ಸುದ್ದಿ

ಎವಿಜಿ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ

ಪುತ್ತೂರು: ಇಲ್ಲಿನ ಬನ್ನೂರಿನಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲ್ಪಟ್ಟಿತು. 2025ನೇ ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಆಗಿರುವ ಮುಖ್ಯ ಅತಿಥಿ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ ಕನ್ನಡವನ್ನು ಮಾತನಾಡುವ ಮೂಲಕ ಅದನ್ನು ಉಳಿಸಬೇಕು ಎಂದು ಕರೆಯಿತ್ತರು. ಶಾಲಾ ನಿರ್ದೇಶಕ ಸೀತಾರಾಮ ಕೇವಳ ಮಾತನಾಡಿ 1956ರಲ್ಲಿ ವಿ.ಡಿ. ಮಹಾಜನ್ ವರದಿ ಜಾರಿಗೆ ಬಂದು ಭಾಷಾವಾರು ಪ್ರಾಂತ್ಯ ರೂಪುಗೊಂಡರೂ ಇಂದಿಗೂ ನಮ್ಮಲ್ಲಿ ಅನೇಕರು ಕನ್ನಡ ಭಾಷೆಯನ್ನು ಮಾತನಾಡಲು […]

ಎವಿಜಿ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ Read More »

ಭಯೋತ್ಪಾದನೆಗೆ ನೆರವು : ಮೌಲ್ವಿ ಸಹಿತ ಐವರ ಸೆರೆ

ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಶಂಕೆಯಲ್ಲಿ ದಾಳಿ ನವದೆಹಲಿ : ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಐವರು ಶಂಕಿತರನ್ನು ರಾಜಸ್ಥಾನ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಬಂಧಿತ ಮೌಲ್ವಿ ಅಯೂಬ್, ಮಸೂದ್ ಮತ್ತು ಉಸ್ಮಾನ್ ಎಂದು ಗುರುತಿಸಲಾಗಿದೆ. ಕರೌಲ್‌ನಲ್ಲಿ ಜುನೈದ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಬಂಧಿತರಲ್ಲಿ ಒಬ್ಬನಾದ ಜೋಧ್‌ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರು ಆಯೂಬ್‌ನಿಂದ ಕೆಲವು ದಾಖಲೆಗಳನ್ನು ಎಟಿಎಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆತ 13 ವರ್ಷಗಳಿಂದ ಮದರಸಾದಲ್ಲಿ ಕೆಲಸ

ಭಯೋತ್ಪಾದನೆಗೆ ನೆರವು : ಮೌಲ್ವಿ ಸಹಿತ ಐವರ ಸೆರೆ Read More »

ಶ್ರೇಷ್ಠತೆ, ಶ್ರಮಶೀಲ ಸ್ವಭಾವದ ಆಚರಣೆ : ಕನ್ನಡಿಗರಿಗೆ ಮೋದಿ ರಾಜ್ಯೋತ್ಸವ ಶುಭಾಶಯ

ಕನ್ನದಲ್ಲೇ ಟ್ವೀಟ್‌ ಮಾಡಿ ಶುಭ ಕೋರಿದ ಪ್ರಧಾನಿ ನವದೆಹಲಿ: ಕರ್ನಾಟಕದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ಎಕ್ಸ್‌ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಇಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು

ಶ್ರೇಷ್ಠತೆ, ಶ್ರಮಶೀಲ ಸ್ವಭಾವದ ಆಚರಣೆ : ಕನ್ನಡಿಗರಿಗೆ ಮೋದಿ ರಾಜ್ಯೋತ್ಸವ ಶುಭಾಶಯ Read More »

