ಸುದ್ದಿ

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ. ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶಂಕು ಎಂಬ […]

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ Read More »

3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

ಮಂಗಳೂರು : ಸುಮಾರು ಮೂರು ದಶಕಗಳ ಬಳಿಕ , ಅಳಿವಿನಂಚಿನ ಅತ್ಯಂತ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಹೊರವಲಯದ ಸಸಿಹಿತ್ಲು ಬೀಚ್‌ ನಲ್ಲಿ ಕಂಡುಬಂದಿದೆ. ಈ ಕಡಲಾಮೆಗಳು ಕಡಲಲ್ಲಿ ಮೊಟ್ಟೆ ಇಟ್ಟಿದ್ದು ಕಂಡುಬಂದಿದೆ. ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ಕಡಲಾಮೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ. ಮಂಗಳೂರಿನ ಸುತ್ತ ಮುತ್ತ ಸುಮಾರು 12 ಕಡೆ ಈ ಹಿಂದೆ ಆಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಮಂಗಳೂರಿನ ಕಡಲ ತಡಿಯ ತಣ್ಣೀರು

3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು Read More »

ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯಿತಿನ ಗ್ರಂಥಾಲಯ ಸಲಹಾ ಸಮಿತಿಯ ಮೊದಲ ಸಭೆಯು ಫೆ. 3ರಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವಾಕರ ಮೆದಿನರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಪಂಚಾಯತ್ ಕಾರ್ಯದರ್ಶಿ ಕುಂಞ ಕೆ ಅವರು ಸ್ವಾಗತಿಸಿ ಸಭೆಯನ್ನು ಉದ್ದೇಶಸಿ ಮಾತನಾಡಿದರು. ಗ್ರಂಥಾಲಯದ ಮೇಲ್ವಿಚಾರಕರಾದ ಪ್ರಮೀಳಾ.ಪಿ ಗ್ರಂಥಾಲಯದಲ್ಲಿರುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆಯುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದ್ದು, ಗ್ರಂಥಾಲಯಕ್ಕೆ ಮೇಜುಗಳ ವ್ಯವಸ್ಥೆ, ಪುಸ್ತಕಗಳನ್ನು ಜೋಡಿಸಿ ಇಡಲು ಕವಾಟುಗಳು, ಪ್ರಿಂಟರ್, ಕಂಪ್ಯೂಟರ್ ದುರಸ್ತಿ  ಆಗಬೇಕೆಂದು ಸಭೆಯ

ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ Read More »

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆ, ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆ

ಪುತ್ತೂರು : ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ.25ರಂದು ಚುನಾವಣೆ ನಡೆದಿತ್ತು. ಸಾಮಾನ್ಯ ಮೀಸಲು ಸ್ಥಾನದಿಂದ ಬ್ಯಾಂಕಿನ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಚಂದ್ರಶೇಖರ ರಾವ್ ಬಪ್ಪಳಿಗೆ, ಸುದೇಂದ್ರ ಪ್ರಭು, ರಾಜು ಶೆಟ್ಟಿ, ಶ್ರೀಧರ ಗೌಡ ರಣಜಾಲು, ಶ್ರೀಧರ ಪಟ್ಲ, ರಾಮಚಂದ್ರ ಕಾಮತ್, ಮಹಿಳಾ ಮೀಸಲು ಸ್ಥಾನದಿಂದ ವೀಣಾ, ಸೀಮಾ,

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕಿಶೋರ್ ಕೊಳತ್ತಾಯ ಪುನರಾಯ್ಕೆ, ಉಪಾಧ್ಯಕ್ಷರಾಗಿ ಶ್ರೀಧರ್ ಗೌಡ ಕಣಜಾಲು ಆಯ್ಕೆ Read More »

180ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿ ಸೆರೆ

ನಟಿಯನ್ನು ಪ್ರೀತಿಸಿ 3 ಕೋ.ರೂ. ಮನೆ ಗಿಫ್ಟ್‌ ಕೊಟ್ಟಿದ್ದ ಬೆಂಗಳೂರು : ದೇಶಾದ್ಯಂತ 180ಕ್ಕೂ ಹೆಚ್ಚು ಕಳ್ಳತನ ನಡೆಸಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಈ ಕುಖ್ಯಾತ ಕಳ್ಳ. ಈತ ಕದ್ದ ಹಣದಿಂದಲೇ ತನ್ನ ಪ್ರೇಯಸಿಗೆ ಸುಮಾರು 3 ಕೋ. ರೂ. ಬೆಲೆಬಾಳುವ ಮನೆ ಕಟ್ಟಿಸಿಕೊಟ್ಟಿದ್ದಾನಂತೆ. ಈತನ ಪ್ರೇಯಸಿ ಅಂತಿಂಥವಳಲ್ಲ ಖ್ಯಾತ ನಟಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗುವಿದ್ದರೂ ಬೇರೆ

180ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿ ಸೆರೆ Read More »

ಜಿಲ್ಲಾ ಗವರ್ನರ್ ವಿಕ್ರಂ ದತ್ತ ಬೇಟಿ ಸಂದರ್ಭ | ವಿಟ್ಲ ರೋಟರಿ ಕ್ಲಬ್ ವತಿಯಿಂದ ನಿರ್ಗತಿಕ ಮಹಿಳೆಗೆ ಮನೆ ಹಸ್ತಾಂತರ

