ಸುದ್ದಿ

ಪುತ್ತೂರಿನೊಡೆಯನಿಗೆ ವೈಭವದ ಲಕ್ಷದೀಪೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 19 ರಂದು ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ದೇವಾಲಯದ ರಥ ಬೀದಿಯ ಉದ್ದಕ್ಕೂ ಸಾಲು ಸಾಲು ಹಣತೆಗಳನ್ನು ಹಚ್ಚಿ ಶ್ರೀ ಮಹಾಲಿಂಗೇಶ್ವರ ದೇವರ ಲಕ್ಷದೀಪ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟರು. ದೇವಸ್ಥಾನದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಬ್ರ. ವೇ. ಮೂ. ಗುರು ತಂತ್ರಿ ಅವರು ಲಕ್ಷ ದೀಪೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. […]

ಪುತ್ತೂರಿನೊಡೆಯನಿಗೆ ವೈಭವದ ಲಕ್ಷದೀಪೋತ್ಸವ Read More »

ದಿ. ಡಾ. ಶ್ರೀಧರ ನಾಯ್ಕ್ ಅವರಿಗೆ ವಿವೇಕಾನಂದ ಕಾಲೇಜಿನಲ್ಲಿ ನುಡಿನಮನ

ಪುತ್ತೂರು: ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ನಿಧನರಾದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಶ್ರೀಧರ ನಾಯ್ಕ್ ಅವರಿಗೆ ಕಾಲೇಜಿನಲ್ಲಿ ನುಡಿ ನಮನ ಸಲ್ಲಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಇತಿಹಾಸದ ಕುರಿತು ಶ್ರೀಧರ ನಾಯ್ಕ್ ಅವರು ಅಪಾರ ಜ್ಞಾನ ಹೊಂದಿದ್ದರು. ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಸೆ ಹೊಂದಿದ್ದವರು.

ದಿ. ಡಾ. ಶ್ರೀಧರ ನಾಯ್ಕ್ ಅವರಿಗೆ ವಿವೇಕಾನಂದ ಕಾಲೇಜಿನಲ್ಲಿ ನುಡಿನಮನ Read More »

ನಡು ಸಮುದ್ರದಲ್ಲಿ ಮುಳುಗಿದ ಮೀನುಗಾರಿಕೆ ಬೋಟ್‌ : ಐವರು ಮೀನುಗಾರರ ರಕ್ಷಣೆ

ಅಡಿ ಭಾಗದ ಫೈಬರ್‌ ಪ್ಲೇಟ್‌ ಒಡೆದು ಒಳನುಗ್ಗಿದ ನೀರು ಉಡುಪಿ : ಮೀನುಗಾರಿಗೆ ತೆರಳಿದ ದೋಣಿಯೊಂದು ಸಮುದ್ರ ಮಧ್ಯದಲ್ಲಿ ಮುಳುಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮೀನು, ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಾಸ್ತಾನಾ ಕೋಡಿಕನ್ಯಾನದ ರವೀಂದ್ರ ಎನ್. ಪೂಜಾರಿ ಅವರಿಗೆ ಸೇರಿದ ‘ವೀರಕಲ್ಕುಡ’ ಎಂಬ ಹೆಸರಿನ ಬೋಟ್‌ ನವೆಂಬರ್ 17ರ ಸಂಜೆ ತಂಡೇಲ್ (ಮುಖಂಡ) ಮತ್ತು ನಾಲ್ವರು ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಹೊರಟಿತ್ತು. ಅವರು ಪಣಂಬೂರು

ನಡು ಸಮುದ್ರದಲ್ಲಿ ಮುಳುಗಿದ ಮೀನುಗಾರಿಕೆ ಬೋಟ್‌ : ಐವರು ಮೀನುಗಾರರ ರಕ್ಷಣೆ Read More »

ರಸ್ತೆ ಕಾಮಗಾರಿಯ ವಾಹನದಡಿಗೆ ಬಿದ್ದು ವೃದ್ಧ ಸಾವು

ಬೆಳ್ತಂಗಡಿ: ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯ ವಾಹನದ ಅಡಿಗೆ ಸಿಲುಕಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಬಂಗಾಡಿ ನಿವಾಸಿ ಎಂದು ತಿಳಿದು ಬಂದಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ವೃದ್ಧ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಮಗಾರಿಯ ಯಂತ್ರವೊಂದನ್ನು ಚಲಾಯಿಸುತ್ತಾ ಬಂದ ಚಾಲಕ ವೃದ್ಧನನ್ನು ಗಮನಿಸದೆ ವಾಹನ ಚಲಾಯಿಸಿದ್ದು ವೃದ್ಧ ವಾಹನದ ಅಡಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ಕಾಮಗಾರಿಯ ವಾಹನದಡಿಗೆ ಬಿದ್ದು ವೃದ್ಧ ಸಾವು Read More »

