ಸುದ್ದಿ

ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆ

ಮಂಗಳೂರು: ದುಷ್ಕರ್ಮಿಯೊಬ್ಬ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ‌ನಕಲಿ ಖಾತೆ ತೆರೆದಿರುವ ಬಗ್ಗೆ ವರದಿಯಾಗಿದೆ. ಕೆಲ ದಿನಗಳ ಹಿಂದೆಯೇ ಈ ಖಾತೆ ತೆರೆಯಲಾಗಿದ್ದು, ಅದರಲ್ಲಿ ಈಗಾಗಲೇ ಕೆಲವು ಮಂದಿ ಸ್ನೇಹಿತರಾಗಿರುವುದು ‌ಸಹ ಕಂಡು ಬಂದಿದೆ. ಈ ಸಂಬಂಧ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ತಕ್ಷಣವೇ ಫೇಸ್‌ಬುಕ್ ಸಂಸ್ಥೆಗೆ ರಿಪೋರ್ಟ್ ಮಾಡಿದ್ದಾಗಿ ತಿಳಿದು ಬಂದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆ Read More »

ಸಿಎಂ, ಡಿಸಿಎಂ, ಶಿಕ್ಷಣ ಸಚಿವರ ಅವಹೇಳನ: ಯೂಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲು

ಬೆಂಗಳೂರು: ರಾಜ್ಯ ಸರ್ಕಾರ, ಸಿ. ಎಂ. ಸಿದ್ದರಾಮಯ್ಯ, ಡಿ.ಸಿ.ಎಂ. ಡಿ. ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚಿತ್ರಗಳನ್ನು ಅವಹೇಳನಕಾರಿ ಎಂಬಂತೆ ಬಳಸಿದ ನ್ಯೂಸ್ ಫ್ಯಾಕ್ಟರಿ-09 ಎಂಬ ಯೂಟ್ಯೂಬ್ ಚಾನೆಲ್ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಎಎಸ್‌ಐ ಅಸ್ಮಾ ಬೇಗಂ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ

ಸಿಎಂ, ಡಿಸಿಎಂ, ಶಿಕ್ಷಣ ಸಚಿವರ ಅವಹೇಳನ: ಯೂಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲು Read More »

ಅಂಕಪಟ್ಟಿ ಪಡೆಯಲು ಮೈಸೂರಿನ ಮಾನಸ ಗಂಗೋತ್ರಿ ಮುಂದೆ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ಯುವತಿ

ಮೈಸೂರು: ನಕಲಿ ಅಂಕಪಟ್ಟಿ ಪಡೆಯಲು 18 ಸಾವಿರ ರೂ. ಗಳನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಮೈಸೂರು ವಿ.ವಿ. ಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಮೀಪ ರಸ್ತೆಯಲ್ಲಿ ಮಲಗಿ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಬಿ.ಇಡಿ. ಗೆ ಪ್ರವೇಶಾತಿ ಪಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ವಿವಿಯಲ್ಲೇ ಇರುವ ನನ್ನ ಎಸ್‌ ಎಸ್‌ ಎಲ್‌ ಸಿ ಮತ್ತು ಪದವಿ ಅಂಕಪಟ್ಟಿಗಳನ್ನು ‌ನೀಡುವಂತೆ ಮನವಿ ಮಾಡಿದ್ದೆ. ಆದರೆ ಬಾಕಿ ಶುಲ್ಕ ಪಾವತಿ ಸಿ ದಲ್ಲಿ ಅಂಕ ಪಟ್ಟಿ ನೀಡುವುದಾಗಿ ತಿಳಿಸಿದರು.

