ಉಡುಪಿ

ಆನ್‌ಲೈನ್‌ ಟಾಸ್ಕ್‌ ನಂಬಿ 31 ಲಕ್ಷ ರೂ. ಕಳೆದುಕೊಂಡ ಮಹಿಳೆ

ಪಾರ್ಟ್‌ ಟೈಮ್‌ ಜಾಬ್‌ ನೆಪದಲ್ಲಿ ವಂಚಿಸಿದ ಸೈಬರ್‌ ಚೋರರು ಉಡುಪಿ: ಆನ್‌ಲೈನ್ ಟಾಸ್ಕ್ ನಂಬಿ ಮಹಿಳೆಯೊಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡ ಘಟನೆ ಉಡುಪಿಯ ಉದ್ಯಾವರ ಸಮೀಪ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಾವರದ ವಿಜಯಲಕ್ಷ್ಮೀ (55) ಎಂಬ ಮಹಿಳೆ ನ.29ರಂದು ಫೇಸ್‌ಬುಕ್‌ನಲ್ಲಿ ವರ್ಕ್‌ಫ್ರಮ್ ಹೋಮ್ ಕುರಿತ ಜಾಹೀರಾತು ಕ್ಲಿಕ್ ಮಾಡಿದ್ದು, ಆಗ ವಿಜಯಲಕ್ಷ್ಮೀ ಅವರ ವಾಟ್ಸಾಪ್‌ಗೆ ಸಂದೇಶ ಬಂದಿತ್ತು. ತಾನು ಕಂಪನಿಯೊಂದರ ಎಚ್‌ಆರ್ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿ, ಪಾರ್ಟ್ […]

ಆನ್‌ಲೈನ್‌ ಟಾಸ್ಕ್‌ ನಂಬಿ 31 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಕುಖ್ಯಾತ ಮನೆಗಳ್ಳನ ಬಂಧನ : 65.79 ಲ.ರೂ. ಮೌಲ್ಯದ ಚಿನ್ನಾಭರಣ ವಶ

ಉಡುಪಿ : ಕುಖ್ಯಾತ ಮನೆಕಳ್ಳನೊಬ್ಬನನ್ನು ಬಂಧಿಸಿ, 65,79,720 ರೂ. ಮೌಲ್ಯದ ಕದ್ದ ಚಿನ್ನಾಭರಣಗಳನ್ನು ಉಡುಪಿ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿ ಸಮೀಪದ ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ(37) ಬಂಧಿತ ಆರೋಪಿ. ಉಡುಪಿಯ 76 ಬಡಗುಬೆಟ್ಟು ಗ್ರಾಮದ ಒಳಕಾಡು ಶಾರದಾಂಬಾ ದೇವಸ್ಥಾನದ ಗೋಪುರದ ರೋಸ್ ವಿಲ್ಲಾದ ಶೈಲಾ ವಿಲ್ಹೆಲ್ಮ್ ಮೀನಾ (53) ಅವರು ನವೆಂಬರ್ 30ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಅವರು ಬೆಳಗ್ಗೆ ಚರ್ಚ್‌ಗೆ ಹೋಗುವ ಸಲುವಾಗಿ ಆಭರಣಗಳನ್ನು ಧರಿಸಲು ಮಲಗುವ ಕೋಣೆಯ

ಕುಖ್ಯಾತ ಮನೆಗಳ್ಳನ ಬಂಧನ : 65.79 ಲ.ರೂ. ಮೌಲ್ಯದ ಚಿನ್ನಾಭರಣ ವಶ Read More »

ಇಬ್ಬರು ಆನ್‌ಲೈನ್‌ ವಂಚಕರ ಸೆರೆ : 6.15 ಲಕ್ಷ ರೂ. ವಶ

ಫ್ರಾಂಚೈಸಿ ಕೊಡುವ ನೆಪದಲ್ಲಿ ಉದ್ಯಮಿಗೆ ವಂಚಿದ್ದ ಚೋರರು ಉಡುಪಿ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 6,15,000 ರೂ. ಮೌಲ್ಯದ ನಗದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರದ ಪಾಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಬಂಧಿತ ಆರೋಪಿಗಳು. ಇವರಿಂದ 97 ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000 ರೂ. ಮೌಲ್ಯದ

