ರಾಜ್ಯ

ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ

ಚುನಾವಣೆ ದೃಷ್ಟಿಯ ಯೋಜನೆ ನಿರೀಕ್ಷೆ ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ ಫೆ.17ರಂದು ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.ಬಜೆಟ್‌ಗೆ ಸಿದ್ಧತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕಲಬುರ್ಗಿಗೆ ಭೇಟಿ ನೀಡಿದ ಮರುದಿನ ಅಂದರೆ ಜ.20 ರಿಂದ ಇಲಾಖಾ ಮುಖ್ಯಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಸಭೆ ನಡೆಸಲಿದ್ದಾರೆ.ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗಲೇ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲು ಮುಂದಾಗಿದ್ದು, ಇದು […]

ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ Read More »

ಜ.15ರಂದು ಪ್ರಿಯಾಂಕ ಗಾಂಧಿ ಬೆಂಗಳೂರಿಗೆ

ಕಾಂಗ್ರೆಸಿನ ನಾ ನಾಯಕಿ ಕಾರ್ಯಕ್ರಮ ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.16 ರಂದು ನಡೆಯುವ ‘ನಾ ನಾಯಕಿ’ ಸಮಾವೇಶಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರ ಬೆಂಬಲ ಪಡೆಯುವ ಗುರಿಯನ್ನು ಪ್ರಿಯಾಂಕಾ ಗಾಂಧಿ ಅವರು ಹೊಂದಿದ್ದಾರೆ. ಏಪ್ರಿಲ್-ಮೇ ವೇಳೆಗೆ ನಡೆಯಲಿರುವ ಚುನಾವಣೆಗೆ

ಜ.15ರಂದು ಪ್ರಿಯಾಂಕ ಗಾಂಧಿ ಬೆಂಗಳೂರಿಗೆ Read More »

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ

ಕಾಂಗ್ರೆಸ್‌ನಿಂದ ತೀವ್ರ ವಿರೋಧ ಬೆಂಗಳೂರು: ಟಿಪ್ಪು ನಿಜ ಕನಸುಗಳು ವಿವಾದಾತ್ಮಕ ನಾಟಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವಾಗಲೇ ಬಿಜೆಪಿ ಇದೇ ಮಾದರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಣಿಯಲು ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಸಿದ್ಧಪಡಿಸಿದೆ. ಇಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು ಇದನ್ನು ಕಾಂಗ್ರೆಸ್‌ ತೀವ್ರರವಾಗಿ ವಿರೋಧಿಸಿ ತಡೆಯುವಂತೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶವಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ಅದನ್ನು ಕೂಡಲೇ ರದ್ದು ಮಾಡಬೇಕು. ಕಾನೂನು ಸುವ್ಯವಸ್ಥೆ

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ Read More »

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ

1 ಸಾವಿರ ಬಾಣಸಿಗರಿಂದ ಅಡುಗೆ ತಯಾರಿ; ಭದ್ರತೆಗೆ 12 ಸಾವಿರ ಪೊಲೀಸರು ಹಾವೇರಿ: ಹಾವೇರಿಯಲ್ಲಿ ಶುಕ್ರವಾರದಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನನಡೆಯಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನದಲ್ಲಿ ಭದ್ರತೆ ಮತ್ತು ಸಂಚಾರ ನಿರ್ವಹಣೆಯ ಮೇಲ್ವಿಚಾರಣೆಗೆ ಸುಮಾರು 12 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ.ಸಂದರ್ಶಕರು ಸ್ಥಳವನ್ನು ತಲುಪಲು ಮತ್ತು ಪಾರ್ಕಿಂಗ್ ಸ್ಲಾಟ್‌ಗಳನ್ನು ಹುಡುಕಲು ಕ್ಯೂಆರ್ ಕೋಡ್‌ಗಳನ್ನು ಪರಿಚಯಿಸಲಾಗುತ್ತಿದೆ. ಅಡುಗೆ ಕೋಣೆ ಸೇರಿದಂತೆ

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ Read More »