ಅಂಕಪಟ್ಟಿ ಪಡೆಯಲು ಮೈಸೂರಿನ ಮಾನಸ ಗಂಗೋತ್ರಿ ಮುಂದೆ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ಯುವತಿ Read More »

ಗುರುನಾನಕ್ ಜನ್ಮಜಯಂತಿ: ಶುಭ ಕೋರಿದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್

ನವದೆಹಲಿ: ಸಿಖ್ ಗುರು ಗುರುನಾನಕ್ ಅವರ ಜನ್ಮಜಯಂತಿಯ ಪ್ರಯುಕ್ತ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಶುಭ ಕೋರಿ, ಗುರುನಾನಕ್ ಅವರ ತತ್ವಗಳನ್ನು ಸ್ಮರಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶ್ರೀ ಗುರುನಾನಕ್ ದೇವ್ ಜಿ ಅವರ ಜೀವನ ಮತ್ತು ಬೋಧನೆಗಳು ಸತ್ಯ, ಸಮಾನತೆ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಶಾಶ್ವತ ಮೌಲ್ಯಗಳಿಂದ ಜಗತ್ತನ್ನು ಬೆಳಗಿಸುತ್ತಿವೆ ಎಂದಿದ್ದಾರೆ. ಗುರುನಾನಕ್ ಅವರ ದೈವಿಕ ಸಂದೇಶವು ಕಾಲವನ್ನು ಮೀರಿದ್ದು, ಮಾನವೀಯತೆಯು ಶಾಂತಿ, ಸದಾಚಾರ ಮತ್ತು

ಗುರುನಾನಕ್ ಜನ್ಮಜಯಂತಿ: ಶುಭ ಕೋರಿದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ Read More »

ಮೈಸೂರು ನಗರದಲ್ಲಿ ಫ್ಲೈ‌ಓವರ್ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ: ಸಂಸದ ಯದುವೀರ್ ವಿರೋಧ

ಮೈಸೂರು: ರಾಜ್ಯ ಸರ್ಕಾರ ಮೈಸೂರು ನಗರದಲ್ಲಿ ಎರಡು ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸಂಸದ ಯದುವೀರ ಕೃಷ್ಣದತ್ತ ‌ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಜೆಎಲ್‌ಬಿ ರಸ್ತೆ, ವಿನೋಬಾ ರಸ್ತೆಗಳು ಪಾರಂಪರಿಕ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಜನಾಭಿಪ್ರಾಯ ಪಡೆಯದೇ ಈ ಮಾರ್ಗದಲ್ಲಿ ಫೈಓವರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಪಿಆರ್ ಕೂಡ ಸಿದ್ದಪಡಿಸುತ್ತಿದ್ದಾರೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದಿದ್ದಾರೆ. ಸಿಎಂ ಕೂಡ ಗ್ರೇಟ‌ರ್

ಮೈಸೂರು ನಗರದಲ್ಲಿ ಫ್ಲೈ‌ಓವರ್ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ: ಸಂಸದ ಯದುವೀರ್ ವಿರೋಧ Read More »

ನಂದಿನಿ ತುಪ್ಪದ ಬೆಲೆ ದಿಢೀರ್‌ 90 ರೂ. ಏರಿಕೆ

ಜಿಎಸ್‌ಟಿ ಇಳಿಕೆಯಿಂದ ನಿರಾಳವಾಗಿದ್ದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್‌ ಬೆಂಗಳೂರು: ಜಿಎಸ್‌ಟಿ ಇಳಿಕೆಯಿಂದಾಗಿ ಎಲ್ಲ ವಸ್ತುಗಳ ಬೆಲೆ ಇಳಿಕೆಯಾಗಿ ನಿರಾಳವಾಗಿದ್ದ ಜನತೆಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನ ತುಪ್ಪದ ಬೆಲೆಯಲ್ಲಿ ಏಕಾಏಕಿ 90 ರೂ. ಏರಿಕೆ ಮಾಡಿ ದಿಢೀರ್‌ ಶಾಕ್‌ ಕೊಟ್ಟಿದೆ. ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಹಿಂದೆ 1

ನಂದಿನಿ ತುಪ್ಪದ ಬೆಲೆ ದಿಢೀರ್‌ 90 ರೂ. ಏರಿಕೆ Read More »