ರೇವ್‌ ಪಾರ್ಟಿಗೆ ಪೊಲೀಸ್‌ ದಾಳಿ : 35 ಯುವತಿಯರ ಸಹಿತ 115 ಮಂದಿ ವಶ

ಖಾಸಗಿ ರೆಸಾರ್ಟ್‌ನಲ್ಲಿ ತಡರಾತ್ರಿ ತನಕ ನಡೆದ ಪಾರ್ಟಿ ಬೆಂಗಳೂರು : ರಾಮನಗರ ನಗರದ ಹೊರವಲಯದ ಅಯಾನಾ ಎಂಬ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಬೆಂಗಳೂರಿನ ದಕ್ಷಿಣ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು

ರೇವ್‌ ಪಾರ್ಟಿಗೆ ಪೊಲೀಸ್‌ ದಾಳಿ : 35 ಯುವತಿಯರ ಸಹಿತ 115 ಮಂದಿ ವಶ Read More »

ಖಾದರ್‌ ಭ್ರಷ್ಟಾಚಾರದ ಕುರಿತು ನ್ಯಾಯಾಧೀಶರಿಂದ ತನಿಖೆ : ಕಾಗೇರಿ ಒತ್ತಾಯ

ತನಿಖೆ ನಡೆಸಿ ಕಳಂಕ ಮುಕ್ತರಾಗಲಿ ಎಂದು ಸಲಹೆ ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್‌ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ. ಯು.ಟಿ ಖಾದರ್ ಆಡಳಿತ ಸುಧಾರಣೆ ಭಾಗವಾಗಿ ಭ್ರಷ್ಟಾಚಾರದ ಪ್ರಕರಣ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದಿದ್ದಾರೆ. ಸ್ಪೀಕರ್ ಸ್ಥಾನ

ಖಾದರ್‌ ಭ್ರಷ್ಟಾಚಾರದ ಕುರಿತು ನ್ಯಾಯಾಧೀಶರಿಂದ ತನಿಖೆ : ಕಾಗೇರಿ ಒತ್ತಾಯ Read More »

ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ ಬಳಕೆ ಬೇಡ : ಸಿದ್ದರಾಮಯ್ಯ ಸೂಚನೆ

ಸರ್ಕಾರ ಸಭೆ, ಸಮಾರಂಭಗಳಲ್ಲಿ ನಂದಿನಿ ತಿನಿಸುಗಳ ಬಳಕೆಗೆ ಆದೇಶ ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಭೆ-ಸಮಾರಂಭಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವಂತಿಲ್ಲ. ಅದರ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಬಾಟಲಿ ಬಳಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ನಂದಿನಿ ತಿನಿಸುಗಳನ್ನೇ ಬಳಸುವಂತೆ ಆದೇಶಿಸಿದ್ದಾರೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ

ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ ಬಳಕೆ ಬೇಡ : ಸಿದ್ದರಾಮಯ್ಯ ಸೂಚನೆ Read More »

ಜಾತಿ ಗಣತಿ ಮುಕ್ತಾಯ : ನ.10ರವರೆಗೆ ಆನ್‌ಲೈನ್ ಸಮೀಕ್ಷೆ ಅವಕಾಶ

5.54 ಕೋಟಿ ಜನರ ಗಣತಿ ಕಾರ್ಯ ಪೂರ್ಣ ಬೆಂಗಳೂರು : ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಆರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಕಾರ್ಯಕ್ಕೆ ತೆರೆ ಬಿದ್ದಿದೆ. ನ.10ರವರೆಗೂ ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ರಾಜ್ಯಾದ್ಯಂತ ಈವರೆಗೆ ಶೇ.97.51 (ಜಿಬಿಎ ಹೊರತುಪಡಿಸಿ)ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ. ಜಿಬಿಎ ಹೊರತುಪಡಿಸಿ 1.48 ಕೋಟಿ ಕುಟುಂಬಗಳ ಪೈಕಿ 1.46 ಕೋಟಿ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆದಿದೆ. 5.68 ಕೋಟಿ

ಜಾತಿ ಗಣತಿ ಮುಕ್ತಾಯ : ನ.10ರವರೆಗೆ ಆನ್‌ಲೈನ್ ಸಮೀಕ್ಷೆ ಅವಕಾಶ Read More »

