ಸುದ್ದಿ

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!!

ಇನ್ನಿಲ್ಲದ ಸಕ್ಸಸ್ ಕಂಡಿದ್ದ ಕಾಂತಾರ ಸಿನಿಮಾದ ಬಳಿಕ ಕಾಂತಾರ 2 ಬರಲಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರೇ ಇದನ್ನು ಖಾತ್ರಿಪಡಿಸಿದ್ದಾರೆ. ಸುಮಾರು 100 ಕೋಟಿ ರೂ.ನಲ್ಲಿ ಕಾಂತಾರ 2 ಸೆಟ್ಟೇರುವ ಸಾಧ್ಯತೆ ಇದೆ. ಅಂದರೆ ಕಾಂತಾರ ಚಿತ್ರಕ್ಕಿಂತಲೂ ಹೆಚ್ಚು – ಕಮ್ಮಿ 10 ಪಟ್ಟು ಹೆಚ್ಚು ಬಜೆಟ್ ಹೊಂದಿದ್ದು, ಅದ್ಧೂರಿಯಾಗಿ ತೆರೆ ಕಾಣಲಿದೆಯಂತೆ. ಸದ್ಯ ಕಾಂತಾರ 2 ಬರವಣಿಗೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ ಬಿ. […]

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!! Read More »

ನ್ಯೂಸ್ ಪುತ್ತೂರು ಸ್ಟುಡಿಯೋದಲ್ಲಿ ವಿಠಲ್ ನಾಯಕ್ | ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ಕೆಲವೇ ಕ್ಷಣದಲ್ಲಿ ಪ್ರಸಾರ…

ಪುತ್ತೂರು: ಗೌರಿ ಗಣೇಶ (ಚೌತಿ) ಹಬ್ಬದ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಸ್ಟುಡಿಯೋದಿಂದ ವಿಠಲ್ ನಾಯಕ್ ಅವರ ಗೀತಾ ಸಾಹಿತ್ಯ ಸಂಭ್ರಮ ವಿಶೇಷ ಕಾರ್ಯಕ್ರಮ ಇಂದು (ಸೆ. 18) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಗೀತಾ ಸಾಹಿತ್ಯ ಸಂಭ್ರಮದ ಮೂಲಕ ಮನೆಮಾತಾಗಿರುವ ವಿಠಲ್ ನಾಯಕ್ ಅವರು ನ್ಯೂಸ್ ಪುತ್ತೂರು ಸ್ಟುಡಿಯೋಗೆ ಭೇಟಿ ನೀಡಿ, ವಿಶೇಷ ಕಾರ್ಯಕ್ರಮವನ್ನು ನೀಡಿದ್ದಾರೆ. ಹಾಸ್ಯ ಮಿಶ್ರಿತ, ಸಂದೇಶ ನೀಡಿರುವ ವಿಠಲ್ ನಾಯಕ್ ಅವರು ಭಜನೆಯನ್ನು ಹಾಡಿ, ಗಣಪತಿಯ ವಿಶೇಷತೆಯನ್ನು ಕೊಂಡಾಡಿದ್ದಾರೆ.

ನ್ಯೂಸ್ ಪುತ್ತೂರು ಸ್ಟುಡಿಯೋದಲ್ಲಿ ವಿಠಲ್ ನಾಯಕ್ | ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ಕೆಲವೇ ಕ್ಷಣದಲ್ಲಿ ಪ್ರಸಾರ… Read More »

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ | 1.51 ಕೋಟಿ ರೂ. ಲಾಭ: ಶೇ. 20 ಡಿವಿಡೆಂಡ್ ಘೋಷಣೆ

ಸುಳ್ಯ: ಗೌಡರ ಯುವ ಸೇವಾಸಂಘ ಸುಳ್ಯ ಪ್ರವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ.ಆ. ಸೊಸೈಟಿಯ ವಾರ್ಷಿಕ ಮಹಾಸಭೆ ಸೆ.16ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ಇಲ್ಲಿ ನಡೆಯಿತು. ಸಂಘವು 2022-23ನೇ ಆರ್ಥಿಕ ವರ್ಷದಲ್ಲಿ 1.51 ಕೋಟಿ ಲಾಭ ಗಳಿಸಿದ್ದು, ಶೇ. 20 ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಘೋಷಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಯ , ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ | 1.51 ಕೋಟಿ ರೂ. ಲಾಭ: ಶೇ. 20 ಡಿವಿಡೆಂಡ್ ಘೋಷಣೆ Read More »

8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ!

ಕೊಲಂಬೊ: ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿ ಭಾರತ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಮಾರಕವಾಗಿ ಕಾಡಿದರು. ಹೀಗಾಗಿ ಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ 51 ರನ್ ಗಳ ಗುರಿ ನೀಡಿತ್ತು. ಈ ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಭಾರತ 6.1 ಓವರ್ ಗೆ ವಿಕೆಟ್ ನಷ್ಟವಿಲ್ಲದೆ 51

8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ! Read More »

ಪೊಲೀಸ್ ನಾಯಿಗೆ ಅದೆಂಥಾ ಗೌರವ! ಶೂ ಕಳಚಿಟ್ಟು ಸನ್ಮಾನಿಸಿದ ಎಸ್.ಪಿ.!!