ಸಿಗರೇಟ್‌ ಚಿಲ್ಲರೆಯಾಗಿ ಮಾರುವ ಅಂಗಡಿಗಳಿಗೆ ಬೀಗ : ಜಿಲ್ಲಾಡಳಿತ ಆದೇಶ

ಸಿಗರೇಟ್‌ ಬಿಡಿಯಾಗಿ ಮಾರಾಟ ಮಾಡಲು ಅವಕಾಶವಿಲ್ಲ ಮಂಗಳೂರು : ಧೂಮಪಾನ ಮಾಡಲು ಮತ್ತು ಸಿಗರೇಟ್ ಚಿಲ್ಲರೆಯಾಗಿ ಮಾರಾಟ ಮಾಡಲು ಅವಕಾಶ ನೀಡುವ ಅಂಗಡಿಗಳು ಮತ್ತು ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ತಂಬಾಕು ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಅಂತಹ ಅಂಗಡಿಗಳನ್ನು ಮುಚ್ಚುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ರಾಜು ಕೆ.ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನಗಳನ್ನು

ಸಿಗರೇಟ್‌ ಚಿಲ್ಲರೆಯಾಗಿ ಮಾರುವ ಅಂಗಡಿಗಳಿಗೆ ಬೀಗ : ಜಿಲ್ಲಾಡಳಿತ ಆದೇಶ Read More »

ನ.17ರಿಂದ ಶಬರಿಮಲೆ ಯಾತ್ರೆ ಶುರು

ಡಿ.27ರಂದು ಮಂಡಲ ಪೂಜೆ ; ಜ.14ಕ್ಕೆ ಮಕರ ಜ್ಯೋತಿ ದರ್ಶನ ಶಬರಿಮಲೆ : ಶಬರಿಮಲೆಯಲ್ಲಿ ಈ ಬಾರಿಯ ಮಂಡಲ ಮಹೋತ್ಸವಕ್ಕೆ ಸಿದ್ಧತೆ ಶುರುವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಶುರು ಮಾಡಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆ ಶ್ರೀ ಧರ್ಮಶಾಸ್ತ್ರಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ನ.17ರಂದು ತೆರೆಯಲಿದೆ. ಡಿ.27ರಂದು ಮಂಡಲ ಪೂಜೆ ನಡೆಯಲಿದ್ದು, 2026ರ ಜ.14ರಂದು ಮಕರ ಸಂಕ್ರಮಣ ಮಹೋತ್ಸವ ನಡೆಯಲಿದೆ. ಶಬರಿಮಲೆ ಮಂಡಲ ಮಹೋತ್ಸವಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 70 ಸಾವಿರ

ನ.17ರಿಂದ ಶಬರಿಮಲೆ ಯಾತ್ರೆ ಶುರು Read More »

ಗೋ ಅಕ್ರಮ ಸಾಗಾಟ ಆರೋಪಿಯ ಮನೆ ಮುಟ್ಟುಗೋಲು

ಉಳ್ಳಾಲದಲ್ಲಿರುವ ಮನೆಯನ್ನು ಜಪ್ತಿ ಮಾಡಿದ ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ : ಕಾರಿನಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. ‌ನ.2ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್ ಅಲಿಯಾಸ್‌ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು.

ಗೋ ಅಕ್ರಮ ಸಾಗಾಟ ಆರೋಪಿಯ ಮನೆ ಮುಟ್ಟುಗೋಲು Read More »

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು

10 ಲಕ್ಷ ಲೀಟರ್‌ ಪೆಟ್ರೋಲ್‌ ಸ್ಫೋಟಿಸಿ ಮಹಾದುರಂತ; ಹಲವಾರು ಮನೆಗಳು ಬೆಂಕಿಗಾಹುತಿ ವಾಷಿಂಗ್ಟನ್‌: ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ. ದುರಂತದಲ್ಲಿ ಕನಿಷ್ಠ 7 ಮಂದಿ ಸಾವು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ಸುಟ್ಟು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ

ಹಾರುತ್ತಿರುವಾಗಲೇ ಸ್ಫೋಟಗೊಂಡು ಪತನವಾದ ವಿಮಾನ : 7 ಮಂದಿ ಸಾವು Read More »

error: Content is protected !!
Scroll to Top