ಇಬ್ಬರು ಆನ್‌ಲೈನ್‌ ವಂಚಕರ ಸೆರೆ : 6.15 ಲಕ್ಷ ರೂ. ವಶ Read More »

ಮೋದಿಗೆ ಭಾರತ ಭಾಗ್ಯವಿದಾತ ಬಿರುದು ಪ್ರದಾನ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷಕಂಠ ಗೀತಾ ಗಾಯನ-ಪಾರಾಯಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪುತ್ತಿಗೆ ಮಠದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಂಸ್ಕೃತದಲ್ಲಿ ಹಾಡಿ ಹೊಗಳಿ ಬಿರುದೊಂದನ್ನು ನೀಡಿದರು. ಸ್ವಾಮೀಜಿಗಳು ವಿಶೇಷವಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಹಾಗೂ ಧರ್ಮ ರಕ್ಷಣೆಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಗಳನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿದಾತ’ ಎಂಬ ಬಿರುದು ಸಮರ್ಪಣೆ ಮಾಡಲಾಯಿತು. ಜೊತೆಗೆ ರಾಷ್ಟ್ರ ರಕ್ಷಣೆಯ ಕವಚ ಮತ್ತು ಶ್ರೀಕೃಷ್ಣನ

ಮೋದಿಗೆ ಭಾರತ ಭಾಗ್ಯವಿದಾತ ಬಿರುದು ಪ್ರದಾನ Read More »

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ

ವಿಕಸಿತ ಭಾರತ ಸಂಕಲ್ಪ ಪೂರ್ಣವಾಗಲು ಜನರಿಗೆ 9 ಕರ್ತವ್ಯ ತಿಳಿಸಿದ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎಂದು ಪ್ರಶಂಸೆ ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಎಂದು ಬಣ್ಣಿಸಿದ ಮೋದಿ ಉಡುಪಿ: ಜನರು 9 ಬಗೆಯ ಕರ್ತವ್ಯ ನಿರ್ವಹಿಸಿದರೆ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಿದೆ. ಲಕ್ಷ ಕಂಠ ಗೀತ ಗಾಯನ ಅತ್ಯುತ್ತಮ ಕಾರ್ಯಕ್ರಮ, ಅದರಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ ಸಾಧ್ಯ. ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ Read More »

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ

ರೋಡ್‌ ಶೋದಲ್ಲಿ ಪ್ರಧಾನಿಯನ್ನು ಕಂಡು ಪುಳಕಿತರಾದ ಜನ ಉಡುಪಿ: 17 ವರ್ಷಗಳ ಬಳಿಕ ಕೃಷ್ಣನಗರಿ ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃಷ ಮಠದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಪರ್ಯಾಯ ಪುತ್ತಿಗೆ ಶ್ರೀಗಳು ತಿಲಕವಿಟ್ಟು ಪ್ರಧಾನಿಯನ್ನು ಸಾಂಪ್ರದಾಯಿಒಕವಾಗಿ ಸ್ವಾಗತಿಸಿದರು. ಮಧ್ವ ತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಯಾದ ಬಳಿಕ ಕನಕನ ಕಿಂಡಿಯ ಮೂಲಕ ಮೋದಿ ಕೃಷ್ಣನ ದರ್ಶನ ಪಡೆದರು. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ Read More »