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಕೋರ್ಟ್‌ಗೆ ವರದಿ ಸಲ್ಲಿಕೆ

ಸುಳ್ಳು ಸಾಕ್ಷಿ ಕುರಿತು ತನಿಖೆಯಿಂದ ಕಂಡುಕೊಂಡ ಮಾಹಿತಿಗಳ ವರದಿ ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರು ಮಂದಿ ಆರೋಪಿಗಳ ವಿರುದ್ಧ ನ.20 ರಂದು ‘ಸುಳ್ಳು ಸಾಕ್ಷಿ’ ನೀಡಿರುವ ಬಗ್ಗೆ ತನಿಖೆಯಿಂದ ಕಂಡು ಬಂದ ಮಾಹಿತಿಗಳ ಬಗ್ಗೆ ವರದಿಯನ್ನು ಸಲ್ಲಿಸಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಕೋರ್ಟ್‌ಗೆ ವರದಿ ಸಲ್ಲಿಕೆ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ಗೆ ಪ್ರತಿಭಾ ಪ್ರಶಸ್ತಿಗಳು

ಪುತ್ತೂರು: ಇಂದು, 20 ನವೆಂಬರ್ 2025 ನೇ ಗುರುವಾರದಂದು ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾಯಿ ಇಲ್ಲಿ ನಡೆದ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎವಿಜಿ ಶಾಲೆಯ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು8 ತಮ್ಮದಾಗಿಸಿಕೊಂಡಿದ್ದಾ ರೆ. ಅದ್ವಿತಿ ಬಂಜನ್, 3ನೇ ತರಗತಿ,ಕಥೆ ಹೇಳುವುದು ( ದ್ವಿತೀಯ) ಮತ್ತುಆಶುಭಾಷಣ (ತೃತಿಯ), ಎ.ಎನ್. ಜೋತ್ಸ್ನಾ ಗೌಡ, 4ನೇ ತರಗತಿ,ಸಂಸ್ಕೃತ ಧಾರ್ಮಿಕ ಪಠಣ (ದ್ವಿತೀಯ), ಅದ್ವಿಕ್ ಎಸ್. ಆಚಾರ್ಯ, 5 ನೇ ತರಗತಿ, ಭಕ್ತಿ ಗೀತೆ (ತೃತೀಯ) ಮತ್ತು ಚೇತನ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ಗೆ ಪ್ರತಿಭಾ ಪ್ರಶಸ್ತಿಗಳು Read More »

ಜ್ಯೂಸ್ ಬಾಟಲಿ ತುಂಬಿದ್ದ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು

ಸುಳ್ಯ: ಜ್ಯೂಸ್ ಬಾಟಲಿಗಳನ್ನು ತುಂಬಿಕೊಂಡು ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಘಟನೆ ದೇವರಕೊಲ್ಲಿ ಫಾಲ್ಸ್ ಸಮೀಪ ನಡೆದಿದೆ. ಘಟನೆಯಲ್ಲಿ ಲಾರಿಗೆ ಬೆಂಕಿ ಹತ್ತಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಜ್ಯೂಸ್ ಬಾಟಲಿ ತುಂಬಿದ್ದ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು Read More »

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಾಗೆ ಮೂವರು ಆರೋಪಿಗಳಿಗೆ ಹತ್ತು ಸಾವಿರ ರೂ. ದಂಡ ಮತ್ತು ಒಂದು ವರ್ಷ ಸಾದಾ ಜೈಲು ಶಿಕ್ಷೆ ಪ್ರಕಟಿಸಿ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಗಳನ್ನು ಸಲೀಂ ಹುಸೇನ್, ಶಹಜ್ ಅಹಮದ್, ಮಹಮದ್ ಶಾಫಿ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿರುವುದಾಗಿದೆ.

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರ ಒಳಹರಿವು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದೆ. ದಿನದ ದರ್ಶನದ ಮಿತಿಯನ್ನು 75 ಸಾವಿರಕ್ಕೆ ಇಳಿಕೆ ಮಾಡಲಾಗಿದ್ದು, ಸ್ಪಾಟ್ ಬುಕ್ಕಿಂಗ್ ಅನ್ನು 5 ಸಾವಿರಕ್ಕೆ ‌ಸೀಮಿತಗೊಳಿಸಿದೆ. ನ್ಯಾಯಾಲಯಕ್ಕೆ ನೀಡಲಾದ ಮಾಹಿತಿಯ ಪ್ರಕಾರ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ 1 ಲಕ್ಷ ದಾಟಿದ್ದು, ಹಲವರು ಸಮಯಕ್ಕೂ ಮುನ್ನವೇ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ದಂಡು ಕಡಿಮೆ ಮಾಡುವ

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್ Read More »

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು

ಪುತ್ತೂರು: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರ ಮೇಲೆ ಕಳ್ಳರು ವಕ್ರದೃಷ್ಟಿ ಬೀರಿದ್ದು, ಮದುವೆ ಮನೆಯಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿ ಶಾಕ್ ನೀಡಿದೆ. ಈ ಸಂಬಂಧ ಮನೆಯ ಮಾಲೀಕ ವೀರಮಂಗಲದ ಸುಳಿಮೇಲು ‌ನಿವಾಸಿ ಅಚ್ಯುತ ಗೌಡ (57) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗಳ ನಿಶ್ಚಿತಾರ್ಥ, ಮದುವೆಯ ಕಾರ್ಯಗಳಲ್ಲಿ ಕುಟುಂಬ ಬ್ಯುಸಿ ಯಾಗಿದ್ದ ಸಮಯದಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ. ಅಚ್ಯುತ ಗೌಡ ಅವರು ಸುಮಾರು 36 ಗೋಣಿ

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು Read More »

error: Content is protected !!
Scroll to Top