ಸುದ್ದಿ

ಸಿಗರೇಟ್‌ ಚಿಲ್ಲರೆಯಾಗಿ ಮಾರುವ ಅಂಗಡಿಗಳಿಗೆ ಬೀಗ : ಜಿಲ್ಲಾಡಳಿತ ಆದೇಶ

ಸಿಗರೇಟ್‌ ಬಿಡಿಯಾಗಿ ಮಾರಾಟ ಮಾಡಲು ಅವಕಾಶವಿಲ್ಲ ಮಂಗಳೂರು : ಧೂಮಪಾನ ಮಾಡಲು ಮತ್ತು ಸಿಗರೇಟ್ ಚಿಲ್ಲರೆಯಾಗಿ ಮಾರಾಟ ಮಾಡಲು ಅವಕಾಶ ನೀಡುವ ಅಂಗಡಿಗಳು ಮತ್ತು ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ತಂಬಾಕು ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಅಂತಹ ಅಂಗಡಿಗಳನ್ನು ಮುಚ್ಚುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ರಾಜು ಕೆ.ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನಗಳನ್ನು […]

ಸಿಗರೇಟ್‌ ಚಿಲ್ಲರೆಯಾಗಿ ಮಾರುವ ಅಂಗಡಿಗಳಿಗೆ ಬೀಗ : ಜಿಲ್ಲಾಡಳಿತ ಆದೇಶ Read More »

ನ.17ರಿಂದ ಶಬರಿಮಲೆ ಯಾತ್ರೆ ಶುರು

ಡಿ.27ರಂದು ಮಂಡಲ ಪೂಜೆ ; ಜ.14ಕ್ಕೆ ಮಕರ ಜ್ಯೋತಿ ದರ್ಶನ ಶಬರಿಮಲೆ : ಶಬರಿಮಲೆಯಲ್ಲಿ ಈ ಬಾರಿಯ ಮಂಡಲ ಮಹೋತ್ಸವಕ್ಕೆ ಸಿದ್ಧತೆ ಶುರುವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಶುರು ಮಾಡಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆ ಶ್ರೀ ಧರ್ಮಶಾಸ್ತ್ರಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ನ.17ರಂದು ತೆರೆಯಲಿದೆ. ಡಿ.27ರಂದು ಮಂಡಲ ಪೂಜೆ ನಡೆಯಲಿದ್ದು, 2026ರ ಜ.14ರಂದು ಮಕರ ಸಂಕ್ರಮಣ ಮಹೋತ್ಸವ ನಡೆಯಲಿದೆ. ಶಬರಿಮಲೆ ಮಂಡಲ ಮಹೋತ್ಸವಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 70 ಸಾವಿರ

ನ.17ರಿಂದ ಶಬರಿಮಲೆ ಯಾತ್ರೆ ಶುರು Read More »

ಗೋ ಅಕ್ರಮ ಸಾಗಾಟ ಆರೋಪಿಯ ಮನೆ ಮುಟ್ಟುಗೋಲು

ಉಳ್ಳಾಲದಲ್ಲಿರುವ ಮನೆಯನ್ನು ಜಪ್ತಿ ಮಾಡಿದ ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ : ಕಾರಿನಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. ‌ನ.2ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್ ಅಲಿಯಾಸ್‌ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು.

ಗೋ ಅಕ್ರಮ ಸಾಗಾಟ ಆರೋಪಿಯ ಮನೆ ಮುಟ್ಟುಗೋಲು Read More »

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು

10 ಲಕ್ಷ ಲೀಟರ್‌ ಪೆಟ್ರೋಲ್‌ ಸ್ಫೋಟಿಸಿ ಮಹಾದುರಂತ; ಹಲವಾರು ಮನೆಗಳು ಬೆಂಕಿಗಾಹುತಿ ವಾಷಿಂಗ್ಟನ್‌: ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ. ದುರಂತದಲ್ಲಿ ಕನಿಷ್ಠ 7 ಮಂದಿ ಸಾವು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ಸುಟ್ಟು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು Read More »

VTU ಪರೀಕ್ಷಾಂಗ ಕುಲಸಚಿವರಾಗಿ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್.