ಕೋಲಾರ: ಯಾರೋ ಒಬ್ಬ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವಾಗಲೂ ನಾವು ಚಪ್ಪಲಿ ಕಳಚಿಟ್ಟು ನಿಲ್ಲುವುದಿಲ್ಲ. ಆದರೆ, ಕೋಲಾರದ ಎಸ್‌ಪಿ ನಾರಾಯಣ ಅವರು 11 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ವಾನ ಲೈಕಾ ಬೀಳ್ಕೊಡುಗೆ ಸಂದರ್ಭದಲ್ಲಿ ಶೂ ಕಳಚಿಟ್ಟು ಆ ನಾಯಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು. ನಾಯಿಯ ಬಗೆಗಿನ ಪೊಲೀಸರ ಪ್ರೀತಿ ಜಗತ್ತಿಗೆ ಅರ್ಥವಾಯಿತು. ಹೀಗೆ ಸನ್ಮಾನ ಮಾಡಿಸಿಕೊಂಡ ಶ್ವಾನದಳದ ನಾಯಿ ಏನು ಸಾಮಾನ್ಯದ್ದಲ್ಲ. ಕಳೆದ 11 ವರ್ಷಗಳಿಂದ

ಪೊಲೀಸ್ ನಾಯಿಗೆ ಅದೆಂಥಾ ಗೌರವ! ಶೂ ಕಳಚಿಟ್ಟು ಸನ್ಮಾನಿಸಿದ ಎಸ್.ಪಿ.!! Read More »

ಪ್ರತಿಷ್ಠಿತ ಸಂಸ್ಥೆಯ ಪ್ರಮುಖ ಹುದ್ದೆಗೆ ಅರ್ಜಿ ಆಹ್ವಾನ

ಪುತ್ತೂರು: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯೊಂದು ಕಚೇರಿ ಹುದ್ದೆ ಭರ್ತಿಗೆ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಯಾವುದೇ ಪದವಿ ಪಡೆದುಕೊಂಡಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನ, ಕನ್ನಡ – ಇಂಗ್ಲೀಷ್ ಟೈಪಿಂಗ್ ಕಡ್ಡಾಯವಾಗಿ ತಿಳಿದಿರಬೇಕು. ಸಂವಹನ ಕೌಶಲ್ಯ ಅಗತ್ಯ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳೊಂದಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: Email id : [email protected], Ph no.: 8904877721, 7204977721

ಪ್ರತಿಷ್ಠಿತ ಸಂಸ್ಥೆಯ ಪ್ರಮುಖ ಹುದ್ದೆಗೆ ಅರ್ಜಿ ಆಹ್ವಾನ Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ

ಸುಳ್ಯ :ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭದ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಜೂ.12 ಬೆಳಗ್ಗೆ 6.00 ಗಂಟೆಗೆ ಗಣಹೋಮ ಪೂಜೆಯೊಂದಿಗೆ ಪಿ ಕೆ ಉಮೇಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ವೆಂಕಟ್ ವಳಳಂಬೆ, ಸುಬೋದ್ ಶೆಟ್ಟಿ, ವಿನಯ್ ಕುಮಾರ್ ಕಂದಡ್ಕ,

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ Read More »

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ | 31 ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ. 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರಕ್ಕೆ ಡಿ.ಕೆ. ಶಿವಕುಮಾರ್, ತುಮಕೂರಿಗೆ ಡಾ. ಜಿ. ಪರಮೇಶ್ವರ, ಬೆಳಗಾವಿಗೆ ಸತೀಶ್ ಜಾರಕಿಹೊಳಿ, ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ | 31 ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ Read More »

ಸವಣೂರು ಸೀತಾರಾಮ ರೈ 76ನೇ ವರ್ಷದ ಹುಟ್ಟುಹಬ್ಬ | ನಾಳೆ (ಜೂನ್ 9) ಸವಣೂರು ವಿದ್ಯಾರಶ್ಮಿ ಆವರಣದಲ್ಲಿ ಆಚರಣೆ

ಸವಣೂರು: ಸವಣೂರಿನ ಶಿಲ್ಪಿ ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬದ ಸಂಭ್ರಮ ಜೂನ್ 9ರಂದು ನಡೆಯಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಭಾಗೀರಥಿ ಮುರುಳ್ಯ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸವಣೂರು ಸೀತಾರಾಮ ರೈ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಗುವುದು. ಇದೇ ಸಂದರ್ಭ ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸವಣೂರು ಸೀತಾರಾಮ ರೈ 76ನೇ ವರ್ಷದ ಹುಟ್ಟುಹಬ್ಬ | ನಾಳೆ (ಜೂನ್ 9) ಸವಣೂರು ವಿದ್ಯಾರಶ್ಮಿ ಆವರಣದಲ್ಲಿ ಆಚರಣೆ Read More »

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ

ಕಡಬ: ರೈತರ ದೈನಂದಿನ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿಯಾಗಿದೆ ಎಂದು ಸುಳ್ಯ ವಿಧಾನಸಭಾ  ಕ್ಷೇತ್ರದ ಶಾಸಕಿ  ಭಾಗೀರಥಿ ಮುರುಳ್ಯ ಹೇಳಿದರು. ಅವರು ಶನಿವಾರ  ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖಾ ಕಚೇರಿಯ ಆವರಣದಲ್ಲಿ  ನಬಾರ್ಡ್ ನೆರವಿನೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.  ರೈತರಿಗೆ ಸಹಕಾರಿ ಸಂಘಗಳ ಸವಲತ್ತುಗಳು  ಸರಕಾರದ ಯೋಜನೆಗಳಿಗಿಂತಲೂ ಹೆಚ್ಚು  ಪ್ರಯೋಜನಕಾರಿಯಾಗಿವೆ.

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ Read More »

error: Content is protected !!
Scroll to Top