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ

ತುರ್ತುಸಭೆಯಲ್ಲಿ ನಿರ್ಧಾರ ಮೂಡುಬಿದಿರೆ : ಕಂಬಳ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಬುಧವಾರ ನಡೆದ ತುರ್ತುಸಭೆಯಲ್ಲಿ ನಿರ್ಧರಿಸಲಾಗಿದೆ.ಮುಂದಿನ ಕಂಬಳಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಕೊಡುಗೆಯಾಗಿ ನೀಡದ ಸೆನ್ಸಾರ್‌ ಸಿಸ್ಟಂ ಅಳವಡಿಸಿಕೊಂಡು ಫಲಿತಾಂಶ ನಿರ್ಧರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸೆನ್ಸಾರ್‌ ಸಿಸ್ಟಂ ನಿರ್ವಹಣೆಯ ಪೂರ್ಣ ಜವಾಬ್ದಾರಿ ಕಂಗಿನಮನೆ ವಿಜಯಕುಮಾರ್‌ ಅವರದ್ದು. ಒಂದು ವೇಳೆ ಈ ಸೆನ್ಸಾರ್‌ ಸಿಸ್ಟಂ ಕಂಬಳ ಆಗುವಾಗ ಕೈಕೊಟ್ಟರೆ ಮೂರನೇ ತೀರ್ಪುಗಾರರ ತೀರ್ಮಾನವನ್ನು ಅವಲಂಬಿಸಲಾಗುವುದು. ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ Read More »

ಮಂಗಳೂರು-ಮಡ್‌ಗಾಂವ್‌ ರೈಲು ಪುನರಾರಂಭ

ವಾರದಲ್ಲಿ ಆರು ದಿನ ಸಂಚಾರ ಮಂಗಳೂರು : ಮಂಗಳೂರು-ಮಡಗಾಂವ್ ರೈಲನ್ನು ಪುನರಾರಂಭಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ಜಂಕ್ಷನ್‌ವರೆಗೆ ರೈಲು(10107 / 10108) ಮತ್ತೆ ಸಂಚರಿಸಲಿದೆ. ಭಾನುವಾರ ಹೊರತುಪಡಿಸಿ ವಾರದ ಉಳಿದ ಆರು ದಿನ ಈ ರೈಲಿನ ಸಂಚಾರವಿರುತ್ತದೆ. ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್‌ನಿಂದ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಬೆಳಗ್ಗೆ 5:15 ಗಂಟೆಗೆ ಹೊರಟು ಅದೇ ದಿನ 12.15ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.ರೈಲು ಸಂಖ್ಯೆ 10108 ಮಂಗಳೂರು

ಮಂಗಳೂರು-ಮಡ್‌ಗಾಂವ್‌ ರೈಲು ಪುನರಾರಂಭ Read More »

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್!

ಭಿಕ್ಷೆ ಬೇಡಿ ಅನಾಥಾಶ್ರಮ ಕಟ್ಟಿದ ಮಹಾತಾಯಿ ಪೂನಾ ರೈಲು ನಿಲ್ದಾಣದಲ್ಲಿ 50 ವರ್ಷಗಳ ಹಿಂದೆ ಹಾಡುತ್ತ, ಭಿಕ್ಷೆ ಬೇಡುತ್ತಿದ್ದ ಒಬ್ಬರು ಅನಾಥ ಮಹಿಳೆ ಇಂದು 1,400 ಬೀದಿ ಬದಿಯ ಮಕ್ಕಳ ಮಹಾತಾಯಿ ಆದ ಕಥೆಯು ತುಂಬಾ ರೋಚಕವಾದದ್ದು. ಆಕೆಯ ಬದುಕು ಒಂದು ಅದ್ಭುತವಾದ ಯಶೋಗಾಥೆ.ಸಿಂಧೂತಾಯಿ ಹುಟ್ಟಿದ್ದು ಒಂದು ಅತ್ಯಂತ ಬಡತನದ ಕುಟುಂಬದಲ್ಲಿ. ಅವರು ದನಗಾಹಿಗಳು. ಸಿಂಧೂ ಹುಟ್ಟಿದಾಗ ಹೆಣ್ಣು ಮಗು ಅವಳ ಹೆತ್ತವರಿಗೆ ಹೊರೆ ಆಗಿತ್ತು. ಬಡತನದ ಕಾರಣಕ್ಕೆ ನಾಲ್ಕನೇ ತರಗತಿಗೆ ಅವಳ ವಿದ್ಯಾಭ್ಯಾಸ ನಿಂತು ಹೋಯಿತು.10ನೆಯ

