣಿಯಲು ಸಾಧ್ಯವಿಲ್ಲ. ಹಾಗೆಯೇ ಭಾರತವನ್ನು ಯಾರ ಮುಂದೆಯೂ ಅವಮಾನಕ್ಕೆ ಒಳಗಾಗುವಂತೆ ಮಾಡಲು ರಷ್ಯಾ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೇ. ಇದರಲ್ಲಿ ರಾಜಕೀಯ ಇಲ್ಲ. ಭಾರತ ನಮ್ಮ ಇಂಧನ ಲೆಕ್ಕಾಚಾರಗಳನ್ನು ನಿರಾಕರಿಸಿದರೆ

ಬೇಡಿಕೆಗಳಿಗೆ ಮಣಿಯುವ ರಾಷ್ಟ್ರವಲ್ಲ ಭಾರತ: ಅಮೆರಿಕಾಗೆ ರಷ್ಯಾ ಅಧ್ಯಕ್ಷರ ಟಾಂಗ್ Read More »

ಧರ್ಮಸ್ಥಳ ಪ್ರಕರಣ : ಯೂಟ್ಯೂಬರ್‌ಗಳಿಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್‌ ಜಾರಿ

ಸಮೀರ್‌ ಎಂಡಿ ಸಹಿತ ಯೂಟ್ಯೂಬರ್‌ಗಳಿಗೆ ಮತ್ತೆ ಸಂಕಷ್ಟ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ಬೇಕಾಬಿಟ್ಟಿ ವೀಡಿಯೋಗಳನ್ನು ಮಾಡಿ ಹರಿಬಿಟ್ಟಿರುವ ಯೂಟ್ಯೂಬರ್‌ಗಳಿಗೆ ಮತ್ತೆರ ಸಂಕಷ್ಟ ಎದುರಾಗಿದೆ. ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊಗಳನ್ನು ತಯಾರಿಸಿದ ಹಲವಾರು ಯೂಟ್ಯೂಬರ್‌ಗಳಿಗೆ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಬೆಳವಣಿಗೆಯಿಂದ ಯೂಟ್ಯೂಬರ್‌ಗಳ ಸಂಕಷ್ಟ ಮುಗಿಯುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ವಿವಾದಿತ ಯೂಟ್ಯೂಬರ್ ಸಮೀರ್ ಎಂ.ಡಿ ಸೇರಿದಂತೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ನೋಟಿಸ್ ಹೋಗಿದ್ದು, ಅವರು ಬೆಳ್ತಂಗಡಿ

ಧರ್ಮಸ್ಥಳ ಪ್ರಕರಣ : ಯೂಟ್ಯೂಬರ್‌ಗಳಿಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್‌ ಜಾರಿ Read More »

ತಾಳಮದ್ದಳೆಯ ಇತಿಹಾಸದಲ್ಲಿ ಒಂದು ಅಪೂರ್ವ ದಾಖಲೆಯ ಕಾರ್ಯಕ್ರಮ.

ಶ್ರೀ ಮಹಾಭಾರತ ಸರಣಿಯ 100 ನೇ ತಾಳಮದ್ದಳೆ ಚಿತ್ರಾಂಗದ ಕಾಳಗ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ನೂರನೇ ತಾಳಮದ್ದಳೆಯಾಗಿ ಚಿತ್ರಾಂಗದ ಕಾಳಗ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯಅರ್ಥಧಾರಿಗಳಾಗಿ ಭಾಸ್ಕರ ಬಾರ್ಯ(ಭೀಷ್ಮ1) ಶ್ರೀಧರ ಎಸ್ ಪಿ ಕೃಷ್ಣಾಪುರ(ಚಿತ್ರಾಂಗದ 1) ಮಾ. ಸುಶಾಂತ್ (ಚಾರಕ

ತಾಳಮದ್ದಳೆಯ ಇತಿಹಾಸದಲ್ಲಿ ಒಂದು ಅಪೂರ್ವ ದಾಖಲೆಯ ಕಾರ್ಯಕ್ರಮ. Read More »

ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆ

ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಬೆಂಗಳೂರು : ಅನಾರೋಗ್ಯದಿಂದ ಬೆಂಗಳೂರಿನ ಎಂಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಸಂಜೆಯೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅವರಿಗೆ ಪೇಸ್​​ಮೇಕರ್ ಅನ್ನು ಯಶಸ್ವಿಯಗಿ ಅಳವಡಿಸಲಾಗಿದೆ. ಚೇತರಿಸಿಕೊಂಡ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಖರ್ಗೆ ಆರೋಗ್ಯವಾಗಿದ್ದು, ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ಕರ್ತವ್ಯಕ್ಕೆ ಮರಳಲಿದ್ದಾರೆ. ಖರ್ಗೆ ಅವರ ಆರೋಗ್ಯದ ಕುರಿತು ಕಾಂಗ್ರೆಸ್ ಮಾಹಿತಿ ಹಂಚಿಕೊಂಡಿದೆ. ಖರ್ಗೆ ಜೀ ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಶುಭ

ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆ Read More »

ಮೈಸೂರು ದಸರಾ ಅದ್ದೂರಿಯಾಗಿ ಸಂಪನ್ನ

ವಿಶ್ವ ವಿಖ್ಯಾತ ಜಂಬೂ ಸವಾರಿ ಅತ್ಯಂತ ಯಶಸ್ವಿ; ಮೆರುಗು ನೀಡಿದ ಡ್ರೋನ್‌ ಪ್ರದರ್ಶನ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅದ್ದೂರಿಯಾಗಿ ಮುಕ್ತಾಯವಾಗಿದೆ. 6ನೇ ಬಾರಿಗೆ ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ್ದು, ಎಲ್ಲ ಕಾರ್ಯಗಳು ಅಭೂತಪೂರ್ವ ಯಶಸ್ಸು ಕಂಡಿವೆ. 415ನೇ ದಸರಾ ಮಹೋತ್ಸವದ ಎಲ್ಲ ಕಾರ್ಯಗಳಿಗೆ ವಿಧ್ಯುಕ್ತವಾಗಿ ತೆರೆ ಬಿದ್ದಿದ್ದು, ಎಲ್ಲವೂ ಸಾಂಪ್ರದಾಯಿಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡು ಕಳೆದ 11 ದಿನಗಳಿಂದ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂಪನ್ನವಾಗಿದೆ. ಸೆ.22ರಂದು ವಿಜೃಂಭಣೆಯಿಂದ ಆರಂಭಗೊಂಡಿದ್ದ ದಸರಾ ಅನೇಕ ಅದ್ದೂರಿ

ಮೈಸೂರು ದಸರಾ ಅದ್ದೂರಿಯಾಗಿ ಸಂಪನ್ನ Read More »

ಗಾಜಾದ ಮೇಲೆ ಇಸ್ರೇಲ್‌ ಭೀಕರ ದಾಳಿ : 57 ಮಂದಿ ಸಾವು

ಟ್ರಂಪ್‌ 20 ಅಂಶ ಶಾಂತಿ ಸಂಧಾನ ನಡೆಯುತ್ತಿರುವಾಗಲೇ ದಾಳಿ ಟೆಲ್‌ ಅವೀವ್‌ : ಕಳೆದ ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ 20 ಅಂಶದ ಸೂತ್ರದೊಂದಿಗೆ ಪ್ರಯತ್ನಿಸುತ್ತಿರುವಾಗಲೇ ಇಸ್ರೇಲ್ ಗಾಜಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 57 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಗುಂಡಿನ ದಾಳಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 14 ಜನರು ಇಸ್ರೇಲಿ

ಗಾಜಾದ ಮೇಲೆ ಇಸ್ರೇಲ್‌ ಭೀಕರ ದಾಳಿ : 57 ಮಂದಿ ಸಾವು Read More »

ಗಣತಿ ಕರ್ತವ್ಯ ತಪ್ಪಿಸಿದರೆ ಶಿಸ್ತುಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ದ.ಕ. ಜಿಲ್ಲಾಡಳಿತದಿಂದ ಮಂಗಳೂರು ತಾಲೂಕಿನಲ್ಲಿ 1714 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಇದುವರೆಗೆ 425 ಗಣತಿದಾರರು ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೆ ಕರ್ತವ್ಯ ಲೋಪ ತೋರಿಸಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ಗಣತಿ ಕಾರ್ಯವನ್ನು ಸರ್ಕಾರ ನಿಗದಿಪಡಿಸಿ ಆದೇಶಿಸಿದಂತೆ ಅಕ್ಕೋಬರ್

ಗಣತಿ ಕರ್ತವ್ಯ ತಪ್ಪಿಸಿದರೆ ಶಿಸ್ತುಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ Read More »

error: Content is protected !!
Scroll to Top