ಉಡುಪಿ : ನರೇಂದ್ರ ಮೋದಿಯ ರೋಡ್‌ ಶೋ ಆರಂಭ

ವಿಮಾನ ನಿಲ್ದಾಣದಲ್ಲಿ ದಿನೇಶ್‌ ಗುಂಡೂರಾವ್‌ ಸ್ವಾಗತ ಮಂಗಳೂರು : ಉಡುಪಿಯ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಉಡುಪಿಗೆ ತೆರಳಿದ ಮೋದಿಯ ರೋಡ್‌ ಶೋ ಆರಂಭವಾಗಿದೆ. ಬೆಳಗ್ಗೆ 10.25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನಮಂತ್ರಿಗಳನ್ನು, ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್,

ಉಡುಪಿ : ನರೇಂದ್ರ ಮೋದಿಯ ರೋಡ್‌ ಶೋ ಆರಂಭ Read More »

ಮಲ್ಪೆ ಕಡಲ ತೀರದಲ್ಲಿ ಮೋದಿಯ ಸ್ವಾಗತಕ್ಕೆ ಆಕರ್ಷಕ ಮರಳು ಶಿಲ್ಪ ರಚನೆ

ಇಂದು ಕರಾವಳಿ ಪೂರ್ತಿ ಮೋದಿಮಯ ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಕಲಾವಿದರು ಮೋದಿ ಸ್ವಾಗತಕ್ಕೆ ವಿಶೇಷ ಆಕರ್ಷಕ ಮರಳಿನ ಕಲಾಕೃತಿ ರಚಿಸಿದ್ದಾರೆ. ಸ್ಯಾಂಡ್ ಥೀಮ್ ಕಲಾವಿದರು ಮರಳು ಶಿಲ್ಪ ರಚಿಸಿದ್ದು, ಕಡೆಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ರಚಿಸಲಾಗಿದೆ. ಮರಳಿನ ಚಿತ್ರಕ್ಕೆ ಬಣ್ಣ ಕೊಡಲಾಗಿದೆ. ಕಲಾವಿದ ಹರೀಶ್ ಸಾಗ ಮತ್ತು ತಂಡದವರು ನಿನ್ನೆ ದಿನವಿಡೀ ಪರಿಶ್ರಮ ಪಟ್ಟು ಇದನ್ನು ಮಾಡಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ

ಮಲ್ಪೆ ಕಡಲ ತೀರದಲ್ಲಿ ಮೋದಿಯ ಸ್ವಾಗತಕ್ಕೆ ಆಕರ್ಷಕ ಮರಳು ಶಿಲ್ಪ ರಚನೆ Read More »

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ

ಕನ್ನಡದಲ್ಲೇ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡ ಪ್ರಧಾನಿ ಉಡುಪಿ : ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಇದಕ್ಕೂ ಮೊದಲು ಉಡುಪಿಯಲ್ಲಿ ರೋಡ್‌ಶೋ ನಡೆಯಲಿದೆ. ಜನರು ಮುಂಜಾನೆಯಿಂದಲೇ ಉಡುಪಿಯತ್ತ ಹೋಗಲಾರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಉಡುಪಿಯ ಭೇಟಿಗೆ ಕಾತರರಾಗಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ ಎಂದು

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ Read More »

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಉಡುಪಿ: ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿಯಂಥ ಸೂಪರ್‌ ಹಿಟ್‌ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿಯವರು ಬುಧವಾರ ಬೆಳಗ್ಗೆ (ನ.26) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು. ಕಂದಾವರ ರಘುರಾಮ ಶೆಟ್ಟಿಯವರು ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ವೇಷಧಾರಿಯಾಗಿ ಮತ್ತು ನಾಟಕ ಕಲಾವಿದರಾಗಿಯೂ ಪ್ರಸಿದ್ಧರಾಗಿದ್ದರು. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರ ಅವರ ಹುಟ್ಟೂರು. ಶಿಕ್ಷಕರಾಗಿ, ಸಹಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು 35 ವರ್ಷಗಳ ಅಧ್ಯಾಪನ ವೃತ್ತಿ ಮಾಡಿ ನಿವೃತ್ತರಾಗಿದ್ದರು. ಮಾದರಿ

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ Read More »

error: Content is protected !!
Scroll to Top