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್! Read More »

ಲವ್‌ ಜಿಹಾದ್‌ವಿರುದ್ಧ ಹೋರಾಟ : ನಳಿನ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ರಸ್ತೆ ಗುಂಡಿಗೆ ಬಿದ್ದು ಸಾಯುವುದು ಸಣ್ಣ ವಿಷಯವೇ ಎಂದು ಪ್ರಶ್ನೆ ಬೆಂಗಳೂರು: ರಸ್ತೆ ಮತ್ತು ಚರಂಡಿ ಸಮಸ್ಯೆಗಳನ್ನು ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಲು ಗಮನಹರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿ ವಿವಾದವನ್ನು ಹುಟ್ಟುಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್​ ಕಿಡಿಕಾರಿದೆ.ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಕಾಂಗ್ರೆಸ್​, ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ ಸಣ್ಣ ವಿಷಯಗಳು. ಹೇಳಿಕೊಳ್ಳಲು

ಲವ್‌ ಜಿಹಾದ್‌ವಿರುದ್ಧ ಹೋರಾಟ : ನಳಿನ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ Read More »

ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನ ಸಿದ್ದೇಶ್ವರ ಶ್ರೀ ಲಿಂಗೈಕ್ಯ

ಬೆಂಗಳೂರು: ಶತಮಾನದ ಸಂತ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ (81 ವ.) ಅವರು ಜ. 2ರಂದು ಆಶ್ರಮದಲ್ಲಿ ಕೊನೆಯುಸಿರೆಳೆದರು.ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ 4 ದಿನಗಳಿಂದ ಆಹಾರ ಸೇವನೆಯನ್ನು ನಿಲ್ಲಿಸಿದ್ದರು. ವಿಜಯಪುರ ಬಿ.ಎಲ್.ಡಿ.ಇ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು. ವಿಜಯಪುರ ಜಿಲ್ಲೆಯ ಬಿಜ್ಜರಗಿಯಲ್ಲಿ 1940 ಅ. 24ರಂದು ಜನಿಸಿದರು. ತಂದೆ ಓಗೆಪ್ಪಗೌಡ ಬಿರಾದಾರ, ತಾಯಿ ಸಂಗವ್ವ. ಬಾಲ್ಯದ ಹೆಸರು ಸಿದ್ಧಗೊಂಡ ಬಿರಾದಾರ. ಬಾಲ್ಯದಿಂದಲೇ ಆಧ್ಯಾತ್ಮಿಕ ಸೆಳೆತಕ್ಕೆ

ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನ ಸಿದ್ದೇಶ್ವರ ಶ್ರೀ ಲಿಂಗೈಕ್ಯ Read More »

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತಿಮ ದರ್ಶನಕ್ಕೆ ಜನಸಾಗರ

ಮೋದಿ, ಬೊಮ್ಮಾಯಿ ಮತ್ತಿತರ ಗಣ್ಯರಿಂದ ಸಂತಾಪ ವಿಜಯಪುರ: ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ರಾತ್ರಿ ಲಿಂಗೈಕ್ಯರಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಾಂಡಿತ್ಯಪೂರ್ಣ ತತ್ವಜ್ಞಾನಿಯ ಅಂತಿಮ ದರ್ಶನ ಪಡೆದುಕೊಳ್ಳಲು ಸಾಗರೋಪಾದಿಯಲ್ಲಿ ಜನತೆ ಬರುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸ್ರೀಗಳ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.ಸಂಜೆ 5 ಗಂಟೆಯ ನಂತರ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತಿಮ ದರ್ಶನಕ್ಕೆ ಜನಸಾಗರ Read More »

error: Content is protected !!
Scroll to Top