ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ
ಅಯೊಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಶ್ರೀ ರಾಮನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು, ಉತ್ಸವ ನಡೆಸಲಾಯಿತು. ಶ್ರೀ ರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ, ವಿಷ್ಣುಸಹಸ್ರನಾಮ, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ತಂದು, ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.
ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ Read More »