ಸುಳ್ಯ: ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕಯಂತ್ರಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್’ನ ‘ಬಿ’ ಟೀಂನ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮ ಅಮೂಲ್ಯ ಶೈಕ್ಷಣಿಕ ಸೇವೆಯ ಬೆಳ್ಳಿಹಬ್ಬವನ್ನು ಪೂರೈಸಿದ್ದವರು ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್. ಕೊಡಗಿನ ಕೊಡುಗೆಕೊಡಗು ಜಿಲ್ಲೆಯ ಚೆಂಬು ಗ್ರಾಮದ ಜನನಾಯಕರಾಗಿದ್ದ ಊರುಬೈಲು ದಿವಂಗತ ಜಯಪ್ರಕಾಶ್ – ಲೀಲಾವತಿ ದಂಪತಿಗಳ ಪುತ್ರ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್ (Dr. UJWAL OORUBAIL JAYAPRAKASH) ಅವರು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

VTU ಪರೀಕ್ಷಾಂಗ ಕುಲಸಚಿವರಾಗಿ ಡಾ. ಉಜ್ವಲ್ ಊರುಬೈಲ್ ಜಯಪ್ರಕಾಶ್. Read More »

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ

ಸುಳ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಹರಕೆಯಾಗಿ ಸಮರ್ಪಿಸಲಿರುವ ಬೆಳ್ಳಿರಥ ಯಾತ್ರೆಯು ನವೆಂಬರ್ 4ರಂದುಕೋಟೇಶ್ವರದಿಂದ ಸುಳ್ಯಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಶ್ರೀರಾಮಪೇಟೆಗೆ ಆಗಮಿಸಿದ ರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದ ಪರವಾಗಿಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರ ನೇತೃತ್ವದಲ್ಲಿ ಅಕಾಡೆಮಿ ವತಿಯಿಂದ ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಲಾಯಿತು. ಡಾ. ರೇಣುಕಾಪ್ರಸಾದ್ ಅವರಿಗೆ ಸುಗಂಧ

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ Read More »

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು

10 ಲಕ್ಷ ಲೀಟರ್‌ ಪೆಟ್ರೋಲ್‌ ಸ್ಫೋಟಿಸಿ ಮಹಾದುರಂತ; ಹಲವಾರು ಮನೆಗಳು ಬೆಂಕಿಗಾಹುತಿ ವಾಷಿಂಗ್ಟನ್‌: ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ. ದುರಂತದಲ್ಲಿ ಕನಿಷ್ಠ 7 ಮಂದಿ ಸಾವು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ಸುಟ್ಟು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು Read More »

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ

ಸುಳ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಹರಕೆಯ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನವೆಂಬರ್ 4ರ ರಾತ್ರಿ 8ರ ಸುಮಾರಿಗೆ ಸುಳ್ಯಕ್ಕೆ ಪುರಪ್ರವೇಶ ಮಾಡಿತು. ನವೆಂಬರ್ 3ರ ರಾತ್ರಿ 8ಕ್ಕೆ ಉಡುಪಿ ಜಿಲ್ಲಾ ಕುಂಭಾಶಿಯ ರಾಜಗೋಪಾಲಾಚಾರ್ಯ ಅವರ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ಕುತ್ತಿ ಪೂಜೆಗೊಂಡು ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದವರಿಗೆ ಹಸ್ತಾಂತರಿಸಲ್ಪಟ್ಟ ಬೆಳ್ಳಿರಥ

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ Read More »

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಸಮುದ್ರಕ್ಕೆ ಜಿಗಿಯಲು ಬಂದು ಜನರನ್ನು ನೋಡಿ ವಾಪಸು ಮನೆಗೆ ಹೋಗಿ ನೇಣಿಗೆ ಶರಣಾಗಲು ಯತ್ನ ಪೊಲೀಸರ ಸಕಾಲಿಕ ಕ್ರಮದಿಂದ ಉಳಿದ ತಂದೆ-ಮಗಳ ಜೀವ ಮಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಸೋಮವಾರ ಮುಸ್ಸಂಜೆ ವೇಳೆಗೆ ಸಂಭವಿಸಿದೆ. ಕೂಳೂರು ಪಂಜಿಮೊಗರು ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತವರ ನಾಲ್ಕು ವರ್ಷದ ಪುತ್ರಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು Read More »

ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ

ಶ್ರೀ ತತ್ವಮಸಿ ಹೆಸರಿನಲ್ಲಿ ಸಂಸ್ಥೆ ತೆರೆದು ಕೋಟಿಗಟ್ಟಲೆ ರೂ. ಗುಳುಂ ಮಾಡಿದ ಪ್ರಕರಣ ಸುಳ್ಯ : ಸುಳ್ಯದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ಆರ್) ಮತ್ತು ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ಆರ್) ಹೆಸರಿನಲ್ಲಿ ‘ಬೆನಿಫಿಟ್ ಸ್ಕೀಮ್’ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳನ್ನು ಕೆ.ಪಿ. ಗಣೇಶ್, ಗೀತಾ ಕೆ.ಎಸ್. ಮತ್ತು ಭಾರತಿ ಎಂದು ಗುರುತಿಸಲಾಗಿದೆ. ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಎನ್.ಇ.ವೈ. ಕಮಲಾಕ್ಷ ಮತ್ತು ಕೆ.

ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ Read More »

error: Content is protected !!
Scroll to Top