ಕಳವಾಗಿದ್ದ 233 ಮೊಬೈಲ್ ಫೋನ್‌ಗಳು ಮರಳಿ ಮಾಲೀಕರಿಗೆ

ಒಂದೂವರೆ ತಿಂಗಳಲ್ಲಿ ಕಳವಾಗಿದ್ದ ಫೋನ್‌ಗಳು ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 30ರವರೆಗೆ ಕಳವಾಗಿದ್ದ 233 ಮೊಬೈಲ್ ಫೋನ್‌ಗಳನ್ನು ನಗರ ಪೊಲೀಸರು ವಶಪಡಿಸಿಕೊಂಡು ಅ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್‌.ಎನ್ ತಿಳಿಸಿದ್ದಾರೆ. ಡಿಸಿಪಿ, ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು ಸಿಇಎನ್ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಕಳ್ಳತನ ಅಥವಾ ಅನುಮಾನಾಸ್ಪದ ಕರೆಗಳ ಸಂದರ್ಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲು ‘ಸಂಚಾರ್ ಸಾಥಿ’

ಕಳವಾಗಿದ್ದ 233 ಮೊಬೈಲ್ ಫೋನ್‌ಗಳು ಮರಳಿ ಮಾಲೀಕರಿಗೆ Read More »

ಸರ್ದಾರ್‌@ 150 ಏಕತಾ ನಡಿಗೆ : ಪುತ್ತೂರಿನಲ್ಲಿ ನ.12ರಂದು ಬೃಹತ್‌ ಪಾದಯಾತ್ರೆ

ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ದಿನದ ಸ್ಮರಣಾರ್ಥ ಕಾರ್ಯಕ್ರಮ ಮಂಗಳೂರು : ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ದೇಶಾದ್ಯಂತ ‘ಸರ್ದಾರ್‌@ 150 ಏಕತಾ ನಡಿಗೆʼಯನ್ನು ಹಮ್ಮಿಕೊಂಡಿದೆ. ಅದರಂತೆ, ದಕ್ಷಿಣ ಕನ್ನಡದಲ್ಲಿಯೂ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದ್ದು, ಮಂಗಳೂರಿನಲ್ಲಿ ನ.10ರಂದು ಹಾಗೂ ಪುತ್ತೂರಿನಲ್ಲಿ ನ.12ರಂದು ಪಾದಯಾತ್ರೆ ನಡೆಸಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು

ಸರ್ದಾರ್‌@ 150 ಏಕತಾ ನಡಿಗೆ : ಪುತ್ತೂರಿನಲ್ಲಿ ನ.12ರಂದು ಬೃಹತ್‌ ಪಾದಯಾತ್ರೆ Read More »

RSS ನಿಷೇಧ ಮಾಡಬೇಕು ಎಂದು ಉರಿವ ಬೆಂಕಿಗೆ ತುಪ್ಪ ಹಾಕಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: RSS ನಿಷೇಧ ಆಗಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹಚ್ಚಿದ್ದ ಬೆಂಕಿಗೆ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ವರೆಗೆ ತುಪ್ಪ ಸುರಿವ ಕೆಲಸ ಮಾಡಿದ್ದು, ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲಿ ಹೆಚ್ಚಿನ ಕಾನೂನು ಸುವ್ಯವಸ್ಥೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದಲೇ ಸೃಷ್ಟಿಯಾಗುತ್ತಿದೆ. ಹೀಗಾಗಿ ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎನ್ನುವ ಮೂಲಕ ಮತ್ತೆ ಕಿಡಿ ಹಚ್ಚುವ ಕೆಲಸ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದಂದು ಬಿಜೆಪಿಯ

RSS ನಿಷೇಧ ಮಾಡಬೇಕು ಎಂದು ಉರಿವ ಬೆಂಕಿಗೆ ತುಪ್ಪ ಹಾಕಿದ ಮಲ್ಲಿಕಾರ್ಜುನ ಖರ್ಗೆ Read More »

error: Content is protected !!
Scroll to Top