ವಿಟ್ಲ  : ವಿಟ್ಲ ರೋಟರಿ ಕ್ಲಬ್ ಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಇವರ ಅಧಿಕೃತ ಬೇಟಿಯ ಸಂದರ್ಭದಲ್ಲಿ ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಲ  ಕೊಡಂಗೆ ನಿರ್ಗತಿಕ ಮಹಿಳೆ ಎಂಬವರಿಗೆ ಪುಷ್ಪಾ ಇವರಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರಿಸಲಾಯಿತು. ಸುನಂದಾ ಎಂಬವರಿಗೆ 10 ಸಾವಿರ ಧನ ಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮೃದ್ಧಿ, ಅಕ್ಷತಾ ಮತ್ತು ಕೌಶಿಕ್ ಎಂಬವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಪಿ ಡಿ ಶ್ರೀನಿವಾಸ್ ಗೌಡ, ಸುನಿಲ್

ಜಿಲ್ಲಾ ಗವರ್ನರ್ ವಿಕ್ರಂ ದತ್ತ ಬೇಟಿ ಸಂದರ್ಭ | ವಿಟ್ಲ ರೋಟರಿ ಕ್ಲಬ್ ವತಿಯಿಂದ ನಿರ್ಗತಿಕ ಮಹಿಳೆಗೆ ಮನೆ ಹಸ್ತಾಂತರ Read More »

ಬೀಡಿ ಉದ್ಯಮಿ ಮನೆ ದರೋಡೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ತೀವ್ರ ಅಸ್ವಸ್ಥನಾದ ಆರೋಪಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಂಗಳೂರು: ವಿಟ್ಲದ ಬೋಳಂತೂರಿನ ಸಮೀಪ ನಾರ್ಶದ ಬೀಡಿ ಉದ್ಯಮಿ ಸುಲೈಮಾನ್‌ ಹಾಜಿ ಎಂಬವರ ಮನೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ತಂಡದ ಇನ್ನೋರ್ವ ಸದಸ್ಯನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕೇರಳ ಮೂಲದ ಸಚಿನ್‌ ಸೆರೆಯಾಗಿರುವ ಆರೋಪಿ. ಬಂಧನವಾದ ಬೆನ್ನಿಗೆ ತೀವ್ರ ಅಸ್ವಸ್ಥನಾದ ಅವನನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ. ಆರೋಪಿ ಅಪಸ್ಮಾರ ಮತ್ತು ತಲೆನೋವಿನಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಲದಿನಗಳ

ಬೀಡಿ ಉದ್ಯಮಿ ಮನೆ ದರೋಡೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ  ಅಧ್ಯಕ್ಷ ರಾಗಿ ಮನೋರಾಜ್ ರೈ ಅಡ್ವಾಯಿ ಹಾಗೂ ಉಪಾಧ್ಯಕ್ಷರಾಗಿ ಶೇಖರ ಪೂಜಾರಿ ಆಯ್ಕೆ

ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ  ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆಯಿತು. ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಎಲ್ಲಾ ಹನ್ನೆರಡು ಅಭ್ಯರ್ಥಿಗಳು ಬಹುಮತದಿಂದ ಆರಿಸಲಾಗಿದೆ. ಈ ಚುನಾವಣ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮನೋರಾಜ್ ರೈ ಅಡ್ವಾಯಿ ಹಾಗೂ ಉಪಾಧ್ಯಕ್ಷರಾಗಿ ಶೇಖರ ಪೂಜಾರಿಯವರು ಆಯ್ಕೆಯಾಗಿದ್ದಾರೆ.

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ  ಅಧ್ಯಕ್ಷ ರಾಗಿ ಮನೋರಾಜ್ ರೈ ಅಡ್ವಾಯಿ ಹಾಗೂ ಉಪಾಧ್ಯಕ್ಷರಾಗಿ ಶೇಖರ ಪೂಜಾರಿ ಆಯ್ಕೆ Read More »

ಫೆ.13ರಂದು ಮೋದಿ-ಟ್ರಂಪ್‌ ಭೇಟಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಟ್ರಂಪ್‌ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕ-ಭಾರತ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇದು ಪ್ರಧಾನಿಯ ಮಹತ್ವದ ಪ್ರವಾಸ ಎಂದು ಪರಿಗಣಿಸಲಾಗಿದೆ. ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ಫೆಬ್ರವರಿ 12ರ ಸಂಜೆ ಪ್ರಧಾನಿ ಅಮೆರಿಕ ರಾಜಧಾನಿಗೆ ಬಂದಿಳಿದು

ಫೆ.13ರಂದು ಮೋದಿ-ಟ್ರಂಪ್‌ ಭೇಟಿ Read More »

ತೆಲುಗಿನ ಖ್ಯಾತ ನಿರ್ಮಾಪಕ ಗೋವಾದಲ್ಲಿ ಆತ್ಮಹತ್ಯೆಗೆ ಶರಣು

ರಜನಿಕಾಂತ್‌ ಸಹಿತ ಸೂಪರ್‌ಸ್ಟಾರ್‌ಗಳ ಚಿತ್ರ ನಿರ್ಮಿಸಿದ್ದ ನಿರ್ಮಾಪಕ ಚೆನ್ನೈ : ರಜನಿಕಾಂತ್‌ ಅಭಿನಯದ ಕಬಾಲಿ ಸಹಿತ ಅನೇಕ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ತಮಿಳು, ತೆಲುಗಿನ ಖ್ಯಾತ ನಿರ್ಮಾಪಕ ಕೆ.ಪಿ.ಚೌಧರಿ ಯವರ (44) ಶವ ಗೋವಾದ ಹಳ್ಳಿಯೊಂದರಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾದ ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಚೌಧರಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗೋವಾದ ಸಿಯೋಲಿಮ್ ಗ್ರಾಮದ ಬಾಡಿಗೆ ಮನೆಯಲ್ಲಿ ಚೌಧರಿ ವಾಸವಾಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ

ತೆಲುಗಿನ ಖ್ಯಾತ ನಿರ್ಮಾಪಕ ಗೋವಾದಲ್ಲಿ ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top